ಮನೆ (Home) ಎಂದರೂ ಎಲ್ಲರಿಗೂ ಅಚ್ಚುಮೆಚ್ಚಿನ ಸ್ಥಳ. ಸದಾ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಲು ಒಂದಲ್ಲ ಒಂದಲ್ಲ ಹೊಸ ಐಡಿಯಾವನ್ನು ಮಾಡುತ್ತಲೇ ಇರುತ್ತೇವೆ. ವರ್ಕ್ ಫ್ರಾಮ್ ಹೋಮ್(Work From Home) ಆರಂಭವಾದಾಗಿನಿಂದ ಮನೆಯಲ್ಲೇ ಬೆಳಗ್ಗೆ ಸಂಜೆ ಆಗುತ್ತಿದೆ. ಹೀಗಾಗಿ ಮನೆಯ ವಾತಾವರಣ ಕೂಲ್ ಕೂಲ್ ಆಗಿದ್ದರೂ ಕೆಲಸ ಮಾಡುವ ಉತ್ಸಾಹವೂ ಮೂಡುತ್ತದೆ. ಮನೆ ಸ್ವಚ್ಛವಾಗಿದ್ದರೆ ಮನಸ್ಸೂ ಪ್ರಶಾಂತವಾಗಿರುತ್ತದೆ. ಹೀಗಾಗಿ ಮನೆಯನ್ನು ನಿಟ್ ಆಗಿ ಇರಿಸಿಕೊಳ್ಳಿ ಜತೆಗೆ ಅಂದವಾಗಿ ಡೆಕೋರೇಟ್(Decorate) ಮಾಡಿಕೊಳ್ಳಿ. ಅದಕ್ಕಾಗಿ ಒಂದಷ್ಟು ಪೀಠೋಪಕರಣಗಳನ್ನು ಅಳವಡಿಸಿಕೊಳ್ಳಿ. ಇದರ ಜತೆಗೆ ಒಂದಷ್ಟು ಹೊಸ ಯೊಜನೆಗಳನ್ನು ರೂಪಿಸಿಕೊಳ್ಳಿ. ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್ಗಳು
ಸೋಫಾ ಸೆಟ್ :
ವರ್ಕ್ ಫ್ರಾಮ್ ಹೋಮ್ ಹಲವರ ನಿದ್ದೆಗೆಡಿಸಿದೆ. ಹೀಗಾಗಿ ಸೋಫಾ ಸೆಟ್ಗಳನ್ನು ಮೃದುವಾಗಿರುವಂತೆ ನೋಡಿಕೊಳ್ಳಿ. ನೀವು ಹಗಲು ರಾತ್ರಿ ಕುಳಿತು ಕೆಲಸ ಮಾಡಿ ದಣಿದಾಗ ವಿಶ್ರಾಂತಿ ಆರಾಮವಾಗುತ್ತದೆ. ಜತೆಗೆ ಮನೆಯ ಅಂದವನ್ನೂ ಹೆಚ್ಚಿಸುತ್ತದೆ. ವಿಶಾಲವಾದ ಹಾಲ್ಗೆ ಒಂದು ಸೋಫಾ ಸೆಟ್ ಇದ್ದರೆ ಹೆಚ್ಚು ಸೂಕ್ತ,
ಹೊರಾಂಗಣದಲ್ಲಿ ಗಿಡಗಳಿರಲಿ:
ಇತ್ತೀಚೆಗಂತೂ ಮನೆಯಿಂದ ಹೊರಹೋಗುವುದೇ ಕಷ್ಟವಾಗಿದೆ. ಹೀಗಾಗಿ ಮನೆಯ ಬಳಿಯೇ ವಿಶಾಲವಾದ ಹೊರಾಂಗಣ ಇರುವಂತೆ ನೋಡಿಕೊಳ್ಳಿ. ಅದಕ್ಕೆ ಮನೆಯ ಗೋಡೆಗಳಿಗೆ ಗ್ಲಾಸ್ನಕಿಟಕಿಗಳನ್ನು ಅಳವಡಿಸಿಕೊಳ್ಳಿ.
ಲಿವ್ಡ್ ಇನ್ ಲುಕ್ ಅಳವಡಿಸಿಕೊಳ್ಳಿ:
ಮನೆ ಅಂದವಾಗಿದ್ದಾರೆ ಖುಷಿಯೂ ಹೆಚ್ಚು. ಮನೆಗೆ ವಿಂಟೇಜ್ ಬೆಳಕು ಹೆಚ್ಚು ಬರುವಂತೆ ನೋಡಿಕೊಳ್ಳಿ. ಮರದ ಅಥವಾ ಲೋಹದ ಚೌಕಟ್ಟನಲ್ಲಿ ಮೇಣದ ಬತ್ತಿಯ ಬೆಳಕು ಮನೆಯ ಹೊಳೆ ಸೂಸುವಂತೆ ನೋಡಿಕೊಳ್ಳಿ.
ಪೀಠೋಪಕರಣಗಳ ಬಗ್ಗೆ ಹೆಚ್ಚು ಗಮನವಹಿಸಿ:
ಮನೆಯ ಅಂದವನ್ನು ಹೆ್ಚ್ಚಿಸಲು ಪೀಠೋಪಕರಣಗಳು ಮುಖ್ಯವಾಗಿರುತ್ತದೆ. ಹೀಗಾಗಿ ಮನೆಯಲ್ಲಿ ವಿವಿಧ ರೀತಿಯ ಪೀಠೋಪಕರಣಗಳನ್ನು ಒಪ್ಪವಾಗಿ ಜೋಡಿಸಿಡಿ. ಕುರ್ಚಿ, ಮೇಜು ಇವುಗಳನ್ನು ಆಕರ್ಷಕವಾಗಿರುವಂತೆ ನೋಡಿಕೊಳ್ಳಿ.
ಅಡುಗೆಮನೆಯನ್ನು ಅಂದಗೊಳಿಸಿ:
ಮನೆಯ ಮುಖ್ಯ ಭಾಗ ಎಂದರೆ ಅಡುಗೆ ಮನೆ. ಅಡುಗೆ ಮನೆಯನ್ನು ಆದಷ್ಟು ಚಿಕ್ಕ ಜಾಗದಲ್ಲಿ ಮಾಡಿಕೊಳ್ಳಬೇಡಿ. ಕೊಂಚ ಹೆಚ್ಚಾಗಿಯೇ ಜಾಗ ಇರಿಸಿಕೊಳ್ಳಿ. ಇದರೊಂದಿಗೆ ಅಡುಗೆ ಮನೆಯ ವಸ್ತುಗಳ ಬಗ್ಗೆ ಪ್ಯಾಷನೇಟ್ ಆಗಿರಿ. ವಿವಿಧ ರೀತಿಯ ಕಪ್ಗಳನ್ನು ಜೋಡಿಸಿಡಿ ಇದು ಅಡುಗೆ ಮನೆಯ ಅಂದವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ:
Headache: ಆಗಾಗ ತಲೆನೋವು ಬರುತ್ತಾ? ತಲೆನೋವಿನಿಂದ ಸುಲಭವಾಗಿ ಮುಕ್ತಿ ಹೊಂದಲು ಹೀಗೆ ಮಾಡಿ
Published On - 5:55 pm, Thu, 17 February 22