Beauty Tips: ಕಾಂತಿಯುತ ತ್ವಚೆಗಾಗಿ ಈರುಳ್ಳಿ ಫೇಸ್ ಪ್ಯಾಕ್

ಈರುಳ್ಳಿ ಅಡುಗೆಗೆ ಮಾತ್ರವಲ್ಲದೆ ಕೂದಲಿನ ಆರೋಗ್ಯದಿಂದ ಹಿಡಿದು ತ್ವಚೆಗೆ ಕಾಂತಿಯನ್ನು ನೀಡುವವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಆದ್ದರಿಂದ ಕಾಂತಿಯುತ ತ್ವಚೆಗಾಗಿ ಈರುಳ್ಳಿ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Beauty Tips: ಕಾಂತಿಯುತ ತ್ವಚೆಗಾಗಿ ಈರುಳ್ಳಿ ಫೇಸ್ ಪ್ಯಾಕ್
Onion face pack

Updated on: Aug 12, 2023 | 2:49 PM

ಯಾವುದೇ ಕಲೆಗಳಿಲ್ಲದೇ ಹೊಳೆಯುವ ಕಾಂತಿಯುತ ತ್ವಚೆ ಪಡೆಯಬೇಕು ಎಂಬುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ದುಬಾರಿ ಬೆಲೆಯ ಸಾಕಷ್ಟು ಕ್ರೀಮ್​​​​ಗಳನ್ನು ಖರೀದಿಸಿ ಮೋಸ ಹೋದವರೂ ಇದ್ದಾರೆ. ಜೊತೆಗೆ ಒತ್ತಡದ ಜೀವನಶೈಲಿ, ನಿದ್ರಾಹೀನತೆ ಹಾಗೂ ಕಳಪೆ ಆಹಾರ ಕ್ರಮಗಳು ಕೂಡ ನಿಮ್ಮ ತ್ವಚೆಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಆರೋಗ್ಯಕರ ಜೀವನಶೈಲಿಯ ಜೊತೆಗೆ ಕೆಲವೊಂದು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು. ಅದರಲ್ಲಿ ಪ್ರಮುಖವಾದುದು ಈರುಳ್ಳಿ. ಈರುಳ್ಳಿ ಅಡುಗೆಗೆ ಮಾತ್ರವಲ್ಲದೆ ಕೂದಲಿನ ಆರೋಗ್ಯದಿಂದ ಹಿಡಿದು ತ್ವಚೆಗೆ ಕಾಂತಿಯನ್ನು ನೀಡುವವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.

ಕಾಂತಿಯುತ ತ್ವಚೆಗಾಗಿ ಈರುಳ್ಳಿ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?

ಮೊದಲಿಗೆ ಒಂದು ಈರುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ, ಅದರ ರಸವನ್ನು ತೆಗೆದಿಟ್ಟುಕೊಳ್ಳಿ. ಇದಾದ ಬಳಿಕ ಈ ರಸಕ್ಕೆ ಅಕ್ಕಿ ಹಿಟ್ಟು,ಅಲೋವೆರಾ ಮತ್ತು ಕಾರ್ನ್‌ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್​​​​ ತಯಾರಿಸಿ. ಈ ಮಿಶ್ರಣವನ್ನು ವಾರದಲ್ಲಿ ಎರಡು ಬಾರಿ ಮುಖಕ್ಕೆ ಹಚ್ಚಿ ಹಾಗೂ 30 ನಿಮಿಷಗಳ ನಂತರ ಸ್ಕ್ರಬ್​​ ಮಾಡಿ ತೊಳೆದುಕೊಳ್ಳಿ. ಈರುಳ್ಳಿ ರಸದಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಎ, ಸಿ ಮತ್ತು ಇ ಹೇರಳವಾಗಿದ್ದು, ಇದು ಮುಖವನ್ನು ಕಲೆರಹಿತ ಮತ್ತು ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ: ಈ ಸುಲಭ ಹಾಗಲಕಾಯಿ ಟಿಕ್ಕಿ ತೂಕ ಕಳೆದುಕೊಳ್ಳಲು, ಮಧುಮೇಹ ನಿರ್ವಹಿಸಲು, ಇನ್ನಷ್ಟು ಆರೋಗ್ಯ ಪ್ರಯೋಜನವನ್ನು ನೀಡುತ್ತದೆ

ಜೊತೆಗೆ ಇದರಲ್ಲಿ ಅಲೋವೆರಾ ಜೆಲ್​​ ಬಳಸಿರುವುದರಿಂದ ಅಲೋವೆರಾ ತ್ವಚೆಗೆ ವಿವಿಧ ರೀತಿಯ ಸೌಂದರ್ಯ ಪ್ರಯೋಜನಗಳನ್ನು ನೀಡುತ್ತದೆ. ಇದಲ್ಲದೇ ಈ ನೈಸರ್ಗಿಕ ಚಿಕಿತ್ಸೆಯು ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸೂರ್ಯನ ಯುವಿ ಕಿರಣಗಳಿಂದ ಉಂಟಾದ ಚರ್ಮದ ಹಾನಿಗೆ ಚಿಕಿತ್ಸೆ ನೀಡಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಈ ಈರುಳ್ಳಿ ಫೇಸ್ ಪ್ಯಾಕ್ ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಮೊಡವೆಗಳು ಹಾಗೂ ಮೊಡವೆ ಕಲೆಗಳನ್ನು ಹೋಗಲಾಡಿಸುವಲ್ಲಿ ಉತ್ತಮ ಮನೆಮದ್ದು.

ಈರುಳ್ಳಿ ಸೇವನೆಯಿಂದಾಗುವ ಪ್ರಯೋಜನಗಳು:

ಈರುಳ್ಳಿಯನ್ನು ಪ್ರತೀ ನಿತ್ಯ ನಿಮ್ಮ ಆಹಾರದೊಂದಿಗೆ ಸೇವಿಸುವುದರಿಂದ ಬಾಯಿಯ ಆರೋಗ್ಯದ ದೃಷ್ಟಿಯಲ್ಲಿ ಉತ್ತಮವಾಗಿದೆ. ಪ್ರತೀ ನಿತ್ಯ 3 ನಿಮಿಷಕ್ಕಿಂತ ಹೆಚ್ಚಾಗಿ ಈರುಳ್ಳಿಯನ್ನು ಜಗಿಯುವುದರಿಂದ ಇದು ಹಲ್ಲಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.ಈರುಳ್ಳಿಯನ್ನು ಹೇರಳವಾಗಿ ತಿನ್ನುವುದರಿಂದ ಇದು ದೇಹದಲ್ಲಿ ಉತ್ಪತ್ತಿಯಾಗುವ ಗ್ಲೂಕೋಸ್ ನ್ನು ಕಡಿಮೆ ಮಾಡಿ,ಇನ್ಸುಲಿನ್ ನ್ನು ಹೆಚ್ಚಾಗುವಂತೆ ಮಾಡುತ್ತದೆ.ಇದರಿಂದ ನಾವು ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: