ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿದೆ. ಅದ್ದರಂತೆ ಮುಂದಿನ ಪ್ರಜೆಯ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದು ಪೋಷಕರ ಕರ್ತವ್ಯವಾಗಿದೆ. ಅವರ ಆರೋಗ್ಯ, ಶಿಕ್ಷಣ ಹಾಗೂ ಅವರ ಅಭಿವೃದ್ದಿಗೆ ಪೂರಕವಾಗುವಂತೆ ಬಾಲ್ಯದಲ್ಲಿಯೇ ಅವರಿಗೆ ತಿಳುವಳಿಕೆಯನ್ನು ನೀಡುವುದು ಅಗತ್ಯವಾಗಿದೆ. ಪ್ರತಿ ವರ್ಷ ನವೆಂಬರ್ 20 ರಂದು ವಿಶ್ವ ಮಕ್ಕಳ ದಿನವನ್ನು ಆಚರಣೆ ಮಾಡುವಂತೆ ವಿಶ್ವಸಂಸ್ಥೆಯು ತಿಳಿಸಿದೆ. ಪ್ರಪಂಚದಾದ್ಯಂತ ಒಗ್ಗಟ್ಟಿನಿಂದ ಯಾವುದೇ ಮೂಲೆ ಮೂಲೆಯಲ್ಲಿನ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದು ಅದರ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಈ ದಿನದ ಮುಖ್ಯ ಗುರಿಯಾಗಿದೆ. 1954 ರಲ್ಲಿ ಸ್ಥಾಪಿಸಲಾದ ವಿಶ್ವಸಂಸ್ಥೆಯ (UN) ವಿಶ್ವ ಮಕ್ಕಳ ದಿನವನ್ನು ಪ್ರತಿ ವರ್ಷ ನವೆಂಬರ್ 20 ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ.
ವಿಶ್ವ ಮಕ್ಕಳ ದಿನದ ಇತಿಹಾಸ:
1857 ರಲ್ಲಿ ಲಿಯೊನಾರ್ಡ್‌ದ ಪಾದ್ರಿ ರೆವರೆಂಡ್ ಡಾ. ಚಾರ್ಲ್ಸ್ ರಿಂದ ಮೊದಲು ಈ ದಿನವನ್ನು ಪ್ರಾರಂಭಿಸಿದರು. ಲಿಯೊನಾರ್ಡ್ನಲ್ಲಿ ಈ ದಿನವನ್ನು ರೋಸ್ ಡೇ ಎಂದು ಕರೆಯಾಗುತ್ತಿತ್ತು ನಂತರ ಮಕ್ಕಳ ದಿನ ಎಂದು ಹೆಸರಿಸಲಾಯಿತು.
ವಿಶ್ವ ಮಕ್ಕಳ ದಿನವನ್ನು ಮೊದಲು ಅಧಿಕೃತವಾಗಿ 1920, ಏಪ್ರಿಲ್ 23 ರಂದು ರಿಪಬ್ಲಿಕ್ ಆಫ್ ಟರ್ಕಿಯಿಂದ ರಾಷ್ಟ್ರೀಯ ರಜಾದಿನವೆಂದು ಘೋಷಿಸಲಾಯಿತು. ವಿಶ್ವ ಮಕ್ಕಳ ದಿನವನ್ನು 1954 ರಲ್ಲಿ ವಿಶ್ವಸಂಸ್ಥೆಯು ಸ್ಥಾಪಿಸಿದರೂ, 1959 ರವರೆಗೆ UN ಜನರಲ್ ಅಸೆಂಬ್ಲಿ ಮಕ್ಕಳ ಹಕ್ಕುಗಳ ಘೋಷಣೆಯ ವಿಸ್ತೃತ ರೂಪವನ್ನು ಅಳವಡಿಸಿಕೊಂಡಿತು.
ಈ ದಿನದ ಮುಖ್ಯ ಉದ್ದೇಶಗಳು ಇಲ್ಲಿವೆ:
– ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಿರುವ ಆಹಾರಗಳನ್ನು ಬಾಲ್ಯದಲ್ಲಿಯೇ ನೀಡಬೇಕು.
-ಹಸಿದ ಮಗುವಿಗೆ ಆಹಾರ, ಅನಾರೋಗ್ಯದ ಬಳಲುತ್ತಿರುವ ಮಗುವಿಗೆ ಸರಿಯಾದ ಚಿಕಿತ್ಸೆ, ತಪ್ಪು ಮಾಡಿದಾಗ ತಿದ್ದುವುದು, ಅನಾಥ ಮಕ್ಕಳಿಗೆ ಆಶ್ರಯ ನೀಡುವುದು.
-ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವುದು.
2012 ರಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಬಾನ್ ಕಿ-ಮೂನ್ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು. 2015 ರ ವೇಳೆಗೆ ಪ್ರತಿ ಮಗುವೂ ಶಾಲೆಗೆ ಹೋಗಬೇಕೆಂದು ಕಡ್ಡಾಯಗೊಳಿಸಿದರು. ಜೊತೆಗೆ ಶಾಂತಿ, ಗೌರವ ಮತ್ತು ಪರಿಸರ ಕಾಳಜಿಯನ್ನು ಮಕ್ಕಳಲ್ಲಿ ಉತ್ತೇಜಿಸಲಾಯಿತು. ವಿಶ್ವ ಮಕ್ಕಳ ದಿನವು ಕೇವಲ ನಿಮ್ಮ ಮಕ್ಕಳಿಗೆ ಮಾತ್ರ ಸಂಭ್ರಮವನ್ನು ನೀಡಿ ಆಚರಿಸುವ ಬದಲಾಗಿ, ಅನಾಥ, ಬಡ ಮಕ್ಕಳಿಗೂ ನಿಮ್ಮಿಂದ ಆಗುವ ಸಹಾಯವನ್ನು ಮಾಡಿ.
ಇದನ್ನು ಓದಿ: ನಿಮ್ಮ ಧನಾತ್ಮಕ ಶಕ್ತಿ ಅಮ್ಮ, ಅವಳಿಂದ positive ವಿಚಾರ ಕಲಿತುಕೊಳ್ಳಿ
ಕೆಲವು ದೇಶಗಳಲ್ಲಿ ಮಕ್ಕಳನ್ನು ಕಾರ್ಮಿಕರಾಗಿ ಬಳಸಲಾಗುತ್ತದೆ. ಧರ್ಮ, ಅಲ್ಪಸಂಖ್ಯಾತರ ಸಮಸ್ಯೆಗಳು ಅಥವಾ ಅಂಗವೈಕಲ್ಯಗಳಿಂದ ಬಳಲುತ್ತಿದ್ದಾರೆ. ಪ್ರಸ್ತುತ, 5 ರಿಂದ 14 ವರ್ಷದೊಳಗಿನ ಸುಮಾರು 153 ಮಿಲಿಯನ್ ಮಕ್ಕಳು ಬಲವಂತವಾಗಿ ಬಾಲಕಾರ್ಮಿಕತೆಗೆ ಒಳಗಾಗಿದ್ದಾರೆ. ಇವೆಲ್ಲವುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: