Kannada News Lifestyle Home Remedies : How to Stop Bleeding in Small and Deep Cuts? Lifestyle News in Kannada
Home Remedies : ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೆ ತಕ್ಷಣಕ್ಕೆ ನಿಲ್ಲಿಸೋದು ಹೇಗೆ? ಇಲ್ಲಿದೆ ಸರಳ ಮನೆ ಮದ್ದು
ಸಾಮಾನ್ಯವಾಗಿ ಬಿದ್ದಾಗ ಕಲ್ಲು ತಾಗಿಯೋ, ಅಡುಗೆ ಮಾಡುವಾಗ ಚಾಕು ತಾಗಿಯೋಗಾಯಗಳಾಗುತ್ತದೆ. ದೊಡ್ಡ ಗಾಯವಾಗಿದ್ದರೆ ರಕ್ತಸ್ರಾವವು ನಿಲ್ಲುವುದೇ ಇಲ್ಲ. ಆದರೆ ಆ ತಕ್ಷಣಕ್ಕೆ ಮನೆಯಲ್ಲಿರುವ ಈ ಪದಾರ್ಥಗಳಿಂದಲೇ ರಕ್ತಸ್ರಾವವನ್ನು ನಿಲ್ಲಿಸಬಹುದು. ಈ ಸರಳ ಮನೆ ಮದ್ದುಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
Follow us on
ಪ್ರತಿಯೊಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಆಕಸ್ಮಾತ್ ಆಗಿ ಗಾಯವಾಗಿ ರಕ್ತವು ಸೋರುತ್ತಿರಬಹುದು. ಸುರಿಯುವ ರಕ್ತವನ್ನು ನೋಡಿ ತಲೆ ತಿರುಗಿ ಬೀಳುವವರು ಇದ್ದಾರೆ. ಆದರೆ ಈ ತಕ್ಷಣವೇ ರಕ್ತಸ್ರಾವವನ್ನು ತಡೆಯಲು ಕೆಲವು ಸೂಕ್ತ ಕ್ರಮಗಳನ್ನು ಕೈಗೊಂಡರೆ ಉತ್ತಮ. ಆ ತಕ್ಷಣವೇ ಮನೆ ಮದ್ದುಗಳು ಉಪಯೋಗಕ್ಕೆ ಬರುತ್ತವೆಯಾದರೂ, ಗಾಯವು ದೊಡ್ಡದಾಗಿದ್ದರೆ ಆ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ.
ಚಹಾ ಪುಡಿ ರಕ್ತಸ್ರಾವವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಚಹಾದ ಚೀಲವನ್ನು ನೀರಿನಲ್ಲಿ ಅದ್ದಿ ತೇವಗೊಳಿಸಿ, ರಕ್ತಸ್ರಾವ ಆಗುತ್ತಿರುವಲ್ಲಿ ಇಟ್ಟರೆ ರಕ್ತಸೋರುವುದು ತಕ್ಷಣಕ್ಕೆ ನಿಂತು ಹೋಗುತ್ತದೆ.
ಕಾಫಿ ಪುಡಿ ರಕ್ತಸ್ರಾವವನ್ನು ಹೆಪ್ಪುಗಟ್ಟಿಸುತ್ತದೆ. ಹೀಗಾಗಿ ಗಾಯದಿಂದ ರಕ್ತ ಸ್ರಾವವನ್ನು ಆಗುತ್ತಿದ್ದರೆ ಕಾಫಿ ಪುಡಿ ಹಾಕಿ ಹತ್ತು ನಿಮಿಷಗಳ ಬಳಿಕ ಸ್ವಚ್ಛಗೊಳಿಸುವುದು ಉತ್ತಮ.
ರಕ್ತಸ್ರಾವವಾಗುತ್ತಿದ್ದರೆ ಹತ್ತಿಯನ್ನು ಬಿಳಿ ವಿನೆಗರ್ ಗೆ ಅದ್ದಿ ಗಾಯದ ಮೇಲೆ ನೇರವಾಗಿ ಅನ್ವಯಿಸುವುದು ಪರಿಣಾಮಕಾರಿ.
ಗಾಯದ ಮೇಲೆ ಐಸ್ ಇಡುವುದು ಕೂಡ ಒಳ್ಳೆಯದು. ಮೊದಲಿಗೆ ಗಾಯನ್ನು ಟವಲ್ ಅಲ್ಲಿ ಕಟ್ಟಿಕೊಂಡು ಆ ನಂತರ ಐಸ್ ಇಟ್ಟುಕೊಳ್ಳಿ.
ಗಾಯದ ಮೇಲೆ ಅರಶಿಣವನ್ನು ಹಚ್ಚುವುದರಿಂದ ರಕ್ತಸ್ರಾವವು ನಿಲ್ಲುತ್ತದೆ.
ಗಾಯಕ್ಕೆ ಟೂತ್ಪೇಸ್ಟ್ ಹಚ್ಚುವುದರಿಂದ ರಕ್ತಸ್ರಾವ ಕಡಿಮೆ ಮಾಡಿ, ಗಾಯವು ಬೇಗನೇ ಗುಣಮುಖವಾಗುತ್ತದೆ.