Vastu Tips: ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ, ಜಗಳಗಳನ್ನು ತಡೆಯಲು ಇಲ್ಲಿದೆ ವಾಸ್ತು ತಜ್ಞರ ಸಲಹೆಗಳು

| Updated By: ಅಕ್ಷತಾ ವರ್ಕಾಡಿ

Updated on: Nov 20, 2022 | 7:30 PM

ದಾಂಪತ್ಯ ಜೀವನದಲ್ಲಿನ ಜಗಳ, ಮನಸ್ತಾಪಗಳು ಹಾಗೂ ಸಂಬಂಧಗಳ ಬಿರುಕಿಗೆ ವಾಸ್ತು ತಜ್ಞರಾದ ಗುರುದೇವ್ ಕಶ್ಯಪ್ ವಾಸ್ತುವಿನ ಮೂಲಕ ಪರಿಹಾರ ನೀಡಿದ್ದಾರೆ.

Vastu Tips: ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯ, ಜಗಳಗಳನ್ನು ತಡೆಯಲು ಇಲ್ಲಿದೆ ವಾಸ್ತು ತಜ್ಞರ ಸಲಹೆಗಳು
vastu tips for healthy relationship
Image Credit source: HerZindagi
Follow us on

ಗಂಡ- ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ, ಆದರೆ ಇತ್ತೀಚೆಗೆ ಸಂಗಾತಿಯೊಂದಿನ ಕೆಲವೊಂದಿಷ್ಟು ಭಿನ್ನಾಭಿಪ್ರಾಯಗಳು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಆದ್ದರಿಂದ ಸಮಸ್ಯೆಗಳು ನಿಮ್ಮ ಮನೆಯ ಹಾಗೂ ನಿಮ್ಮ ಕೋಣೆಯ ವಾಸ್ತು ದೋಷದಿಂದಲೂ ಸಂಭವಿಸಬಹುದು. ಆದ್ದರಿಂದ ಎಚ್ಚರ ವಹಿಸುವುದು ಅಗತ್ಯ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಯಾವುದೇ ಸಂಬಂಧವು ನಂಬಿಕೆ, ಗೌರವ ಮತ್ತು ಕಾಳಜಿ ಮೇಲೆ ನಿಂತಿದೆ. ಆದರೆ ನಿಮ್ಮ ಮನೆಯೊಳಗಿನ ಶಕ್ತಿಗಳ ಅಸಮತೋಲನವು ವೈವಾಹಿಕ ಅಪಶ್ರುತಿಗೆ ಕಾರಣವಾಗುವ ಸಂದರ್ಭಗಳಿವೆ. ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸಲು ಮತ್ತು ಬಂಧವನ್ನು ಬಲಪಡಿಸಲು ವಾಸ್ತು ಸಹಾಯ ಮಾಡುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ನೀವು ಮತ್ತು ನಿಮ್ಮ ಸಂಗಾತಿಯು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಜಗಳವಾಡುತ್ತಿದ್ದೀರಾ? ನೀವು ಸಂತೋಷದ ವೈವಾಹಿಕ ಜೀವನವನ್ನು ಬಯಸುತ್ತೀರಾ, ಆದರೆ ನಿರಂತರ ಜಗಳದಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದೀರಾ? ನಿಮ್ಮ ಮನೆಯ ವಾಸ್ತು ಕೂಡ ನಿಮ್ಮ ದಾಂಪತ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಸಂಗಾತಿಯೊಂದಿಗೆ ಸಂತೋಷದ ಸಂಬಂಧ, ತಿಳುವಳಿಕೆ, ಹೊಂದಾಣಿಕೆ ಮತ್ತು ಬಾಂಧವ್ಯವನ್ನು ಹೊಂದಲು ನಿಮ್ಮ ಮಲಗುವ ಕೋಣೆ, ಅಡುಗೆಮನೆ ಮತ್ತು ಒಟ್ಟಾರೆ ಮನೆಯಲ್ಲಿ ಶಕ್ತಿಗಳ ಸರಿಯಾದ ಸಮತೋಲನವನ್ನು ಹೊಂದಿರುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ.

ದಾಂಪತ್ಯ ಜೀವನದಲ್ಲಿನ ಜಗಳ, ಮನಸ್ತಾಪಗಳು ಹಾಗೂ ಸಂಬಂಧಗಳ ಬಿರುಕಿಗೆ ವಾಸ್ತು ತಜ್ಞರಾದ ಗುರುದೇವ್ ಕಶ್ಯಪ್ ವಾಸ್ತುವಿನ ಮೂಲಕ ಪರಿಹಾರ ನೀಡಿದ್ದಾರೆ.

ಸಂತೋಷದ ದಾಂಪತ್ಯ ಜೀವನಕ್ಕಾಗಿ ನೀವು ಅನುಸರಿಸಬಹುದಾದ ಕೆಲವು ವಾಸ್ತು ಸಲಹೆಗಳು ಇಲ್ಲಿವೆ:
1) ವಾಸ್ತು ಪ್ರಕಾರ ದಂಪತಿಯ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿ ಇರಬಾರದು. ಆಗ್ನೇಯವು ಬೆಂಕಿಯ ವಲಯವಾಗಿದೆ – ಇದು ಶಾಂತಿಗೆ ಅಡ್ಡಿಯಾಗುತ್ತದೆ ಮತ್ತು ಕೆಟ್ಟ ನಡವಳಿಕೆಗೆ ಕಾರಣವಾಗುತ್ತದೆ. ಮತ್ತೆ ಅದೇ ಕಾರಣಕ್ಕಾಗಿ, ಆಗ್ನೇಯ ದಿಕ್ಕಿನಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಂಭಾಷಣೆಗಳನ್ನು ಮಾಡಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಸಂಗಾತಿಯೊಂದಿಗೆ ಜಗಳಗಳು ಮತ್ತು ಅನಗತ್ಯ ವಾದಗಳು ಹೆಚ್ಚಾಗುತ್ತವೆ.
2) ವಾಸ್ತು ಪ್ರಕಾರ, ನಿಮ್ಮ ಮಲಗುವ ಕೋಣೆ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಮಲಗುವ ಕೋಣೆಯಲ್ಲಿ, ಯಾವುದೇ ಕಸ ಅಥವಾ ಮುರಿದ ವಸ್ತುಗಳನ್ನು ಇಡಬಾರದು. ಸಾಮರಸ್ಯದ ಸಂಬಂಧಕ್ಕಾಗಿ ನಿಮ್ಮ ಮಲಗುವ ಕೋಣೆಯನ್ನು ಹೂವುಗಳು, ಮೇಣದಬತ್ತಿಗಳು ಮತ್ತು ಸುಗಂಧಗಳೊಂದಿಗೆ ಅಲಂಕರಿಸಿ.
3) ವಾಸ್ತು ಪ್ರಕಾರ, ಉತ್ತರ-ವಾಯುವ್ಯ ದಿಕ್ಕು ನಿಮ್ಮ ಸಂಗಾತಿಯೊಂದಿಗೆ ಪ್ರಣಯ ಸಂಭಾಷಣೆಗೆ ಉತ್ತಮ ದಿಕ್ಕು .
4) ಹೊಸದಾಗಿ ಮದುವೆಯಾದ ದಂಪತಿಗಳ ಮಲಗುವ ಕೋಣೆ ಉತ್ತರ-ವಾಯುವ್ಯ ದಿಕ್ಕಿನಲ್ಲಿರಬೇಕು ಮತ್ತು ಹಿರಿಯ ದಂಪತಿಗಳ ಮಲಗುವ ಕೋಣೆ ದಕ್ಷಿಣ ದಿಕ್ಕಿನಲ್ಲಿರಬೇಕು.
5) ವಾಸ್ತು ಪ್ರಕಾರ, ಒಂದೇ ಸಾಲಿನಲ್ಲಿ ಪಾತ್ರೆ ತೊಳೆಯುವ ಸಿಂಕ್ ಮತ್ತು ಗ್ಯಾಸ್ ಸ್ಟವ್ ಇಡಬೇಡಿ . ನೀರು ಮತ್ತು ಬೆಂಕಿ ಯಾವಾಗಲೂ ಜೊತೆಯಾಗಿ ಇರಬಾರದು.

ಇದನ್ನು ಓದಿ: ಪತಿ ಮನೆಗೆಲಸದಲ್ಲಿ ಸಹಾಯ ಮಾಡುತ್ತಿಲ್ಲ ಎಂಬ ಚಿಂತೆಯೇ, ಇಲ್ಲಿದೆ ತಜ್ಞರ ಸಲಹೆ

ಈ ವಾಸ್ತು ಸಲಹೆಗಳು ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: