Food Poison : ಬಿಸಿಲ ಬೇಗೆಯ ನಡುವೆ ಫುಡ್ ಪಾಯಿಸನ್ ಸಮಸ್ಯೆ ಕಾಡುತ್ತಿದೆಯೇ? ಇಲ್ಲಿದೆ ಸರಳ ಪರಿಹಾರ
ಬೇಸಿಗೆಯಲ್ಲಿ ಅತಿಯಾದ ಶಾಖದ ನಡುವೆ ಕೆಲವು ಆರೋಗ್ಯ ಸಮಸ್ಯೆಗಳು ಬಿಡದೇ ಕಾಡುತ್ತದೆ. ಬಿಸಿ ಬಿಸಿಯಾದ ಧಗೆಯ ನಡುವೆ ಆರೋಗ್ಯವಂತೂ ಕೈ ಕೊಟ್ಟರೆ ಕೇಳುವುದೇ ಬೇಡ. ಈ ಸಮಯದಲ್ಲಿ ಹೆಚ್ಚಿನವರಲ್ಲಿ ಫುಡ್ ಪಾಯಿಸನ್ ಸಮಸ್ಯೆಯು ಕಾಣಿಸಿಕೊಳ್ಳುತ್ತವೆ. ಹೀಗಾದಾಗ ಜ್ವರ, ಅತಿಸಾರ, ವಾಂತಿ, ಹೊಟ್ಟೆ ನೋವು ಹಾಗೂ ಮೈಯೆಲ್ಲಾ ತುರಿಕೆ ಸೇರಿದಂತೆ ನಾನಾ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗೆ ಮನೆಯಲ್ಲೇ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.
ಹವಾಮಾನ ಬದಲಾದಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದೇ ಹೆಚ್ಚು. ವಾತಾವರಣ ದಲ್ಲಿ ಬದಲಾವಣೆ ಕಂಡು ಬಂದ ತಕ್ಷಣ ಆಹಾರಕ್ರಮ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಉತ್ತಮ. ಫುಡ್ ಪಾಯಿಸನ್ ಈ ಬೇಸಿಗೆಯಲ್ಲಿ ಕಾಡುವ ಕಾಯಿಲೆಯಲ್ಲಿ ಒಂದಾಗಿದೆ. ನೀರು ಕುಡಿಯದ ಕಾರಣ, ಮಸಾಲೆ, ಖಾರದ ಪದಾರ್ಥಗಳು, ಹಾಗೂ ನೈಮರ್ಲ್ಯವಿಲ್ಲದ ಪದಾರ್ಥಗಳ ಸೇವನೆಯು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಹೊರಗಿನ ಆಹಾರ ತಿನ್ನುವುದರಿಂದಲೇ ಮಾತ್ರವಲ್ಲದೇ, ಮನೆಯ ಆಹಾರದಲ್ಲಿ ಸ್ವಚ್ಛತೆಯ ಕೊರತೆಯಿಂದಲೂ ಉಂಟಾಗಬಹುದು. ಈ ವೇಳೆಯಲ್ಲಿ ಹೊರಗಡೆಯಲ್ಲಿ ಆಹಾರ ಸೇವಿಸುವುದನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು. ಒಂದು ವೇಳೆ ಅನಿವಾರ್ಯವೆನಿಸಿದರೆ ಶುಚಿತ್ವವನ್ನು ಕಾಯ್ದುಕೊಳ್ಳುವ ಸ್ಥಳಗಳಲ್ಲಿ ಆಹಾರವನ್ನು ಸೇವಿಸಿದರೆ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬಹುದು.
ಫುಡ್ ಪಾಯಿಸನಿಂಗ್ ಗೆ ಸರಳ ಮನೆ ಮದ್ದುಗಳು:
- ಜೀರಿಗೆಯನ್ನು ಬಾಯಿಗೆ ಹಾಕಿ ಚೆನ್ನಾಗಿ ಆಗಿದು ನೀರು ಕುಡಿದರೆ ಈ ಸಮಸ್ಯೆಗೆ ಸುಲಭ ಪರಿಹಾರವಾಗಿದೆ.
- ಫುಡ್ ಪಾಯಿಸನಿಂಗ್ ಸಮಸ್ಯೆಯಿದ್ದರೆ ದಿನಕ್ಕೆ ಮೂರು ಬಾರಿ ಜೇನುತುಪ್ಪ ಸೇವನೆಯು ಈ ಸಮಸ್ಯೆಯನ್ನು ನಿವಾರಿಸುತ್ತದೆ.
- ಕೆಲವು ತುಳಸಿ ಎಲೆಗಳನ್ನು ಅರೆದು ಇದರ ರಸವನ್ನು ಹಿಂಡಿ, ಇದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ಕುಡಿದರೆ ಫುಡ್ ಪಾಯಿಸನ್ ನಿಂದ ಶುರುವಾಗಿರುವ ಹೊಟ್ಟೆ ನೋವು ಶಮನವಾಗುತ್ತದೆ.
- ಹಾಲಿಗೆ ಬಾಳೆಹಣ್ಣನ್ನು ಸೇರಿಸಿ ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ಉಂಟಾಗಿರುವ ಸುಸ್ತು ಕಡಿಮೆಯಾಗುತ್ತದೆ.
- ಫುಡ್ ಪಾಯಿಸನ್ ಸಮಸ್ಯೆಯಿಂದ ಬಳಲುತ್ತಿರುವವರು ಸ್ವಲ್ಪ ಮೊಸರಿನ ಜೊತೆ ಈ ಮೆಂತ್ಯೆಕಾಳನ್ನು ಬೆರೆಸಿ ಸೇವಿಸುವುದು ಬಹಳಷ್ಟು ಪರಿಣಾಮಕಾರಿಯಾಗಿದೆ.
- ಎರಡು ಹಸಿ ಬೆಳ್ಳುಳ್ಳಿ ಎಸಳನ್ನು ತಿಂದು ಬೆಚ್ಚಗಿನ ನೀರು ಕುಡಿಯುವುದರಿಂದ ಈ ಸಮಸ್ಯೆಯು ಬಗೆಹರಿಯುತ್ತದೆ.
- ಬೆಳ್ಳುಳ್ಳಿಯ ಕಷಾಯ ಮಾಡಿ ಸೇವಿಸುವುದರಿಂದ ಉತ್ತಮ ಔಷಧಿಯಾಗಿದೆ.
- ಶುದ್ಧ ನೀರನ್ನು ಸ್ವಲ್ಪ ಕುದಿಸಿ ಬೆಚ್ಚಗೆ ಇರುವಾಗಲೇ ಅದಕ್ಕೆ ಒಂದೆರಡು ಹನಿ ನಿಂಬೆ ರಸ ಸೇರಿಸಿ ಕುಡಿಯಿರಿ.
- ಬೆಚ್ಚಗಿನ ನೀರಿಗೆ ವಿನೆಗರ್ ಬೆರೆಸಿ ಕುಡಿದರೆ ಫುಡ್ ಪಾಯಿಸನ್ ಸಮಸ್ಯೆಯು ಕಡಿಮೆಯಾಗುತ್ತದೆ.
- ಸ್ವಲ್ಪ ಹಸಿಶುಂಠಿಯನ್ನು ನುಣ್ಣಗೆ ಅರೆದು ಒಂದು ಲೋಟ ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
- ಫುಡ್ ಪಾಯಿಸನಿಂಗ್ ಸಮಸ್ಯೆಯಿದ್ದರೆ ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ.
ಈ ಮನೆಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆಯುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Thu, 21 March 24