Remedies for Dandruff: ಈ ಮೂರು ಸಿಂಪಲ್​​​ ಟಿಪ್ಸ್​​ ನಿಮ್ಮ ತಲೆ ಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ

| Updated By: ಅಕ್ಷತಾ ವರ್ಕಾಡಿ

Updated on: Jan 21, 2023 | 11:46 AM

ಈ ಮೂರು ಸಿಂಪಲ್​​​ ಮನೆಮದ್ದು ನಿಮ್ಮ ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಿ, ನಿಮ್ಮ ನೆತ್ತಿಗೆ ತೇವಾಂಶವನ್ನು ನೀಡುತ್ತದೆ ಎಂದು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Remedies for Dandruff: ಈ ಮೂರು ಸಿಂಪಲ್​​​ ಟಿಪ್ಸ್​​ ನಿಮ್ಮ ತಲೆ ಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ
ತಲೆಹೊಟ್ಟು ಸಮಸ್ಯೆ
Follow us on

ತಲೆಹೊಟ್ಟು(Dandruff) ಅತ್ಯಂತ ಸಾಮಾನ್ಯವಾದ ಚಳಿಗಾಲ(Winter)ದ ಸಮಸ್ಯೆಗಳಲ್ಲಿ ಒಂದಾಗಿದೆ. ಡ್ಯಾಂಡ್ರಫ್ ಎಂಬುದು ಶುಷ್ಕ ಚರ್ಮವಾಗಿದ್ದು, ಚಳಿಗಾಲದ ಶೀತದಿಂದಾಗಿ ನೆತ್ತಿಯ ಚರ್ಮವು ಒಣಗುತ್ತದೆ. ಇದು ನಿಮ್ಮನ್ನು ಸಾಕಷ್ಟು ಜನರ ಮುಂದೆ ಮುಜುಗರಕ್ಕೀಡು ಮಾಡುತ್ತದೆ. ಆದ್ದರಿಂದ ಈ ಮೂರು ಸಿಂಪಲ್​​​ ಮನೆಮದ್ದು ನಿಮ್ಮ ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಿ, ನಿಮ್ಮ ನೆತ್ತಿಗೆ ತೇವಾಂಶವನ್ನು ನೀಡುತ್ತದೆ ಎಂದು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಲೆಹೊಟ್ಟು ಸಮಸ್ಯೆಗೆ ಮನೆಮದ್ದು:

1. ಬೇವಿನ ರಸ:

ಬೇವು ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುವಾಗ ಮುಚ್ಚಿಹೋಗಿರುವ ರಂಧ್ರಗಳನ್ನು ತೆರವುಗೊಳಿಸುತ್ತದೆ. ಬೇವಿನ ಪುನರುತ್ಪಾದಕ ಗುಣಲಕ್ಷಣಗಳು ತಲೆಹೊಟ್ಟು ಚಿಕಿತ್ಸೆಗೆ ಅತ್ಯಂತ ಅವಶ್ಯಕ ಮತ್ತು ಪ್ರಭಾವಶಾಲಿಯಾಗಿದೆ. ಬೇವಿನ ಎಲೆಯಿಂದ ಪೇಸ್ಟ್​ ಮಾಡಿ, ತಲೆಗೆ ಹಚ್ಚಿ ಹಾಗೂ 1 ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಓಂಕಾಳು ಚಹಾ ಕುಡಿಯುವುದರಿಂದಾಗುವ ಪ್ರಯೋಜನಗಳು ಇಲ್ಲಿವೆ

2. ಮೊಸರು ಮತ್ತು ನೆಲ್ಲಿಕಾಯಿ ಪುಡಿ:

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ದವಾಗಿದ್ದು, ನೆಲ್ಲಿಕಾಯಿಯ ಪುಡಿ ತಲೆಹೊಟ್ಟು ಸಮಸ್ಯೆಗೆ ಅತ್ಯಗತ್ಯವಾಗಿ ಬಳಸಲಾಗುತ್ತದೆ. ಮತ್ತೊಂದೆಡೆ, ಮೊಸರು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆದ್ದರಿಂದ 2 ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನೊಂದಿಗೆ ಬೆರೆಸಿ ನಂತರ ಅದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ.

3. ಒತ್ತಡ ನಿವಾರಿಸಿ:

ಒತ್ತಡವು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ತಲೆಹೊಟ್ಟು ಉಂಟುಮಾಡುವ ಸೋಂಕುಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಒತ್ತಡವನ್ನು ನಿವಾರಿಸಲು ಆದಷ್ಟು ಯೋಗಾಭ್ಯಾಸ ಹಾಗೂ ನಡಿಗೆ ಜೀವನಕ್ರಮದಲ್ಲಿ ರೂಡಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 11:46 am, Sat, 21 January 23