Stomach Pain : ಏನಾದ್ರು ತಿಂದ ಕೂಡ್ಲೇ ಹೊಟ್ಟೆ ನೋವು ಶುರುವಾಗುತ್ತಾ, ಈ ಮನೆ ಮದ್ದಿನಿಂದ ನೋವೆಲ್ಲಾ ಮಂಗ ಮಾಯಾ!
ನಮ್ಮ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಹೊಟ್ಟೆ ನೋವು ಕಾಡುತ್ತದೆ. ಕೆಲವರು ಊಟವಾದ ತಕ್ಷಣವೇ ಹೊಟ್ಟೆ ನೋವು ಎಂದು ಹೇಳುತ್ತಾರೆ. ಈ ಸಮಸ್ಯೆಗೆ ಅಜೀರ್ಣ, ಮಲಬದ್ಧತೆ ಹೀಗೆ ಕಾರಣಗಳು ಹಲವಾರಾದರೂ ನೋವು ವಿಪರೀತವಾದಾಗ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತಕ್ಷಣಕ್ಕೆ ಮನೆಯಲ್ಲೇ ಮನೆಮದ್ದನ್ನು ತಯಾರಿಸಿ ಸೇವಿಸುವುದರಿಂದ ನೋವು ಗುಣಮುಖ ಕಾಣುತ್ತದೆ.

ಸಾಂದರ್ಭಿಕ ಚಿತ್ರ
ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯ ಯಾವಾಗ ಕೈ ಕೊಡುತ್ತದೆ ಎಂದು ಹೇಳುವುದು ಕಷ್ಟವೇ. ಈಗ ತಾನೇ ಚೆನ್ನಾಗಿದ್ದ ವ್ಯಕ್ತಿಯು ಅರ್ಧ ಗಂಟೆಯಲ್ಲೇ ಆರೋಗ್ಯ ಸರಿಯಿಲ್ಲ ಎನ್ನಬಹುದು. ಹವಾಮಾನದಲ್ಲಾಗುವ ಬದಲಾವಣೆಯು ಶೀತ, ನೆಗಡಿ, ತಲೆನೋವು, ಹೊಟ್ಟೆ ನೋವಿನಂತಹ ಸಮಸ್ಯೆಗೆ ದಾರಿ ಮಾಡಿಕೊಡುತ್ತವೆ. ಸೇವಿಸುವ ಆಹಾರ ಪದಾರ್ಥಗಳಲ್ಲಿ ಬದಲಾವಣೆಯಾದರೂ ಹೊಟ್ಟೆ ನೋವು ಎಂದು ಗೊಣಾಗುವವರನ್ನು ನೋಡಿರಬಹುದು. ಸಣ್ಣ ಪುಟ್ಟ ಸಮಸ್ಯೆಗಾಳಾದಾಗ ಮನೆಯಲ್ಲೇ ಪರಿಹಾರ ಕಂಡುಕೊಳ್ಳುವುದು ಕಷ್ಟವೇನಲ್ಲ ಬಿಡಿ.
ಹೊಟ್ಟೆ ನೋವಿಗೆ ಸರಳ ಮನೆ ಮದ್ದುಗಳು
- ಕೊತ್ತಂಬರಿ ಮತ್ತು ಒಣಶುಂಠಿಯನ್ನು ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
- ಹುಣಸೆಹಣ್ಣು, ಪುದಿನ, ಕರಿಮೆಣಸು, ಏಲಕ್ಕಿ, ಉಪ್ಪು ಬೆರೆಸಿ ಊಟಕ್ಕಿಂತ ಮೊದಲು ಸೇವಿಸುವುದರಿಂದ ಅರ್ಜಿಣದಿಂದ ಉಂಟಾಗುವ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
- ಪುದೀನಾ ಸೊಪ್ಪಿನ ಟೀ ತಯಾರಿಸಿ ಒಂದೆರಡು ಬಾರಿ ಉಪಯೋಗಿಸಿದರೆ ಹೊಟ್ಟೆ ಉಬ್ಬರವು ದೂರವಾಗುತ್ತದೆ.
- ಹೊಟ್ಟೆ ಉಬ್ಬರವಿದ್ದರೆ ಲವಂಗದ ಕಷಾಯವನ್ನು ದಿನಕ್ಕೆ ಮೂರು ಬಾರಿ ಕುಡಿಯುವುದು ಪರಿಣಾಮಕಾರಿಯಾಗಿದೆ.
- ಬಾರ್ಲಿಗಂಜಿ ಕುಡಿಯುವುದರಿಂದ ಹೊಟ್ಟೆನೋವು ಗುಣಮುಖ ಕಾಣುತ್ತದೆ.
- ಅಜೀರ್ಣದಿಂದ ಹೊಟ್ಟೆನೋವು ಉಂಟಾದರೆ ಒಂದು ಬಟ್ಟಲು ಬಿಸಿನೀರಿಗೆ ನಿಂಬೆಹಣ್ಣಿನ ರಸ ಹಾಗೂ ಅರ್ಧ ಚಮಚ ಸೋಡ ಬೆರೆಸಿ ಕುಡಿದರೆ ನೋವು ಮಾಯಾವಾಗುತ್ತದೆ.
- ಸ್ವಲ್ಪ ಪ್ರಮಾಣದಲ್ಲಿ ಹಸಿಶುಂಠಿಯನ್ನು ನೀರಿಗೆ ಹಾಕಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ, ನಿಂಬೆಹಣ್ಣಿನ ರಸವನ್ನು ಬೆರೆಸಿ ಸೇವಿಸಿದರೆ ಅಜೀರ್ಣದಿಂದ ಕೂಡಿದ ಹೊಟ್ಟೆ ನೋವು ಶಮನವಾಗುತ್ತದೆ.
- ಕೊತ್ತಂಬರಿ ಬೀಜ ಹಾಗೂ ಒಣಶುಂಠಿಯ ಸೇರಿಸಿ ಮಾಡಿದ ಕಷಾಯ ಸೇವನೆಯು ಹೊಟ್ಟೆನೋವನ್ನು ಗುಣಮುಖಗೊಳಿಸುತ್ತದೆ.
- ಅಜೀರ್ಣನಿಂದ ಹೊಟ್ಟೆಯೊಳಗೆ ನೋವು ಶುರುವಾದರೆ ಎಳನೀರು ಅಥವಾ ತಣ್ಣಗಾದ ಹಾಲು ಸೇವಿಸುವುದು ಪರಿಣಾಮಕಾರಿ.
- ಹಸಿಶುಂಠಿಯ ರಸವನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವಿಸುವುದು ಕೂಡ ಪರಿಣಾಮಕಾರಿಯಾದ ಔಷಧ.
- ನೆಲ್ಲಿಕಾಯಿ ರಸಕ್ಕೆ ಸಕ್ಕರೆಯನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.
- ಎಳೆನೀರಿಗೆ ತೆಂಗಿನಕಾಯಿ ತುರಿ, ಕಲ್ಲುಸಕ್ಕರೆ, ಏಲಕ್ಕಿಪುಡಿ ಸೇರಿಸಿ, ದಿನಕ್ಕೊಂದು ಬಾರಿ ಸೇವಿಸುತ್ತಿದ್ದರೆ ಹೊಟ್ಟೆಗೆ ಸಂಬಂಧ ಪಟ್ಟ ಕಾಯಿಲೆಗಳು ಮಾಯವಾಗುತ್ತದೆ.
- ಜೀರಿಗೆ ಕಷಾಯ ಮಾಡಿ ಸೇವಿಸಿದರೆ ಹೊಟ್ಟೆ ನೋವಿಗೆ ಉತ್ತಮವಾದ ಔಷಧಿಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




