ದೀರ್ಘಕಾಲದ ತಲೆನೋವು ಪರಿಹಾರಕ್ಕೆ ಇಲ್ಲಿವೆ ಸಿಂಪಲ್​ ಟಿಪ್ಸ್​

ಔಷಧಗಳನ್ನು ತೆಗೆದುಕೊಂಡು ತಲೆನೋವು ಕಡಿಮೆ ಮಾಡುವುದು ಒಂದು ವಿಧಾನವಾದರೆ, ದಿನಚರಿ ಬದಲಿಸಿಕೊಂಡು ಕೂಡ ತಲೆನೋವು ಬರದಂತೆ ತಡೆಯಬಹುದು.

  • TV9 Web Team
  • Published On - 21:47 PM, 22 Feb 2021
ದೀರ್ಘಕಾಲದ ತಲೆನೋವು ಪರಿಹಾರಕ್ಕೆ ಇಲ್ಲಿವೆ ಸಿಂಪಲ್​ ಟಿಪ್ಸ್​
ಸಾಂದರ್ಭಿಕ ಚಿತ್ರ

ತಲೆನೋವು ಬರುತ್ತದೆ ಅನ್ನೋದೆ ಇತ್ತೀಚೆಗೆ ದೊಡ್ಡ ತಲೆನೋವು. ತಲೆನೋವು ಬರುವುದಕ್ಕೆ ವಯಸ್ಸಿನ ಮಿತಿ ಇಲ್ಲ. ಮೊಬೈಲ್ ಹೆಚ್ಚು ನೋಡಿದರೆ, ಕಂಪ್ಯೂಟರ್​ ಮುಂದೆ ತುಂಬಾ ಹೊತ್ತು ಕೂತಿದ್ದರೆ, ಕಣ್ಣಿನ ತೊಂದರೆ, ಕಿವಿ ಅಥವಾ ಹಲ್ಲಿನ ಸಮಸ್ಯೆ ಇದ್ದಾಗ, ಹಸಿವಾದಾಗ. ಹೀಗೆ ತಲೆನೋವು ಯಾವ್ಯಾವ ಕಾರಣಕ್ಕೆ ಬರುತ್ತದೆ ಎಂದು ಹೇಳೋಕೆ ಸಾಧ್ಯವೇ ಇರುವುದಿಲ್ಲ. ಇವುಗಳಿಗೆ ಪರಿಹಾರಗಳು ಇಲ್ಲಿವೆ.

ಹಣಕಾಸಿನ ತೊಂದರೆಗಳು, ಉದ್ಯೋಗದ ತೊಂದರೆಗಳು, ಕೌಟುಂಬಿಕ ಸಮಸ್ಯೆಗಳು ಮತ್ತು ಯೋಜಿಸಿದಂತೆ ಕೆಲಸಗಳನ್ನು ಮಾಡಲು ಸಾಧ್ಯವಾಗದೆ ಇದ್ದಾಗ ನಿಮಗೆ ಒತ್ತಡ ಕಾಡಬಹುದು. ಇದರಿಂದಲೂ ತಲೆನೋವು ಬರಬಹುದು. ಇದಕ್ಕೆ ನೀವು ಲೈಫ್​ಸ್ಟೈಲ್​ ಬದಲಿಸಿಕೊಂಡರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು.

ಔಷಧಗಳನ್ನು ತೆಗೆದುಕೊಂಡು ತಲೆನೋವು ಕಡಿಮೆ ಮಾಡುವುದು ಒಂದು ವಿಧಾನವಾದರೆ, ದಿನಚರಿ ಬದಲಿಸಿಕೊಂಡು ಕೂಡ ತಲೆನೋವು ಬರದಂತೆ ತಡೆಯಬಹುದು. ಅದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ನೀವು ತಿನ್ನುವ ಆಹಾರ ತುಂಬಾನೇ ಪ್ರಮುಖವಾಗುತ್ತದೆ. ನಿಮ್ಮ ಆಹಾರದಲ್ಲಿ ಹುಳಿ, ಉಪ್ಪು ಮತ್ತು ಮೆಣಸು ಕಡಿಮೆ ಇರುವಂತೆ ನೋಡಿಕೊಳ್ಳಿ. ತಾಜಾ ಆಹಾರ, ಸಲಾಡ್ ಮತ್ತು ಮೊಳಕೆಯೊಡೆದ ದ್ವಿದಳ ಧಾನ್ಯಗಳನ್ನು ಸೇವಿಸಿ. ಈ ಆಹಾರ ಕ್ರಮದಿಂದ ತಲೆನೋವು ಬರುವುದನ್ನು ತಪ್ಪಿಸಬಹುದು.

ಪ್ರತಿದಿನ ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯಿಂದ ತಲೆಗೆ ಹಾಗೂ ದೇಹಕ್ಕೆ ಮಸಾಜ್ ಮಾಡಿ. ಇದರಿಂದ ನಿಮ್ಮ ತಲೆಯಲ್ಲಿ ರಕ್ತ ಸಂಚಾರ ಉತ್ತಮವಾಗುವುದರ ಜತೆಗೆ ರಿಲೀಫ್​ ಫೀಲ್​ ಸಿಗುತ್ತದೆ. ನಿತ್ಯ ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ನಿತ್ಯ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ದಣಿಯುತ್ತದೆ. ಇನ್ನು, ದಿನ ನಿತ್ಯ ಧ್ಯಾನ ಮಾಡಿ ಮತ್ತು ಸಂಗೀತ ಕೇಳಬೇಕು. ಧ್ಯಾನದಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ. ಇದರಿಂದ ತಲೆನೋವು ಮಾಯವಾಗಬಹುದು.

ಅತಿಯಾಗಿ ಯೋಚನೆ ಮಾಡುವುದು, ಒತ್ತಡದಲ್ಲಿ ಬದುಕುವುದು ಕೂಡ ನಿಮ್ಮ ತಲೆನೋವಿಗೆ ಕಾರಣವಾಗಬಹುದು. ಹೀಗಾಗಿ, ಒತ್ತಡದಿಂದ ದೂರವಿರಲು ಪ್ರಯತ್ನಿಸಿ. ಇವುಗಳನ್ನು ಪಾಲಿಸಿದರೆ ಕ್ರಮೇಣ ತಲೆನೋವನ್ನು ನಿವಾರಣೆ ಆಗುತ್ತದೆ.

ಇದನ್ನೂ ಓದಿ: ಸಿಗರೇಟ್​ ಸೇದಿದ ನಂತರ ಈ ಆಹಾರ ಸೇವಿಸಿದರೆ ನೀವು ಸೇಫ್​!