ಒತ್ತಡದಿಂದಾಗಿ, ಜನರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ನಮ್ಮ ಎಲ್ಲಾ ಒತ್ತಡದಿಂದ ಮುಕ್ತರಾಗಲು ಅಥವಾ ಆ ಕ್ಷಣಕ್ಕೆ ಮುಕ್ತಿ ಹೊಂದಲು ಬಹುತೇಕರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಅಥವಾ ಯಾವುದೋ ನೆಚ್ಚಿನ ವೆಬ್ ಸಿರೀಸ್ಗಳನ್ನು ನೋಡುತ್ತಾ ಸಮಯ ಕಳೆಯುತ್ತಾರೆ. ಈ ಎಲ್ಲ ಕೆಲಸಗಳನ್ನು ಮಾಡುವುದರಿಂದ, ತಾತ್ಕಾಲಿಕವಾಗಿ ನಾವು ನಮ್ಮ ಎಲ್ಲಾ ಒತ್ತಡಗಳನ್ನು ಮರೆತುಬಿಡುತ್ತೇವೆ. ಆದರೆ ಸಂಪೂರ್ಣವಾಗಿ ಆ ಒತ್ತಡಗಳಿಂದ ಹೇಗೆ ಮುಕ್ತಿ ಪಡೆಯಬಹುದು?
ಮೇಲೆ ತಿಳಿಸಿದ ತಾತ್ಕಾಲಿಕ ವಿಧಾನಗಳು ಕೇವಲ ಸ್ವಲ್ಪ ಕ್ಷಣದವರೆಗೆ ಮಾತ್ರ ಒತ್ತಡ ನಿವಾರಿಸುತ್ತವೆ. ಮತ್ತು ಅವುಗಳಿಂದ ಬಹಳ ಉಪಯಗವೇನೂ ಇಲ್ಲ. ಆದ್ದರಿಂದಲೇ ತಜ್ಞರು ಒತ್ತಡದಿಂದ ದೂರವಾಗಲು, ದೀರ್ಘಕಾಲಿಕ ಪರಿಣಾಮಗಳನ್ನು ನೀಡುವ ಉತ್ತಮ ವಿಧಾನಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. ಅಂತಹ ಕೆಲವು ವಿಧಾನಗಳನ್ನು ಇಲ್ಲಿ ನೀಡಲಾಗಿದೆ.
ಧ್ಯಾನ:
ಒತ್ತಡವನ್ನು ನಿವಾರಿಸಲು, ಪ್ರತಿದಿನ ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ಧ್ಯಾನ ಮಾಡಿ. ನಿಯಮಿತವಾಗಿ ಧ್ಯಾನ ಮಾಡುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಜೊತೆಗೆ ಇದು ಒತ್ತಡ ರಹಿತರಾಗಿರಲು ಸಹಾಯ ಮಾಡುತ್ತದೆ.
ಆರೊಮ್ಯಾಟಿಕ್(ಸುವಾಸನೆ) ಸಾಧನಗಳನ್ನು ಬಳಸಿ:
ಇದು ನಿಮ್ಮ ಮನಸ್ಥಿತಿಯನ್ನು ಚೆನ್ನಾಗಿರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರೋಮಾಥೆರಪಿ ಎಂಬ ವಿಭಾಗವೇ ಇದ್ದು, ಇದರ ಮೂಲಕ ಭಾವನೆ ಮತ್ತು ನೆನಪಿನ ಶಕ್ತಿಯನ್ನು ನಿರ್ವಹಿಸಲು ಸುಲಭವಾಗುತ್ತದೆ.
ಡೈರಿ ಬರೆಯಿರಿ:
ನಿಮ್ಮ ಅನುಭವಗಳು, ಭಯಗಳು ಮತ್ತು ಆಲೋಚನೆಗಳ ಬಗ್ಗೆ ಪ್ರತಿದಿನ ಬರೆಯಿರಿ. ಇದು ನಮ್ಮ ಭಾವನೆಗಳನ್ನು ಹೊರಹಾಕುತ್ತದೆ. ಇದರ ಪರಿಣಾಮ ಮನಸ್ಸು ಹಗುರವಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ.
ಪ್ರಾಣಾಯಾಮ ಮಾಡಿ:
ಒತ್ತಡವನ್ನು ನಿವಾರಿಸಲು ಪ್ರತಿದಿನ ಸ್ವಲ್ಪ ಹೊತ್ತು ಪ್ರಾಣಾಯಾಮ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ, ನಿರಾಳರಾಗಬಹುದು. ಇದನ್ನು ಪ್ರತಿದಿನ ಮಾಡುವುದರಿಂದ ನಿಮ್ಮ ಮೆಟಾಬಾಲಿಸಂ ಸುಧಾರಿಸುತ್ತದೆ.
ಸಾಕಷ್ಟು ನಿದ್ರೆ ಮಾಡಿ:
ಪ್ರತಿದಿನ ಸಮಯಕ್ಕೆ ಸರಿಯಾಗಿ ನಿದ್ರಿಸಿ ಮತ್ತು ಬೆಳಿಗ್ಗೆ ವಾಕ್ ಮಾಡಲು ಹೋಗಿ. ನಿಮ್ಮ ದಿನಚರಿಯಲ್ಲಿ ಈ ಕೆಲಸಗಳನ್ನು ಮಾಡುವುದರಿಂದ, ನಿಮ್ಮ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ನೀವು ಕಾಣಬಹುದು. ಮಲಗುವ ಮುನ್ನ 3 ರಿಂದ 4 ಗಂಟೆಗಳ ಮೊದಲು ಮೊಬೈಲ್, ಐಫೋನ್ ಮತ್ತು ಟಿವಿ ಬಳಸುವುದನ್ನು ನಿಲ್ಲಿಸಿ. ಇದು ಉತ್ತಮ ಪರಿಣಾಮ ನೀಡುತ್ತದೆ.
ಇದನ್ನೂ ಓದಿ:
Viral Video: ಸಫಾರಿ ಮಾಡುತ್ತಿರುವ ಜೀಪ್ ಒಳಗೆ ನುಗ್ಗಿದ ಸಿಂಹಿಣಿ; ನಂತರ ಏನಾಯ್ತು? ಅಚ್ಚರಿಯ ವಿಡಿಯೊ ಇಲ್ಲಿದೆ
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ 3 ಬಗೆಯ ಆರೋಗ್ಯಕರ ಪಾನೀಯಗಳು ಸಹಾಯಕ
(How to manage stress here is the 5 easy steps you can follow)