AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Children’s Mental Health: ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಈ ಸಲಹೆ ಪಾಲಿಸಿ

ಆಗಾಗ ಆತಂಕ ಹಾಗೂ ಚಿಕ್ಕ ಚಿಕ್ಕ ವಿಷಯಗಳಿಗೆ ಬೇಗ ಹೆದರುವುದು, ಇಂತಹ ಲಕ್ಷಣಗಳು ನಿಮ್ಮ ಮಕ್ಕಳಲ್ಲಿ ಕಾಣಿಸಿಕೊಂಡರೆ ನಿರ್ಲಕ್ಷ್ಯಿಸದಿರಿ. ಇದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

Children's Mental Health: ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ
ಅಕ್ಷತಾ ವರ್ಕಾಡಿ
|

Updated on:Jan 21, 2023 | 1:30 PM

Share

ಆಗಾಗ ಆತಂಕ ಹಾಗೂ ಚಿಕ್ಕ ಚಿಕ್ಕ ವಿಷಯಗಳಿಗೆ ಬೇಗ ಹೆದರುವುದು, ಇಂತಹ ಲಕ್ಷಣಗಳು ನಿಮ್ಮ ಮಕ್ಕಳಲ್ಲಿ ಕಾಣಿಸಿಕೊಂಡರೆ ನಿರ್ಲಕ್ಷ್ಯಿಸದಿರಿ. ಇದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಹಾಗೂ ಅನೇಕ ಸಂದಂರ್ಭಗಳಲ್ಲಿ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ಸಮಸ್ಯೆಯನ್ನು ಪರಿಹರಿಸಲು ಈ ಸಲಹೆಗಳನ್ನು ಪ್ರತಿಯೊಬ್ಬ ಪೋಷಕರು ಕೂಡ ಪಾಲಿಸಬೇಕಿದೆ. ಬೆದರಿಸುವಿಕೆ ಮಗುವಿನ ಮನಸ್ಸಿನ ಮೆಲೆ ಆಳವಾದ ಪ್ರಭಾವವನ್ನು ಬೀರಬಹುದು. ಒಬ್ಬರ ಜೀವನದ ಆರಂಭಿಕ ವರ್ಷಗಳು, ನಡವಳಿಕೆಗಳು, ವರ್ತನೆಗಳು ಮತ್ತು ಜೀವನದ ಬಗೆಗಿನ ವಿಧಾನವನ್ನು ರೂಪಿಸುವಲ್ಲಿ ಮಹತ್ವದ್ದಾಗಿದೆ.

ಬೆದರಿಸುವಿಕೆಯು ಮಗುವಿನ ಸ್ವಾಭಿಮಾನದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಬಹುದು. ಇದು ಅನೇಕ ಸಂದರ್ಭಗಳಲ್ಲಿ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಿಂಸೆಗೆ ಒಳಗಾದ ಮಕ್ಕಳ ಇತರರೊಂದಿಗೆ ಮಾತನಾಡಲು ಹಿಂಜರಿಯಬಹುದು. ಜೊತೆಗೆ ಶೈಕ್ಷಣಿಕವಾಗಿ ಆಸಕ್ತಿಯನ್ನು ಹೊಂದದಿರಬಹುದು. ಪೋಷಕರು, ಶಿಕ್ಷಕರು ಮತ್ತು ಇತರ ವಯಸ್ಕರರು ಬೆದರಿಸುವಿಕೆಯನ್ನು ಗಂಭೀರವಾಗಿ ಪರಿಗಣಿಸಲು ಮತ್ತು ಅದು ಸಂಭವಿಸಿದಾಗ ಅದನ್ನು ಪರಿಹರಿಸುವುದು ಮುಖ್ಯವಾಗಿದೆ.

ಐದನೇ ತರಗತಿಯ ವಿದ್ಯಾರ್ಥಿಯನ್ನು ಎಂಟನೇ ತರಗತಿಯ ವಿದ್ಯಾರ್ಥಿ ಚುಡಾಯಿಸುವುದು. ಒಂಭತ್ತನೇ ತರಗತಿ ವಿದ್ಯಾರ್ಥಿ ಬಸ್ಸಿನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿಯ ಟಿಫಿನ್ ಬಾಕ್ಸ್ ಕಸಿಯುವುದು, ದೇಹದ ಆಕಾರಕ್ಕಾಗಿ ಒಬ್ಬ ಹುಡುಗ ಗೆಳೆಯರಿಂದ ಗೇಲಿಗೆ ಒಳಗಾಗುವುದು ಇಂತಹ ಘಟನೆಗಳು ಶಾಲಾ ವರ್ಷದಲ್ಲಿ ಮಕ್ಕಳು ಖಂಡಿತವಾಗಿಯೂ ಅನುಭವಿಸಿರುತ್ತಾರೆ. ನೀವು ಯೋಚಿಸುವ, ನಂಬುವ ಮತ್ತು ಗ್ರಹಿಸುವ ವಿಧಾನವನ್ನು ರೂಪಿಸುವಲ್ಲಿ ನಿರ್ಣಾಯಕವಾಗಿದೆ. ಸ್ನೇಹಿತರು ಮತ್ತು ಗೆಳೆಯರಿಂದ ಬೆದರಿಕೆಗೆ ಒಳಗಾಗುವುದು ಮಗುವಿಗೆ ಮಾನಸಿಕವಾಗಿ ಹಾನಿಯುಂಟುಮಾಡುತ್ತದೆ. ಅದರ ಸಾಮಾಜಿಕ, ಭಾವನಾತ್ಮಕ, ನೈತಿಕ ಅರಿವಿನ ಪರಿಣಾಮಗಳನ್ನು ಅಲ್ಲಗೆಳೆಯುತ್ತಾ ಅದನ್ನು ಕಠಿಣಗೊಳಿಸಲು ಕಲಿಯಬೇಕೆಂದು ಫೋರ್ಟಿಸ್ ಸ್ಕೂಲ್ ಮೆಂಟಲ್ ಹೆಲ್ತ್ ಪ್ರೋಗ್ರಾಂನ ಕ್ಲಿನಿಕಲ್ ಸೈಕಾಲಜಿಸ್ಟ್ ಮಿಮಾನ್ಸಾ ಸಿಂಗ್ ತನ್ವರ್ ಹೇಳುತ್ತಾರೆ.

ಬೆದರಿಸುವಿಕೆಯಿಂದಾಗುವ ಪರಿಣಾಮಗಳು:

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಬೆದರಿಸುವಿಕೆಯು ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸ್ಥಿತಿಗಳಿಗೆ ಕಾರಣವಾಗುವ ಅಪಾಯಕಾರಿ ಅಂಶವಾಗಿದೆ. ಇದು ಅವರಲ್ಲಿ ಆತಂಕ ಖಿನ್ನತೆಯಂತಹ ಮಾನಸಿಕ ಆರೋಗ್ಯ ಕಾಯಿಲೆಗಳು ಹೆಚ್ಚಾಗಲು ಕಾರಣವಾಗಬಹುದು. ಯನೆಸ್ಕೋ ಪ್ರಕಟಿಸಿದ ಮತ್ತೊಂದು ವರದಿಯ ಪ್ರಕಾರ ವಿಶ್ವಾದ್ಯಂತ 3 ಮಕ್ಕಳಲ್ಲಿ 1 ಮಗು ಬೆದರಿಸುವಿಕೆಗೆ ಬಲಿಯಾಗುತ್ತಿದೆ. ಇದು ಆ ಮಗುವಿನ ಶೈಕ್ಷಣಿಕ ಕಾರ್ಯಕ್ಷಮತೆ, ದೈಹಿಕ ಆರೋಗ್ಯ ಹಾಗೂ ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ: ನಿಮ್ಮಲ್ಲಿ ಉಂಟಾಗುವ ಆತಂಕಕ್ಕೆ ಇಲ್ಲಿದೆ ಸುಲಭ ಪರಿಹಾರ

ಬೆದರಿಸುವಿಕೆಯನ್ನು ನಿಭಾಯಿಸಲು ಸಹಾಯ ಮಾಡುವ ಅಂಶಗಳು:

ಮಿಮಾನ್ಸಾ ಸಿಂಗ್ ತನ್ವರ್ ಅವರು ಮಗುವಿಗೆ ಬೆದರಿಕೆಯನ್ನು ನಿಭಾಯಿಸಲು ಸಹಾಯ ಮಾಡಲು ಪೋಷಕರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

  • ನಿಮ್ಮ ಮಗುವಿನ ಸಾಮಾಜಿಕ ಜೀವನದಲ್ಲಿ ಅವರ ಸಂಬಂಧಗಳು ಮತ್ತು ಅವರ ಗೆಳೆಯರೊಂದಿಗೆ ಹೇಗೆ ಬೆರೆಯುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ.
  • ತೊಂದರೆಗಳನ್ನು ನಿಭಾಯಿಸಲು ಅಗತ್ಯವಿರುವ ದೃಢತೆಯ ಕೌಶಲ್ಯಗಳೊಂದಿಗೆ ನಿಮ್ಮ ಮಗುವಿಗೆ ಧೈರ್ಯ ನೀಡುವುದು ಪೋಷಕರ ಕರ್ತವ್ಯ.
  • ಮಕ್ಕಳೊಂದಿಗೆ ಸಮಯ ಕಳೆಯಿರಿ ಮತ್ತು ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ. ಬೆದರಿಸುವಿಕೆಯು ಮುಂದುವರೆದರೆ ಅಥವಾ ತೀವ್ರವಾಗಿದ್ದರೆ ಶಾಲೆಗೆ ವರದಿ ಮಾಡಿ ಮತ್ತು ಬೆದರಿಸುವಿಕೆಯನ್ನು ನಿಲ್ಲಿಸಲು ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳನ್ನು ಚರ್ಚಿಸಿ. ಅಗತ್ಯಬಿದ್ದಾಗ ಮಾನಸಿಕ ಪ್ರಭಾವ ಮತ್ತು ಬೆದರಿಕೆಯನ್ನು ನಿಭಾಯಿಸಲು ನಿಮ್ಮ ಮಗುವಿಗೆ ಸಲಹೆ ಮತ್ತು ಬೆಂಬಲ ನೀಡಿ.

ಇದನ್ನೂ ಓದಿ: ಈ ಮೂರು ಸಿಂಪಲ್​​​ ಟಿಪ್ಸ್​​ ನಿಮ್ಮ ತಲೆ ಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ

ನಿಮ್ಮ ಮಗುವೇ ಬೇರೆ ಮಕ್ಕಳಿಗೆ ಬೆದರಿಸುತ್ತಿದ್ದರೆ ಏನು ಮಾಡಬೇಕು?

ಮಿಮಾನ್ಸಾ ಸಿಂಗ್ ತನ್ವರ್ ಪ್ರಕಾರ ನಿಮ್ಮ ಮಗುವೇ ಬೇರೆ ಮಗುವನ್ನು ಬೆದರಿಸುತ್ತಿದ್ದರೆ, ನೀವು ಏನು ಮಾಡಬೇಕು ಎಂಬುದರ ಬಗ್ಗೆ ಹೇಳಿದ್ದಾರೆ.

  • ನಿಮ್ಮ ಮಗು ಆಕ್ರಮಣಕಾರಿ ವರ್ತನೆಗೆ ಒಡಿಕೊಳ್ಳುತ್ತಿದ್ದರೆ ಅಥವಾ ಅದನ್ನು ಅನುಸರಿಸುತ್ತಿದೆಯೇ ಎಂಬುದನ್ನು ಗಮನಿಸಿ ಮತ್ತು ಅದನ್ನು ಸೂಕ್ತ ರೀತಿಯಲ್ಲಿ ಪರಿಹರಿಸಿ.
  • ಬೆದರಿಕೆಯು ಇತರರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ತಿಳುವಳಿಕೆ ಮತ್ತು ದೃಷ್ಟಿಕೋನವನ್ನು ಮಕ್ಕಳಲ್ಲಿ ಬೆಳೆಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 1:30 pm, Sat, 21 January 23