ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಮನೆಯಲ್ಲಿ ಹೇಗೆ ಆಚರಿಸಬಹುದು?

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2023 | 10:28 AM

ಪಶ್ಚಿಮ ಘಟ್ಟಗಳಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಭಾರತದ ಆರನೇ ಅತಿ ದೊಡ್ಡ ಹಾಗೂ ಜನಸಂಖ್ಯೆ ಆಧಾರದಲ್ಲಿ ಎಂಟನೇ ಅತಿ ದೊಡ್ಡ ರಾಜ್ಯವಾಗಿದೆ. ಇಂತಹ ಹಲವು ಹೆಮ್ಮೆ ನಮ್ಮ ಕರ್ನಾಟಕಕ್ಕಿದೆ. ಈ ದಿನ ಮಕ್ಕಳಿಗೆ ಕನ್ನಡ ಮತ್ತು ಕನ್ನಡ ರಾಜ್ಯೋತ್ಸವದ ಕುರಿತಾಗಿ ಹಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಮನೆ ಮನೆಗಳಲ್ಲಿಯೂ ಹಬ್ಬವಾಗಿ ಸಂಭ್ರಮಿಸಬಹುದು.

ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಮನೆಯಲ್ಲಿ ಹೇಗೆ ಆಚರಿಸಬಹುದು?
ಸಾಂದರ್ಭಿಕ ಚಿತ್ರ
Follow us on

ಪಶ್ಚಿಮ ಘಟ್ಟಗಳಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಭಾರತದ ಆರನೇ ಅತಿ ದೊಡ್ಡ ಹಾಗೂ ಜನಸಂಖ್ಯೆ ಆಧಾರದಲ್ಲಿ ಎಂಟನೇ ಅತಿ ದೊಡ್ಡ ರಾಜ್ಯವಾಗಿದೆ. ಇಂತಹ ಹಲವು ಹೆಮ್ಮೆ ನಮ್ಮ ಕರ್ನಾಟಕಕ್ಕಿದೆ. ಈ ದಿನ ಮಕ್ಕಳಿಗೆ ಕನ್ನಡ ಮತ್ತು ಕನ್ನಡ ರಾಜ್ಯೋತ್ಸವದ ಕುರಿತಾಗಿ ಹಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಮನೆ ಮನೆಗಳಲ್ಲಿಯೂ ಹಬ್ಬವಾಗಿ ಸಂಭ್ರಮಿಸಬಹುದು. ಹಾಗಾದರೆ ಕರ್ನಾಟಕ ಎಂಬ ಹೆಸರು ಬಂದಿದ್ದು ಹೇಗೆ? ಹಳದಿ- ಕೆಂಪು ಬಾವುಟವನ್ನು ಯಾರು ತಯಾರಿಸಿದರು? ಈ ದಿನವನ್ನು ಹೇಗೆ ಆಚರಣೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಕರ್ನಾಟಕ ಎಂಬ ಹೆಸರು ಬಂದಿದ್ದು ಹೇಗೆ?

ಕರ್ನಾಟಕ ಪದದ ಮೂಲ ಸಂಸ್ಕೃತ. ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿದೆ. ಕನ್ನಡಿಗರ ನಾಡು, ಕನ್ನಾಡು, ಕನ್ನಡ ನಾಡು ಎಂಬುದು ಇದರ ಅರ್ಥ. ಆದರೆ ಕರ್ನಾಟಕ ಎಂಬ ಪದದ ಹುಟ್ಟು ಅಥವಾ ಅರ್ಥದ ಬಗ್ಗೆ ಇನ್ನೂ ಹಲವು ಅಭಿಪ್ರಾಯಗಳು ಇವೆ. ಕರು + ನಾಡು = ಕರುನಾಡು ಎಂಬ ಪದವು ಕರ್ನಾಟಕವಾಯಿತು ಎನ್ನಲಾಗುತ್ತದೆ. ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದೂ ಸಹ ಹೇಳಲಾಗುತ್ತದೆ. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ.

ಹಳದಿ- ಕೆಂಪು ಬಾವುಟ

ಕರ್ನಾಟಕ ರಾಜ್ಯವು ತನ್ನದೆ ಆದ ಬಾವುಟವನ್ನು ಹೊಂದಿದೆ. ಕನ್ನಡ ಹೋರಾಟಗಾರ ಎಂ ರಾಮಮೂರ್ತಿಯವರು ಈ ಹಳದಿ -ಕೆಂಪು ಬಾವುಟವನ್ನು ಪ್ರಥಮ ಬಾರಿಗೆ ತಯಾರಿಸಿ, ಬಳಸಿದ್ದರು. ನಮ್ಮ ಕರ್ನಾಟಕ ಹಳದಿ- ಕೆಂಪು ಬಣ್ಣದ ಸಾಂಸ್ಕೃತಿಕ ಬಾವುಟವನ್ನು ಹೊಂದಿದೆ. ಇದನ್ನು ಮನೆ ಮನೆಗಳಲ್ಲಿ ರಾರಾಜಿಸುವಂತೆ ಮಾಡಿ. ಪುಷ್ಪಗಳನ್ನು ಹಾಕಿ ಪೂಜಿಸಿ. ನಮ್ಮ ಹುಟ್ಟು ಈ ಪುಣ್ಯ ನೆಲದಲ್ಲಿ ಆಗಿದ್ದಕ್ಕಾಗಿ ತಾಯಿ ಮಾತೆಯನ್ನು ಪೂಜಿಸಿ, ನಮಸ್ಕರಿಸಿ. ಇನ್ನು ಈಗಿನ ಟ್ರೆಂಡ್ ಗೆ ಹೊಂದಿಕೊಳ್ಳುವರಾಗಿದ್ದರೆ ಕೆಂಪು, ಹಳದಿ ಬಣ್ಣದ ಬಟ್ಟಗಳನ್ನು ಹಾಕಿ ಸಂಭ್ರಮಿಸಬಹುದು.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಸಂದಿವೆ. ಈ ಹಿನ್ನಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಉದ್ದೇಶಿಸಿದ್ದು ಸರಕಾರ ಈ ದಿನದ ಕಾರ್ಯಕ್ರಮದ ಸ್ವರೂಪವನ್ನು ಸಿದ್ಧಪಡಿಸಿದೆ. ಈ ನಿಯಮಗಳು ಕೂಡ ಸರಳವಾಗಿದ್ದು ಈ ರೀತಿಯಲ್ಲಿಯೂ ನೀವು ಈ ಹಬ್ಬವನ್ನು ಆಚರಣೆ ಮಾಡಬಹುದು.

ಇದನ್ನೂ ಓದಿ:ಕನ್ನಡ ರಾಜ್ಯೋತ್ಸವದಂದು ನಮ್ಮ ಸೊಗಡಿನ ಮೂಲಕ ಸಂದೇಶ ಕಳುಹಿಸಿ, ಶುಭ ಕೋರಿ!

ಈ ದಿನ ಮಕ್ಕಳು ಕೂಡ ಮನೆಯಲ್ಲಿರುವುದರಿಂದ ಅವರಿಗೆ ಒಂದು ರಜಾ ದಿನ ಎಂದು ತಿಳಿಸುವ ಬದಲು ಈ ದಿನದ ಹಿನ್ನಲೆ, ಇತಿಹಾಸಗಳ ಬಗೆಗೆ ತಿಳಿಸಿ. ನಮ್ಮ ಕನ್ನಡ ಕವಿಗಳ ಪರಿಚಯ ಮಾಡಿಸಿ, ಅವರು ಬರೆದ ಸಾಲುಗಳನ್ನು ಮಕ್ಕಳಿಗೆ ಹೇಳಿಸುವ ಮೂಲಕ ಅರ್ಥಗರ್ಭಿತವಾಗಿ ಈ ದಿನವನ್ನು ಆಚರಣೆ ಮಾಡಬಹುದು. ಇದರ ಜೊತೆಗೆ ಮಕ್ಕಳಿಗೆ ಆಹಾರ ಬಟ್ಟೆ, ಪುಸ್ತಕವನ್ನು ನೀಡುವ ಮೂಲಕವೂ ಈ ದಿನ ಆಚರಣೆ ಮಾಡಬಹುದು. ಕನ್ನಡವನ್ನು ಎಲ್ಲರೂ ಸ್ಪಷ್ಟವಾಗಿ ಕಲಿತು ಎಲ್ಲರಿಗೂ ಕಲಿಸೋಣ. ಕನ್ನಡದ ಕಂಪನ್ನು ಸಾರೋಣ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ