Home Remedies : ಮಳೆಗಾಲದಲ್ಲಿ ಕ್ರಿಮಿ ಕೀಟಗಳು ಮನೆಯೊಳಗೆ ಬಾರದಂತೆ ತಡೆಯುವುದು ಹೇಗೆ? ಇಲ್ಲಿದೆ ಮನೆ ಮದ್ದು
ಮಳೆಗಾಲ ಶುರುವಾಯಿತೆಂದರೆ ಇತ್ತ ಕ್ರಿಮಿ ಕೀಟಗಳು ಮನೆಯೊಳಗೆ ಬರಲು ಶುರುಮಾಡುತ್ತವೆ. ಸಂಜೆಯ ವೇಳೆ ಬಾಗಿಲನ್ನೇದರೂ ತೆರೆದಿಟ್ಟರೆ ಸೊಳ್ಳೆ, ನೊಣ, ಝರಿ ಸೇರಿದಂತೆ ಇನ್ನಿತ್ತರ ಕ್ರಿಮಿ ಕೀಟಗಳು ಮನೆಯೊಳಗೆ ಸೇರಿಕೊಳ್ಳುತ್ತವೆ. ಹೀಗಾಗಿ ಮಳೆಗಾಲದಲ್ಲಿ ಈ ಕೀಟಗಳ ಬಾಧೆಗೆ ಕೀಟಗಳ ಮುಕ್ತಿ ಹೊಂದಲು ಒಂದಷ್ಟು ಮನೆ ಮದ್ದು ಇಲ್ಲಿದೆ.
ಮಳೆಗಾಲದಲ್ಲಿ ಬಂತೆಂದರೆ ಸಾಕು ಆರೋಗ್ಯ ಸಮಸ್ಯೆಗಳ ಜೊತೆಗೆ ಸುತ್ತಮುತ್ತ ಕಾಡುವ ಕೀಟಗಳೇ ಹೆಚ್ಚು. ಹೌದು, ಮಳೆ ಬಿದ್ದರೆ ಸಾಕು ನೆಲದಡಿಯಲ್ಲಿ ಅವಿತುಕುಳಿತಿದ್ದ ಕೀಟಗಳು ಮನೆಯೊಳಗೆ ಪ್ರವೇಶಿಸುತ್ತವೆ. ಈ ಕೀಟಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕೀಟಗಳು ಕಚ್ಚಿ ಸೋಂಕುಗಳು ಬರಬಹುದು. ಈ ಕೀಟಗಳನ್ನು ಹೋಗಲಾಡಿಸಲು ಕಸರತ್ತು ಮಾಡುವವರೇ ಹೆಚ್ಚು. ಈ ಸಮಯದಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಕ್ರಿಮಿಕೀಟಗಳನ್ನು ಸುಲಭವಾಗಿ ಓಡಿಸಬಹುದು.
- ಮನೆಯನ್ನು ಸ್ವಚ್ಛಗೊಳಿಸುವಾಗ ವಿನಿಗರ್ ಗೆ ಸ್ವಲ್ಪ ನೀರು ಸೇರಿಸಿ ಬಳಸಿ ಸ್ಪ್ರೇ ಮಾಡಿದರೆ ಇರುವೆಗಳು ಮತ್ತು ಜೇಡಗಳು ಬರುವುದಿಲ್ಲ.
- ವಿನೆಗರ್ ಜೊತೆಗೆ ಬೇವಿನ ಎಲೆಗಳನ್ನು ಪುಡಿಮಾಡಿ ಒರೆಸುವ ನೀರಿನಲ್ಲಿ ಬೆರೆಸಿ ಸ್ಪ್ರೇ ಮಾಡುವುದರಿಂದ ಕೀಟಗಳ ಬಾಧೆಯನ್ನು ತಡೆಯಬಹುದು.
- ವಿನೆಗರ್ ಗೆ ಸ್ವಲ್ಪ ಪ್ರಮಾಣದಲ್ಲಿ ಹರಳೆಣ್ಣೆ, ನಿಂಬೆರಸ ಅಥವಾ ಕರ್ಪೂರ ಬೆರೆಸಿ ಸ್ಪ್ರೇ ಮಾಡುವುದರಿಂದಲೂ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
- ಕೀಟಗಳ ಹಾವಳಿ ತಡೆಯಲು ಕಾಳು ಮೆಣಸನ್ನು ಸಣ್ಣಗೆ ರುಬ್ಬಿಕೊಂಡು ಬಾಟಲಿಯಲ್ಲಿ ಹಾಕಿ ಕೀಟಗಳು ಅಡಗಿರುವ ಸ್ಥಳಗಳ ಮೇಲೆ ಸ್ಪ್ರೇ ಮಾಡಿದರೆ ಕೀಟಗಳು ಓಡಿ ಹೋಗುತ್ತವೆ.
- ನಿಂಬೆ ಹಾಗೂ ಅಡುಗೆ ಸೋಡಾ ಬೆರೆಸಿ ದ್ರಾವಣವನ್ನು ಬಾಟಲಿಯಲ್ಲಿ ತುಂಬಿಸಿ. ಈ ನೀರನ್ನು ಮನೆಯೊಳಗೆ ಹಾಗೂ ಬಾಗಿಲಿನ ಮೂಲೆಗಳಿಗೆ ಸಿಂಪಡಿಸಿದರೆ ಕ್ರಿಮಿ ಕೀಟಗಳು ದೂರ ಹೋಗುತ್ತವೆ.
- ಪುದೀನ ತೈಲವನ್ನು ಒಂದು ಕಪ್ ನೀರಿಗೆ ಮಿಶ್ರಣ ಮಾಡಿ, ಒಂದು ಸ್ಪ್ರೇ ಬಾಟಲಿಗೆ ಹಾಕಿಡಿ. ಇದನ್ನು ಮನೆಯ ಬಾಗಿಲು, ಕಿಟಕಿ ಸೇರಿದಂತೆ ಕ್ರಿಮಿ ಕೀಟಗಳಿದ್ದರೆ ಓಡಿ ಹೋಗುತ್ತವೆ.
- ಒಂದು ಲೋಟ ನೀರಿಗೆ ಒಂದು ಲೋಟ ರಬ್ಬಿಂಗ್ ಆಲ್ಕೋಹಾಲ್ ಹಾಗೂ ಒಂದು ಚಮಚ ವೆಜಿಟೇಬಲ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಮನೆಯ ಮೂಲೆಗೆ ಸ್ಪ್ರೇ ಮಾಡಿದರೆ ಕೀಟಗಳು ಸಾಯುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: