ಇಂದು ಬಹುತೇಕ ಪ್ರತಿ ಮೂರನೇ ವ್ಯಕ್ತಿ ಅಧಿಕ ರಕ್ತದೊತ್ತಡ (High BP) ದಿಂದ ಬಳಲುತ್ತಿದ್ದಾರೆ. ಈ ಅಧಿಕ ರಕ್ತದೊತ್ತಕ್ಕೆ ನಮ್ಮ ಜೀವನಶೈಲಿ ಮತ್ತು ಅಧಿಕ ಒತ್ತಡ ಕಾರಣ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸರಿಯಾದ ಆಹಾರವನ್ನು ಅನುಸರಿಸಿದರೆ ಅದನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತಿದೆ. ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶಗಳನ್ನು ಹೊಂದಿರುವುದು ಬಹಳ ಮುಖ್ಯವಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಫೈಬರ್ ಭರಿತ ಆಹಾರವನ್ನು ಸೇವಿಸಬೇಕು. ಇದರೊಂದಿಗೆ, ಪ್ರತಿ ಊಟದಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇರುವ ಆಹಾರವನ್ನು ಸೇವಿಸಬೇಕು. ಫೈಬರ್ ಭರಿತ ಆಹಾರಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ.
ಇದನ್ನೂ ಓದಿ: ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವುದರಿಂದ ಏನು ಪ್ರಯೋಜನ? ಆಯುರ್ವೇದ ತಜ್ಞರು ಹೇಳಿದ್ದೇನು ಗೊತ್ತಾ?
ಸಿಟ್ರಸ್ ಹಣ್ಣುಗಳು:
ಹೆಲ್ತ್ಲೈನ್ ಪ್ರಕಾರ ಸಿಟ್ರಸ್ ಹಣ್ಣುಗಳಿಂದ ದೇಹವು ವಿಟಮಿನ್ ಸಿ ಪಡೆಯುವುದು ಮಾತ್ರವಲ್ಲದೇ ಫೈಬರ್ ಕೂಡ ದೊರೆಯುತ್ತದೆ. ದ್ರಾಕ್ಷಿ, ಕಿತ್ತಳೆ, ನಿಂಬೆ ಮತ್ತು ಮೋಸಂಬಿ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ. ಕಿತ್ತಳೆ ಮತ್ತು ನಾರಿನ ಹಣ್ಣುಗಳು ಫೈಬರ್ನ್ನು ಹೊಂದಿರುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮೀನು:
ಮೀನುಗಳನ್ನು ಸೇವಿಸುವ ಜನರು ಹೆಚ್ಚಿನ ಪ್ರಮಾಣದಲ್ಲಿ ಫೈಬರ್ನ್ನು ಹೊಂದುತ್ತಾರೆ. ಕೊಬ್ಬಿನ ಮೀನುಗಳು ಒಮೆಗಾ -3 ಕೊಬ್ಬನ್ನು ಹೊಂದಿರುತ್ತವೆ. ಇವುಗಳನ್ನು ಹೆಚ್ಚಿನ ಫೈಬರ್ ಎಂದು ಪರಿಗಣಿಸಲಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದಾಗಿದೆ.
ಕುಂಬಳಕಾಯಿ:
ಕುಂಬಳಕಾಯಿ ಬೀಜಗಳು ಅಧಿಕ ರಕ್ತದೊತ್ತಡಕ್ಕೆ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದರಲ್ಲಿರುವ ಎಣ್ಣೆಯು ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕುಂಬಳಕಾಯಿ ಬೀಜದಲ್ಲಿ ನಾರಿನಂಶ ಕಡಿಮೆ ಇದ್ದರೂ, ಅದರ ಆರೋಗ್ಯ ಪ್ರಯೋಜನಗಳು ಒಟ್ಟಾರೆ ದೇಹಕ್ಕೆ ಪ್ರಯೋಜನಕಾರಿಯಾಗಿದೆ.
ಬೀನ್ಸ್ ಮತ್ತು ಕಾಳುಗಳು:
ಬೀನ್ಸ್ ಮತ್ತು ಬೇಳೆಕಾಳುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ಅಧಿಕ ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಇದರೊಂದಿಗೆ, ಬೇಳೆಕಾಳುಗಳ ಸೇವನೆಯಿಂದ ಪ್ರೋಟೀನ್ ಕೊರತೆಯನ್ನು ಸಹ ಪೂರೈಸಲಾಗುತ್ತದೆ.