
ಮುಟ್ಟಿನ ಸಮಯದಲ್ಲಿ (Menstruation) ಹೆಣ್ಣಿಗೆ ಹೆಚ್ಚು ಪುಣ್ಯದ ಕ್ಷಣ ಎಂದು ಹೇಳಲಾಗುತ್ತದೆ. ಇದು ಶಾಪವಲ್ಲ ವರ, ಆದರೆ ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ ಏಕೆಂದರೆ ಇದು ದೇಹದ ಆರೋಗ್ಯ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಮುಟ್ಟು ಒಂದು ನೈಸರ್ಗಿಕ ಜೈವಿಕ ಪ್ರಕ್ರಿಯೆ, ಮುಟ್ಟಿನ ಸಮಯದಲ್ಲಿ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ HT (hindustan times) ನಡೆಸಿದ ಸಂದರ್ಶನದಲ್ಲಿ ದೆಹಲಿಯ CK ಬಿರ್ಲಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಪ್ರಮುಖ ಸಲಹೆಗಾರ್ತಿ ಡಾ. ಮಂಜುಷಾ ಗೋಯೆಲ್ ಮಾತನಾಡಿದ್ದಾರೆ. ಅನೇಕ ಮಹಿಳೆಯರಲ್ಲಿ ಈ ಪ್ರಶ್ನೆ ಕಾಡಿರಬಹುದು ಮುಟ್ಟಿನ ಸಮಯದಲ್ಲಿ ಹೆಚ್ಚಾಗಿ ಸ್ನಾನ ಮಾಡಬೇಕೇ? ಎಂಬುದು. ಸ್ನಾನ ಮಾಡಬೇಕು, ಆದರೆ ಅದು ಅತಿಯಾಗಬಾರದು.
ದಿನಕ್ಕೆ ಒಂದು ಬಾರಿ ಸ್ನಾನ ಮಾಡಿ. ಮುಟ್ಟಿನ ಸಮಯದಲ್ಲಿ ಶುಚಿತ್ವ ಮತ್ತು ಸೌಕರ್ಯವನ್ನು ಕಾಪಾಡಿಕೊಳ್ಳಲು ದೈನಂದಿನ ಸ್ನಾನವು ಸಾಮಾನ್ಯವಾಗಿ ಸಾಕಾಗುತ್ತದೆ. ಇನ್ನು ಮುಟ್ಟಿನ ಸಮಯದಲ್ಲಿ ರಕ್ತಸ್ರಾವ, ಬೆವರುವಿಕೆ ಅನುಭವಿಸದಿದ್ದರೆ, ಸಾಮಾನ್ಯವಾಗಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡುವ ಅಗತ್ಯವಿಲ್ಲ. ರಕ್ತಸ್ರಾವವಾದರೆ ತಕ್ಷಣವೇ ತೊಳೆದುಕೊಳ್ಳಿ, ಇದು ವಾಸನೆ ಅಥವಾ ಕಿರಿಕಿರಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ದಿನಕ್ಕೆ ಒಮ್ಮೆ ಬೆಚ್ಚಗಿನ ಸ್ನಾನ ಮಾಡುವುದು ಉತ್ತಮವಲ್ಲ, ಬಿಸಿನೀರು ಶಮನಕಾರಿ ಎನಿಸಿದರೂ, ಅದು ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ತಾತ್ಕಾಲಿಕವಾಗಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಸ್ನಾನದ ಸಮಯದಲ್ಲಿ,ಜನನಾಂಗದ ಹೊರಗಿನ ಪ್ರದೇಶವಾದ ಯೋನಿಯನ್ನು ಮಾತ್ರ ನೀರು ಅಥವಾ ಸೌಮ್ಯವಾದ, ಸುಗಂಧ ರಹಿತ ಸೋಪ್ ಬಳಸಿ ನಿಧಾನವಾಗಿ ಸ್ವಚ್ಛಗೊಳಿಸುವುದು ಮುಖ್ಯ. ಯೋನಿಯು ಸ್ವಯಂ-ಶುದ್ಧೀಕರಣಗೊಳ್ಳುತ್ತದೆ, ಆದ್ದರಿಂದ ಆಂತರಿಕವಾಗಿ ಸೋಪ್‌ಗಳು ಬಳಸುವುದರಿಂದ ಅದರ ನೈಸರ್ಗಿಕ pH ಸಮತೋಲನವನ್ನು ಅಡ್ಡಿಪಡಿಸಬಹುದು ಮತ್ತು ಕಿರಿಕಿರಿ ಅಥವಾ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ತುಳಸಿಯನ್ನು ಅಗಿಯಬೇಡಿ, ಇದು ದೊಡ್ಡ ಅಪಾಯಕಾರಿ ಅಭ್ಯಾಸ
ಮುಟ್ಟಿನ ಉತ್ಪನ್ನ : ಮುಟ್ಟಿನ ಉತ್ಪನ್ನಗಳನ್ನು ನಿಯಮಿತವಾಗಿ ಬದಲಾಯಿಸುವುದು ಅಗತ್ಯ. ಪ್ಯಾಡ್‌ಗಳು ಮತ್ತು ಟ್ಯಾಂಪೂನ್‌ಗಳನ್ನು ಪ್ರತಿ 4 ರಿಂದ 6 ಗಂಟೆಗಳಿಗೊಮ್ಮೆ ಬದಲಾಯಿಸಬೇಕು. ಮುಟ್ಟಿನ ಕಪ್‌ಗಳನ್ನು ಬಳಸುವವರಿಗೆ, ಇವುಗಳನ್ನು ಹೆಚ್ಚಾಗಿ 12 ಗಂಟೆಗಳವರೆಗೆ ಬಳಸಬಹುದು ಆದರೆ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ತಡೆಗಟ್ಟಲು ಭಾರೀ ರಕ್ತಸ್ರಾವದ ದಿನಗಳಲ್ಲಿ ಹೆಚ್ಚಾಗಿ ಇದನ್ನು ಬದಲಾಯಿಸಬೇಕಾಗುತ್ತದೆ.
ಬಟ್ಟೆಗಳನ್ನು ಉಪಯೋಗಿಸಿ: ಹತ್ತಿಯಿಂದ ಮಾಡಿದ ಸ್ವಚ್ಛವಾದ ಒಳ ಉಡುಪುಗಳನ್ನು ಈ ಸಂದರ್ಭದಲ್ಲಿ ಧರಿಸುವುದರಿಂದ ತೇವಾಂಶ ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ, ಇದು ಅಸ್ವಸ್ಥತೆ ಅಥವಾ ಸೋಂಕುಗಳಿಗೆ ಕಾರಣವಾಗಬಹುದು. ಈ ಸಮಯದಲ್ಲಿ ಬಿಗಿಯಾದ ಅಥವಾ ಸಂಶ್ಲೇಷಿತ ಬಟ್ಟೆಗಳನ್ನು ಧರಿಸಬೇಡಿ.
ಒರೆಸುವ ತಂತ್ರ : ಮುಟ್ಟಿನ ನೈರ್ಮಲ್ಯದ ಮತ್ತೊಂದು ಪ್ರಮುಖ ಭಾಗ ಸರಿಯಾದ ಒರೆಸುವ ತಂತ್ರ. ಇದು ನಿಮ್ಮಲ್ಲಿ ಸೋರಿಕೆ ಅಥವಾ ರಕ್ತಸ್ರಾವದ ಸಂದರ್ಭದಲ್ಲಿ ಈ ತಂತ್ರ ಉಪಯೋಗಕ್ಕೆ ಬರುತ್ತದೆ. ಯಾವಾಗಲೂ ಮುಂಭಾಗದಿಂದ ಹಿಂದಕ್ಕೆ ಒರೆಸುವುದರಿಂದ ಮೂತ್ರ ಅಥವಾ ಯೋನಿ ಪ್ರದೇಶಕ್ಕೆ ಬ್ಯಾಕ್ಟೀರಿಯಾ ಹರಡುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ