ಬೆಡ್ಶೀಟ್ ಮಾತ್ರವಲ್ಲ ಆಗಾಗ ಹಾಸಿಗೆಯನ್ನೂ ಬದಲಾಯಿಸುತ್ತಿರಿ!
ರಾತ್ರಿಯ ವೇಳೆ ಚೆನ್ನಾಗಿ ನಿದ್ರೆ ಬರಬೇಕೆಂದರೆ, ನಾವು ಮಲಗುವ ಹಾಸಿಗೆಯೂ ಚೆನ್ನಾಗಿರಬೇಕು. ಆಗಾಗ ಬೆಡ್ಶೀಟ್ ಬದಲಾಯಿಸುವುದು ಹಲವರ ಅಭ್ಯಾಸ. ಇದು ಒಳ್ಳೆಯ ಅಭ್ಯಾಸವೂ ಹೌದು. ಮಲಗುವ ಜಾಗವನ್ನು ನಾವೆಷ್ಟು ಶುಚಿಯಾಗಿಟ್ಟುಕೊಳ್ಳುತ್ತೇವೋ ನಮ್ಮ ಆರೋಗ್ಯವೂ ಅಷ್ಟೇ ಚೆನ್ನಾಗಿರುತ್ತದೆ. ಆದರೆ, ಬೆಡ್ಶೀಟ್ ಮಾತ್ರ ಬದಲಾಯಿಸಿದರೆ ಸಾಕಾ? ಹಾಸಿಗೆಯನ್ನು ಚೇಂಜ್ ಮಾಡುವುದು ಬೇಡವಾ?

ನಿದ್ರೆ ಮತ್ತು ನಾವು ಮಲಗುವ ಜಾಗ ಪರಸ್ಪರ ಆಪ್ತ ಸಂಬಂಧವನ್ನು ಹೊಂದಿದೆ. ಮಲಗುವ ಜಾಗ ಬದಲಾದರೆ ಅನೇಕ ಜನರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಗಾಗಿಯೇ ಹೊಸ ಜಾಗಕ್ಕೆ ಹೋದಆಗ ನಿದ್ರೆ ಮಾಡಲಾಗದೆ ಅನೇಕರು ಪರದಾಡುತ್ತಾರೆ. ಆದರೆ, ಇನ್ನು ಕೆಲವರು ಸಂತೆಯಲ್ಲಿ ಮಲಗಿದರೂ ಚೆನ್ನಾಗಿ ನಿದ್ರೆ ಮಾಡುತ್ತಾರೆ. ನೀವು ಹೊಸ ಹಾಸಿಗೆಯನ್ನು ಆಯ್ಕೆ ಮಾಡುವಾಗ ಎಲ್ಲ ರೀತಿಯಿಂದಲೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ.
ಹಾಸಿಗೆ ನೈರ್ಮಲ್ಯದ ವಿಷಯಕ್ಕೆ ಬಂದಾಗ, ನಾವು ಅದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ನಾವು ಧರಿಸುವ ಬಟ್ಟೆಗಳನ್ನು ಮತ್ತು ನಾವು ಬಳಸುವ ವಸ್ತುಗಳನ್ನು ನಾವು ನಿಯಮಿತವಾಗಿ ತೊಳೆಯುತ್ತೇವೆ. ಆದರೆ, ನಾವು ಪ್ರತಿದಿನ ರಾತ್ರಿ 7-8 ಗಂಟೆಗಳ ಕಾಲ ನಿದ್ರೆ ಮಾಡುವ ಹಾಸಿಗೆಯನ್ನು ಸ್ವಚ್ಛಗೊಳಿಸುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ವಾರಕ್ಕೊಮ್ಮೆಯೋ ತಿಂಗಳಿಗೆ 2 ಬಾರಿಯೋ ಹಾಸಿಗೆಯ ಬೆಡ್ಶೀಟ್, ದಿಂಬಿನ ಕವರ್ ಅನ್ನು ಮಾತ್ರ ತೊಳೆಯುತ್ತೇವೆ.
ಆದರೆ, ದಿಂಬಿನ ಕವರ್ ಮತ್ತು ಹಾಸಿಗೆ ಬೆಡ್ಶೀಟ್ ಮಾತ್ರವಲ್ಲ ನಮ್ಮ ಹಾಸಿಗೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಹಾಸಿಗೆಯನ್ನು ತೊಳೆಯಲು ಸಾಧ್ಯವಾಗದಿರಬಹುದು. ಆದರೆ, ಅದನ್ನು ಸ್ವಚ್ಛವಾಗಿಡಲು ಹಲವು ಮಾರ್ಗಗಳಿವೆ. ಧೂಳು, ಅಚ್ಚು ಮತ್ತು ಇತರ ಅಲರ್ಜಿನ್ಗಳ ಸಂಗ್ರಹಣೆಯಿಂದಾಗಿ ಕೊಳಕು ಹಾಸಿಗೆ ಅಲರ್ಜಿಗಳು ಮತ್ತು ಉಸಿರಾಟದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಧೂಳಿನ ಹುಳಗಳು ಹಾಸಿಗೆಗಳಂತಹ ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ ಬೆಳೆಯುವ ಸೂಕ್ಷ್ಮ ಜೀವಿಗಳಾಗಿವೆ. ತಿಗಣೆ ಕೂಡ ಹಾಸಿಗೆಯಲ್ಲಿ ವಾಸ್ತವ್ಯ ಹೂಡುತ್ತವೆ. ಅವು ಮನುಷ್ಯರ ದೇಹದಿಂದ ಉದುರುವ ಸತ್ತ ಚರ್ಮದ ಕೋಶಗಳನ್ನು (ಡೆಡ್ ಸ್ಕಿನ್) ತಿನ್ನುತ್ತವೆ. ಅವುಗಳ ಮಲವು ಅಲರ್ಜಿಕ್ ಪ್ರೋಟೀನ್ಗಳನ್ನು ಹೊಂದಿರುತ್ತದೆ. ಇದು ಸೂಕ್ಷ್ಮ ವ್ಯಕ್ತಿಗಳಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ಉತ್ತಮ ನಿದ್ರೆ ಬೇಕೆಂದರೆ ಯಾವಾಗ ನಿಮ್ಮ ಹಾಸಿಗೆಯನ್ನು ಬದಲಾಯಿಸಬೇಕು?
ಯಾರಾದರೂ ಧೂಳಿನ ಹುಳಗಳಿಂದ ಮುತ್ತಿಕೊಂಡಿರುವ ಕೊಳಕು ಹಾಸಿಗೆಯ ಮೇಲೆ ಮಲಗಿದಾಗ, ಅವರು ಈ ಅಲರ್ಜಿನ್‌ಗಳನ್ನು ಉಸಿರಾಡಬಹುದು. ಇದರಿಂದ ಸೀನುವಿಕೆ, ಉಸಿರುಕಟ್ಟಿಕೊಳ್ಳುವ ಮೂಗು, ಕಣ್ಣುಗಳಲ್ಲಿ ತುರಿಕೆ, ಕೆಮ್ಮು ಮತ್ತು ಉಬ್ಬಸದಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆಸ್ತಮಾ ಹೊಂದಿರುವ ವ್ಯಕ್ತಿಗಳು ಈ ರೀತಿತ ಅಲರ್ಜಿನ್‌ಗಳಿಗೆ ಒಡ್ಡಿಕೊಳ್ಳುವುದು ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.
ಇದಲ್ಲದೆ, ಕೊಳಕು ಹಾಸಿಗೆ ಬೆಡ್ ಬಗ್‌ಗಳಂತಹ ಕೀಟಗಳನ್ನು ಆಕರ್ಷಿಸುತ್ತದೆ. ಇದು ಚರ್ಮದ ಕಿರಿಕಿರಿಯನ್ನು ಉಂಟುಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಅಡ್ಡಿಪಡಿಸುತ್ತದೆ. ಕೊಳಕು ಹಾಸಿಗೆ ನಿಮ್ಮ ಚರ್ಮಕ್ಕೆ ಅಪಾಯಕಾರಿಯೂ ಹೌದು. ಧೂಳಿನ ಹುಳಗಳು ಒಣ, ತುರಿಕೆ ದದ್ದುಗಳನ್ನು ಪ್ರಚೋದಿಸಬಹುದು. ನಾವು ಮಲಗಿದಾಗ ಹಾಸಿಗೆಯಲ್ಲಿ ಸಂಗ್ರಹವಾದ ಬೆವರು, ದೇಹದ ಎಣ್ಣೆಯ ಅಂಶ ಮತ್ತು ಇತರ ದೈಹಿಕ ದ್ರವಗಳು ಹಾಸಿಗೆಗಳಲ್ಲಿ ಅಹಿತಕರ ವಾಸನೆಯನ್ನು ಉಂಟುಮಾಡಬಹುದು.
ನಿಯಮಿತ ಶುಚಿಗೊಳಿಸುವಿಕೆ ಮೂಲಕ ಹಾಸಿಗೆ ನೈರ್ಮಲ್ಯವನ್ನು ನಿರ್ವಹಿಸುವುದರಿಂದ ವಾಸನೆಯನ್ನು ಕಡಿಮೆ ಮಾಡಬಹುದು. ಇದು ತಾಜಾ ಮತ್ತು ಆರಾಮದಾಯಕವಾದ ನಿದ್ರೆಯ ವಾತಾವರಣವನ್ನು ನಿರ್ಮಿಸುತ್ತದೆ. ಉತ್ತಮ ನೈರ್ಮಲ್ಯ ಅಭ್ಯಾಸಗಳು ಆರೋಗ್ಯಕರ ನಿದ್ರೆಯ ವಾತಾವರಣಕ್ಕೆ ಕೊಡುಗೆ ನೀಡುತ್ತವೆ ಮತ್ತು ನಿಮ್ಮ ಹಾಸಿಗೆಯ ಜೀವಿತಾವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹಾಸಿಗೆ ಮೇಲೆ ಕುಳಿತು ತಿನ್ನುತ್ತೀರಾ?; ಕೂಡಲೇ ಆ ಅಭ್ಯಾಸ ಬಿಟ್ಟುಬಿಡಿ
ಹಾಸಿಗೆಯನ್ನು ಯಾವಾಗ ಬದಲಾಯಿಸಬೇಕು?:
ಹಾಸಿಗೆಯ ಜೀವಿತಾವಧಿಯು ಅದರ ಗುಣಮಟ್ಟ, ಬಳಕೆಯ ಅವಧಿ ಮತ್ತು ವೈಯಕ್ತಿಕ ಸೌಕರ್ಯದ ಆದ್ಯತೆಗಳಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ. ಹಾಸಿಗೆಗಳನ್ನು ಪ್ರತಿ 7ರಿಂದ 10 ವರ್ಷಗಳಿಗೊಮ್ಮೆ ಬದಲಾಯಿಸಬೇಕು. ಕೆಲವು ಉತ್ತಮ ಗುಣಮಟ್ಟದ ಹಾಸಿಗೆಗಳು ಮೂಲಭೂತ ಆರೈಕೆಯೊಂದಿಗೆ 15 ವರ್ಷಗಳವರೆಗೆ ಕೂಡ ಇರುತ್ತದೆ.
ಹಾಸಿಗೆಯನ್ನು ಬದಲಾಯಿಸಲು ಇದು ಸಮಯ ಎಂದು ಸೂಚಿಸುವ ಚಿಹ್ನೆಗಳೆಂದರೆ, ಹಾಸಿಗೆಯ ಕುಗ್ಗುವಿಕೆ, ಉಂಡೆಗಳು ಉಂಟಾಗುವುದು ಅಥವಾ ಮಲಗಿದಾಗ ಗಟ್ಟಿಯಾದ, ಮೈ ನೋಯುತ್ತಿರುವ ಭಾವನೆಯನ್ನು ಉಂಟುಮಾಡುವುದು. ಹಾಸಿಗೆ ದೀರ್ಘಕಾಲ ಬಾಳಿಕೆ ಬರಲು ಹಾಸಿಗೆ ರಕ್ಷಕವನ್ನು ಬಳಸಿ. ಹಾಸಿಗೆಯನ್ನು ಗಾಳಿಯಲ್ಲಿ ಒಣಗಿಸಿ. ಹಾಸಿಗೆಯಲ್ಲಿ ಕುಳಿತು ತಿನ್ನುವುದು ಮತ್ತು ಕುಡಿಯುವುದನ್ನು ಮಾಡಬೇಡಿ. ಹಾಸಿಗೆಯ ಬೆಡ್ಶೀಟ್ಗಳನ್ನು ನಿಯಮಿತವಾಗಿ ತೊಳೆಯಿರಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




