AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಜ್ರಗಳಲ್ಲಿ ಎಷ್ಟೆಲ್ಲಾ ವಿಧಗಳಿವೆ, ಅವುಗಳ ನಡುವಿನ ವ್ಯತ್ಯಾಸವೇನು ಗೊತ್ತಾ?

ಅತ್ಯಂತ ಕಠಿಣವಾದ, ಹೊಳೆಯುವ ವಜ್ರದ ಹರಳಿನ ಆಭರಣಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಬಲು ಇಷ್ಟ. ಬಹುತೇಕರು ವಜ್ರದ ಹರಳುಗಳೆಲ್ಲಾ ಒಂದೇ ಎಂದು ಭಾವಿಸುತ್ತಾರೆ. ಆದ್ರೆ ಎಲ್ಲಾ ಹರಳು ಒಂದೇ ಅಲ್ಲ. ಅವುಗಳಲ್ಲಿಯೂ ಸಾಕಷ್ಟು ವಿಧಗಳಿವೆ, ಭಿನ್ನತೆಗಳಿವೆ. ಆ ವಿಧಗಳು ಯಾವುವು ಅವುಗಳ ನಡುವಿನ ವ್ಯತ್ಯಾಸಗಳೇನು ಎಂಬುದನ್ನು ತಿಳಿಯಿರಿ.

ವಜ್ರಗಳಲ್ಲಿ ಎಷ್ಟೆಲ್ಲಾ ವಿಧಗಳಿವೆ, ಅವುಗಳ ನಡುವಿನ ವ್ಯತ್ಯಾಸವೇನು ಗೊತ್ತಾ?
ವಜ್ರಗಳ ವಿಧಗಳುImage Credit source: vecteezy
ಮಾಲಾಶ್ರೀ ಅಂಚನ್​
|

Updated on: Dec 09, 2025 | 6:31 PM

Share

ಚಿನ್ನದ ಆಭರಣಗಳಂತೆ ವಜ್ರದ (diamonds) ಆಭರಣಗಳನ್ನು ಸಹ ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಈ ಎಲ್ಲಾ ರೀತಿಯ ವಜ್ರದ ಹರಳುಗಳು ಒಂದೇ ಎಂದು ಹಲವರು ಭಾವಿಸುತ್ತಾರೆ. ಆದರೆ ಒಂದೇ ರೀತಿ ಕಾಣುವ ವಜ್ರಗಳು ಒಂದೇ ಆಗಿರುವುದಿಲ್ಲ. ಅವುಗಳಲ್ಲಿಯೂ ಹಲವು ವಿಧಗಳಿವೆ, ಭಿನ್ನತೆಗಳಿವೆ. ಹೌದು ಹೊಳೆಯುವ ವಜ್ರಗಳು ಅವುಗಳ ವಿನ್ಯಾಸ, ಬಣ್ಣ, ರಾಸಾಯನಿಕ ಸಂಯೋಜನೆ ಮತ್ತು ಉತ್ಪಾದನಾ ಪ್ರಕ್ರಿಯೆಯಿಂದಾಗಿ ಪರಸ್ಪರ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಅದಕ್ಕಾಗಿಯೇ ಪ್ರತಿಯೊಂದು ವಜ್ರದ ಬೆಲೆ ಮತ್ತು ಗುಣಮಟ್ಟವು ಭಿನ್ನವಾಗಿರುತ್ತದೆ. ಹಾಗಿದ್ರೆ ವಜ್ರಗಳಲ್ಲಿ ಎಷ್ಟೆಲ್ಲಾ ವಿಧಗಳಿವೆ, ಅವುಗಳ ನಡುವಿನ ವ್ಯತ್ಯಾಸವೇನು ಎಂಬುದನ್ನು ನೋಡೋಣ ಬನ್ನಿ.

ವಜ್ರಗಳಲ್ಲಿ ಎಷ್ಟೆಲ್ಲಾ ವ್ಯತ್ಯಾಸಗಳಿವೆ?

ವಜ್ರಗಳನ್ನು ವಿಶಾಲವಾಗಿ ನೈಸರ್ಗಿಕ ವಜ್ರಗಳು ಮತ್ತು ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳು ಎಂದು ವರ್ಗೀಕರಿಸಲಾಗಿದೆ. ಇದರಲ್ಲಿ ನೈಸರ್ಗಿಕ ವಜ್ರಗಳು ಭೂಮಿಯ ಆಳದಲ್ಲಿ ಶತಕೋಟಿ ವರ್ಷಗಳ ಕಾಲ ಒತ್ತಡ ಮತ್ತು ಶಾಖದಲ್ಲಿ ರೂಪುಗೊಳ್ಳುತ್ತವೆ. ಆದ್ದರಿಂದ  ಇವುಗಳು ಸಾರಜನಕ ಮತ್ತು ಬೋರಾನ್‌ನಂತಹ ನೈಸರ್ಗಿಕ ಕಲ್ಮಶಗಳನ್ನು ಹೊಂದಿರುತ್ತವೆ, ಇದು ಅವುಗಳ ಬಣ್ಣ ಮತ್ತು ಹೊಳಪಿನ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳನ್ನು HPHT ಮತ್ತು CVD ತಂತ್ರಗಳನ್ನು ಬಳಸಿ ರಚಿಸಲಾಗುತ್ತದೆ. ಈ ವಜ್ರಗಳು ನಿಜವಾದ ವಜ್ರಗಳಂತೆಯೇ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳನ್ನು ಹೊಂದಿವೆ, ಇವುಗಳಿಗೆ ಹೋಲಿಸಿದರೆ ನೈಸರ್ಗಿಕ ವಜ್ರದ ಹರಳುಗಳ ಬೆಲೆ ಹೆಚ್ಚು.

ವಜ್ರದ ವಿಧಗಳು:

ವಜ್ರದ ಪ್ರಕಾರಗಳು ಅವುಗಳ ರಾಸಾಯನಿಕ ವರ್ಗವನ್ನು ನಿರ್ಧರಿಸುತ್ತವೆ. ಅವುಗಳೆಂದರೆ, ಟೈಪ್ Ia:  ಟೈಪ್ Ia ವಜ್ರಗಳು ಸಮೂಹಗಳಲ್ಲಿ ಸಾರಜನಕವನ್ನು ಹೊಂದಿರುತ್ತವೆ, ಆದ್ದರಿಂದ ಇದು ಹಳದಿ ಅಥವಾ ಕಂದು ಬಣ್ಣವನ್ನು ಹೊಂದಿರುತ್ತವೆ. ಟೈಪ್ Ib: ಟೈಪ್ Ib ವಜ್ರಗಳು ಏಕ ಪರಮಾಣುಗಳಾಗಿ ಸಾರಜನಕವನ್ನು ಹೊಂದಿರುತ್ತವೆ, ಅವುಗಳು ಗಾಢ ಹಳದಿ ಬಣ್ಣವನ್ನು ಹೊಂದಿರುತ್ತವೆ. ಇವು ನೈಸರ್ಗಿಕ ವಜ್ರಗಳಲ್ಲಿ ವಿರಳವಾಗಿ ಕಂಡುಬರುತ್ತವೆ. ಟೈಪ್ IIa: ಟೈಪ್ IIa ವಜ್ರಗಳು ವಿಶ್ವದ ಅತ್ಯಂತ ಶುದ್ಧ ಮತ್ತು ಅತ್ಯಂತ ಪಾರದರ್ಶಕ ವಜ್ರಗಳಾಗಿವೆ. ಈ ವಜ್ರಗಳು ಕಲ್ಮಶಗಳಿಂದ ಮುಕ್ತವಾಗಿವೆ ಮತ್ತು ಹೆಚ್ಚು ಸ್ಪಷ್ಟವಾಗಿವೆ. ಪ್ರಸಿದ್ಧ ಕೊಹಿನೂರ್ ವಜ್ರವು ಸಹ ಈ ಪ್ರಕಾರಕ್ಕೆ ಸೇರಿದೆ. ಟೈಪ್ IIb: ಟೈಪ್ IIb ವಜ್ರಗಳು ಬೋರಾನ್ ಸಂಯುಕ್ತವನ್ನು ಹೊಂದಿರುತ್ತವೆ, ಈ ಕಾಋಣದಿಂದ ಈ ಪ್ರಕಾರದ ವಜ್ರಗಳು ನೀಲಿ ಅಥವಾ ಬೂದು ಬಣ್ಣದಿಂದ ಕೂಡಿರುತ್ತವೆ.

ಇದನ್ನೂ ಓದಿ: ಮರಣ ಹೊಂದಿದವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಬಿಳಿ ಬಣ್ಣದ ಬಟ್ಟೆಗಳನ್ನೇ ಧರಿಸೋದೇಕೆ ಗೊತ್ತಾ?

ವಜ್ರಗಳ ಬಣ್ಣದ ಮಹತ್ವ:

ವಜ್ರದ ಬಣ್ಣವು ಅದರ ಮೌಲ್ಯ ಮತ್ತು ವಿರಳತೆಯನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅತ್ಯಂತ ಪ್ರೀಮಿಯಂ ಮತ್ತು ದುಬಾರಿ ವಜ್ರಗಳು ಸಂಪೂರ್ಣವಾಗಿ ಬಣ್ಣರಹಿತವಾಗಿವೆ. ಸಾರಜನಕವನ್ನು ಹೊಂದಿರುವ ವಜ್ರಗಳು ಹಳದಿ ಮತ್ತು ಕಂದು ಬಣ್ಣದ್ದಾಗಿದ್ದರೆ, ಬೋರಾನ್ ಸಂಯುಕ್ತ ಹೊಂದಿರುವ ವಜ್ರಗಳು ನೀಲಿ ಬಣ್ಣದ್ದಾಗಿರುತ್ತವೆ. ಗುಲಾಬಿ, ಕೆಂಪು ಮತ್ತು ಹಸಿರು ವಜ್ರಗಳು ಸಹ ಅಸ್ತಿತ್ವದಲ್ಲಿವೆ, ಅವು ಅತ್ಯಂತ ಅಪರೂಪ ಮತ್ತು ಸೀಮಿತ ಪ್ರಮಾಣದಲ್ಲಿ ಕಂಡುಬರುತ್ತವೆ. ಅವುಗಳನ್ನು ವಿಶ್ವದ ಅತ್ಯಂತ ದುಬಾರಿ ಹರಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ