ಹಣಕ್ಕಾಗಿ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣ: ತಾಯಿ ಸೇರಿದಂತೆ ನಾಲ್ವರು ದೋಷಿ, 49 ಜನ ಖುಲಾಸೆ
ಶೃಂಗೇರಿ ತಾಲೂಕಿನ ಕುಂಚೆಬೈಲ್ ಸಮೀಪದ ಗೋಚವಲ್ಲಿ ಗ್ರಾಮದಲ್ಲಿ ಹಣಕ್ಕಾಗಿ ತಾಯಿಯೇ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು, ನಾಲ್ವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಸಂತ್ರಸ್ತೆ ತಾಯಿ ಸೇರಿದಂತೆ ಆಕೆಯ ದಂಧೆಗೆ ಸಹಾಯ ಮಾಡಿದ್ದ ಮೂವರನ್ನು ಸಹ ದೋಷಿ ಎಂದು ಕೋರ್ಟ್ ಹೇಳಿದ್ದು, ಇನ್ನುಳಿದ ಬಂಧಿತ 49 ಜನರನ್ನು ಖುಲಾಸೆಗೊಳಿಸಿದೆ.
ಚಿಕ್ಕಮಗಳೂರು, (ಮಾರ್ಚ್ 07): ಹಣಕ್ಕಾಗಿ ತಾಯಿಯೇ ಅಪ್ರಾಪ್ತ ಮಗಳನ್ನ ವೇಶ್ಯಾವಾಟಿಕೆಗೆ (prostitution) ದೂಡಿದ್ದ ಪ್ರಕರಣಕ್ಕೆ ಬಂಧಿಸಿದಂತೆ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ. ಬಾಲಕಿಯ ತಾಯಿ ಸೇರಿದಂತೆ ನಾಲ್ಕು ಜನರ ಮೇಲೆ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಜನರನ್ನು ದೋಷಿ ಎಂದು ಚಿಕ್ಕಮಗಳೂರು (Chikkamagalur )ತ್ವರಿತ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದ್ದು, 53 ಜನರ ಪೈಕಿ 49 ಜನರನ್ನ ಪ್ರಕರಣದಿಂದ ಖುಲಾಸೆಗೊಳಿಸಿದೆ. ಈ ಮೂಲಕ ಸ್ಮಾಲ್ ಅಭಿ, ಸಂತ್ರಸ್ತೆ ತಾಯಿ ಗೀತಾ, ಗಿರೀಶ್, ದೇವಿ ಶರಣ್ ಅಪರಾಧಿಗಳೆಂದು ಸಾಬೀತಾಗಿದ್ದು. ಇದೇ ಮಾರ್ಚ್ 11 ರಂದು ನಾಲ್ಕು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಿದೆ.
ವೇಶ್ಯಾವಾಟಿಕೆ ದಂಧೆಗೆ ಗೀತಾಳಿಗೆ(ಸಂತ್ರಸ್ತೆ ತಾಯಿ) ಸ್ಮಾಲ್ ಅಭಿ, ಗಿರೀಶ್, ದೇವಿ ಶರಣ್ ಎನ್ನುವರು ಸಹಾಯ ಮಾಡಿದ್ದರು. ಈ ಪೈಕಿ ಇದೀಗ 49 ಜನರನ್ನು ಕೋರ್ಟ್ ಖುಲಾಸೆಗೊಳಿಸಿದ್ದು ನಾಲ್ವರನ್ನು ದೋಷಿ ಎಂದು ತೀರ್ಪು ನೀಡಿದೆ.
ತಾಯಿಯ ಕಿರುಕುಳ ತಾಳಲಾರದೆ ಬಾಲಕಿ ವೇಶ್ಯಾವಾಟಿಕೆ ಒಪ್ಪಿದ್ದಳು. ಹೀಗಾಗಿ 2020ರ ಸೆಪ್ಟೆಂಬರ್ 1 ರಿಂದ 2021ರ ಜನವರಿ 27ರ ವರೆಗೂ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದಿತ್ತು.ಕೊನೆಗೆ ಶೃಂಗೇರಿ ತಾಲೂಕಿನ ಕುಂಚೆಬೈಲ್ ಸಮೀಪದ ಗೋಚವಲ್ಲಿ ಗ್ರಾಮದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ 2021ರಲ್ಲಿ ಪೊಲೀಸರು ದಾಳಿ ಮಾಡಿ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದರು. ಈ ಒಂದೇ ಅತ್ಯಾಚಾರ ಪ್ರಕರಣದಲ್ಲಿ ಶೃಂಗೇರಿ ಪೊಲೀಸರು 53 ಜನರನ್ನು ಬಂಧಿಸಿದ್ದರು.
ಹಿರಿಯ ವಕೀಲ ತೇಜಸ್ವಿ ಹೇಳಿದ್ದೇನು?
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ತೇಜಸ್ವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಒಂದು ಎಫ್ಐಆರ್ ಅಡಿಯಲ್ಲಿ ಹೈಕೋರ್ಟ್ ಆದೇಶದಂತೆ ಒಟ್ಟು 38 ಚಾರ್ಜ್ಶೀಟ್ಗಳನ್ನು ಸಲ್ಲಿಸಲಾಗಿತ್ತು. ಬಳಿಕ ಆ 38 ಚಾರ್ಜ್ಶೀಟ್ಗಳಲ್ಲೂ ಇಲ್ಲಿಯವರೆಗೂ ಅಂದರೆ ಮೂರು ವರ್ಷವರೆಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಅದರ ವಿಚಾರಣೆ ನಡೆಸಿ ನ್ಯಾಯಾಲಯವು, ಮುಖ್ಯ ನಾಲ್ಕು ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದೆ ಎಂದು ಹೇಳಿದರು.
ಹಾಗೇ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನ ಇತ್ತೀಚಿನ ತೀರ್ಪುಗಳಂತೆ ಗ್ರಾಹಕರನ್ನು ಆರೋಪಿಗಳನ್ನಾಗಿ ಮಾಡುವುದಕ್ಕೆ ಬರುವುದಿಲ್ಲ. ಯಾಕಂದ್ರೆ, ಗ್ರಾಹಕ ಗ್ರಾಹಕನಾಗಿಯೇ ಹೋಗಿರುತ್ತಾನೆ ಹೊರೆತು ಅವನು ಆರೋಪಿಯಾಗಿರುವುದಿಲ್ಲ. ಹೀಗಾಗಿ ನಾಲ್ಕು ಆರೋಪಿಗಳನ್ನು ಬಿಟ್ಟು ಇನ್ನುಳಿದ 49 ಜನರನ್ನು ಖುಲಾಷಿ ಮಾಡಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ