Summer Trips : ನಿಮ್ಮ ಮಕ್ಕಳನ್ನು ಕರ್ನಾಟಕದ ಈ ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋಗಲೇಬೇಕು

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 15, 2024 | 4:47 PM

ದೇಶ ಸುತ್ತಿ ಕೋಶ ಸುತ್ತಿ ಎನ್ನುವ ಮಾತಿದೆ. ಆದರೆ ಇಂದಿನ ಬ್ಯುಸಿ ಲೈಫ್ ನಲ್ಲಿ ದೂರದ ಸ್ಥಳಗಳಿಗೆ ಹೋಗುವುದಕ್ಕೆ ಟೈಮ್ ಯೇ ಇರುವುದಿಲ್ಲ. ಆದರೆ ಕೆಲವೊಮ್ಮೆ ಬಿಡುವೂ ಮಾಡಿಕೊಂಡು ಮಕ್ಕಳು, ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆಗೆ ಟ್ರಿಪ್ ಮಾಡಿದರೆ ಅದರ ಮಜಾನೇ ಬೇರೆ. ಮಕ್ಕಳಿಗಂತೂ ಬೇಸಿಗೆ ರಜೆ ಶುರುವಾಗಲು ಕೆಲವೇ ಕೆಲವು ದಿನಗಳು ಬಾಕಿಯಿವೆ. ಹೀಗಾಗಿ ಮಕ್ಕಳ ಜೊತೆಗೆ ಟ್ರಿಪ್ ಹೋಗಲು ಪ್ಲಾನ್ ಮಾಡಿಕೊಳ್ಳುತ್ತಿದ್ದರೆ ಕರ್ನಾಟಕದಲ್ಲಿರುವ ಐತಿಹಾಸಿಕ ಈ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಬಹುದು.

Summer Trips : ನಿಮ್ಮ ಮಕ್ಕಳನ್ನು ಕರ್ನಾಟಕದ ಈ ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋಗಲೇಬೇಕು
ಸಾಂದರ್ಭಿಕ ಚಿತ್ರ
Follow us on

ಬೇಸಿಗೆ ರಜೆ ಆರಂಭವಾಗುವ ಮೊದಲೇ ತಂದೆ ತಾಯಿಯರ ಬಳಿ ಅಲ್ಲಿಗೆ ಕರೆದುಕೊಂಡು ಹೋಗಿ, ಇಲ್ಲಿಗೆ ಕರೆದುಕೊಂಡು ಹೋಗಿ ಲಿಸ್ಟ್ ಸಿದ್ಧವಾಗಿರುತ್ತದೆ. ಮಕ್ಕಳ ಆಸೆಯಂತೆ ಹೆತ್ತವರು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು ಎಂದುಕೊಳ್ಳುತ್ತಾರೆ. ಆದರೆ ಈ ಸಮಯದಲ್ಲಿ ಯಾವ ಸ್ಥಳಕ್ಕೆ ಹೋಗಬೇಕು ಎನ್ನುವ ಪ್ರಶ್ನೆಯೊಂದು ಕಾಡುತ್ತದೆ. ಒಂದು ವೇಳೆ ನಿಮ್ಮ ಮಕ್ಕಳಿಗೆ ಇತಿಹಾಸ ಆಧಾರಿತ ಸ್ಥಳಗಳ ಬಗ್ಗೆ ಕುತೂಹಲವಿದ್ದರೆ ಅಂತಹ ಸ್ಥಳಗಳಿಗೆ ಟ್ರಿಪ್ ಪ್ಲಾನ್ ಮಾಡಿಕೊಂಡು ಮಕ್ಕಳನ್ನು ಖುಷಿ ಪಡಿಸಬಹುದು.

ಮೈಸೂರು

ಮೈಸೂರು ಕರ್ನಾಟಕದಲ್ಲಿ ಭೇಟಿ ನೀಡಲು ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಮಕ್ಕಳನ್ನು ಮೈಸೂರಿಗೆ ಕರೆದುಕೊಂಡು ಹೋದರೆ ಮೊದಲು ತೋರಿಸಬೇಕಾಗಿರುವುದೇ ಮೈಸೂರು ಅರಮನೆಯನ್ನು. ಅದಲ್ಲದೇ ಮೈಸೂರಿನ ಇತರ ಪ್ರೇಕ್ಷಣೀಯ ಸ್ಥಳಗಳೆಂದರೆ ಸೇಂಟ್ ಫಿಲೋಮಿನಾ ಚರ್ಚ್, ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್, ಕೇಶವ ದೇವಸ್ಥಾನ ಸೋಮನಾಥಪುರ, ಪ್ರಾದೇಶಿಕ ನೈಸರ್ಗಿಕ ಇತಿಹಾಸ ಸಂಗ್ರಹಾಲಯ, ಮೃಗಾಲಯ, ಜಾನಪದ ವಸ್ತುಸಂಗ್ರಹಾಲಯ, ಕೃಷ್ಣರಾಜಸಾಗರ ಅಣೆಕಟ್ಟು, ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ, ಮತ್ತು ಬೃಂದಾವನ ಉದ್ಯಾನವನಗಳು ಹೀಗೆ ವಿವಿಧ ಆಕರ್ಷಣೀಯ ಸ್ಥಳ ಗಳಿದ್ದು ಮಕ್ಕಳ ಬೇಸಿಗೆಯ ಪ್ರವಾಸವನ್ನು ಇನ್ನಷ್ಟು ಕಲರ್ ಫುಲ್ ಆಗಿಸುತ್ತದೆ.

ಮಡಿಕೇರಿ

ಕೂರ್ಗ್ ಕರ್ನಾಟಕದ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಹಚ್ಚ ಹಸಿರಿನ ಪರಿಸರದ ನಡುವೆ ಪ್ರಕೃತಿಯ ಸೌಂದರ್ಯವನ್ನು ಸವಿಯುವುದಕ್ಕೆ ಇದೊಂದು ಒಳ್ಳೆಯ ತಾಣವಾಗಿದೆ. ಮಡಿಕೇರಿಗೆ ಟ್ರಿಪ್ ಹೋಗಲು ಪ್ಲಾನ್ ಮಾಡಿಕೊಂಡಿದ್ದರೆ, ಮಡಿಕೇರಿ ಕೋಟೆ, ಓಂಕಾರೇಶ್ವರ ದೇವಸ್ಥಾನ, ಅಬ್ಬೆ ಜಲಪಾತ, ರಾಜನ ಸಮಾಧಿ, ಮರ್ಕರಾ ಗೋಲ್ಡ್ ಎಸ್ಟೇಟ್, ಕೊಡಗಿನಲ್ಲಿ ನೆಡುತೋಪು ಹೀಗೆ ಹಲವಾರು ಸ್ಥಳಗಳು ನಿಮ್ಮನ್ನು ಖಂಡಿತವಾಗಿಯೂ ಕೈ ಬೀಸಿ ಕರೆಯುತ್ತದೆ.

ಬೆಂಗಳೂರು

ಕರ್ನಾಟಕದ ರಾಜಧಾನಿ ಬೆಂಗಳೂರೆ ನಿಮ್ಮ ಊರು ಆಗಿದ್ದರೆ ಮಕ್ಕಳನ್ನು ಇಲ್ಲಿರುವ ಹಲವಾರು ಸ್ಥಳ ಗಳಿಗೆ ಕರೆದುಕೊಂಡು ಹೋಗಿ ಖುಷಿ ಪಡಿಸಬಹುದು. ಬೆಂಗಳೂರಿನಲ್ಲಿ ಬೆಂಗಳೂರು ಅರಮನೆ, ಬನ್ನೇರುಘಟ್ಟ ಮೃಗಾಲಯ, ಲಾಲ್‌ಬಾಗ್ ಸಸ್ಯೋದ್ಯಾನ, ಕಬ್ಬನ್ ಪಾರ್ಕ್, ಕರ್ನಾಟಕ ವಿಧಾನ ಸೌಧ, ಶ್ರೀ ದೊಡ್ಡ ಗಣಪತಿ ದೇವಸ್ಥಾನ ಹೀಗೆ ಹಲವು ಸ್ಥಳಗಳಿಗೆ ಭೇಟಿ ನೀಡಿದರೆ ಬೇಸಿಗೆಯ ರಜೆಯಲ್ಲಿ ಈ ಟ್ರಿಪ್ ಮಕ್ಕಳಿಗೂ ನಿಜಕ್ಕೂ ಖುಷಿಯಾಗುತ್ತದೆ.

ಬಾದಾಮಿ

ನಿಮ್ಮ ಮಕ್ಕಳು ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಬಹಳ ಕುತೂಹಲಕಾರರಾಗಿದ್ದರೆ ಇತಿಹಾಸ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವುದು ಒಳ್ಳೆಯದು. ಬಾದಾಮಿ ಅಥವಾ ವಾತಾಪಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿದೆ. ಇಲ್ಲಿ ಭೇಟಿ ನೀಡಿದರೆ ಜಂಬುಲಿಂಗೇಶ್ವರ ದೇವಸ್ಥಾನ, ಭೂತನಾಥ ದೇವಸ್ಥಾನಗಳು, ಬಾದಾಮಿ ಶಿವಾಲಯ, ಬಾದಾಮಿ ಕೋಟೆ, ಭೂತನಾಥ ದೇವಸ್ಥಾನ, ಅಗಸ್ತ್ಯ ಸರೋವರ, ಚಿಕ್ಕ ಮಹಾಕೂಟೇಶ್ವರ ದೇವಸ್ಥಾನ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಗುಹೆಗಳು ಇವೆ. ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಬೇಕೆನ್ನುವವರಿಗೆ ಈ ಸ್ಥಳವು ಉತ್ತಮ ಆಯ್ಕೆಯಾಗಿದೆ.

ಹಂಪಿ

ಪ್ರಾಚೀನ ಸ್ಮಾರಕಗಳಿಂದಾಗಿ ಹಂಪಿ ಕರ್ನಾಟಕದ ಅತ್ಯುತ್ತಮ ಪ್ರವಾಸಿ ಸ್ಥಳ ಎಂದು ಕರೆಸಿಕೊಂಡಿದೆ. ಮಕ್ಕಳಿಗೆ ಐತಿಹಾಸಿಕ ಸ್ಥಳಗಳನ್ನು ತೋರಿಸಲು ಇಷ್ಟ ಪಡುವವರು ಇಲ್ಲಿಗೆ ಭೇಟಿ ನೀಡಿದರೆ ಶ್ರೀ ವಿರೂಪಾಕ್ಷ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ, ಹೇಮಕೂಟ ಬೆಟ್ಟದ ದೇವಸ್ಥಾನ, ಅಚ್ಯುತರಾಯ ದೇವಸ್ಥಾನ, ಲಕ್ಷ್ಮೀ ನರಸಿಂಹ ದೇವಸ್ಥಾನ, ಮತ್ತು ಕಡಲೆಕಾಳು ಗಣೇಶ ಹೀಗೆ ಹಲವಾರು ದೇವಸ್ಥಾನಗಳನ್ನು ನೋಡಬಹುದು.

ಬಂಡೀಪುರ ರಾಷ್ಟ್ರೀಯ ಉದ್ಯಾನವನ

ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಪಶ್ಚಿಮ ಘಟ್ಟಗಳ ವಿವಿಧ ವನ್ಯಜೀವಿ ಪ್ರಭೇದಗಳಿವೆ. ಮೈಸೂರಿನಿಂದ 75 ಕಿಮೀ ದೂರದಲ್ಲಿರುವ ರಾಷ್ಟ್ರೀಯ ಉದ್ಯಾನವನಕ್ಕೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋದರೆ ಖುಷಿಯಾಗುತ್ತಾರೆ. ಹೆಚ್ಚು ಪ್ರಯಾಣವಿಲ್ಲದೇ ಎಂಜಾಯ್ ಮಾಡಲು ಸೂಕ್ತವಾದ ಸ್ಥಳವಿದು ಎನ್ನಬಹುದು.

ಇದನ್ನೂ ಓದಿ: ಶಿವನಿಗೆ ಪ್ರಿಯವಾದ ಈ ಬಿಲ್ವ ಪತ್ರೆಯಿಂದ ಆರೋಗ್ಯ ತಾಪತ್ರೆಗಳು ಬಹುದೂರ

ಬಿಜಾಪುರ

ಕರ್ನಾಟಕದ ಅತ್ಯುತ್ತಮ ಸ್ಥಳಗಳಲ್ಲಿ ಬಿಜಾಪುರ ಕೂಡ ಒಂದಾಗಿದ್ದು, ಬೇಸಿಗೆ ರಜೆಗೆಂದು ಮಕ್ಕಳ ಜೊತೆಗೆ ಇಲ್ಲಿಗೆ ಭೇಟಿ ನೀಡಿದರೆ ಐತಿಹಾಸಿಕ ಸ್ಥಳಗಳನ್ನು ನೋಡಿ ಖುಷಿ ಪಡಬಹುದು. ಗೋಲ್ ಗುಂಬಜ್, ಜಾಮಿಯಾ ಮಸೀದಿ, ಬಾರಾ ಕಮಾನ್, ಮಲಿಕ್-ಇ-ಮೈದನ್ ಮತ್ತು ಇಬ್ರಾಹಿಂ ರೋಜಾ ರಸ್ತೆಯಂತಹ ಅನೇಕ ಮೊಘಲ್ ವಾಸ್ತುಶಿಲ್ಪಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ನಿಮ್ಮ ಮಕ್ಕಳಿಗೂ ಈ ಎಲ್ಲಾ ಸ್ಥಳಗಳು ಇಷ್ಟವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ