ಸಾಂದರ್ಭಿಕ ಚಿತ್ರ
ಮೂತ್ರ ವಿಸರ್ಜನೆಯೆನ್ನುವುದು ನೈಸರ್ಗಿಕ ಕರೆಯಾಗಿದ್ದು, ಕೆಲವರಲ್ಲಿ ಅತಿಯಾದ ಮೂತ್ರವಿಸರ್ಜನೆಯ ಸಮಸ್ಯೆಯು ಕಾಡುತ್ತಿದೆ. ದೇಹದ ಉಷ್ಣವು ಅಧಿಕವಾಗಿ, ನೀರಿನ ಪ್ರಮಾಣವು ಕಡಿಮೆಯಾಗಿ ಉರಿ ಮೂತ್ರ ರೋಗ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಶುಭ ಕಾರ್ಯಗಳು ಹಾಗೂ ಸಮಾರಂಭಗಳಿಗೆ ತೆರಳಿದಾಗ ಪದೇ ಪದೇ ಶೌಚಾಲಯದ ಕಡೆಗೆ ಹೋಗುವುದು ಮುಜುಗರಕ್ಕೀಡು ಮಾಡುತ್ತದೆ. ಮೂತ್ರ ವಿಸರ್ಜನೆಗೆ ಸಂಬಂಧ ಪಟ್ಟಂತೆ ಸಮಸ್ಯೆಯು ಪ್ರಾರಂಭವಾದ ತಕ್ಷಣವೇ ಮನೆಯಲ್ಲೇ ಪರಿಹಾರವನ್ನು ಕಂಡುಕೊಂಡರೆ ಸೂಕ್ತ.
ಮೂತ್ರ ವಿಸರ್ಜನೆ ಸಮಸ್ಯೆಗೆ ಸರಳ ಮನೆ ಮದ್ದುಗಳು:
- ಹೆಚ್ಚು ಮೂತ್ರವಿಸರ್ಜನೆ ಆಗುತ್ತಿದ್ದರೆ ದಾಲ್ಚಿನಿ ಪುಡಿಯನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿದರೆ ಗುಣಮುಖವಾಗುತ್ತದೆ.
- ಒಂದು ಬಟ್ಟಲು ಎಳನೀರಿಗೆ ಸ್ವಲ್ಪ ಬೆಲ್ಲ, ಅರ್ಧ ಚಮಚ ಕೊತ್ತಂಬರಿ ಬೀಜದ ಪುಡಿ ಬೆರೆಸಿ ದಿನಕ್ಕೆ ಎರಡು ಬಾರಿ ಸೇವನೆ ಮಾಡುವುದು ಪರಿಣಾಮಕಾರಿಯಾಗಿದೆ.
- ಜೀರಿಗೆ ಕಷಾಯ ಮಾಡಿ ಕುಡಿಯುವುದರಿಂದಲೂ ಉರಿ ಮೂತ್ರ ಸಮಸ್ಯೆಯು ದೂರವಾಗುತ್ತದೆ.
- ಊಟದ ನಂತರ ನಿಯಮಿತವಾಗಿ ಜೇನುತುಪ್ಪವನ್ನು ಸೇವಿಸುತ್ತಿದ್ದರೆ ಬಹುಮೂತ್ರ ರೋಗವೂ ನಿವಾರಣೆಯಾಗುತ್ತದೆ.
- ಏಲಕ್ಕಿ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಮೂತ್ರ ವಿಸರ್ಜನೆಗೆ ಸಂಬಂಧ ಪಟ್ಟ ಸಮಸ್ಯೆಗಳು ಶಮನವಾಗುತ್ತದೆ.
- ಬಾಳೆಹೂವಿನ ರಸವನ್ನು ಸೌತೆಕಾಯಿ ರಸದೊಂದಿಗೆ ಸೇರಿಸಿ ಕುಡಿದರೆ ಮೂತ್ರ ವಿಸರ್ಜನೆಯು ಸರಿಯಾಗಿ ಆಗುತ್ತದೆ.
- ಬಿಳಿದ್ರಾಕ್ಷಿಯನ್ನು ತಿನ್ನುವುದರಿಂದ ಉರಿ ಮೂತ್ರರೋಗ ಬರುವುದಿಲ್ಲ.
- ಎಳೆನೀರಿಗೆ ನಿಂಬೆರಸವನ್ನು ಬೆರೆಸಿ ಕುಡಿದರೆ ಮೂತ್ರ ವಿಸರ್ಜನೆಯು ಸಲೀಸಾಗಿ ಆಗುತ್ತದೆ.
- ಸೋಂಪು ಕಾಳನ್ನು ನುಣ್ಣಗೆ ಅರೆದು, ಹೊಟ್ಟೆಯ ಮೇಲೆ ಹಚ್ಚಿಕೊಂಡರೆ ಮೂತ್ರ ತಡೆಯು ಕಡಿಮೆಯಾಗುತ್ತದೆ.
- ಸೋಂಪಿನ ಕಾಳಿನ ಕಷಾಯವನ್ನು ಜೇನುತುಪ್ಪದೊಂದಿಗೆ ಸೇರಿಸಿ, ಸೇವಿಸುವುದರಿಂದ ಮೂತ್ರವಿಸರ್ಜನೆ ಸಲೀಸಾಗಿ ಆಗುವುದು.
- ನೀರಿಗೆ ನಿಂಬೆರಸ, ಉಪ್ಪು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರರೋಗವು ಮಾಯಾವಾಗುತ್ತದೆ.
- ಕುದಿಸಿ ಆರಿಸಿದ ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ಉರಿ ಮೂತ್ರ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ.
- ಕಬ್ಬಿನ ಹಾಲು, ಎಳನೀರು, ಹಸಿಯ ಶುಂಠಿರಸ, ನಿಂಬೆರಸ ಈ ಎಲ್ಲವನ್ನು ಬೆರೆಸಿ ಸೇವಿಸುತ್ತ ಬಂದರೆ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಮಾಯಾವಾಗುತ್ತದೆ.
- ಮೊಸರನ್ನಕ್ಕೆ ಬೆಲ್ಲ ಮತ್ತು ಹುರಿದ ಕರಿ ಮೆಣಸು ಪುಡಿಯನ್ನು ಸೇರಿಸಿ, ಊಟ ಮಾಡುವುದು ಉತ್ತಮ ಔಷಧವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ