ನೋಡಲು ಆಕರ್ಷಕ, ಈ ಮಂಗಟ್ಟೆ ಹಕ್ಕಿಗಳ ಬದುಕು ಇನ್ನೂ ರೋಚಕ

ಆಕರ್ಷಕ ಮೈ ಬಣ್ಣ, ದೊಡ್ಡದಾದ ಕೊಕ್ಕುಗಳು ಹೊಂದಿರುವ ಸುಂದರ ಪಕ್ಷಿಯೇ ಮಂಗಟ್ಟೆ. ಹೆಚ್ಚಿನವರಿಗೆ ಮಂಗಟ್ಟೆಗಿಂತ ಹಾರ್ನ್ ಬಿಲ್ ಎಂದರೆ ಹೆಚ್ಚು ಚಿರಪರಿಚಿತ. ಸಾಮಾನ್ಯವಾಗಿ ಈ ಮಂಗಟ್ಟೆ ಹಕ್ಕಿಗಳು ಕೀಟ, ಸಣ್ಣದಾದ ಜೀವಿಗಳನ್ನು ತಿನ್ನುತ್ತದೆಯಾದರೂ ಇವುಗಳ ನೆಚ್ಚಿನ ಆಹಾರವೇ ಹಣ್ಣುಗಳು. ಅಷ್ಟೇ ಅಲ್ಲದೇ ಸಂತಾನೋತ್ಪತ್ನಿಯಿಂದ ಹಿಡಿದು ಪ್ರತಿಯೊಂದು ಹಂತದಲ್ಲೂ ತನ್ನ ಸಂಗಾತಿಗೆ ನಿಷ್ಠೆಯಿಂದ ಇರುವ ಈ ಗಂಡು ಮಂಗಟ್ಟೆಗಳನ್ನು ಅಮರ ಪ್ರೇಮಿ ಅನ್ನೋದು ಯಾಕೆ ಗೊತ್ತಾ? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ನೋಡಲು ಆಕರ್ಷಕ, ಈ ಮಂಗಟ್ಟೆ ಹಕ್ಕಿಗಳ ಬದುಕು ಇನ್ನೂ ರೋಚಕ
ಮಂಗಟ್ಟೆ ಹಕ್ಕಿ
Updated By: ಮಾಲಾಶ್ರೀ ಅಂಚನ್​

Updated on: Aug 09, 2025 | 8:01 PM

ಪ್ರಕೃತಿಯೂ ವಿಸ್ಮಯಗಳ ಅಗರ,  ಹೀಗಾಗಿ ಒಂದೊಂದು ಜೀವಿಗಳದ್ದು ಒಂದೊಂದು ರೀತಿಯಲ್ಲಿ ಬದುಕುವ ಕ್ರಮ. ಕೆಲವು ಜೀವಿಗಳು ಮನುಷ್ಯನಿಗೆ ಮಾದರಿಯಾಗುವಂತೆ ಬದುಕುವ ರೀತಿ ನೋಡುವಾಗ ನಮ್ಮ ಕಣ್ಣಿಗೂ ನಂಬಲು ಅಸಾಧ್ಯ. ಮನುಷ್ಯರನ್ನು ಹೊರತು ಪಡಿಸಿದರೆ ಈ ಜೀವ ಸಂಕುಲದಲ್ಲಿ ಎಲ್ಲಾ ಜೀವಿಗಳು ತಮ್ಮ ಉಳಿವು ಹಾಗೂ ವಂಶಾಭಿವೃದ್ಧಿಗೆ ಮಾತ್ರ ಶ್ರಮಿಸುತ್ತವೆ ಎನ್ನುವುದು ಗೊತ್ತಿರುವ ವಿಚಾರ. ಅಂತಹ ಸಾಲಿಗೆ ಸೇರಿರುವುದೇ ಈ ಚಂದದ ಪಕ್ಷಿಯಾದ ಮಂಗಟ್ಟೆ ಅಥವಾ ಹಾರ್ನ್ ಬಿಲ್ (Hornbill). ಹೆಸರು ಮಾತ್ರವಲ್ಲ ಈ ಪಕ್ಷಿಗಳು ನೋಡಲು ಅಷ್ಟೇ ಆಕರ್ಷಕ,  ಬದುಕುವ ರೀತಿಯೂ ಇನ್ನೂ ವಿಭಿನ್ನ. ತನ್ನ ಸಂತತಿ ವೃದ್ಧಿಗಾಗಿ ಗಂಡು ಹಕ್ಕಿಯೂ ಒಂದೇ ಸಂಗಾತಿಗೆ ಹೊಂದಿಕೊಂಡಿರುವುದು ಇನ್ನೂ ವಿಶೇಷ. ಗಂಡು ಹಾಗೂ ಹೆಣ್ಣು ಪಕ್ಷಿಗಳೆರಡು ವಂಶಾಭಿವೃದ್ಧಿಗೆ  ಶಿಸ್ತು ಬದ್ಧವಾಗಿ ತಮ್ಮ ಕಾಯಕವನ್ನು ತಪ್ಪದೇ ಮಾಡುತ್ತವೆ. ಹೆಣ್ಣು ಮೂರು ತಿಂಗಳಗಳ ಕಾಲ ಗೃಹಬಂಧನದಲ್ಲಿದ್ರೆ, ಗಂಡು ಮಂಗಟ್ಟೆ ತನ್ನ ಸಂಗಾತಿಗೆ ತಪ್ಪದೇ ಆಹಾರವನ್ನು ಒದಗಿಸುತ್ತದೆ. ಹಾಗಾದ್ರೆ ಮಂಗಟ್ಟೆ ಬದುಕಿನ ಚಿತ್ರಣದ ಬಗ್ಗೆ ಇಲ್ಲಿದೆ ಮಾಹಿತಿ

ನೋಡಲು ಬಲು ಆಕರ್ಷಕ ಈ ಮಂಗಟ್ಟೆ:

ಈ ಹಾರ್ನ್ ಬಿಲ್ ಹಕ್ಕಿಗಳು ನೋಡುವುದಕ್ಕೆ ಬಲು ಆಕರ್ಷಕ.  ಕೇಸರಿ ಹಾಗೂ ಹಳದಿ ಬಣ್ಣದ ತನ್ನ ಮುಖಕ್ಕಿಂತ ಉದ್ದದಾದ ಕೊಕ್ಕುಗಳು. ಕೊಕ್ಕಿನ ಮೇಲೆ ಗುಬುಟಿನಂತಹ ರಚನೆ, ಆಕರ್ಷಕ ಮೈ ಬಣ್ಣ,  ಧ್ವನಿಯಂತೂ ಜೋರಾಗಿ ರೆಚ್ಚೆಹಿಡಿದು ಅಳುವ ಮಕ್ಕಳ ಹಾಗೆಯೇ ಇರುತ್ತದೆ. ಆದರೆ ಹೆಚ್ಚಿನವರು ಈ ಹಕ್ಕಿಗಳು ವಿದೇಶದಿಂದ ವಲಸೆ ಬಂದಿರುವುದೆಂದೇ ಭಾವಿಸಿದ್ದಾರೆ. ಸಾಮಾನ್ಯವಾಗಿ ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಈ ಮಂಗಟ್ಟೆಗಳಲ್ಲಿ ವಿವಿಧ ಪ್ರಬೇಧಗಳಿವೆ. ಈ ಹಾರ್ನ್ ಬಿಲ್ ಗಳು  ನಿತ್ಯಹರಿದ್ವರ್ಣ ಕಾಡುಗಳಲ್ಲಿ ಹೇರಳವಾಗಿ ಇರುತ್ತವೆ.

ಒಂದೇ ಸಂಗಾತಿಗೆ ಹೊಂದಿಕೊಳ್ಳುವ ಗಂಡು ಮಂಗಟ್ಟೆ:

ಮನುಷ್ಯನನ್ನು ಬಿಟ್ಟರೆ ಈ ಜೀವಸಂಕುಲದಲ್ಲಿರುವ ಯಾವುದೇ ಜೀವಿಗಳು ಕೂಡ ಸಂಗಾತಿಗೆ ನಿಷ್ಠೆಯಿಂದ ಇರುವುದಿಲ್ಲ. ಆದರೆ ಈ ಗಂಡು ಮಂಗಟ್ಟೆಯೂ ತನ್ನ ಸಂಗಾತಿಗೆ ಪ್ರಾಮಾಣಿಕತೆಯಿಂದ ಇದ್ದು, ಕೊನೆಯವರೆಗೂ ಒಂದೇ ಹೆಣ್ಣು ಸಂಗಾತಿಯೊಂದಿಗೆ ಬದುಕುತ್ತವೆ. ಮೊಟ್ಟೆಗೆ ಕಾವು ಇಡುವ ಸಂದರ್ಭದಲ್ಲಿ ತನ್ನ ಸಂಗಾತಿಗೆ ಆಹಾರ ಒದಗಿಸುವ ಕಾರ್ಯವನ್ನು ತಪ್ಪದೇ ಮಾಡುತ್ತವೆ. ಮೂರು ತಿಂಗಳುಗಳ ಕಾಲ ಗೃಹಬಂಧನದಲ್ಲಿದ್ರೂ ತನ್ನ ಸಂಗಾತಿಯೂ ತನಗಾಗಿ ಆಹಾರ ಹುಡುಕಿ ಬರುವನು ಎನ್ನುವ ಭರವಸೆಯಲ್ಲಿ ಕಾಯುತ್ತದೆ ಈ ಹೆಣ್ಣು ಮಂಗಟ್ಟೆ.

ಇದನ್ನೂ ಓದಿ
ನಾಗರಹಾವುಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳೇನು?
ಶ್ವಾನಗಳು ನಿಮ್ಮ ಭವಿಷ್ಯ ಹೇಳುತ್ತೆ, ಅದೇಗೆ ಅಂತೀರಾ?
ಮಳೆಗಾಲದಲ್ಲಿ ಕಪ್ಪೆಗಳು ಮನೆಯೊಳಗೆ ಬಂದ್ರೆ ಅದೃಷ್ಟ ಖುಲಾಯಿಸುತ್ತಾ?
ಬೆಕ್ಕು ಆದಾಗೇ ನಿಮ್ಮ ಮನೆಗೆ ಬಂದ್ರೆ ಏನರ್ಥ, ಅದೃಷ್ಟ ಕೈ ಹಿಡಿಯುತ್ತಾ?

ಹೆಣ್ಣು ಹಕ್ಕಿಗೆ ಗೃಹಬಂಧನ, ಗಂಡು ಮಂಗಟ್ಟೆಗೆ ಆಹಾರದ ಹುಡುಕಾಟ:

ಮಂಗಟ್ಟೆ ಹಕ್ಕಿಗಳು ಸಾಮಾನ್ಯವಾಗಿ ಜನವರಿ ತಿಂಗಳಿನಿಂದ ಏಪ್ರಿಲ್ ತಿಂಗಳೊಳಗೆ ಸಂತಾನೋತ್ಪತ್ನಿ ಮಾಡುತ್ತವೆ. ಹೀಗಾಗಿ ರಕ್ಷಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಗೂಡು ಕಟ್ಟಲು ಎತ್ತರವಾದ ಮರದ ಪೊಟರೆಗಳನ್ನೆ ಇವುಗಳು ಹುಡುಕುತ್ತವೆ. ಹೆಣ್ಣು ಮಂಗಟ್ಟೆ ಮೊಟ್ಟೆ ಇಟ್ಟು ಅವುಗಳಿಗೆ ಕಾವು ಕೊಡುವ ಸಂದರ್ಭದಲ್ಲಿ ಪೊಟರೆಯ ಬಾಗಿಲನ್ನು ಗಂಡು ಮತ್ತು ಹೆಣ್ಣು ಇಬ್ಬರೂ ಜೊತೆ ಸೇರಿ  ಮುಚ್ಚುತ್ತವೆ. ಇಲ್ಲಿ ಮುಖ್ಯವಾಗಿ ಆಹಾರ ಕೊಡಲು ಸಾಧ್ಯವಾಗುವಷ್ಟು ಮಾತ್ರ ಜಾಗವನ್ನು ಇಟ್ಟಿರುತ್ತದೆ. ಈ ವೇಳೆಯಲ್ಲಿ ಹೆಣ್ಣು ಹಕ್ಕಿಗೆ ಮೂರು ತಿಂಗಳ ಗೃಹ ಬಂಧನ. ಈ ವೇಳೆಯಲ್ಲಿ ಜೊತೆಯಾಗಿ ನಿಲ್ಲುವುದು ಗಂಡು ಮಂಗಟ್ಟೆ.

ಇದನ್ನೂ ಓದಿ: ನಾಗರಹಾವುಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳೇನು? ಬಗ್ಗೆ ಉರಗ ತಜ್ಞ ಗುರುರಾಜ್ ಸನಿಲ್ ಏನ್ ಹೇಳ್ತಾರೆ?

ಹೆಣ್ಣು ಮಂಗಟ್ಟೆ ಮೊಟ್ಟೆಗೆ ಕಾವು ಕೊಡುವ ವೇಳೆ ಗಂಡು ಮಂಗಟ್ಟೆಯೂ ಸಂಗಾತಿ ಬೇಕಾದ ಆಹಾರವನ್ನು ಒದಗಿಸುತ್ತದೆ. ತನ್ನ ಕೊಕ್ಕಿನಲ್ಲೇ ಆಹಾರ ಕೊಟ್ಟು ಗಂಡು ಮಂಗಟ್ಟೆ ಮತ್ತೆ ಆಹಾರ ಹುಡುಕಾಟದತ್ತ ಹೊರಡುತ್ತವೆ. ಸಂತಾನೋತ್ಪತ್ನಿಯ ಈ ಮೂರು ತಿಂಗಳು ಗಂಡು ಮಂಗಟ್ಟೆ ತನ್ನ ಸಂಗಾತಿಯ ಕಷ್ಟ ಸುಖದಲ್ಲಿ ಜೊತೆಯಾಗುತ್ತದೆ. ಮೊಟ್ಟೆ ಒಡೆದು ಮರಿಗಳು ಹಾರಲು ಸಾಧ್ಯವಾದಾಗ ಬಾಗಿಲನ್ನು ತೆರೆದು ತನ್ನ ಮರಿಗಳೊಂದಿಗೆ ಈ ಹೆಣ್ಣು ಮಂಗಟ್ಟೆ ಹೊರಬರುತ್ತದೆ. ಈ ವೇಳೆಯಲ್ಲಿ ಈ ಹೆಣ್ಣು ಮಂಗಟ್ಟೆಯ ಗೃಹ ಬಂಧನಕ್ಕೆ ಆವಾಗಲೇ ಮುಕ್ತಿ ಸಿಕ್ಕಿ ಮತ್ತೆ ಈ ಪ್ರೇಮ ಪಕ್ಷಿಗಳು ಎಂದಿನಂತೆ ಜೀವನ ಆರಂಭಿಸುವುದು. ಆದರೆ ತನ್ನ ಸಂಸಾರದ ಜವಾಬ್ದಾರಿ ಹೊತ್ತ ಗಂಡು ಹಾರ್ನ್ ಬಿಲ್ ಹಕ್ಕಿ  ಆಹಾರ ಹುಡುಕುವ ಸಂದರ್ಭದಲ್ಲಿ ಅಥವಾ ಇನ್ಯಾವುದೋ ಕಾರಣದಿಂದ  ಮೃತ ಪಟ್ಟರೆ, ಆಹಾರಕ್ಕೆ ಸಂಗಾತಿಯನ್ನೇ ಅವಲಂಬಿಸಿಕೊಂಡಿರುವ ಹೆಣ್ಣು ಮಂಗಟ್ಟೆ ಮರಿಗಳು ಕೂಡ ಸಾಯುತ್ತವೆ. ಹೀಗಾಗಿ ಈ ಮಂಗಟ್ಟೆಗಳ ಪ್ರೀತಿ, ಕಾಳಜಿಭರಿತ ದಾಂಪತ್ಯ ಜೀವನವೇ ನಮಗೆಲ್ಲರಿಗೂ ಮಾದರಿ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Sat, 9 August 25