Plant Power Day 2024: ಸಸ್ಯ ಶಕ್ತಿ ದಿನದ ಮಹತ್ವವೇನು? ಇದನ್ನು ಏಕೆ ಆಚರಿಸಲಾಗುತ್ತದೆ?
ಪ್ರಾಣಿ ಆಧಾರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡಲು ಬಯಸುವ ಜನರಿಗೆ ಸಸ್ಯ ಆಧಾರಿತ ಪ್ರೋಟೀನ್‌ಗಳು ಅತ್ಯುತ್ತಮ ಆಯ್ಕೆಯಾಗಿದೆ. ಸೋಯಾ, ಕಾಳುಗಳು, ನಟ್ಸ್, ಸ್ಪಿರುಲಿನಾ ಮತ್ತು ಇತರ ಪದಾರ್ಥಗಳು ನಮ್ಮ ಆಹಾರಕ್ಕೆ ಹೆಚ್ಚಿನ ಪ್ರೋಟೀನ್ ಒದಗಿಸುತ್ತವೆ. ಅಕಾಡೆಮಿ ಆಫ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಸಸ್ಯಾಹಾರಿ ಆಹಾರವು ವಯಸ್ಕರು, ಮಕ್ಕಳು ಮತ್ತು ಗರ್ಭಿಣಿ ಅಥವಾ ಹಾಲುಣಿಸುವವರ ಎಲ್ಲಾ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಒದಗಿಸುತ್ತದೆ ಎಂದು ಹೇಳಿದೆ.

ಮಾಂಸ ಅಥವಾ ಪ್ರಾಣಿ ಉತ್ಪನ್ನಗಳನ್ನು ಸೇವಿಸದ ಜನರಿಗೆ ಸಾಕಷ್ಟು ಪ್ರೋಟೀನ್ ಮತ್ತು ಅಗತ್ಯವಾದ ವಿಟಮಿನ್ಗಳು ಮತ್ತು ಖನಿಜಗಳನ್ನು ಪಡೆಯುವುದು ಕಷ್ಟಕರವಾಗಿರುತ್ತದೆ. ನಾವು ಸಾಕಷ್ಟು ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಬಿ-12 ಪಡೆಯಲು ಮುಂಚಿತವಾಗಿ ಪ್ಲಾನ್ ಮಾಡಬೇಕು. ಸಸ್ಯ ಆಧಾರಿತ ಆಹಾರಗಳು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳ ಅತ್ಯುತ್ತಮ ಮೂಲಗಳಾಗಿವೆ. ಸಾಮಾನ್ಯವಾಗಿ ಪ್ರಾಣಿ ಉತ್ಪನ್ನಗಳಿಗಿಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ.
ಸಸ್ಯ ಶಕ್ತಿ ದಿನವನ್ನು ವಾರ್ಷಿಕವಾಗಿ ಮಾರ್ಚ್ 7ರಂದು ಆಚರಿಸಲಾಗುತ್ತದೆ. ಇದು ಮಾನವನ ಆರೋಗ್ಯ, ಪ್ರಾಣಿ ಕಲ್ಯಾಣ ಮತ್ತು ಪರಿಸರ ಸುಸ್ಥಿರತೆಗಾಗಿ ಸಸ್ಯ ಆಧಾರಿತ ಆಹಾರದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ಜಾಗತಿಕ ಆಚರಣೆಯಾಗಿದೆ. ಈ ದಿನವು ಜನರು ತಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಸಸ್ಯ ಆಧಾರಿತ ಆಹಾರಗಳನ್ನು ಅಳವಡಿಸಿಕೊಳ್ಳಲು ಮತ್ತು ಹೆಚ್ಚು ಸಸ್ಯ ಕೇಂದ್ರಿತ ಆಹಾರದ ಬಳಕೆಯನ್ನು ಉತ್ತೇಜಿಸಲು ಪ್ರೇರೇಪಿಸುತ್ತದೆ.
ಇದನ್ನೂ ಓದಿ: ಅತಿಯಾದ ಪ್ರೋಟೀನ್ ಸೇವನೆಯಿಂದಾಗುವ ಅಪಾಯಗಳೇನು?
ಪ್ಲಾಂಟ್ ಪವರ್ ಡೇ ಇತಿಹಾಸ:
ಸಸ್ಯ ಆಧಾರಿತ ಆಹಾರ ಪದ್ಧತಿಯ ಇತಿಹಾಸವನ್ನು ಸಿಂಧೂ ಕಣಿವೆಯ ನಾಗರಿಕತೆ ಮತ್ತು ಪ್ರಾಚೀನ ಗ್ರೀಸ್ ಮತ್ತು ರೋಮ್‌ನಂತಹ ಪ್ರಾಚೀನ ನಾಗರಿಕತೆಗಳಲ್ಲಿ ಕಾಣಬಹುದು. 19ನೇ ಶತಮಾನದಲ್ಲಿ ಸಸ್ಯಾಹಾರವು ಬ್ರಿಟನ್ ಮತ್ತು ಇಂಗ್ಲೆಂಡ್ನಲ್ಲಿ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಚಳುವಳಿಯಾಯಿತು. ಸಸ್ಯಾಹಾರಿ ಚಳುವಳಿಯು 1940ರ ದಶಕದಲ್ಲಿ ಹೊರಹೊಮ್ಮಿತು. 1980ರಲ್ಲಿ “ಸಸ್ಯ ಆಧಾರಿತ ಆಹಾರ” ಎಂಬ ಪದವನ್ನು ಸೃಷ್ಟಿಸಲಾಯಿತು. 2018ರಲ್ಲಿ ಸಸ್ಯ ಶಕ್ತಿ ದಿನವನ್ನು ಆಲ್ಪ್ರೋ ಮತ್ತು ಸಸ್ಯಾಹಾರಿ ಪಾಕವಿಧಾನ ವೆಬ್‌ಸೈಟ್ BOSH ಆರಂಬಿಸಿತು. ತಮ್ಮ ಆಹಾರಕ್ರಮದಲ್ಲಿ ಹೆಚ್ಚು ಸಸ್ಯ ಆಧಾರಿತ ಆಹಾರಗಳನ್ನು ಸೇರಿಸಲು ವ್ಯಕ್ತಿಗಳನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಪ್ಲಾಂಟ್ ಪವರ್ ಡೇ ಮಹತ್ವ:
ಸಸ್ಯಾಧಾರಿತ ಆಹಾರಗಳು, ಸಸ್ಯಾಹಾರಿ ಆಯ್ಕೆಗಳನ್ನು ಒಳಗೊಂಡಿರುವ ವಿವಿಧ ಹಂತದ ಪ್ರಾಣಿ ಉತ್ಪನ್ನಗಳ ಸೇರ್ಪಡೆಯೊಂದಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.
ಇದನ್ನೂ ಓದಿ: ಚಳಿಗಾಲದಲ್ಲಿ ನೀವು ತಿನ್ನಲೇಬೇಕಾದ 8 ಅಧಿಕ ಪ್ರೋಟೀನ್ ಇರುವ ತಿಂಡಿಗಳಿವು
ಸಸ್ಯ ಆಧಾರಿತ ಪ್ರೋಟೀನ್ನ ಆರೋಗ್ಯ ಪ್ರಯೋಜನಗಳು:
ಸಸ್ಯ ಆಧಾರಿತ ಆಹಾರಗಳು ಹಲವಾರು ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿವೆ. ಹೃದ್ರೋಗ, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ನಟ್ಸ್, ಸೀಡ್ಸ್ ಮತ್ತು ದ್ವಿದಳ ಧಾನ್ಯಗಳಿಗೆ ಒತ್ತು ನೀಡುವ ಮೂಲಕ ಸಸ್ಯ ಆಧಾರಿತ ಆಹಾರಗಳು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಸೇವನೆಯನ್ನು ಕಡಿಮೆ ಮಾಡುವಾಗ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




