Swiggyಯಲ್ಲಿ ಬರೋಬ್ಬರಿ 16 ಲಕ್ಷ ರೂ. ಮೌಲ್ಯದ ಫುಡ್ ಆರ್ಡರ್ ಮಾಡಿದ ಬೆಂಗಳೂರಿನ ವ್ಯಕ್ತಿ

| Updated By: ಅಕ್ಷತಾ ವರ್ಕಾಡಿ

Updated on: Dec 17, 2022 | 5:18 PM

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಬರೋಬ್ಬರಿ 16 ಲಕ್ಷ ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ಆರ್ಡರ್ ಮಾಡಿದ ಬೆಂಗಳೂರಿನ ವ್ಯಕ್ತಿ ಈತ ಕೇವಲ ಬರ್ಗರ್‌ಗಳಿಗಾಗಿ 70,000 ರೂ ಖರ್ಚು ಮಾಡಿದ್ದಾನೆ ಎಂದು ಎಂದು ಸ್ವಿಗ್ಗಿ ಬಹಿರಂಗಪಡಿಸಿದೆ.

Swiggyಯಲ್ಲಿ ಬರೋಬ್ಬರಿ 16 ಲಕ್ಷ ರೂ. ಮೌಲ್ಯದ ಫುಡ್ ಆರ್ಡರ್ ಮಾಡಿದ ಬೆಂಗಳೂರಿನ ವ್ಯಕ್ತಿ
ಸಾಂದರ್ಭಿಕ ಚಿತ್ರ
Follow us on

ವರ್ಷದ ಅಂತ್ಯ(Year end)ದಲ್ಲಿ ಸ್ವಿಗ್ಗಿ (Swiggy) ತನ್ನ ಅಪ್ಲಿಕೇಶನ್‌ ಮೂಲಕ ಭಾರತೀಯರು 2022 ರಲ್ಲಿ ಹೆಚ್ಚು ಆರ್ಡರ್ ಮಾಡಿದ ಸಮಗ್ರ ಪಟ್ಟಿಯನ್ನು ಹಂಚಿಕೊಂಡಿದೆ. ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ರೂ 16 ಲಕ್ಷ ಮೌಲ್ಯದ ದಿನಸಿಗಳನ್ನು ಆರ್ಡರ್ ಮಾಡಿದ್ದಾರೆ. ಇದು ಅತಿ ಹೆಚ್ಚು ಮೊತ್ತದ ಆರ್ಡರ್ ಎಂದು ಸ್ವಿಗ್ಗಿ ಬಹಿರಂಗಪಡಿಸಿದೆ. ಇದಕ್ಕಿಂತ ಮೊದಲು ವ್ಯಕ್ತಿಯೊಬ್ಬರು ದೀಪಾವಳಿ ಸಂದರ್ಭದಲ್ಲಿ 75,378 ರೂ.ಗೆ ಸ್ವಿಗ್ಗಿಯಲ್ಲಿ ಒಂದೇ ಆರ್ಡರ್ ಮಾಡಿದ್ದಾರೆ. ಸ್ಟೋರ್‌ನಿಂದ 50 ಮೀಟರ್ ದೂರದಲ್ಲಿರುವ ಗ್ರಾಹಕರಿಗೆ 1.03 ನಿಮಿಷಗಳಲ್ಲಿ ಇನ್‌ಸ್ಟಾಮಾರ್ಟ್ ವಿತರಿಸಿದ ತ್ವರಿತ ಆರ್ಡರ್ ಇದಾಗಿದೆ. ಪುಣೆಯ ಇನ್ನೊಬ್ಬ ವ್ಯಕ್ತಿ ತನ್ನ ಇಡೀ ತಂಡಕ್ಕೆ 71,229 ರೂ ಬಿಲ್ ಮೌಲ್ಯದೊಂದಿಗೆ ಬರ್ಗರ್ ಮತ್ತು ಫ್ರೈಸ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಲಕ್ಷದವರೆಗಿನ ಮೊತ್ತವನ್ನು ಯಾವುದೇ ಆರ್ಡರ್ ತಲುಪಿರಲ್ಲಿಲ್ಲ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಸುಲಭವಾಗಿ ಹಾಗೂ ತ್ವರಿತವಾಗಿ ನಿಮಗೆ ಸೇವೆಯನ್ನು ನೀಡುವುದರಿಂದ ಕೆಲವೊಮ್ಮೆ ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುವಂತೆ ಮಾಡುತ್ತದೆ. ದಿನಸಿ ಸಾಮಾನುಗಳಿಗೆ ಬರೋಬ್ಬರಿ 16 ಲಕ್ಷ ರೂಪಾಯಿ ಖರ್ಚು ಮಾಡಿದ ವ್ಯಕ್ತಿಗೆ ಹೀಗೇ ಆಗಿರಬೇಕು. ಈ ವ್ಯಕ್ತಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸಾಕಷ್ಟು ತ್ವರಿತ ನೂಡಲ್ಸ್ ಮತ್ತು ಹಾಲನ್ನು ಆರ್ಡರ್ ಮಾಡಿದ್ದಾರೆ. ಸ್ಟೋರ್‌ನಿಂದ 50 ಮೀಟರ್ ದೂರದಲ್ಲಿರುವ ಗ್ರಾಹಕರಿಗೆ 1.03 ನಿಮಿಷಗಳಲ್ಲಿ ಇನ್‌ಸ್ಟಾಮಾರ್ಟ್ ತ್ವರಿತವಾಗಿ ಆರ್ಡರ್ ಮಾಡಿದೆ ಎಂದು ಹಂಚಿಕೊಂಡಿದೆ.

ಇದನ್ನು ಓದಿ: ವಾಹನಗಳ ಬಿಡಿಭಾಗಳಿಂದ ತಯಾರಿಸಲಾಗಿದೆ ವಿಶ್ವದ ಅತಿ ದೊಡ್ಡ ರುದ್ರ ವೀಣೆ

2022 ರಲ್ಲಿ ಭಾರತೀಯರು ಹೆಚ್ಚು ಆರ್ಡರ್ ಮಾಡಿದರಲ್ಲಿ ಬಿರಿಯಾನಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕುತೂಹಲಕಾರಿ ವಿಷಯವೆಂದರೆ ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯಗಳ ಪಟ್ಟಿಯಲ್ಲಿ ಬಿರಿಯಾನಿ ಅಗ್ರಸ್ಥಾನದಲ್ಲಿದೆ. ಬಿರಿಯಾನಿ ಮಾತ್ರವಲ್ಲದೇ ಮಸಾಲಾ ದೋಸೆ, ಚಿಕನ್ ಫ್ರೈಡ್ ರೈಸ್, ಪನೀರ್ ಬಟರ್ ಮಸಾಲಾ, ಬಟರ್ ನಾನ್, ವೆಜ್ ಫ್ರೈಡ್ ರೈಸ್, ವೆಜ್ ಬಿರಿಯಾನಿ ಮತ್ತು ತಂದೂರಿ ಚಿಕನ್‌ಗಳು ಕೂಡ ಹೆಚ್ಚು ಆರ್ಡರ್ ಮಾಡಿದ ಪಟ್ಟಿಯಲ್ಲಿದೆ. ಜೊತೆಗೆ ಈ ವರ್ಷ ಬಳಕೆದಾರರು ಸಾಕಷ್ಟು ಕೊರಿಯನ್ ಮತ್ತು ಇಟಾಲಿಯನ್ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಹಂಚಿಕೊಂಡಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: