AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vidura Niti: ಜೀವನದಲ್ಲಿ ಈ ವಿಷಯಗಳಿಂದ ದೂರವಿದ್ದರೆ ಯಶಸ್ಸು ಖಂಡಿತ ಎನ್ನುತ್ತಾನೆ ವಿದುರ

ಯಶಸ್ಸು ಎಂಬ ಮೂರಕ್ಷರ ಕೇಳುವುದಕ್ಕೆ ಎಷ್ಟು ಖುಷಿಯಾಗುತ್ತದೆಯೋ, ಆದರೆ ಅದನ್ನು ಗಳಿಸಬೇಕಾದರೆ ಕಠಿಣ ಪರಿಶ್ರಮವು ಅತ್ಯಗತ್ಯ. ಹಾಗಂತ ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅದೆಷ್ಟೋ ಸಲ ಗುರಿಯತ್ತ ಹೆಜ್ಜೆ ಹಾಕುವಾಗ ಸೋಲು ಎದುರಾಗಬಹುದು. ಈ ವೇಳೆಯಲ್ಲಿ ನಿರಂತರ ಪ್ರಯತ್ನಗಳು ಇರಲೇಬೇಕು. ಜೀವನದಲ್ಲಿ ಯಶಸ್ಸು ಗಳಿಸಲು ಈ ವಿಷಯಗಳಿಂದ ದೂರವಿರಿ ಎಂದಿದ್ದಾನೆ ವಿದುರ. ಆತನ ಈ ಸಲಹೆಯೊಂದಿಗೆ ಗುರಿಯೆಡೆಗೆ ಗಮನ ಹರಿಸಿದರೆ ಯಶಸ್ಸು ಲಭಿಸುವುದು ಖಂಡಿತ. ಹಾಗಾದ್ರೆ ಯಶಸ್ಸು ಸಾಧಿಸಲು ವಿದುರನು ನೀಡುವ ಸಲಹೆಗಳೇನು? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Vidura Niti: ಜೀವನದಲ್ಲಿ ಈ ವಿಷಯಗಳಿಂದ ದೂರವಿದ್ದರೆ ಯಶಸ್ಸು ಖಂಡಿತ ಎನ್ನುತ್ತಾನೆ ವಿದುರ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 13, 2025 | 3:42 PM

Share

ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಈ ಮೂರಕ್ಷರಕ್ಕಾಗಿಯೇ ಹೋರಾಡುತ್ತಾನೆ. ಯಶಸ್ಸು ಸಿಕ್ಕಿ ಬಿಟ್ಟರೆ ಈ ವ್ಯಕ್ತಿಯನ್ನು ಪ್ರಪಂಚದಲ್ಲಿ ಹಿಡಿಯಲೂ ಸಾಧ್ಯವೇ ಇಲ್ಲ. ಆದರೆ ಈ ಯಶಸ್ಸಿಗಾಗಿ ಒಂದಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ. ನಮಗೆ ನಾವೇ ಧೈರ್ಯ ಹಾಗೂ ಬೆಂಬಲವನ್ನು ನೀಡದೇ ಇದ್ದರೆ ಯಶಸ್ಸಿನ ದಾರಿ ಕಷ್ಟವಾಗಿರುತ್ತದೆ. ಅದಲ್ಲದೇ, ವಿದುರನು ಗುರಿ ಸಾಧಿಸಲು ಪ್ರಯತ್ನ ಮಾಡುವುದರೊಂದಿಗೆ ಈ ಕೆಲವು ವಿಷಯಗಳಿಂದ ದೂರವಿರಬೇಕು ಎಂದು ಎಚ್ಚರಿಸಿದ್ದಾನೆ.

* ಸೋಮಾರಿತನ : ಜೀವನದಲ್ಲಿ ಯಶಸ್ಸು ನಿಮ್ಮದಾಗಬೇಕೆಂದರೆ ಸೋಮಾರಿತನದಿಂದ ದೂರವಿರಿ ಎನ್ನುತ್ತಾನೆ ವಿದುರ. ಈ ಗುಣವನ್ನು ಹೊಂದಿರುವ ವ್ಯಕ್ತಿಯು ತಾನು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಯಾವುದೇ ಕೆಲಸವಿದ್ದರೂ ನಾಳೆ ಮಾಡುವ ಎನ್ನುವ ಮನೋಭಾವವಿದ್ದರೆ ಆ ಕೆಲಸವು ಪೂರ್ಣಗೊಳ್ಳುವುದಿಲ್ಲ. ಅಂತಹ ವ್ಯಕ್ತಿಗಳು ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸುವುದಿಲ್ಲ. ಜೀವನದಲ್ಲಿ ಯಶಸ್ಸು ನಿಮ್ಮದಾಗಲು ಅಲಸ್ಯತನ ಹಾಗೂ ಸೋಮಾರಿತನದಿಂದ ದೂರವಿರುವುದು ಉತ್ತಮ.

* ದೇವರ ಮೇಲೆ ಅವಲಂಬಿತರಾಗಿರುವುದು : ಕೆಲವರಿಗೆ ಏನೇ ಆದರೂ ಕೂಡ ದೇವರಿದ್ದಾನೆ ಎನ್ನುವ ಭಾವನೆಯಿರುತ್ತದೆ. ತಾನು ಯಾರಿಗೆ ಸಹಾಯ ಮಾಡುತ್ತಾನೆಯೋ, ನನಗೂ ಆ ದೇವರು ಸಹಾಯ ಮಾಡುತ್ತಾನೆ ಎಂದೇ ಬದುಕುತ್ತಿರುತ್ತಾರೆ. ದೇವರನ್ನೇ ನಂಬಿಕೊಂಡು ಬದುಕುವ ವ್ಯಕ್ತಿಗಳಿಗೆ ಸಮಸ್ಯೆ ತಪ್ಪಿದ್ದಲ್ಲ. ಎಲ್ಲವನ್ನು ದೇವರು ಮಾಡುತ್ತಾನೆ ಎನ್ನುವುದು ತಪ್ಪು. ಹೀಗಾಗಿ ವಿದುರನು ಹೇಳುವಂತೆ ಒಬ್ಬ ವ್ಯಕ್ತಿಯು ದೇವರಲ್ಲಿ ನಂಬಿಕೆ ಇಟ್ಟುಕೊಂಡಿರಬೇಕು. ಆ ನಂಬಿಕೆಯೊಂದಿಗೆ ಕೆಲಸ ಮಾಡುವ ಮನಸ್ಸು ಹಾಗೂ ಪ್ರಯತ್ನಗಳು ಸದಾ ಇರಬೇಕು. ದೇವರ ಮೇಲೆ ಭಾರ ಹಾಕಿ ಕುಳಿತುಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ..

* ಅತಿಯಾದ ಬಯಕೆ : ಕೆಲವರಲ್ಲಿ ಅತಿಯಾದ ಬಯಕೆಯಿರುತ್ತದೆ. ಎಲ್ಲವೂ ಬೇಕು ಎನ್ನುವ ಆಸೆಯಿಂದ ಅಡ್ಡ ದಾರಿಯಲ್ಲಿ ಹೋಗುವುದೇ ಹೆಚ್ಚು. ಆದರೆ ವಿದುರನು ಹೇಳುವಂತೆ, ಕಡಿಮೆ ಪ್ರಯತ್ನದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸಲು ಬಯಸುವವರು ಕಠಿಣ ಪರಿಶ್ರಮದೆಡೆಗೆ ಗಮನ ಕೊಡುವುದಿಲ್ಲ. ಈ ವ್ಯಕ್ತಿಗಳು ಎಂದಿಗೂ ತಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಲಾರರು. ಹೆಚ್ಚಿನ ಸಂದರ್ಭದಲ್ಲಿ ಅಡ್ಡ ದಾರಿಯಿಂದಲೇ ಯಶಸ್ಸು ಸಾಧಿಸುವ ಕಾರಣ ಈ ಜನರಿಗೆ ಸಮಸ್ಯೆಗಳು ಎದುರಾಗುವುದೇ ಹೆಚ್ಚು. ಹೀಗಾಗಿ ಅತಿಯಾದ ಬಯಕೆ ಬಿಟ್ಟರೆ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದಿದ್ದಾನೆ ವಿದುರ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ