ಪುರುಷರೇ, ನೀವು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೇ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 13, 2025 | 6:09 PM

ಸೌಂದರ್ಯ ಎಂದಾಗ ಮೊದಲು ನೆನಪಾಗುವುದೇ ಈ ಮಹಿಳೆಯರು. ಪುರುಷರು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಕಡಿಮೆ. ತ್ವಚೆಯ ಆರೈಕೆಗೆ ಸಮಯ ಕೊಡುವುದಿಲ್ಲ ಎಂದು ಹೇಳುವುದನ್ನು ಕೇಳಿರಬಹುದು. ಮಹಿಳೆಯರಿಗೆ ಹೋಲಿಕೆ ಮಾಡಿದರೆ ಪುರುಷರಿಗೆ ಸೌಂದರ್ಯದ ಬಗ್ಗೆ ಆಸಕ್ತಿ ಕಡಿಮೆಯೇ ಎನ್ನಬಹುದು. ಒಂದು ವೇಳೆ ನೀವು ಸುಂದರವಾಗಿ ಕಾಣಿಸಬೇಕೆಂದರೆ ಈ ಕೆಲವು ಸಲಹೆಗಳನ್ನು ತಪ್ಪದೇ ಪಾಲಿಸಿ.

ಪುರುಷರೇ, ನೀವು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೇ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ಪ್ರತಿಯೊಬ್ಬರಿಗೂ ಕೂಡ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು, ಹಿಂದೆ ತಿರುಗಿ ನೋಡಬೇಕು ಎನ್ನುವುದಿರುತ್ತದೆ. ಆದರೆ ಹುಡುಗಿಯರಿಗೆ ಹೋಲಿಸಿದ್ರೆ ಹುಡುಗರಲ್ಲಿ ಈ ಸೌಂದರ್ಯದ ಬಗ್ಗೆ ಕಾಳಜಿ ಕಡಿಮೆಯೇ. ತ್ವಚೆಯಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡರೆ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಆದರೆ ನೀವು ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ಆಕರ್ಷಕವಾಗಿ ಕಾಣಿಸಿಕೊಳ್ಳಲು ಬಯಸಿದ್ರೆ ಈ ಕೆಲಸಗಳನ್ನು ಮೊದಲು ಮಾಡಿ. ಹೀಗೆ ಮಾಡಿದ್ರೆ ಎಲ್ಲರೂ ನಿಮ್ಮತ್ತ ತಿರುಗಿ ನೋಡ್ತಾರೆ.

  • ಪುರುಷರು ಕೂಡ ತ್ವಚೆಯ ಆರೈಕೆ ಮಾಡುವುದು ಬಹಳ ಮುಖ್ಯ. ಹೀಗಾಗಿ ಒಣಮುಖವನ್ನು ಹೊಳೆಯುವಂತೆ ಮಾಡುವ ಮತ್ತು ಮುಖದಲ್ಲಿರುವ ಹೆಚ್ಚುವರಿ ಎಣ್ಣೆ ಅಂಶ ಹೊಂದಿದ್ದರೆ, ಕ್ರೀಮ್‎ ಬಳಸುವುದು ಸೂಕ್ತ. ಅದಲ್ಲದೇ, ಕಲೆಯನ್ನು ನಿವಾರಿಸುವ ಕ್ರೀಮ್ ಗಳು ಲಭ್ಯವಿದ್ದು, ಅದರಲ್ಲಿ ಈ ಕನ್ಸಿಲರ್‎ಗಳು ಕಪ್ಪು ಕಲೆಗಳನ್ನು ನಿವಾರಿಸಿ ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ.
  • ಸನ್ ಸ್ಕ್ರೀನ್ ಲೋಷನ್ ಬಳಸುವುದು ಬಹಳ ಮುಖ್ಯ. ಬಿಸಿಲಿನಲ್ಲಿ ಹೊರಗೆ ಹೋಗುತ್ತಿದ್ದರೆ ಸನ್ ಸ್ಕ್ರೀನ್ ಬಳಸುವುದು ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ. ಸೂರ್ಯನ ಕಿರಣ ಮಹಿಳೆಯರಿಗಿಂತ ಪುರುಷರ ಚರ್ಮವನ್ನೂ ಹೆಚ್ಚು ಹಾನಿಗೊಳಿಸುತ್ತದೆ. ಹೀಗಾಗಿ ಸನ್ ಸ್ಕ್ರೀನ್ ಬಳಸುವುದು ಅತ್ಯಗತ್ಯ.
  • ಗಡ್ಡ ಮೀಸೆಯ ಕಡೆಗೆ ಗಮನ ಕೊಡುವ ಮೂಲಕ ನೀವು ಸುಂದರವಾಗಿ ಕಾಣಿಸಿಕೊಳ್ಳಬಹುದು. ಹೀಗಾಗಿ ಪ್ರೆಂಚ್ ಕಟ್, ಟ್ರಿಮ್ ಗಡ್ಡ ಹೀಗೆ ನಿಮಗಿಷ್ಟವಾದ ರೀತಿಯಲ್ಲಿ ಗಡ್ಡ ಹಾಗೂ ಕೂದಲನ್ನು ಸೆಟ್ ಮಾಡಿಸಿಕೊಳ್ಳಿ. ಕೆಲವರಿಗೆ ಗಡ್ಡ ಹಾಗೂ ಮೀಸೆ ಬೇಗನೇ ಬರುತ್ತದೆ. ಅಂತಹವರು ಗಡ್ಡ ಮತ್ತು ಮೀಸೆಯನ್ನು ಟ್ರಿಮ್ ಮಾಡುವತ್ತ ಗಮನ ಕೊಡಿ. ಇದು ನಿಮ್ಮ ಮುಖವನ್ನು ನೀಟ್ ಆಗಿ ಕಾಣುವಂತೆ ಮಾಡುತ್ತದೆ.
  • ಹೆಣ್ಣು ಮಕ್ಕಳಂತೆ ಪುರುಷರನ್ನು ಈ ಮೊಡವೆ ಸಮಸ್ಯೆಗಳು ಕಾಡುತ್ತದೆ. ಮುಖದ ತುಂಬಾ ಮೊಡವೆಯಿದ್ದರೆ ಶೇವ್ ಮಾಡುವುದು ಕಷ್ಟವಾಗಬಹುದು. ಆದರೆ ಮೊಡವೆ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಸುವುದಕ್ಕಿಂತ ಮನೆಯಲ್ಲೇ ಸಿಗುವ ವಸ್ತು ಬಳಸುವುದು ಉತ್ತಮ. ಹೀಗಾಗಿ ಅಡುಗೆ ಮನೆಯಲ್ಲಿ ಇರುವ ವಸ್ತುಗಳನ್ನೇ ಬಳಸಿ ಮೊಡವೆ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.
  • ನೀವು ಧರಿಸುವ ಬಟ್ಟೆಗಳು ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಹೀಗಾಗಿ ಸಂದರ್ಭಕ್ಕೆ ತಕ್ಕಂತೆ ಉಡುಗೆ ಧರಿಸುವುದು ಉತ್ತಮ. ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಬಣ್ಣಗಳು, ಟ್ರೆಂಡ್ ನಲ್ಲಿರುವ ಉಡುಗೆಗಳತ್ತ ಗಮನ ಕೊಡಿ. ಬಟ್ಟೆಗಳ ಆಯ್ಕೆಯು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ