ನಾವಿಂದು ಸ್ಮಾರ್ಟ್ ಯುಗದಲ್ಲಿದ್ದೇವೆ. ಹೀಗಾಗಿ ಸ್ಮಾರ್ಟ್ ಫೋನ್ ಬಳಕೆಯು ಹೆಚ್ಚಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ವರೆಗೆ ಎಲ್ಲರಿಗೂ ಮೊಬೈಲ್ ಎನ್ನುವುದು ಅಗತ್ಯವಾದ ವಸ್ತುವಾಗಿ ಬಿಟ್ಟಿದೆ. ಅದಲ್ಲದೇ ಈ ಮಕ್ಕಳಿಗೆ ಮೊಬೈಲ್ ಕೊಟ್ಟರೆ ಊಟ, ತಿಂಡಿ ಮಾಡುವಂತಹ ಪರಿಸ್ಥಿತಿಯು ನಿರ್ಮಾಣವಾಗಿದೆ. ಈ ಅತಿಯಾದ ಮೊಬೈಲ್ ವೀಕ್ಷಣೆಯು ಸಣ್ಣ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಇದು ಹೆತ್ತವರಲ್ಲಿ ಆತಂಕವನ್ನು ಸೃಷ್ಟಿಸಿದೆ.
* ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಿ : ಮಕ್ಕಳ ಮುಂದೆ ಪೋಷಕರಾದ ನೀವುಗಳು ಅತಿಯಾಗಿ ಮೊಬೈಲ್ ವೀಕ್ಷಣೆ ಮಾಡಬೇಡಿ. ಕೆಲವು ಮಕ್ಕಳು ಹೆತ್ತರೊಂದಿಗೆ ಸೇರಿ ಫೋನ್ ನೋಡುತ್ತಾ ಕುಳಿತುಕೊಳ್ಳುತ್ತಾರೆ. ಕೊನೆಗೆ ಬಿಡುವಿನ ಸಮಯದಲ್ಲಿ ಫೋನ್ ಬೇಕೆಂದು ಹಠ ಮಾಡುವುದನ್ನು ಕಾಣಬಹುದು. ಒಂದು ವೇಳೆ ಫೋನ್ ಕೈಗೆ ಸೇರಿದಂತೆ ಅದರಲ್ಲೇ ಕಾಲ ಕಳೆಯಬಹುದು. ಹೀಗಾಗಿ ಮಕ್ಕಳ ಮುಂದೆ ಪೋಷಕರು ಫೋನ್ ಬಳಕೆ ಮಾಡುವುದನ್ನು ಆದಷ್ಟು ತಪ್ಪಿಸಿ.
* ಮಕ್ಕಳಿಗೆ ದೈಹಿಕ ಆಟಕ್ಕೆ ಪ್ರೋತ್ಸಾಹಿಸಿ : ಒಂದು ವೇಳೆ ಫೋನ್ ಕೊಟ್ಟರೆ ಮಕ್ಕಳ ಪ್ರಪಂಚವೇ ಅದಾಗಿ ಬಿಡುತ್ತದೆ. ರಜಾ ದಿನಗಳಲ್ಲಿ ಮಕ್ಕಳನ್ನು ಹೊರಗೆ ಆಟ ಆಡಲು ಬಿಡುವುದು ಉತ್ತಮ..ಇತರೆ ಮಕ್ಕಳ ಜೊತೆ ಬೆರೆಯಲು ಬಬಿಡುವುದರಿಂದ ಮಕ್ಕಳು ಚುರುಕಾಗುವುದಲ್ಲದೆ, ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ.
* ಊಟ ತಿಂಡಿ ಮಾಡುವಾಗ ಮೊಬೈಲ್ ನೀಡಬೇಡಿ: ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಊಟ ತಿಂಡಿ ಮಾಡುವುದಿಲ್ಲ ಎಂದು ಊಟದ ಸಮಯದಲ್ಲಿ ಮಕ್ಕಳಿಗೆ ಮೊಬೈಲ್ ನೀಡುವುದನ್ನು ಆದಷ್ಟು ತಪ್ಪಿಸಿ. ಮಕ್ಕಳೇನು ಆಹಾರ ಸೇವಿಸುತ್ತರೇನೋ ನಿಜ, ಆದರೆ ಮೊಬೈಲ್ ಬಳಕೆಯು ಅತಿಯಾಗಲು ಇದೇ ಕಾರಣವಾಗುತ್ತದೆ.
ಮತ್ತಷ್ಟು ಓದಿ: Cleaning Tips : ಮನೆಯ ಸ್ವಚ್ಛತೆಗೂ ಇರಲಿ ಟೈಮ್ ಟೇಬಲ್, ಸ್ವಚ್ಛತೆ ಹೇಗಿರಬೇಕು? ಇಲ್ಲಿದೆ ನೋಡಿ
* ಮಕ್ಕಳೊಂದಿಗೆ ಸಮಯ ಕಳೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿದೆ. ಹೀಗಾಗಿ ಪೋಷಕರು ಮಕ್ಕಳ ಜೊತೆಗೆ ಸಮಯ ಕಳೆಯಿರಿ. ಅವರೊಂದಿಗೆ ಆಟ ಆಡುವ ಮೂಲಕ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಿ. ಹೆತ್ತವರು ಮಕ್ಕಳೊಂದಿಗೆ ಇದ್ದರೆ ನಿಮ್ಮ ಮೇಲೆ ನಂಬಿಕೆಯು ಹೆಚ್ಚುತ್ತದೆ. ಹೀಗಾಗಿ ಮೊಬೈಲ್ ನೋಡುವುದನ್ನು ಕಡಿಮೆ ಮಾಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ