Lips Mask: ಚಳಿಗಾಲದಲ್ಲಿ ನಿಮ್ಮ ತುಟಿ ಒಡೆಯುತ್ತಿದೆಯೇ? ಆರೈಕೆಗೆ ಇಲ್ಲಿದೆ ನೈಸರ್ಗಿಕ ಲಿಪ್ ಮಾಸ್ಕ್

ಚಳಿಗಾಲದಲ್ಲಿ ತುಟಿಗಳು ಒಡೆಯುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ನಿಮ್ಮ ತುಟಿಗಳನ್ನು ಮೃದುವಾಗಿಡಲು ಹಾಗೂ ಚಳಿಗಾಲದಲ್ಲಿ ಒಡೆಯದಂತೆ ರಕ್ಷಣೆ ನೀಡಲು ಈ ಕೆಲವೊಂದು ನೈಸರ್ಗಿಕ ಲಿಪ್ ಮಾಸ್ಕ್​ಗಳನ್ನು ಪ್ರಯತ್ನಿಸಿ.

Lips Mask: ಚಳಿಗಾಲದಲ್ಲಿ ನಿಮ್ಮ ತುಟಿ ಒಡೆಯುತ್ತಿದೆಯೇ? ಆರೈಕೆಗೆ ಇಲ್ಲಿದೆ ನೈಸರ್ಗಿಕ ಲಿಪ್ ಮಾಸ್ಕ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 19, 2023 | 5:00 PM

ಚಳಿಗಾಲದಲ್ಲಿ ತುಟಿಗಳು ಒಡೆಯುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ನಿಮ್ಮ ತುಟಿಗಳನ್ನು ಮೃದುವಾಗಿಡಲು ಹಾಗೂ ಚಳಿಗಾಲದಲ್ಲಿ ಒಡೆಯದಂತೆ ರಕ್ಷಣೆ ನೀಡಲು ಈ ಕೆಲವೊಂದು ನೈಸರ್ಗಿಕ ಲಿಪ್ ಮಾಸ್ಕ್​ಗಳನ್ನು ಪ್ರಯತ್ನಿಸಿ. ಚಳಿಗಾಲದ ದಿನಗಳಲ್ಲಿ ತುಟಿಗಳನ್ನು ಸುಲಭವಾಗಿ ನಿರ್ಜಲೀಕರಣಗೊಳಿಸಬಹುದು. ಹಾಗೂ ಲಿಪ್‌ಬಾಮ್‌ಗಳನ್ನು ತುಟಿಗಳಿಗೆ ಅನ್ವಯಿಸುವುದು ಸಾಮಾನ್ಯವಾಗಿ ಒಣಗಿದ ತುಟಿಗಳಿಗೆ ನಾವು ಹುಡುಕುವ ಸರಳ ರಕ್ಷಣೆಯಾಗಿದೆ. ಇದಕ್ಕಿಂತ ನಾವು ನೈಸರ್ಗಿಕವಾದದ್ದು ಏನಾನ್ನಾದರೂ ತುಟಿಗೆ ಹಚ್ಚಿಕೊಳ್ಳಬಹುದು ಅಲ್ವಾ.

ರಾಸಾಯನಿಕಮುಕ್ತವಾಗಿರುವ ಇವುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ನಿಮ್ಮ ತುಟಿಗಳು ಮೃದುವಾಗಿ ಕಾಣುವಂತೆ ಮಾಡಲು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಲಿಪ್‌ಮಾಸ್ಕ್ ಬಗ್ಗೆ ತಿಳಿಸಿಕೊಡುತ್ತೇವೆ.

ಅಲೋವೆರಾ: ಕೂದಲ ರಕ್ಷಣೆ ಮತ್ತು ತ್ವಚೆಯ ಆರೈಕೆಯನ್ನು ಮಾಡುವಲ್ಲಿ ಅಲೋವೆರಾವು ಅತ್ಯುತ್ತಮ ಮನೆಮದ್ದಾಗಿದೆ. ತುಟಿಗಳ ಆರೈಕೆಗೂ ಅಲೋವೆರಾ ಉತ್ತಮ ಆಯ್ಕೆಯಾಗಿದೆ. ತಾಜಾ ಆಲೋವೆರಾವನ್ನು ತೆಗೆದುಕೊಂಡು ಅದನ್ನು ನೇರವಾಗಿ ತುಟಿಗಳಿಗೆ ಅನ್ವಯಿಸಿ. ಇದಲ್ಲದೆ ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯ ಜೊತೆ ವಿಶ್ರಣ ಮಾಡಿ ಕೂಡಾ ಹಚ್ಚಬಹುದು. ಇದನ್ನು ದಿನಕ್ಕೆ 2 ರಿಂದ ಮೂರು ಬಾರಿ ತುಟಿಗಳಿಗೆ ಅನ್ವಯಿಸಬಹುದು.

ಇದನ್ನು ಓದಿ;ನೀವು ಮೇಕ್​​ಅಪ್​​ ಮಾಡುವಾಗ ಸರಿಯಾದ ಕ್ರಮ ಅನುಸರಿಸಿ

ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯು ಹೆಚ್ಚಿನ ಚರ್ಮದ ಹಾಗೂ ಕೂದಲ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದು ತುಟಿಗಳಿಗೆ ಪೋಷಣೆ ನೀಡುವುದು ಮಾತ್ರವಲ್ಲದೆ ಚಳಿಗಾಲದಲ್ಲಿಯೂ ಸಹ ಅವುಗಳನ್ನು ಬಿಸಿಲಿನಿಂದ ರಕ್ಷಿಸುತ್ತದೆ. ನೀವು ನೇರವಾಗಿ ತೆಂಗಿನ ಎಣ್ಣೆಯನ್ನು ಒಡೆದ ತುಟಿಗಳಿಗೆ ಅನ್ವಯಿಸಿ. ಅಥವಾ ಸಕ್ಕರೆ ಮತ್ತು ತೆಂಗಿನ ಎಣ್ಣೆಯನ್ನು ಬಳಸಿ ಲಿಪ್ ಮಾಸ್ಕ್ ಕೂಡಾ ತಯಾರಿಸಬಹುದು.

ಅವಕಾಡೋ: ಅವಕಾಡೊ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಕೊಬ್ಬಿನಾಮ್ಲ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಅವಕಾಡೋವನ್ನು ಮ್ಯಾಸ್ ಮಾಡಿ ಅದಕ್ಕೆ ಮನೆಯಲ್ಲಿಯೇ ತಯಾರಿಸಿದ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ ನಿಮ್ಮ ಒಡೆದ ತುಟಿಗಳಿಗೆ ದಪ್ಪ ಪೇಸ್ಟ್ ರೀತಿಯಲ್ಲಿ ಅನ್ವಯಿಸಿ.

ಜೇನುತುಪ್ಪ: ತ್ವಚೆಯ ಪೋಷಣೆ ಮಾಡುವಲ್ಲಿ ಜೇನುತುಪ್ಪವು ಸಹಕಾರಿಯಾಗಿದೆ. ಗ್ಲಿಸರಿನ್‌ಗೆ ಕೆಲವು ಹನಿ ಜೇನುತುಪ್ಪವನ್ನು ಸೇರಿಸಿ ಮತ್ತು ಅದನ್ನು ಒಡೆದ ತುಟಿಗಳಿಗೆ ಅನ್ವಯಿಸಿ. ಈ ನೈಸರ್ಗಿಕ ಲಿಪ್‌ಬಾಮ್ ನಿಮ್ಮ ತುಟಿಗಳನ್ನು ತಕ್ಷಣವೇ ಮೃದುಗೊಳಿಸುತ್ತದೆ.

ಗ್ರೀನ್ ಟೀ ಬ್ಯಾಗ್: ಗ್ರೀನ್ ಟೀಯು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಶುಷ್ಕತೆಯಿಂದ ಉಂಟಾಗುವ ಒಡೆದ ತುಟಿಗಳ ನೋವನ್ನು ಕಡಿಮೆ ಮಾಡುತ್ತದೆ. ಗ್ರೀನ್‌ಟೀ ಬ್ಯಾಗ್‌ನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ ಮತ್ತು ಅವುಗಳನ್ನು ಕೆಲವು ನಿಮಿಷಗಳವರೆಗೆ ತುಟಿಗಳ ಮೇಲೆ ಇರಿಸಿ. ಇದು ತುಟಿಗಳ ನೋವನ್ನು ನಿವಾರಿಸುತ್ತದೆ.

ಕೋಕೋ ಪೌಡರ್: ಕೋಕೋ ಚರ್ಮ ಮತ್ತು ತುಟಿಗಳಿಗೆ ತೇವಾಂಶವನ್ನು ನೀಡುವುದು ಮಾತ್ರವಲ್ಲದೇ ಬಾಹ್ಯ ಮಾಲಿನ್ಯಗಳಿಂದ ತ್ವಚೆಗೆ ರಕ್ಷಣೆ ನೀಡುತ್ತದೆ. 2 ಚಮಚ ಆಲಿವ್ ಮೇಣ ಮತ್ತು 1 ಚಮಚ ತೆಂಗಿನ ಎಣ್ಣೆಯನ್ನು ಕರಗಿಸಿ ನಂತರ ಇದಕ್ಕೆ ಸ್ವಲ್ಪ ಕೋಕೋ ಪೌಡರ್, ಜೊಜೊಬಾ ಎಣ್ಣೆ, ಟೀ ಟ್ರೀ ಎಣ್ಣೆಯನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಲಿಪ್ ಬಾಮ್ ಖಂಡಿತವಾಗಿಯೂ ನಿಮ್ಮ ಒಡೆದ ತುಟಿಗಳನ್ನು ಸಂಪೂರ್ಣವಾಗಿ ಪೋಷಿಸುತ್ತದೆ.

ಶಿಯಾ ಬೆಣ್ಣೆ: ಶಿಯಾ ಬೆಣ್ಣೆಯು ಆಳವಾದ ಪೋಷಣೆಯ ಗುಣವನ್ನು ಹೊಂದಿದೆ. ಇದು ಒಂದು ಬೌಲ್‌ನಲ್ಲಿ ಒಂದು ಚಮಚ ಹರಳೆಣ್ಣೆ, ತೆಂಗಿನ ಎಣ್ಣೆ ಮತ್ತು ಶಿಯಾ ಬೆಣ್ಣೆಯನ್ನು ಹಾಕಿ ಅದಕ್ಕೆ ಪುಡಿ ಮಾಡಿದ ಬೀಟ್ರೂಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದು ನಿಮ್ಮ ತುಟಿಗಳನ್ನು ಮೃದುವಾಗಿಸುವುದು ಮಾತ್ರವಲ್ಲದೆ ತುಟಿಗಳಿಗೆ ನೈಸರ್ಗಿಕ ಬಣ್ಣವನ್ನು ಕೂಡಾ ಒದಗಿಸುತ್ತದೆ.

ಜೀವನಶೈಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ