International Sex Workers Day 2024 : ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನ; ವೇಶ್ಯೆಯ ಬದುಕಿನಲ್ಲಿದೆ ವ್ಯಥೆ ತುಂಬಿದ ಕಥೆ, ಕೇಳುವ ಕಿವಿ ನಿಮ್ಮದಾಗಲಿ
ಪ್ರಪಂಚದಾದ್ಯಂತ ಪ್ರತಿ ವರ್ಷ ಜೂನ್ 2 ರಂದು ಅಂತರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಅವರ ಮೂಲಭೂತ ಹಕ್ಕುಗಳನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.
ಬದುಕು ಎಷ್ಟು ವಿಚಿತ್ರವೋ, ಅಷ್ಟೇ ಕ್ರೂರಿ ಕೂಡ. ಕೆಲವರಿಗೆ ಸುಖದ ಸುಪ್ಪತ್ತಿಗೆ ಇನ್ನು ಕೆಲವರದ್ದು ಹೊಟ್ಟೆ ಪಾಡಿಗಾಗಿ ಹಗಲಿರುಳು ಹೋರಾಟ. ಹೀಗಾಗಿ ಕೆಲ ಮಹಿಳೆಯರು ಹೊಟ್ಟೆ ಪಾಡಿಗಾಗಿ ಮೈ ಮಾರಿಕೊಳ್ಳುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ.ಈ ವೇಶ್ಯಾವಾಟಿಕೆಯೆನ್ನುವುದು ಪ್ರಪಂಚದ ಅತ್ಯಂತ ಹಳೆಯ ವೃತ್ತಿಗಳಲ್ಲಿ ಒಂದು. ಆದರೆ ಈ ವೃತ್ತಿಯನ್ನು ಅವಲಂಬಿಸಿ ಬದುಕಿನಲ್ಲಿ ಅನುಭವಿಸುವ ಕಷ್ಟಗಳು ಹಾಗೂ ಅವಮಾನಗಳು ಉಂಡವರು ಅದೆಷ್ಟೋ ಜನರು. ಹೀಗಾಗಿ ವಿಶ್ವಾದ್ಯಂತ ಲೈಂಗಿಕ ಕಾರ್ಯಕರ್ತರನ್ನು ಗೌರವಿಸಲು ಹಾಗೂ ಈ ವೃತ್ತಿಯಲ್ಲಿ ತೊಡಗಿಕೊಂಡವರ ಮೇಲಾಗುತ್ತಿರುವ ಅಪಮಾನ, ನಿಂದನೆ ಕುರಿತು ಗಮನಹರಿಸಲು ಲೈಂಗಿಕ ಕಾರ್ಯಕರ್ತರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಪ್ರಪಂಚದಾದ್ಯಂತ ಪ್ರತಿ ವರ್ಷ ಜೂನ್ 2 ರಂದು ಅಂತರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಅವರ ಮೂಲಭೂತ ಹಕ್ಕುಗಳನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.
ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನದ ಇತಿಹಾಸ ಹಾಗೂ ಮಹತ್ವ:
1975ರಲ್ಲಿ ಜೂನ್ 2ರಂದು ಅಂತಾರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅದಲ್ಲದೇ, ಪ್ರತಿ ವರ್ಷ ಮಾರ್ಚ್ 3 ರಂದು ಅಂತಾರಾಷ್ಟ್ರೀಯ ಲೈಂಗಿಕ ಕಾರ್ಮಿಕರ ಹಕ್ಕುಗಳ ದಿನವನ್ನು ಸಹ ಆಚರಿಸಲಾಗುತ್ತದೆ. ಈ ದಿನದಂದು, ಲೈಂಗಿಕ ಕಾರ್ಯಕರ್ತೆಯ ಹಕ್ಕುಗಳ ಕಾರ್ಯಕರ್ತರು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಲು, ನೀತಿ ಶಿಫಾರಸುಗಳನ್ನು ರೂಪಿಸಲು ಒಕ್ಕೂಟಗಳೊಂದಿಗೆ ಕೆಲಸ ಮಾಡಲಾಗುತ್ತದೆ. ಅದಲ್ಲದೇ ವೇಶ್ಯೆಯರು ಅನುಭವಿಸುವ ತಾರತಮ್ಯ, ಶೋಷಣೆ ಮತ್ತು ಬಡತನವನ್ನು ಕೊನೆಗೊಳಿಸಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: