Relationship: ಸಂಗಾತಿಯಿಂದ ನಿರೀಕ್ಷೆಗಳಿರಬೇಕು, ಆದರೆ ಅವು ಸಂಬಂಧವನ್ನೇ ಹಾಳು ಮಾಡುವಂತಿರಬಾರದು

ನೀವು ರಿಲೇಷನ್​ಶಿಪ್​ನಲ್ಲಿದ್ದೀರ ಎಂದ ಮೇಲೆ ನಿಮ್ಮ ಸಂಗಾತಿಯಿಂದ ಹಲವು ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ.

Relationship: ಸಂಗಾತಿಯಿಂದ ನಿರೀಕ್ಷೆಗಳಿರಬೇಕು, ಆದರೆ ಅವು ಸಂಬಂಧವನ್ನೇ ಹಾಳು ಮಾಡುವಂತಿರಬಾರದು
Relationship
Follow us
TV9 Web
| Updated By: ನಯನಾ ರಾಜೀವ್

Updated on: Jan 03, 2023 | 7:00 PM

ನೀವು ರಿಲೇಷನ್​ಶಿಪ್​ನಲ್ಲಿದ್ದೀರ ಎಂದ ಮೇಲೆ ನಿಮ್ಮ ಸಂಗಾತಿಯಿಂದ ಹಲವು ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ಆದರೆ ನಿಮ್ಮ ನಿರೀಕ್ಷೆಗಳಿಂದ ನಿಮ್ಮ ಸಂಬಂಧ ಹಾಳಾಗುವಂತಿರಬಾರದು.ಸಂಗಾತಿಯು ತನ್ನ ಪ್ರಿಯಕರ, ಪ್ರೇಯಸಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕೆನ್ನುವ ಕನಸು ಕಾಣುತ್ತಾರೆ. ಆದರೆ ನಿರೀಕ್ಷೆಯ ಮಟ್ಟ ತುಂಬಾ ಎತ್ತರಕ್ಕೆ ಹೋದರೆ ಸಂಬಂಧದಲ್ಲಿ ಬಿರುಕು ಮೂಡಬಹುದು. ಸಂಬಂಧವು ಯಶಸ್ವಿಯಾಗಲು ಇಬ್ಬರ ಪ್ರಯತ್ನವೂ ಮುಖ್ಯ, ಪ್ರತಿಯೊಂದು ಸಂಬಂಧವು ಆರಂಭಿಕ ಹಂತದಲ್ಲಿ ತುಂಬಾ ಚೆನ್ನಾಗಿಯೇ ಇರುತ್ತದೆ. ಒಬ್ಬರನ್ನೊಬ್ಬರು ಅಷ್ಟು ತಿಳಿದಿರುವುದಿಲ್ಲ, ಅಭಿಪ್ರಾಯ ಬದಲಾವಣೆಗಳಾಗುತ್ತವೆ.

ಈ ನಿರೀಕ್ಷೆಗಳು ನಿಮ್ಮ ಸಂಬಂಧ ಹಾಳು ಮಾಡಬಹುದು ನನ್ನ ಸಂಗಾತಿ ನನ್ನನ್ನು ಸದಾ ಸಂತೋಷವಾಗಿಟ್ಟುಕೊಳ್ಳಬೇಕು: ನನ್ನ ಸಂಗಾತಿ ನನ್ನನ್ನು ಸದಾ ಸಂತೋಷವಾಗಿಟ್ಟುಕೊಳ್ಳಬೇಕು ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಹಾಗೆಯೇ ಆಕೆಯು ಕೂಡ ಅದೇ ರೀತಿ ನಡೆದುಕೊಳ್ಳಬೇಕು. ಇದನ್ನು ಅವರೊಬ್ಬರೇ ಮಾಡಬೇಕು ಎಂದು ಬಯಸುವುದು ತಪ್ಪು. ವಾಸ್ತವವಾಗಿ ನಮ್ಮ ಸಂತೋಷದ ಜವಾಬ್ದಾರಿಯನ್ನು ಬೇರೆಯವರ ಕೈಗೆ ಕೊಟ್ಟಾಗ ಅದು ನಿರಾಶೆಗೆ ಕಾರಣವಾಗಬಹುದು.

ಲೈಂಗಿಕತೆ ಅತ್ಯಂತ ಪ್ರಮುಖ ವಿಷಯ: ಪ್ರತಿಯೊಂದು ಸಂಬಂಧವು ತನ್ನದೇ ಆದ ನಿಯಮಗಳನ್ನು ಹೊಂದಿದೆ. ಲೈಂಗಿಕತೆಯು ಕೆಲವರಿಗೆ ಮುಖ್ಯವಾಗಿದ್ದರೂ, ಇತರರಿಗೆ ಅದು ಮುಖ್ಯವಾಗಿರುವುದಿಲ್ಲ. ದೈಹಿಕ ಮತ್ತು ಭಾವನಾತ್ಮಕ ಅನ್ಯೋನ್ಯತೆಯು ಇಬ್ಬರಿಗೂ ಬಿಟ್ಟಿದ್ದು.

ತನ್ನ ಸಂಗಾತಿ ಬೇರೊಬ್ಬ ಹುಡುಗಿಯನ್ನು ಕಣ್ಣೆತ್ತಿ ನೋಡುವಂತಿಲ್ಲ ನಾವು ಪ್ರೀತಿಯಲ್ಲಿರುವಾಗ ಆಗಿರಲಿ, ಮದುವೆಯ ನಂತರ ಆಗಿರಲಿ ನನ್ನ ಸಂಗಾತಿ ತನ್ನನ್ನು ಬಿಟ್ಟು ಬೇರೆಯ ಹುಡುಗಿಯನ್ನು ಕಣ್ಣೆತ್ತಿ ನೋಡುವಂತಿಲ್ಲ, ಒಂದೊಮ್ಮೆ ಹಾಗಾದರೆ ತನ್ನ ಮೇಲಿನ ಆಸಕ್ತಿ ಕಡಿಮೆಯಾದರೆ ಎನ್ನುವ ಭಯ ಅವರನ್ನು ಕಾಡುತ್ತಿರುತ್ತದೆ, ಇಂತಹ ಆಲೋಚನೆಯಿಂದ ಹೊರಬರಬೇಕು.

ಮತ್ತಷ್ಟು ಓದಿ: Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ

ಸಂಬಂಧಗಳು ಟೇಕನ್ ಫಾರ್ ಗ್ರ್ಯಾಂಟೆಡ್ ಅಲ್ಲ: ಯಾವುದೇ ಸಂಬಂಧಗಳು ಸುಲಭವಲ್ಲ, ಸಂಬಂಧವನ್ನು ಉಳಿಸಿಕೊಳ್ಳಲು ಇಬ್ಬರ ಪ್ರಯತ್ನವೂ ಮುಖ್ಯವಾಗಿರುತ್ತದೆ.

ಅಸೂಯೆ ಪ್ರೀತಿಯ ಸಂಕೇತ: ಇದು ಸಹಜ ಭಾವನೆಯಾಗಿದೆ. ಆದಾಗ್ಯೂ ಇದು ಅಭದ್ರತೆಯ ಪ್ರತಿಬಿಂಬದಂತೆ ಕಾರ್ಯ ನಿರ್ವಹಿಸುತ್ತದೆ.

ಜೀವನಶೈಲಿಗೆ ಸಮಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ