ಕೊವಿಡ್​ ಸಮಯದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಲೆ ಜ್ಞಾನ ಹೆಚ್ಚಿಸುವ ಕೆಲವು ಸಲಹೆಗಳು ಹೀಗಿವೆ

| Updated By: shruti hegde

Updated on: Jun 13, 2021 | 12:52 PM

ಮಕ್ಕಳು ಮನೆಯಲ್ಲಿದ್ದಾಗ ವಿವಿಧ ಭಾಷೆಯನ್ನು ಕಲಿಸಬಹುದು. ಕೇವಲ ಅಡು ಭಾಷೆಯೊಂದೇ ಅಲ್ಲದೇ ಇತರ ಭಾಷೆಗಳ ಅರ್ಥವನ್ನು ಹೇಳಿಕೊಡಿ. ನಿರರ್ಗಳವಾಗಿ ಮಗು ನಿರ್ದಿಷ್ಟ ಭಾಷೆಯನ್ನು ತಪ್ಪಿಲ್ಲದೇ ಮಾತನಾಡಲು ಪ್ರಾರಂಭಿಸುತ್ತದೆ. ಯಾವುದೇ ಒತ್ತಡ ಹೇರದೇ ಆಟವಾಡುತ್ತಲೇ ಮಗುವಿಗೆ ಭಾಷೆಯ ಜ್ಞಾನ ಬೆಳೆಸಿ.

ಕೊವಿಡ್​ ಸಮಯದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಲೆ ಜ್ಞಾನ ಹೆಚ್ಚಿಸುವ ಕೆಲವು ಸಲಹೆಗಳು ಹೀಗಿವೆ
ಸಾಂದರ್ಭಿಕ ಚಿತ್ರ
Follow us on

ಕೊರೊನಾ ಸೋಂಕಿನ ಹಾವಳಿ ವಯಸ್ಕರಿಂದ ಹಿರಿದು ಚಿಕ್ಕ ಮಕ್ಕಳ ಮಾನಸಿಕ ಸ್ಥಿತಿಯನ್ನೂ ಹದಗೆಡಿಸಿ ಬಿಟ್ಟಿದೆ. ಹೊರಗಡೆ ಓಡಾಡುವಂತಿಲ್ಲ. ಆಟವಾಡಲು ರಸ್ತೆಗೆ ಇಳಿಯುವ ಹಾಗಿಲ್ಲ. ಪೋಷಕರಿಗೆ ಮಕ್ಕಳನ್ನು ನೋಡಿಕೊಳ್ಳುವುದೇ ಹರಸಾಹದ ಕೆಲಸವಾಗಿದೆ. ಹೇಳುವ ಮಾತನ್ನು ಕೆಳುವಷ್ಟು ದೊಡ್ಡವರಾಗಿದ್ದರೆ ಹೇಗಾದರೂ ಸಮಸ್ಯೆಯನ್ನು ತಿಳಿ ಹೇಳಬಹುದು. ಆದರೆ ಪರಿಸ್ಥಿತಿಯ ಅರಿವೇ ಇಲ್ಲದ ಎಳೆ ಕೂಸಿಗೆ ಆಟದ ಮುಂದೆ ಯಾವುದೂ ಲೆಕ್ಕವಿಲ್ಲ. ಮೋಜು-ಮಸ್ತಿಯಿಂದ ಕ್ರಿಕೆಟ್​ ಬ್ಯಾಟ್​ ಹಿಡಿದು ಹೊರಾಂಗಣದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಮನೆಯಲ್ಲಿಯೇ ಇರಬೇಕು, ಹೊರಗಡೆ ತಿರುಗಾಡುವಂತಿಲ್ಲ ಅಂದರೆ ಪರಿಸ್ಥಿತಿ ಹೇಗಿರಬೇಡ? ಅವರ ಹಠವನ್ನು ಸುಧಾರಿಸುವವರೆಗೆ ಸುಸ್ತಾಗಿ ಬಿಡುತ್ತೇವೆ ಅಂತಿದ್ದಾರೆ ಪೋಷಕರು.

ಇಂತಹ ಸಮಯದಲ್ಲಿ ಮಕ್ಕಳ ಜತೆಗೆ ಪೋಷಕರೇ ನಿಲ್ಲಬೇಕು. ಮನೆಯಲ್ಲಿ ಒಳಾಂಗಣ ಆಟವಾಡುವ ಮೂಲಕ ಅವರನ್ನು ಸಂತೈಸಬೇಕು. ಜತೆಗೆ ರಸ್ತೆಗಿಳಿಯುವ ಬದಲು ಮನೆಯ ಒಳಾಂಗಣ ಆಟವೇ ಖುಷಿ ನೀಡುತ್ತದೆ ಎಂಬುದರ ಕುರಿತಾಗಿ ಹೆಚ್ಚು ಓಲೈಸಲೇಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಮಕ್ಕಳ ಜತೆ ಏನೆಲ್ಲಾ ಆಟವಾಡಬಹುದು ಎಂಬ ಕೆಲವು ಟಿಪ್ಸ್​ಗಳು ಇಲ್ಲಿವೆ.

ಸಾಂಸ್ಕೃತಿಕ ಚಟುವಟಿಕೆ
ಪಠ್ಯಕ್ರಮ ಒಂದೇ ಅಲ್ಲ. ಜತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿ. ಕೇವಲ ಶಾಲಾಭ್ಯಾಸ- ಹೋಮ್​ವರ್ಕ್​ ಮಾಡು ಅದರೆ ಯಾವ ಮಕ್ಕಳು ನಿಮ್ಮ ಮಾತು ಕೇಳುತ್ತಾರೆ? ಜತೆ ಜತೆಗೆಯೇ ಹಾಡು, ಸಂಗೀತವನ್ನು ಹೇಳಿಕೊಡಿ, ಮಕ್ಕಳ ಜತೆಗೆ ನೀವೂ ನೃತ್ಯ ಮಾಡಿ. ಅವರೊಡನೆ ನೀವೂ ಸೇರಿಕೊಂಡರೆ ಮಕ್ಕಳು ಬಹುಬೇಗ ಕಲಿಯುತ್ತಾರೆ ಮತ್ತು ಹೆಚ್ಚಿನ ಆಸಕ್ತಿ ಬೆಳೆಯುತ್ತದೆ. ನಿಮ್ಮ ಮಗು ಚಿತ್ರಕಲೆಯಲ್ಲಿ ಮುಂದಿರಬಹುದು. ಮನೆಯಲ್ಲಿದ್ದಾಗ ವಿವಿಧ ಬಗೆಗೆ ಚಿತ್ರ ಬಿಡಿಸು ಕಲೆಯನ್ನು ಹೇಳಿಕೊಡಿ. ಸ್ಮಾರ್ಟ್​ಫೋನ್​ನಂತಹ ಚಿಕ್ಕ ಸಾಧನ ಕೈಯಲ್ಲಿರುವಾಗ ಜ್ಞಾನ ಭಂಡಾರವೇ ಇದದ್ದಂತೆ. ಅಭಿವೃದ್ಧಿಗೊಂಡ ತಂತ್ರಜ್ಞಾನವನ್ನು ಒಳ್ಳೆಯ ಕಾರ್ಯಕ್ಕಾಗಿ ಬಳಸಿಕೊಳ್ಳಿ.

ಕಸದಿಂದ ರಸ
ಕರಕುಶಲ ವಸ್ತುಗಳ ಕುರಿತಾಗಿ ಮಕ್ಕಳಿಗೆ ಹೇಳಿಕೊಡಿ. ಕಸದಿಂದ ರಸ ತಯಾರಿಸುವ ಒಳ್ಳೆಯ ಕಲೆ ಮಕ್ಕಳಿಗೆ ಪ್ರಯೋಜನವಾಗುತ್ತದೆ. ಬಣ್ಣ ಬಣ್ಣದ ಕಾಗದದ ಕಟಿಂಗಗ್ಸ್​ನಿಂದ ಚಿತ್ರ ತಯಾರಿಸುವುದು. ಪುಟ್ಟ-ಪುಟ್ಟ ಮಣಿಗಳನ್ನು ಸೇರಿಸಿ ಕುತ್ತಿಗೆಯ ಹಾರ ತಯಾರಿಸುವುದು. ಹೀಗೆ ವಿವಿಧ ವಿನ್ಯಾಸಗಳು ಮಕ್ಕಳ ಮನಸೆಳೆಯುತ್ತದೆ.

ಪರಿಸರ ಸ್ನೇಹ
ಗಿಡಗಳನ್ನು ನೆಡುವುದು ಮಾತ್ರವಲ್ಲ. ಮಕ್ಕಳಿಗೆ ಪರಿಸರದ ಕುರಿತಾಗಿ ತಿಳಿ ಹೇಳಿ. ಮನೆಯ ಸುತ್ತ ಗಿಡ ನೆಡುವ ಕಾರ್ಯದಲ್ಲಿ ಮಕ್ಕಳನ್ನೂ ಸೇರಿಸಿಕೊಳ್ಳಿ. ಮಣ್ಣಿನೊಂದಿಗೆ ಆಟವಾಡುತ್ತಲೇ ಗಿಡಕ್ಕೆ ನೀರು ಹಾಕುತ್ತ ಮಕ್ಕಳ ಸಂತೋಷಗೊಳ್ಳುತ್ತಾರೆ ಹಾಗೂ ಪರಿಸರದ ಕುರಿತಾಗಿ ಮಕ್ಕಳಿಗೆ ಹೆಚ್ಚು ಜ್ಞಾನ ಬೆಳೆಯುತ್ತದೆ.

ನಿಮಗಿಷ್ಟದ ಕಥೆ ಪುಸ್ತಕ
ಕಥೆ ಪುಸ್ತಕಗಳನ್ನು ಮಕ್ಕಳಿಗೆ ಓದಲು ಕೊಡಿ. ಅಥವಾ ತಿಳಿ ಹಾಸ್ಯದ ಕಥೆಗಳನ್ನು ಹೇಳುತ್ತ ಮಕ್ಕಳನ್ನು ಸೆಳೆಯಿರಿ. ಕಥೆ ಕೇಳುವುದೆಂದರೆ ಮಕ್ಕಳಿಗೆ ಇಷ್ಟ. ಹಾಗಾಗಿ ನಿಮ್ಮ ಮಾತನ್ನು ಬಹುಬೇಗ ಕೇಳಲು ಆರಂಭಿಸುತ್ತಾರೆ.

ಹೊಸ ಭಾಷೆಯನ್ನು ಕಲಿಸಿ
ಮಕ್ಕಳು ಮನೆಯಲ್ಲಿದ್ದಾಗ ವಿವಿಧ ಭಾಷೆಯನ್ನು ಕಲಿಸಬಹುದು. ಕೇವಲ ಅಡು ಭಾಷೆಯೊಂದೇ ಅಲ್ಲದೇ ಇತರ ಭಾಷೆಗಳ ಅರ್ಥವನ್ನು ಹೇಳಿಕೊಡಿ. ನಿರರ್ಗಳವಾಗಿ ಮಗು ನಿರ್ದಿಷ್ಟ ಭಾಷೆಯನ್ನು ತಪ್ಪಿಲ್ಲದೇ ಮಾತನಾಡಲು ಪ್ರಾರಂಭಿಸುತ್ತದೆ. ಯಾವುದೇ ಒತ್ತಡ ಹೇರದೇ ಆಟವಾಡುತ್ತಲೇ ಮಗುವಿಗೆ ಭಾಷೆಯ ಜ್ಞಾನ ಬೆಳೆಸಿ.

ಇದನ್ನೂ ಓದಿ:

ಅಳಿವಿನಂಚಿನಲ್ಲಿರುವ ಗ್ರಾಮೀಣ ಆಟದ ಪ್ರದರ್ಶನ; ಹಾಸನ ಜಿಲ್ಲೆಯ ಶಾಲೆಯ ಬೆಳ್ಳಿ ಹಬ್ಬದಲ್ಲಿ ಮಕ್ಕಳಾದ ಪೋಷಕರು!

ಮಕ್ಕಳನ್ನು ಆಟಕ್ಕೆ ಕಳಿಸುವ ಪೋಷಕರೇ ಎಚ್ಚರ.. ಚಿಕ್ಕ ಅಜಾಗರೂಕತೆಯೂ ಪ್ರಾಣಕ್ಕೆ ಕುತ್ತಾಗಬಹುದು..