Confidence: ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪೋಷಕರಿಗೆ ಕೆಲವು ಸಲಹೆಗಳು ಇಲ್ಲಿವೆ
ಆತ್ಮವಿಶ್ವಾಸ ಇರುವ ಮಗು ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಸುಲಭವಾಗಿ ಉತ್ತೀರ್ಣವಾಗುತ್ತದೆ. ಪ್ರತಿಯೊಂದು ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಾರೆ.
ಆತ್ಮವಿಶ್ವಾಸ ಇರುವ ಮಗು ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಸುಲಭವಾಗಿ ಉತ್ತೀರ್ಣವಾಗುತ್ತದೆ. ಪ್ರತಿಯೊಂದು ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಾರೆ. ಅನೇಕ ಬಾರಿ ಆತ್ಮವಿಶ್ವಾಸದ ಕೊರತೆಯಿಂದ ಮಕ್ಕಳು ಜೀವನದಲ್ಲಿ ಅನೇಕ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸದ ಕೊರತೆಯಾಗದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗುತ್ತದೆ. ಆ 3 ಪರಿಣಾಮಕಾರಿ ಸಲಹೆಗಳನ್ನು ನಿಮಗಿಲ್ಲಿ ನೀಡುತ್ತಿದ್ದೇವೆ.
ಮಕ್ಕಳನ್ನು ಹೊಗಳಿ ಮಕ್ಕಳು ಉತ್ತಮ ಕೆಲಸ ಮಾಡಿದಾಗಲ್ಲೆಲ್ಲಾ ಅವರನ್ನು ಹೊಗಳಿ, ಮುಂದಿನ ಬಾರಿ ಮತ್ತಷ್ಟು ಒಳ್ಳೆಯ ಫಲಿತಾಂಶ ತರುವಂತೆ ಪ್ರೇರೇಪಿಸಿ ಪ್ರತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಆತ್ಮವಿಶ್ವಾಸವನ್ನು ಹೆಚ್ಚಿಸಿ.
ಮಕ್ಕಳನ್ನು ಪ್ರೀತಿಸಿ ನಿಮ್ಮ ಒತ್ತಡ ಜೀವನದಲ್ಲಿ ಮಗುವಿಗೂ ಸ್ವಲ್ಪ ಸಮಯ ಕೊಡಿ. ಅವರೊಂದಿಗೆ ಪ್ರೀತಿಯಿಂದ ಮಾತನಾಡಿ, ಅವರ ಪ್ರಶ್ನೆಗಳಿಗೆ ಶಾಂತ ರೀತಿಯಿಂದ ಉತ್ತರ ನೀಡಿ. ಅವರ ಮಾತುಗಳನ್ನು ಆಸಕ್ತಿಯಿಂದ ಆಲಿಸಿ.
ನಕಾರಾತ್ಮಕ ಚಿಂತನೆಯಿಂದ ದೂರವಿರಿ ಮಕ್ಕಳು ಅರಿವಿಲ್ಲದೆ ನಿಮ್ಮ ಸುತ್ತಮುತ್ತಲಿನ ಪರಿಸರದಿಂದ ಬಹಳಷ್ಟು ಕಲಿಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಋಣಾತ್ಮಕ ವಾತಾವರಣದಿಂದ ದೂರವಿಡುವ ಜವಾಬ್ದಾರಿ ಪೋಷಕರ ಮೇಲಿದೆ. ಆದರೆ ನಿಮ್ಮ ಮಾತಿನಿಂದ ನೋವು ಅನುಭವಿಸುತ್ತಾರೆ ಎಂದು ಹೇಳುವುದನ್ನು ಹೇಳದೇ ಇರಬೇಡಿ.
ತಪ್ಪು-ಸರಿಯನ್ನು ಬಿಡಿಸಿ ಹೇಳಿ ನಿಮ್ಮ ಮಕ್ಕಳು ಅವರಿಗೆ ತಿಳಿಯದೇ ಕೆಲವೊಂದು ಬಾರಿ ತಪ್ಪು ದಾರಿ ತುಳಿದುಬಿಡುತ್ತಾರೆ, ಆ ಸಮಯದಲ್ಲಿ ಅವರಿಗೆ ಸರಿಯಾವುದು, ತಪ್ಪು ಯಾವುದು ಎಂದು ಕೂರಿಸಿ ಬುದ್ಧಿವಾದ ಹೇಳುವುದು ಉತ್ತಮ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ