Coronavirus: ಕೋವಿಡ್​ ತಡೆಗಟ್ಟುವ ಡಯೆಟ್​ ಫುಡ್​​ನಲ್ಲಿ ಹೆಚ್ಚು ಪ್ರೋಟೀನ್​ಯುಕ್ತ ಆಹಾರವಿರಲಿ

ಪ್ರೋಟೀನ್​  ಮಾನವನ ದೇಹಕ್ಕೆ ಬೇಕಾದ ಪ್ರಮುಖ ಮ್ಯಾಕ್ರೋನ್ಯುಟ್ರಿಯಂಟ್​ ಆಗಿದೆ. ಗ್ರೀಕ್​ನ ಪ್ರೊಟೋಸ್​ ಎನ್ನವ ಪದದಿಂದ ಬಂದ ಪ್ರೋಟೀನ್​ ಎನ್ನವ ಪದದ ಅರ್ಥ 'ಮೊದಲು' ಎಂದಾಗಿದೆ.

Coronavirus: ಕೋವಿಡ್​ ತಡೆಗಟ್ಟುವ ಡಯೆಟ್​ ಫುಡ್​​ನಲ್ಲಿ ಹೆಚ್ಚು ಪ್ರೋಟೀನ್​ಯುಕ್ತ ಆಹಾರವಿರಲಿ
ಪ್ರಾತಿನಿಧಿಕ ಚಿತ್ರ

ಆರೋಗ್ಯದ ಬಗ್ಗೆ ಎಷ್ಟು ಕಾಳಜಿವಹಿಸಿದರೂ ಕಡಿಮೆಯೇ ಸರಿ. ಕಣ್ಣಿಗೆ ಕಾಣದೆ ಜೀವವನ್ನೇ ತೆಗೆಯುವ ಕೊರೋನಾದಂತಹ ಸಾಂಕ್ರಾಮಿಕ ರೋಗ ಒಂದು ಕಡೆ ದಿನದಿಂದ ದಿನಕ್ಕೆ ಹರಡುತ್ತಿದೆ. ಹೀಗಾಗಿ  ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇ ಬೇಕು. ಸಾಂಕ್ರಾಮಿಕ ರೋಗ ಹರಡುವ ಭಯದ ನಡುವೆ ಹೆಚ್ಚು ಪ್ರೋಟೋನ್​ಯುಕ್ತ ಆಹಾರ ಸೇವನೆ ಅಗತ್ಯವಾಗಿದೆ. ಇದಕ್ಕಾಗಿ ಹಿಪೋಕ್ರೆಟ್ಸ್​ ಎನ್ನುವ ಔಷಧಿಯ ಪಿತಾಮಹ ‘ ಆಹಾರವೇ ಔಷಧಿಯಾಗಬೇಕು, ಔಷಧವೇ ಆಹಾರವಾಗಬೇಕು’ ಎಂದಿದ್ದಾರೆ. ಫೋಷಣೆಯುಕ್ತ ಆಹಾರ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಕೊರೋನಾ ಹಾಗೂ ಅದರ ರೂಪಾಂತರಿ ವೈರಸ್​ಗಳ ವಿರುದ್ಧವೂ ಹೋರಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರೋಟೀನ್​ಭರಿತ ಆಹಾರ ಸೇವನೆ ಒಳ್ಳೆಯದು. ದೇಹದ ಆರೋಗ್ಯವನ್ನು ಉತ್ತಮಪಡಿಸಲು ನೀವು ನಿಮ್ಮ ಡಯೆಟ್​ ಲಿಸ್ಟ್​ಗೆ ಒಂದಷ್ಟು ಪ್ರೊಟೀನ್​ ಅಂಶಗಳಿರುವ ಆಹಾರವನ್ನು ಸೇರಿಸಿಕೊಳ್ಳಿ.

ದೇಹದಲ್ಲಿ ಪ್ರೋಟೀನ್​ನ ಪಾತ್ರವೇನು? ಪ್ರೋಟೀನ್​  ಮಾನವನ ದೇಹಕ್ಕೆ ಬೇಕಾದ ಪ್ರಮುಖ ಮ್ಯಾಕ್ರೋನ್ಯುಟ್ರಿಯಂಟ್​ ಆಗಿದೆ. ಗ್ರೀಕ್​ನ ಪ್ರೊಟೋಸ್​ ಎನ್ನವ ಪದದಿಂದ ಬಂದ ಪ್ರೋಟೀನ್​ ಎನ್ನವ ಪದದ ಅರ್ಥ ‘ಮೊದಲು’ ಎಂದಾಗಿದೆ. ಹೀಗಾಗಿ ದೇಹದ ಆರೋಗ್ಯಕ್ಕೆ ಮೊದಲು ಪ್ರೊಟೀನ್​ಯುಕ್ತ ಆಹಾರ ಸೇವನೆ ಅತೀ ಅಗತ್ಯವಾಗಿದೆ ಎಂದು ಹಾರ್ವರ್ಡ್​ ವಿಶ್ವವಿದ್ಯಾನಿಲಯದ ವೈದ್ಯರೂ ಕೂಡ ಹೇಳಿದ್ದಾರೆ. ಅಲ್ಲದೆ ಪ್ರೋಟೀನ್ ಅಂಶಗಳು ದೇಹದಲ್ಲಿನ  ಜೀವಕೋಶಗಳನ್ನು ಉತ್ತಮಗೊಳಿಸಲು ಹಾಗೂ ಹೊಸ ಜೀವಕೋಶಗಳ ಉತ್ಪತ್ತಿಗೆ ಸಹಾಯಕವಾಗಿದೆ.

ಕೊರೋನಾ ರೋಗಿಗಳಿಗೆ ಪ್ರೋಟೀನ್​ ಏಕೆ ಅಗತ್ಯ? ದೇಹದಲ್ಲಿನ ಪ್ರೊಟೀನ್​  ಕೊರೆತೆಯು ಕೊರೋನಾ ಸೋಂಕಿನ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ನೆರವಾಗಿ ಪರಿಣಾಮ ಬೀರುತ್ತವೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ಆದ್ದರಿಂದ ಕೊರೋನಾ ಸೋಂಕಿತ ವ್ಯಕ್ತಿಗೆ ಪ್ರೋಟೋನ್​ ಅಂಶ ಅಗತ್ಯವಾಗಿದೆ. ಪ್ರೋಟೀನ್​ ಯುಕ್ತ ಆಹಾರ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಕೊರೋನಾ ಸೋಂಕು ರೋಗ ನಿರೋಧಕ ಶಕ್ತಿ ಕೊರತೆ ಇರುವವರಗೆ ಬೇಗ ತಗುಲುವುದರಿಂದ ದೇಹವನ್ನು ರಕ್ಷಿಸಿಕೊಳ್ಳಲು ಪ್ರೊಟೀನ್​ಯುಕ್ತ ಆಹಾರ ತಿನ್ನುವುದು ಎಲ್ಲ ರೀತಿಯಿಂದಲೂ ಒಳ್ಳೆಯದು. ರೋಗ ನಿರೋಧಕ ಶಕ್ತಿ ಕೊರತೆಯಿಂದ ಕೇವಲ ಕೊರೋನಾ ಮಾತ್ರವಲ್ಲ ಇತರ ಸೋಂಕು ಕೂಡ ತಗುಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲರಿಗೂ ಪ್ರೋಟೀನ್​ ಸಹಿತ ಆಹಾರ ಒಳ್ಳೆಯದು.  ಅದೇ ರೀತಿ ಪ್ರೊಟೋನ್​ ಕೋವಿಡ್​ ಸೋಂಕಿನಿಂದ ದೂರವಿರಲು ಹೆಚ್ಚು ಅವಶ್ಯಕವಾಗಿದೆ.

ಮಾನವನ ದೇಹಕ್ಕೆ ಎಷ್ಟು ಪ್ರಮಾಣದ ಪ್ರೊಟೀನ್​  ಅಗತ್ಯ? ಸಾಮಾನ್ಯವಾಗಿ ದೇಹದ ಪ್ರತೀ ಕೆಜಿ ತೂಕಕ್ಕೆ0.8 ಗ್ರಾಂ ಪ್ರೊಟೀನ್​ ಅಗತ್ಯವಾಗಿರುತ್ತದೆ ಎನ್ನುತ್ತಾರೆ ತಜ್ಞರು. ಆದರೆ ಕೊರೋನಾ ಸೋಂಕಿತರಲ್ಲಿ ಹೆಚ್ಚು ಅವಶ್ಯಕವಾಗಿರುತ್ತದೆ. ಇದು ಲಿಂಗ, ವಯಸ್ಸು  ಆರೋಗ್ಯ ಸ್ಥಿತಿಯನ್ನು ಆಧರಿಸಿರುತ್ತದೆ. ಹೀಗಾಗಿ ಪ್ರೊಟೀನ್​ಯುಕ್ತ ಆಹಾರ ಸೇವನೆಯ ಬಗ್ಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಪಟ್ಟಿ ತಯಾರಿಸಿಕೊಳ್ಳಿ. ಆಗ ನಿಮ್ಮ ದೇಹಕ್ಕೆ ಬೇಕಾದ ಹಾಗೆ ಆಹಾರವನ್ನು ಸೇವಿಸಬಹದು.

ಯಾವ ಆಹಾರಗಳಲ್ಲಿ ಹೆಚ್ಚು ಪ್ರೋಟೀನ್​​ ಅಂಶ ಇರುತ್ತದೆ? ದೇಹಕ್ಕೆ ಅಗತ್ಯವಾದ ಪ್ರೋಟೀನ್​ ಅಂಶವು ಹೆಚ್ಚಾಗಿ ಪ್ರಾಣಿ ಮೂಲ ಆಹಾರಗಳಲ್ಲಿ ಇರುತ್ತದೆ. ಉದಾಹರಣೆಗೆ ಮೀನು, ಚಿಕನ್​, ಸೇರಿದಂತೆ ಡೈರಿ ಉತ್ಪನ್ನಗಳಲ್ಲಿ ಯಥೇಚ್ಚವಾದ ಪ್ರೋಟಿನ್​ ಅಂಶ ಇರುತ್ತದೆ. ಇನ್ನು ಸಸ್ಯಾಹಾರದಲ್ಲಿ ಬೀನ್ಸ್, ಬೀಜಗಳು ಮತ್ತು ಧಾನ್ಯಗಳಲ್ಲಿ ಪ್ರೋಟೀನ್​ ಸಿಗುತ್ತವೆ. ಆದರೆ ನೆನಪಿಡಿ ಇವುಗಳಲ್ಲಿರುವ ಪ್ರೋಟೀನ್​ ಅಂಶ ನಿಮ್ಮ ದೇಹಕ್ಕೆ ಯಾವ ಪ್ರಮಾಣದಲ್ಲಿ ಬೇಕು ಎನ್ನುವುದನ್ನು ನೀವೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ ಅರಿತುಕೊಳ್ಳಬೇಕು.

ಇದನ್ನೂ ಓದಿ:

ನಿಮ್ಮ ಮನೆಗೆ ಈ ವಸ್ತುಗಳನ್ನ ತಂದರೆ ಹೆಚ್ಚು ಆದಾಯ ಪಡೆಯುತ್ತೀರಿ

Published On - 12:50 pm, Mon, 10 January 22

Click on your DTH Provider to Add TV9 Kannada