Holiday Season: ಮಾರ್ಚ್​​ ರಜಾ ದಿನಗಳಲ್ಲಿ ಬೆಂಗಳೂರಿನಿಂದ ಈ ಪ್ರವಾಸಿ ತಾಣಗಳಿಗೆ ನೀವು ಭೇಟಿ ನೀಡಿ, ಇಲ್ಲಿದೆ ಮಾಹಿತಿ

|

Updated on: Mar 03, 2023 | 10:45 AM

ಈ ರಜಾ ದಿನಗಳಲ್ಲಿ ನೀವು ನಿಮ್ಮ ಕುಟುಂಬದವರು, ಸ್ನೇಹಿತರೊಂದಿಗೆ ಈ ಕೆಳಗಿನ ತಾಣಗಳನ್ನು ಭೇಟಿ ನೀಡಬಹುದಾಗಿದೆ. ಜೊತೆಗೆ ಬಣ್ಣಗಳ ಹೋಳಿ ಹಬ್ಬ ಸಮೀಪಿಸುತ್ತಿರುವಂತೆ, ನಗರದ ಗದ್ದಲದಿಂದ ದೂರವಿರಲು ನೀವು ಭೇಟಿ ನೀಡಬಹುದಾದ ಕೈಗೆಟುಕುವ ಆಫ್‌ಬೀಟ್ ಸ್ಥಳಗಳೂ ಕೂಡ ಇದಾಗಿದೆ.

Holiday Season: ಮಾರ್ಚ್​​ ರಜಾ ದಿನಗಳಲ್ಲಿ   ಬೆಂಗಳೂರಿನಿಂದ ಈ  ಪ್ರವಾಸಿ ತಾಣಗಳಿಗೆ ನೀವು  ಭೇಟಿ ನೀಡಿ, ಇಲ್ಲಿದೆ ಮಾಹಿತಿ
Image Credit source: The Backpacksters
Follow us on

ಮಾರ್ಚ್​ ತಿಂಗಳಲ್ಲಿ ಹಬ್ಬ ಹರಿದಿನಗಳನ್ನು ಹೆಚ್ಚಾಗಿರುವುದರಿಂದ ಸಾಕಷ್ಟು ಕೆಲಸದ ಒತ್ತಡದ ಜೀವನದಿಂದ ಒಂದಷ್ಟು ದಿನ ವಿರಾಮವನ್ನು ಪಡೆಯಬಹುದಾಗಿದೆ.ಆದ್ದರಿಂದ ಈ ರಜಾದಿನಗಳಲ್ಲಿ ನೀವು ನಿಮ್ಮವರೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲು ಬಯಸುತ್ತಿದ್ದರೆ, ಬೆಂಗಳೂರಿಗೆ ಸಮೀಪದಲ್ಲಿರುವ ಕೆಲವೊಂದಿಷ್ಟು ಸುಂದರ ತಾಣಗಳ ಬಗ್ಗೆ ಮಾಹಿತಿಯನ್ನು ನಾವು ನೀಡುತ್ತೇವೆ. ಆದ್ದರಿಂದ ಈ ರಜಾ ದಿನಗಳಲ್ಲಿ ನೀವು ನಿಮ್ಮ ಕುಟುಂಬದವರು, ಸ್ನೇಹಿತರೊಂದಿಗೆ ಈ ಕೆಳಗಿನ ತಾಣಗಳನ್ನು ಭೇಟಿ ನೀಡಬಹುದಾಗಿದೆ. ಜೊತೆಗೆ ಬಣ್ಣಗಳ ಹೋಳಿ ಹಬ್ಬ ಸಮೀಪಿಸುತ್ತಿರುವಂತೆ, ನಗರದ ಗದ್ದಲದಿಂದ ದೂರವಿರಲು ನೀವು ಭೇಟಿ ನೀಡಬಹುದಾದ ಕೈಗೆಟುಕುವ ಆಫ್‌ಬೀಟ್ ಸ್ಥಳಗಳೂ ಕೂಡ ಇದಾಗಿದೆ.

ಗುಡಿಬಂಡೆ ಕೋಟೆ :

ಬೆಂಗಳೂರಿನಿಂದ ಕೇವಲ 100 ಕಿಲೋಮೀಟರ್ ದೂರದಲ್ಲಿರುವ ಗುಡಿಬಂಡೆ ಕೋಟೆಯು ನೀವು ಚಾರಣ ಪ್ರಿಯರಾಗಿದ್ದರೆ ಉತ್ತಮ ಸ್ಥಳವಾಗಿದೆ. ವಿಶಾಲವಾದ ಭೂದೃಶ್ಯಗಳು, ಬೆಟ್ಟಗಳು, ನದಿಗಳು ಮತ್ತು ಸಣ್ಣ ಹಳ್ಳಿಗಳನ್ನು ಹೊಂದಿರುವ ದೃಶ್ಯಾವಳಿಗಳನ್ನು ನೀವಿಲ್ಲಿ ಆನಂದಿಸಬಹುದು.

ನಂದಿ ಬೆಟ್ಟ:

ಬೆಂಗಳೂರು ನಗರದಿಂದ 60 ಕಿಲೋಮೀಟರ್ ದೂರದಲ್ಲಿ ನೆಲೆಗೊಂಡಿರುವ ನಂದಿ ಹಿಲ್ಸ್ ನಿಮ್ಮ ಮನಸ್ಸಿಗೆ ಸಾಕಷ್ಟು ನೆಮ್ಮದಿಯನ್ನು ನೀಡುತ್ತದೆ. ನೀವು ಬೆಟ್ಟದ ತುದಿಯಲ್ಲಿ ಮೋಡದಿಂದ ಆವೃತವಾದ ಪ್ರದೇಶವನ್ನು ಕಣ್ತುಂಬಿಸಿ ಕೊಳ್ಳಬಹದಾಗಿದೆ. ಜೊತೆಗೆ ನೀವು ಸಾಹಸ ಪ್ರಿಯರಾಗಿದ್ದರೆ, ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್, ಪ್ಯಾರಾಗ್ಲೈಡಿಂಗ್ ಅನುಭವವನ್ನು ಪಡೆಯಬಹುದಾಗಿದೆ.

ಶಿವನಸಮುದ್ರ:

ಮಂಡ್ಯ ಜಿಲ್ಲೆಯ ಸಮೀಪದಲ್ಲಿರುವ ಶಿವನಸಮುದ್ರ ಜಲಪಾತವೂ, ಸಾಕಷ್ಟು ಜನಪ್ರಿಯವೂ ಹೌದು. ಶಿವನಸಮುದ್ರ ಜಲಪಾತಕ್ಕೆ ಸೋಮವಾರದಿಂದ ಭಾನುವಾರದವರೆಗೆ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭೇಟಿ ನೀಡಬಹುದು. ಈ ಜಲಪಾತವು ಬರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತವನ್ನು ಒಳಗೊಂಡಿದೆ.

ಗೋಕರ್ಣ:

ಉತ್ತರ ಕನ್ನಡ ಜಿಲ್ಲೆಯ ದೇವಾಲಯಗಳ ಪಟ್ಟಣ ಎಂದು ಕೂಡ ಕರೆಯಲ್ಪಡುವ ಗೋಕರ್ಣವು ನಿಮಗೆ ಚಿಲ್ ಬೀಚ್ ವೈಬ್ ನೀಡುತ್ತದೆ. ಗೋಕರ್ಣದಿಂದ ಕೇವಲ ಒಂದು ಗಂಟೆ ದೂರದಲ್ಲಿರುವ ಅದ್ಭುತವಾದ ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತಪ್ಪಿಸಬೇಡಿ.

ಇದನ್ನೂ ಓದಿ: ವೆನಿಸ್‌ನಲ್ಲಿ ರೋಮ್ಯಾಂಟಿಕ್ ಗೊಂಡೊಲಾ ಸವಾರಿಗಳ ಕನಸು ಕಾಣುತ್ತಿರುವಿರಾ? ಸದ್ಯಕ್ಕೆ ಇಂತಹ ಪ್ಲಾನ್ ಇದ್ದರೆ ಕ್ಯಾನ್ಸಲ್ ಮಾಡಿ!

ಬೈಲಕುಪ್ಪೆ :

ಬೆಂಗಳೂರಿನಿಂದ ಸುಮಾರು 220 ಕಿಮೀ ದೂರದಲ್ಲಿರುವ ಬೈಲಕುಪ್ಪೆಯು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಟಿಬೆಟಿಯನ್ ವಸಾಹತು ಹೊಂದಿದೆ. ಇಲ್ಲಿರುವ ಹಲವಾರು ಸುಂದರ ಮಠಗಳಿಗೆ ನೀವು ಭೇಟಿ ನೀಡಿ ಅಲ್ಲಿನ ವಿಭಿನ್ನ ಸಂಸ್ಕೃತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ.

ಹಾರ್ಸ್ಲಿ ಹಿಲ್ಸ್ :

ಬೆಂಗಳೂರಿನಿಂದ ಸುಮಾರು 150 ಕಿಮೀ ದೂರದಲ್ಲಿರುವ ಹಾರ್ಸ್ಲಿ ಹಿಲ್ಸ್ ಆಂಧ್ರಪ್ರದೇಶದಲ್ಲಿದೆ. ಹೆದ್ದಾರಿಗಳು ಮತ್ತು ಸುಂದರವಾದ ಹಳ್ಳಿಗಳ ಮೂಲಕ ಮೂರು ಗಂಟೆಗಳ ಸವಾರಿಯು ನಿಮಗೆ ಸುಂದರ ಅನುಭವ ನೀಡುವುದಂತೂ ಖಂಡಿತಾ.

ಗಂಡಿಕೋಟ :

ಬೆಂಗಳೂರಿನಿಂದ ಸುಮಾರು 280 ಕಿಲೋಮೀಟರ್ ದೂರದ ಆಂಧ್ರಪ್ರದೇಶದಲ್ಲಿ ನೀವು ಗಂಡಿಕೋಟವನ್ನು ಕಾಣಬಹುದು. ಇದು ಪ್ರದೇಶವು ಕೋಟೆಗಳಿಗೆ ಹೆಸರುವಾಸಿಯಾಗಿದೆ. ಇದು ಅತ್ಯಂತ ಸುಂದರವಾದ ಕಣಿವೆಗಳು ಮತ್ತು ಗುಹೆಗಳನ್ನು ಹೊಂದಿದ್ದು, ಇದು ಒಂದು ಸ್ಮರಣೀಯ ಪ್ರವಾಸವನ್ನು ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:43 am, Fri, 3 March 23