Relationship: ನೀವು ನಿಮ್ಮ ಸಂಗಾತಿಯ ಜತೆ ಹೆಚ್ಚು ವಾದ ಮಾಡ್ತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು

| Updated By: ನಯನಾ ರಾಜೀವ್

Updated on: Nov 12, 2022 | 8:00 AM

ಪ್ರತೀ ಬಾರಿ ನಿಮ್ಮ ಸಂಗಾಂತಿಯೊಂದಿಗೆ ಮನಸ್ತಾಪಗಳು ಆದ ನಂತರ ನೀವು ಮಾಡುವ ಕೆಲವೊಂದು ವಿಷಯಗಳು ನಿಮ್ಮ ಸಂಬಂಧಗಳು ಬಿರುಕು ಬಿಡಲು ಕಾರಣವಾಗಬಹುದು. ಆದ್ದರಿಂದ ನೀವು ನಿಮ್ಮ ಸಂಗಾಂತಿಯ ಜೊತೆಗಿನ ವಾದದ ನಂತರ ಮಾಡಬೇಕಾದ ಸಲಹೆಗಳು ಇಲ್ಲಿವೆ.

Relationship: ನೀವು ನಿಮ್ಮ ಸಂಗಾತಿಯ ಜತೆ ಹೆಚ್ಚು ವಾದ ಮಾಡ್ತೀರಾ? ಹಾಗಾದ್ರೆ ಈ ಸುದ್ದಿ ಓದಲೇಬೇಕು
Relationship Fights
Image Credit source: Reader's Digest
Follow us on

ಸಂಬಂಧಗಳೇ ಹಾಗೆ ಒಂದಿಷ್ಟು ಪ್ರೀತಿ, ಜಗಳ, ಕೋಪ, ಮನಸ್ತಾಪ, ಅನಿರೀಕ್ಷಿತ ಉಡುಗೊರೆಗಳು, ನೋವು ನಲಿವಿನಿಂದ ತುಂಬಿರುತ್ತದೆ. ಪ್ರತಿ ಬಾರಿ ಜಗಳ ಮನಸ್ತಾಪಗಳ ನಂತರ ನಿಮ್ಮ ಸಂಗಾಂತಿಯನ್ನು ಖುಷಿ ಪಡಿಸಲು ಅದೆಷ್ಟೋ ಸಾಹಸಗಳನ್ನು ಮಾಡುವುದು ಸಾಮಾನ್ಯ.

ಪ್ರತೀ ಬಾರಿ ನಿಮ್ಮ ಸಂಗಾಂತಿಯೊಂದಿಗೆ ಮನಸ್ತಾಪಗಳು ಆದ ನಂತರ ನೀವು ಮಾಡುವ ಕೆಲವೊಂದು ವಿಷಯಗಳು ನಿಮ್ಮ ಸಂಬಂಧಗಳು ಬಿರುಕು ಬಿಡಲು ಕಾರಣವಾಗಬಹುದು. ಆದ್ದರಿಂದ ನೀವು ನಿಮ್ಮ ಸಂಗಾಂತಿಯ ಜೊತೆಗಿನ ವಾದದ ನಂತರ ಮಾಡಬೇಕಾದ ಸಲಹೆಗಳು ಇಲ್ಲಿವೆ.

ಇಬ್ಬರು ವ್ಯಕ್ತಿಗಳು ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮನ್ನು ತೊಡಗಿಸಿಕೊಂಡಾಗ, ಕೆಲವೊಂದು ಸಂದರ್ಭದಲ್ಲಿ ಅಭಿಪ್ರಾಯಗಳು ಸಂಘರ್ಷವನ್ನು ಉಂಟುಮಾಡುತ್ತದೆ.

ವಾದಗಳು ಮತ್ತು ಘರ್ಷಣೆಗಳು ಪರಸ್ಪರರ ಬಗ್ಗೆ ಹಾಗೂ ಅವರ ಆಲೋಚನೆಗಳೇನು? ಎಂಬುದನ್ನು ತಿಳಿಯಲು ಸಹಾಯ ಮಾಡುತ್ತವೆ. ಸಂಘರ್ಷಗಳ ಮೂಲಕ ಪರಸ್ಪರರ ವಿಭಿನ್ನ ದೃಷ್ಟಿಕೋನಗಳು, ವಿಭಿನ್ನ ಮೌಲ್ಯ, ನಂಬಿಕೆ ವ್ಯವಸ್ಥೆಗಳನ್ನು ತಿಳಿದುಕೊಳ್ಳಬಹುದು ಮತ್ತು ಪರಸ್ಪರರ ಬಗ್ಗೆ ಕೂಲಂಕಷವಾಗಿ ಕಲಿಯಬಹುದು.

ಪ್ರತಿ ಬಾರಿ ವಾದದ ನಂತರ ನಿಮ್ಮ ಸಮಸ್ಯೆ ಎನು? ಹಾಗೂ ನಿಮ್ಮವರ ಅಭಿಪ್ರಾಯವೇನು? ಎಂಬುದನ್ನು ಸರಿಯಾಗಿ ಕೇಳಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಯಾಕೆಂದರೆ ಇದು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಸಂಗಾತಿಯ ಬಗ್ಗೆ ಇನ್ನಷ್ಟು ತಿಳಿಯಲು ಕಾರಣವಾಗುತ್ತದೆ.

ನಿಮ್ಮ ಸಂಗಾಂತಿಯೊಂದಿಗಿನ ವಾದ ವಿವಾದಗಳನ್ನು ಯಾವತ್ತಿಗೂ ಹೆಚ್ಚಿಸಲು ಹೋಗದಿರಿ. ಯಾಕೆಂದರೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಾ ಹೋದಂತೆ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಒಬ್ಬರಾದರೂ ಮೌನವಾಗಿದ್ದು , ಸಮಸ್ಯೆಯನ್ನು ಪರಿಹರಿಸುವುದು ಅಗತ್ಯವಾಗಿದೆ.

ವಾದ ವಿವಾದಗಳು ಕೇವಲ ಒಬ್ಬರಿಂದ ಉಂಟಾಗಲು ಸಾಧ್ಯವಿಲ್ಲ. ಆದ್ದರಿಂದ ವಾದ ವಿವಾದಗಳು ಮುಗಿದ ನಂತರ ಇಬ್ಬರು ತಮ್ಮ ತಪ್ಪುಗಳಿಗೆ ಪಾಲುದಾರರಾಗಿ ಕ್ಷಮೆಯಾಚಿಸುವುದು ಅಗತ್ಯವಾಗಿದೆ. ಇದು ನಿಮ್ಮಿಬ್ಬರ ಮೇಲಿನ ನಂಬಿಕೆ ಮತ್ತು ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ; ನಿಮ್ಮ ಈ ಗುಣಗಳು ಸಂಬಂಧದಲ್ಲಿ ಸದಾ ಸಂತೋಷ ತುಂಬಿರುವಂತೆ ಮಾಡುತ್ತೆ

ನಿಮ್ಮ ಕೋಪವನ್ನು ಆದಷ್ಟು ಕಡಿಮೆಗೊಳಿಸಿ ಯಾಕೆಂದರೆ ನಿಮ್ಮ ಸಂಗಾಂತಿಯೊಂದಿಗೆ ವಾದ ವಿವಾದಗಳು ಸೃಷ್ಟಿಯಾದಂತಹ ಸಂದರ್ಭದಲ್ಲಿ ಕೋಪದಲ್ಲಿ ಹೇಳಿದ ಮಾತುಗಳು ಸಂಬಂಧ ಬಿರುಕು ಬಿಡಲು ಕಾರಣವಾಗಬಹುದು. ಆದ್ದರಿಂದ ನಿಮ್ಮ ಸಂಗಾಂತಿ ಮೇಲಿನ ಪ್ರೀತಿಯ ಜೊತೆಗೆ ತಾಳ್ಮೆ ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: