Bread Gulab Jamun: ಇದು ಅದ್ಭುತ, ಅದ್ಭುತ.. ಬ್ರೆಡ್ ಗುಲಾಬ್ ಜಾಮೂನ್ ಅದ್ಭುತ, ಮಾಡುವ ವಿಧಾನ ಇಲ್ಲಿದೆ

ಸಿಹಿ ತಿಂಡಿಗಳೆಂದರೆ ಕೆಲವರಿಗೆ ಅಚ್ಚು ಮೆಚ್ಚು. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮೂರೊತ್ತು ಸ್ವೀಟ್ ಕೊಟ್ಟರೂ ತಿನ್ನುವವರು ಇದ್ದಾರೆ. ಅಷ್ಟರ ಮಟ್ಟಿಗೆ ಸಿಹಿ ತಿಂಡಿಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ. ಅದರಲ್ಲಿಯು ಈ ಹಬ್ಬ ಹರಿದಿನಗಳನ್ನಂತೂ ಸಿಹಿ ತಿನಿಸುಗಳನ್ನು ಇಲ್ಲದೇನೆ ಊಹಿಸುವುದು ಕಷ್ಟವೇ. ಅದಲ್ಲದೆ ಕೆಲವೊಮ್ಮೆ ಸ್ವೀಟ್ ತಿನ್ನುವ ಮನಸ್ಸಾಗುತ್ತದೆ. ಈ ಸಮಯದಲ್ಲಿ ಸಿಂಪಲ್ ರೆಸಿಪಿಯಲ್ಲಿ ಒಂದಾದ ಬ್ರೆಡ್ ಗುಲಾಬ್ ಜಾಮೂನನ್ನು ಮನೆಯಲ್ಲಿ ಟ್ರೈ ಮಾಡಬಹುದು..ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಂಪಲ್ ಬ್ರೆಡ್ ಗುಲಾಬ್ ಜಾಮೂನ್ ರೆಸಿಪಿಯ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಸಿಹಿ ತಿಂಡಿ ಪ್ರಿಯರು ಈ ಸಿಂಪಲ್ ರೆಸಿಪಿಯನ್ನು ಮೆಚ್ಚಿಕೊಂಡಿದ್ದಾರೆ.

Bread Gulab Jamun: ಇದು ಅದ್ಭುತ, ಅದ್ಭುತ.. ಬ್ರೆಡ್ ಗುಲಾಬ್ ಜಾಮೂನ್ ಅದ್ಭುತ, ಮಾಡುವ ವಿಧಾನ ಇಲ್ಲಿದೆ
ಬ್ರೆಡ್ ಗುಲಾಬ್ ಜಾಮೂನ್
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 02, 2024 | 11:36 AM

ಜಾಮೂನು ಭಾರತದಾದ್ಯಂತದ ಅತ್ಯಂತ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಒಂದು. ಬಾಯಲ್ಲಿಟ್ಟರೆ ಕರಗುವ ಗುಲಾಬ್ ಜಾಮೂನನ್ನು ದೊಡ್ಡವರಿಂದ ಚಿಕ್ಕವರವರೆಗೂ ಎಲ್ಲರೂ ಕೂಡ ಇಷ್ಟ ಪಡುತ್ತಾರೆ. ಈಗಾಗಲೇ ವಿವಿಧ ಬಗೆಯ ಗುಲಾಬ್ ಜಾಮೂನ್ ಗಳಿವೆ. ಈ ಸ್ವೀಟ್ ಮಾಡುವುದು ಕಷ್ಟವೇನಲ್ಲ. ಮಾರುಕಟ್ಟೆಯಲ್ಲಿ ದೊರಕುವ ರೆಡಿಮೆಡ್ ಇನ್ಸ್ಟೆಂಟ್ ಮಿಕ್ಸರ್‌ಗಳಿಂದಲೇ ಜಾಮೂನ್ ತಯಾರಿಸಲಾಗುತ್ತದೆ. ಗುಲಾಬ್ ಜಾಮೂನನ್ನು ವೆರೈಂಟಿಯಾಗಿಯೂ ತಯಾರಿಸಬಹುದು.

ಆದರೆ ಇದೀಗ ಸೋಶಿಯಲ್ ಮೀಡಿಯಾ ಸಿಂಪಲ್ ರೆಸಿಪಿಯಾಗಿರುವ ಬ್ರೆಡ್ ಗುಲಾಬ್ ಜಾಮೂನ್ ಪಾಕವಿಧಾನದ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಹೆಚ್ಚಿನವರ ಮನೆಯಲ್ಲಿ ಬ್ರೆಡ್ ಇದ್ದೆ ಇರುತ್ತದೆ. ಬೆಳಗ್ಗಿನ ತಿಂಡಿಯನ್ನು ಮಾಡಲು ಉದಾಸೀನವಾಗಿಬಿಟ್ಟರೆ ಬ್ರೆಡ್ ತಿಂದು ತಿಂಡಿಯನ್ನು ಮುಗಿಸಿಬಿಡುತ್ತಾರೆ. ಹೀಗಾಗಿ ಬ್ರೆಡ್ ಯಿದ್ದರೆ ಸಿಂಪಲ್ ವಿಧಾನದ ಮೂಲಕ ಸ್ವೀಟ್ ಮಾಡಿ ತಿನ್ನಬಹುದು. ಈ ವಿಡಿಯೋದಲ್ಲಿ ಮೊದಲು ಬ್ರೆಡನ್ನು ತುಂಡುಗಳನ್ನು ಕತ್ತರಿಸಿಕೊಂಡು ಪುಡಿ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ತಲೆಹೊಟ್ಟು ಇರುವವರು ಈ ಸಿಂಪಲ್​ ಮನೆಮದ್ದು ಒಮ್ಮೆ ಪ್ರಯತ್ನಿಸಿ ನೋಡಿ

ವಿಡಿಯೋ ಇಲ್ಲಿದೆ ನೋಡಿ

ಬ್ರೆಡ್ ಪುಡಿಗೆ ಬಿಸಿ ಮಾಡಿದ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಲಾಗಿದ್ದು ಉಂಡೆ ಉಂಡೆಗಳನ್ನು ತಯಾರಿಸಿಕೊಳ್ಳುವುದನ್ನು ಕಾಣಬಹುದು. ಈ ಉಂಡೆಗಳನ್ನು ಕಾದ ಎಣ್ಣೆಗೆ ಹಾಕಿ ಕರಿಯಲಾಗಿದೆ. ಉಂಡೆಗಳು ಕಂದು ಬಣ್ಣಕ್ಕೆ ಬರುತ್ತಿದ್ದಂತೆ ತೆಗೆದು ಸಣ್ಣ ಬೌಲ್ ಗೆ ಹಾಕಲಾಗಿದೆ. ಆ ಬಳಿಕ ಗುಲಾಬ್ ಜಾಮೂನ್‌ಗೆ ಬೇಕಾದ ಸಕ್ಕರೆ ಪಾಕವನ್ನು ತಯಾರಿಸಲು, ಒಂದು ಪಾತ್ರೆಗೆ ಸಕ್ಕರೆ, ನೀರು ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಪಾಕವನ್ನು ರೆಡಿ ಮಾಡಲಾಗಿದೆ. ತದನಂತರದಲ್ಲಿ ತಯಾರಿಸಿಕೊಂಡಿರುವ ಉಂಡೆಗಳಿರುವ ಪಾತ್ರೆಗೆ ಈ ಸಕ್ಕರೆ ಪಾಕವನ್ನು ಹಾಕಲಾಗಿದೆ. ಈ ಉಂಡೆಗಳನ್ನು ಸಕ್ಕರೆ ನೀರಿನಲ್ಲಿ ನೆನೆಯಲು ಸ್ವಲ್ಪ ಸಮಯ ಬಿಡಲಾಗಿದೆ. ಸ್ವಲ್ಪ ಸಮಯದ ಬಳಿಕ ರುಚಿ ರುಚಿಯಾದ ಬ್ರೆಡ್ ಗುಲಾಬ್ ಜಾಮೂನು ಸವಿಯಲು ಸಿದ್ಧವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:34 am, Sat, 2 March 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್