Relationship Tips: ಸಂಗಾತಿಯ ನಂಬಿಕೆ ಗಳಿಸಿಕೊಳ್ಳಲು ಹೀಗೆ ಮಾಡಿ: ಸುಂದರ ಬದುಕು ಕಟ್ಟಿಕೊಳ್ಳಿ

ನೀವು ಯಾರನ್ನಾದರೂ ಪ್ರೀತಿಸಿದರೆ, ಅವರನ್ನು ಗೌರವಿಸಿ. ನಿಮ್ಮಿಬ್ಬರ ನಡುವೆ ನೀವು ಎಷ್ಟು ಗೌರವವನ್ನು ಸೃಷ್ಟಿಸುತ್ತೀರೋ ಅಷ್ಟು ಪ್ರೀತಿ ಹೆಚ್ಚಾಗುತ್ತದೆ

Relationship Tips: ಸಂಗಾತಿಯ ನಂಬಿಕೆ ಗಳಿಸಿಕೊಳ್ಳಲು ಹೀಗೆ ಮಾಡಿ: ಸುಂದರ ಬದುಕು ಕಟ್ಟಿಕೊಳ್ಳಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Mar 12, 2022 | 4:53 PM

ಪ್ರೀತಿ (Love) ಎಂದರೆ ಹಾಗೇ. ಒಂದಷ್ಟು ಸುಂದರ ಅನುಭವಗಳ ಗುಚ್ಚ. ನಂಬಿಕೆಯೇ ಅದರ ಜೀವಾಳ. ಪ್ರತೀ ಪ್ರೀತಿ ನಿಂತಿರುವುದೇ ನಂಬಿಕೆ (Trust) ಎನ್ನುವ  ಬೃಹತ್​​​ ಅಡಿಪಾಯದ ಮೇಲೆ. ನಿಮ್ಮ ಸಂಗಾಂತಿಯೊಂದಿಗಿನ ಜೀವನ ಉತ್ತಮವಾಗಿರಬೇಕೆಂದರೆ ಅಲ್ಲಿ ನಂಬಿಕೆ ಮುಖ್ಯ. ಆಗ ಮಾತ್ರ ಪ್ರೀತಿ, ಗೌರವ, ವಿಶ್ವಾಸ ಇರಲು ಸಾಧ್ಯ. ಆದ್ದರಿಂದ ಪ್ರೀತಿಯ ಆರಂಭದಲ್ಲಿಯೇ ಸಂಗಾತಿಯೊಂದಿಗೆ ನಂಬಿಕೆಯ ಬುನಾದಿ ಹಾಕಿಕೊಳ್ಳಿ. ನಂಬಿಕೆ ಹೇಗೆ ಬರಲು ಸಾಧ್ಯ ಎಂದರೆ ನಿಮ್ಮ ನಡುವಳಿಕೆಯಿಂದ, ನಿಮ್ಮ ಮಾತಿನ, ವ್ಯವಹಾರದ ಶೈಲಿಯಿಂದ. ಹೀಗಾಗಿ ಪ್ರೀತಿಸುವ ಮುನ್ನ ಆ ವ್ಯಕ್ತಿ ನಂಬಿಕೆಗೆ ಅರ್ಹನೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಸಂಬಂಧಗಳಲ್ಲಿನ (Relationship) ಗುಟ್ಟು ಇತರರಿಗೆ ಗೊತ್ತಾಗುವುದಕ್ಕಿಂತ ಗೌಪ್ಯವಾಗಿರುವುದೇ ಉತ್ತಮ. ಇತರರ ಚುಚ್ಚು ಮಾತು, ನಿಮ್ಮ ಬಾಂದವ್ಯದ ಮೇಲಿನ ಕೀಳರಿಮೆ ಇವೆಲ್ಲವನ್ನೂ ತೊಡೆದುಹಾಕಲು, ಇಬ್ಬರ ನಡುವಿನ ಸಲುಗೆಯನ್ನು ಇನ್ನಷ್ಟು ಬೆಳೆಸಲು ನಂಬಿಕೆ ಪುಷ್ಟಿ ನೀಡುತ್ತದೆ. ಹೀಗಿದ್ದಾಗ ಸಂಗಾತಿಯೊಂದಿಗೆ ನಂಬಿಕೆ ಬೆಳೆಸಿಕೊಳ್ಳುವುದ ಅಥವಾ ಅದನ್ನು ಉಳಿಸಿಕೊಳ್ಳುವುದೆ ಹೇಗೆಂದು ನೀವು ತಿಳಿದಿರಬೇಕು. ಅದಕ್ಕಾಗಿ ಹೀಗೆ ಮಾಡಿ, ಸಂಗಾತಿಯ ನಂಬಿಕೆ ಗಳಿಸಿಕೊಳ್ಳಿ.

  1. ನೀವು ನಿಮ್ಮ ಸಂಗಾತಿಯನ್ನು ಯಾಕೆ ಆಯ್ಕೆ ಮಾಡಿಕೊಂಡಿರಿ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಅವರ ಯಾವ ಗುಣ ನಿಮ್ಮನ್ನು ಅವರೆಡೆಗೆ ಹೆಚ್ಚು ಸೆಳೆಯುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಆಗ ಇಬ್ಬರಿಗೂ ಪ್ರೀತಿ ಸದಾ ಕಾಲ ಇರುತ್ತದೆ. ಯಾಕೆ ಪ್ರೀತಿಸುತ್ತಾರೆ ಎನ್ನುವುದು ಅರ್ಥವಾದರೆ ಅಪನಂಬಿಕೆಯ ಪ್ರಶ್ನೆ ಏಳುವುದಿಲ್ಲ.
  2. ನೀವು ಯಾರನ್ನಾದರೂ ಪ್ರೀತಿಸಿದರೆ, ಅವರನ್ನು ಗೌರವಿಸಿ. ನಿಮ್ಮಿಬ್ಬರ ನಡುವೆ ನೀವು ಎಷ್ಟು ಗೌರವವನ್ನು ಸೃಷ್ಟಿಸುತ್ತೀರೋ ಅಷ್ಟು ಪ್ರೀತಿ ಹೆಚ್ಚಾಗುತ್ತದೆ. ನಿಮಗೆ ಅಗೌರವವನ್ನು ಉಂಟುಮಾಡುವದನ್ನು ವಿವರಿಸಿ ಮತ್ತು ಅದನ್ನು ನಿಮ್ಮ ಸಂಬಂಧದಲ್ಲಿ ತೊಡಕುಂಟು ಮಾಡದಂತೆ ನೋಡಿಕೊಳ್ಳಿ.
  3. ಜೀವನ ಸಿನಿಮಾ ಅಲ್ಲ. ಅದರದ್ದೇ ಆದ ಚೌಕಟ್ಟುಗಳಿವೆ. ಹೀಗಾಗಿ ಚಲನಚಿತ್ರಗಳಲ್ಲಿ ತೋರಿಸುವ ರೀತಿಯ ಪ್ರಣಯವನ್ನು ನಿರೀಕ್ಷಿಸಬೇಡಿ. ನಿಮ್ಮ ಸಂಬಂಧ ಮತ್ತು ಪ್ರಣಯದ ಬಗ್ಗೆ ವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರಿ. ನಿಜವಾದ ಪ್ರಣಯವು ಗೌರವ, ನಂಬಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಣಾಮವಾಗಿದೆ ಎನ್ನುವುದನ್ನು ತಿಳಿದುಕೊಳ್ಳಿ.
  4. ಎಲ್ಲದಕ್ಕೂ ಕುಟುಂಬವನ್ನು ಅವಲಂಬಿಸಬೇಡಿ. ಸಣ್ಣಪುಟ್ಟ ಸಮಸ್ಯೆಗಳನ್ನು ಇಬ್ಬರೇ ಕುಳಿತು ಬಗೆಹರಿಸಿಕೊಳ್ಳಿ. ಮುಕ್ತವಾಗಿ ಮಾತನಾಡಿ. ಆಗ ಕುಟುಂಬಕ್ಕೂ ಗೌರವ ನೀಡಿದಂತಾಗುತ್ತದೆ.
  5. ನಿಮಗೆ ಅನಿಸಿದ್ದನ್ನು ಯಾವಾಗಲೂ ವ್ಯಕ್ತಪಡಿಸಿ. ನೀವು ಮಾತನಾಡಲು ತುಂಬಾ ಹೆದರುತ್ತಿದ್ದರೆ, ಅದು ಭವಿಷ್ಯದಲ್ಲಿ ನಿಮಗೆ ಕಷ್ಟವಾಗುತ್ತದೆ. ಸಂಬಂಧವನ್ನು ಉಳಿಸಿಕೊಳ್ಳಲು ಮುಕ್ತವಾಗಿ ಮಾತನಾಡಉವುದನ್ನು ಅಭ್ಯಸಿಸಿಕೊಳ್ಳಿ.
  6. ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೀ ನಿಮ್ಮ ನದುವೆ ಒಂದು ಸಂವಹನವಿರಲಿ. ಇಡೀ ದಿನ ಕೊನೇಪಕ್ಷ ಒಂದೆರಡು ಮೆಸೇಜ್​ಗಳಾದರೂ ಇರಲಿ. ಅದನ್ನು ಬಿಟ್ಟು ಸಾಧ್ಯವಾದರೆ ಪ್ರತಿದಿನ ಒಂದಷ್ಟು ಸಮಯವನ್ನು ಒಟ್ಟಿಗೆ ಕಳೆಯಿರಿ. ಆದರೆ ಒತ್ತಡ ಅಥವಾ ಕಂಡೀಷನ್​ ಬೇಡ ನೀವಿಬ್ಬರೂ ಪ್ರತ್ಯೇಕವಾಗಿ ಕೆಲಸಗಳನ್ನು ಮಾಡುವ ಜಾಗವನ್ನು ಆನಂದಿಸಬೇಕು ಅದು ನಿಮಗೆ ಸಂತೋಷವನ್ನು ನೀಡುತ್ತದೆ.
  7. ಬದಲಾವಣೆ ಅನಿವಾರ್ಯ. ನೀವು ವ್ಯಕ್ತಿಯ ಮನಸ್ಸಿನೊಂದಿಗೆ ಪ್ರೀತಿಯಲ್ಲಿ ಬೀಳುತ್ತೀರಿ ಮತ್ತು ನೀವು ಪ್ರೀತಿಸಿದ ವ್ಯಕ್ತಿ ಸಮಯದೊಂದಿಗೆ ಬದಲಾಗುತ್ತಾನೆ. ನೀವು ಅದನ್ನು ನಿರೀಕ್ಷಿಸಬೇಕು ಮತ್ತು ಸ್ವೀಕರಿಸಬೇಕು. ಬದಲಾಗುವುದು ಮಾನವ ಸ್ವಭಾವ, ಆದ್ದರಿಂದ ಅದನ್ನು ನಿಮ್ಮ ಜೀವನದಲ್ಲಿ ಒಪ್ಪಿಕೊಳ್ಳಲು ತಯಾರಾಗಿರಿ.

ಇದನ್ನೂ ಓದಿ:

Relationship Tips: ಸುಮಧುರ ಬಂಧಕ್ಕೆ ಈ ಏಳು ಸೂತ್ರಗಳು ಸಹಕಾರಿ

Insecurity: ನಮ್ಮ ಸಂಬಂಧಗಳಲ್ಲಿ ಅಭದ್ರತೆ ಯಾವಾಗ ಕಾಣಿಸಿಕೊಳ್ಳುತ್ತದೆ ಗೊತ್ತಾ..! ಇಲ್ಲಿದೆ ಮಾಹಿತಿ

Published On - 4:52 pm, Sat, 12 March 22