Trust: ಸ್ನೇಹವಾಗಿರಲಿ ಅಥವಾ ಪ್ರೀತಿಯಾಗಿರಲಿ ಯಾರನ್ನಾದರೂ ನಂಬುವ ಮುನ್ನ ಈ 5 ವಿಷಯಗಳು ನಿಮಗೆ ನೆನಪಿರಲಿ
ನಾವು ನಮ್ಮ ದಿನನಿತ್ಯದ ಜೀವನದಲ್ಲಿ ತುಂಬಾ ಜನರನ್ನು ಭೇಟಿಯಾಗುತ್ತಿರುತ್ತೇವೆ, ಕೆಲವರ ವ್ಯಕ್ತಿತ್ವ ನಿಮಗೆ ತುಂಬಾ ಇಷ್ಟವಾಗಬಹುದು, ಇನ್ನೂ ಕೆಲವರ ಗುಣ ನಿಮಗೆ ಹಿಡಿಸದೇ ಇರಬಹುದು. ಕೆಲವರನ್ನು ನೀವು ಕಣ್ಮುಚ್ಚಿ ನಂಬಬಹುದು ಎಂದೆನಿಸಿರಬಹುದು.
ನಾವು ನಮ್ಮ ದಿನನಿತ್ಯದ ಜೀವನದಲ್ಲಿ ತುಂಬಾ ಜನರನ್ನು ಭೇಟಿಯಾಗುತ್ತಿರುತ್ತೇವೆ, ಕೆಲವರ ವ್ಯಕ್ತಿತ್ವ ನಿಮಗೆ ತುಂಬಾ ಇಷ್ಟವಾಗಬಹುದು, ಇನ್ನೂ ಕೆಲವರ ಗುಣ ನಿಮಗೆ ಹಿಡಿಸದೇ ಇರಬಹುದು. ಕೆಲವರನ್ನು ನೀವು ಕಣ್ಮುಚ್ಚಿ ನಂಬಬಹುದು ಎಂದೆನಿಸಿರಬಹುದು. ಸ್ನೇಹವಾಗಿರಲಿ ಅಥವಾ ಪ್ರೀತಿಯಾಗಿರಲಿ ಒಬ್ಬರನ್ನು ನಂಬುವ ಮುನ್ನ ಈ 5 ವಿಷಯಗಳು ನಿಮ್ಮ ನೆನಪಿನಲ್ಲಿರಬೇಕು. ಮತ್ತೊಂದು ವಿಚಾರವೆಂದರೆ ಯಾರ ವ್ಯಕ್ತಿತ್ವವನ್ನೂ ಅವರ ನಡವಳಿಕೆಯಿಂದ ಅಥವಾ ಒಂದೆರೆಡು ದಿನಗಳು ಮಾತನಾಡಿದಾಕ್ಷಣ ತಿಳಿಯುವುದಿಲ್ಲ. ಸ್ವಲ್ಪ ಸಮಯ ಅವರೊಂದಿಗೆ ನೀವು ಕಳೆಯಬೇಕು, ಯಾರನ್ನೂ ಅಷ್ಟು ಬೇಗ ವಿಶ್ವಾಸಕ್ಕೆ ತೆಗೆದುಕೊಳ್ಳಬೇಡಿ, ಮುಂದೊಂದು ದಿನ ನೀವು ಪಶ್ಚಾತಾಪ ಪಡಬೇಕಾಗುತ್ತದೆ.
ನಿಮಗಾಗಿ ಸರಿಯಾದ ಸಂಗಾತಿ ಅಥವಾ ಸ್ನೇಹಿತರನ್ನು ನೀವು ಆರಿಸಬೇಕಾದಾಗ ಈ ವಿಷಯಗಳ ಕಡೆ ಹೆಚ್ಚು ಗಮನವಿರಬೇಕು. ಕೆಲವೊಮ್ಮೆ ಅವರ ಸಕಾರಾತ್ಮಕ ನಡವಳಿಕೆಯು ಖಂಡಿತವಾಗಿಯೂ ನಿಮ್ಮನ್ನು ನಂಬುವಂತೆ ಒತ್ತಾಯಿಸುತ್ತದೆ, ಆದರೆ ನಂತರದ ನಡವಳಿಕೆಯಲ್ಲಿನ ಬದಲಾವಣೆಯು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರಬಹುದು.
ಈ 5 ಸಲಹೆಗಳು ಯಾರೊಬ್ಬರ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. 1. ಪದಗಳಿಗಿಂತ ಹೆಚ್ಚು ಕ್ರಿಯೆಗಳ ಮೇಲೆ ಕೇಂದ್ರೀಕರಿಸಿ ಯಾರಾದರೂ ನಿಮಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಬಹುದು, ಕನಸುಗಳನ್ನು ಸಾಕಾರಗೊಳಿಸುವ ವಾಗ್ಧಾನವನ್ನು ಕೂಡ ನೀಡಬಹುದು. ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು, ನೀವು ಅವರ ಮಾತುಗಳಿಗಿಂತ ಅವರ ಕಾರ್ಯಗಳಿಗೆ ಗಮನ ಕೊಡಬೇಕು. ಅವರು ನಿಮ್ಮನ್ನು ಹೊರತುಪಡಿಸಿ ಇತರ ಜನರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು.
ಮತ್ತಷ್ಟು ಓದಿ:Relationship: ಸಂಗಾತಿಯಿಂದ ನಿರೀಕ್ಷೆಗಳಿರಬೇಕು, ಆದರೆ ಅವು ಸಂಬಂಧವನ್ನೇ ಹಾಳು ಮಾಡುವಂತಿರಬಾರದು
2. ತಪ್ಪನ್ನು ಒಪ್ಪಿಕೊಳ್ಳುವುದು ಯಾವುದೇ ವ್ಯಕ್ತಿ ಎಲ್ಲ ರೀತಿಯಲ್ಲೂ ಪರಿಪೂರ್ಣರಲ್ಲ, ಪ್ರತಿಯೊಬ್ಬರಿಗೂ ನ್ಯೂನತೆಗಳಿರುತ್ತವೆ. ಆದರೆ ನೀವು ಯಾರಿಗಾದರೂ ಮುಖ್ಯರಾಗಿದ್ದರೆ, ವ್ಯಕ್ತಿಯು ತನ್ನ ತಪ್ಪನ್ನು ಖಂಡಿತವಾಗಿ ಒಪ್ಪಿಕೊಳ್ಳುತ್ತಾನೆ.
ಹಾಗೆಯೇ ತಪ್ಪು ಮರುಕಳಿಸದಂತೆ ಪ್ರಯತ್ನ ಪಡುತ್ತಾರೆ, ಆದರೆ ವ್ಯಕ್ತಿಯು ತನ್ನ ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಹಾಗೆಯೇ ನಿಮ್ಮ ಭಾವನೆಗಳನ್ನು ನಿರ್ಲಕ್ಷಿಸಿದರೆ. ಇದರಿಂದ ಸಂಬಂಧದಲ್ಲಿ ನಂಬಿಕೆ ಕಡಿಮೆಯಾಗಬಹುದು.
ಪಬ್‌ಮೆಡ್ ಸೆಂಟ್ರಲ್‌ನ ಸಂಶೋಧನೆಯು ಜನರು ಇತರರ ನಂಬಿಕೆಯನ್ನು ಭಾವನಾತ್ಮಕ ಬೆಂಬಲವಾಗಿ ಮಾತ್ರ ತೆಗೆದುಕೊಳ್ಳುತ್ತಾರೆ ಎಂದು ಬಹಿರಂಗಪಡಿಸಿದೆ. ಸಂಬಂಧದಲ್ಲಿ ಯಾವುದೇ ಭಾವನಾತ್ಮಕ ಬೆಂಬಲ ಮತ್ತು ನಂಬಿಕೆ ಇಲ್ಲದಿದ್ದರೆ, ಸಂಬಂಧವನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ.
3. ನಿಮ್ಮ ರಹಸ್ಯಗಳನ್ನು ಬೇಗ ಹಂಚಿಕೊಳ್ಳಬೇಡಿ ಎಲ್ಲರೊಂದಿಗೆ ಬೇಗ ಬೆರೆಯುವ ಮತ್ತು ತಮ್ಮ ಎಲ್ಲ ರಹಸ್ಯಗಳನ್ನು ಇತರರ ಮುಂದೆ ಇಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಈ ತಪ್ಪು ಅವರ ನಂಬಿಕೆಯನ್ನು ಮುರಿಯಲು ಕಾರಣವಾಗುತ್ತದೆ. ಯಾವುದೇ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಎದುರಿಗಿರುವ ವ್ಯಕ್ತಿ ನಿಮ್ಮೊಂದಿಗೆ ಇತರರ ಭಾವನೆಗಳನ್ನು ಮತ್ತು ಗೌಪ್ಯತೆಯನ್ನು ಎಷ್ಟು ಗೌರವಿಸುತ್ತಾನೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ, ಆಗ ಮಾತ್ರ ನೀವು ಅವರ ನಿಜವಾದ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
4. ಸಂಬಂಧಗಳ ಉದ್ದೇಶವನ್ನು ಅರ್ಥಮಾಡಿಕೊಳ್ಳಿ ಅನೇಕ ಜನರು ನಿಮ್ಮ ಜೀವನದಲ್ಲಿ ಬರುತ್ತಾರೆ ಏಕೆಂದರೆ ಅವರು ನಿಮ್ಮಿಂದ ಕೆಲವು ಪ್ರಯೋಜನಗಳನ್ನು ಬಯಸುತ್ತಾರೆ. ಈ ಸಮಯದಲ್ಲಿ ನೀವು ಅವರನ್ನು ಕುರುಡಾಗಿ ನಂಬಬೇಡಿ. ಅದಕ್ಕಾಗಿಯೇ ನೀವು ಅವರ ಕಾರ್ಯಗಳಿಂದ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿಯು ಕೆಟ್ಟ ಸಮಯದಲ್ಲೂ ಸಮಾಧಾನದಿಂದ ನಿಮ್ಮನ್ನು ಬೆಂಬಲಿಸಿದರೆ, ಅವರು ನಿಮಗೆ ವಿಶ್ವಾಸಾರ್ಹ ಎಂದು ಸಾಬೀತುಪಡಿಸಬಹುದು.
ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಪ್ರಕಾರ, ಜನರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು, ಅವರ ನಡವಳಿಕೆಯನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಇದಕ್ಕಾಗಿ ಅವರ ನಡವಳಿಕೆಯಲ್ಲಿನ ಬದಲಾವಣೆಗಳನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು.
5. ಹೆಚ್ಚು ನಿರೀಕ್ಷಿಸಬೇಡಿ ನಾವು ಒಬ್ಬ ವ್ಯಕ್ತಿಯಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವಾಗ ಮಾತ್ರ ನಾವು ನಂಬುತ್ತೇವೆ. ಇದರಿಂದಾಗಿ ಅವರ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ನಮ್ಮ ಭರವಸೆ ಮತ್ತು ನಂಬಿಕೆ ಮುರಿಯಲು ಕಾರಣವಾಗಬಹುದು. ಹಾಗಾಗಿ ಯಾವತ್ತೂ ಅತಿಯಾದ ನಿರೀಕ್ಷೆ ಬೇಡ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ