Ananas Menaskai Recipe : ಇದು ನೋಡಿ ಅನ್ನಕ್ಕೆ ಸೂಪರ್​ ಕಾಂಬಿನೇಶನ್, ಉಡುಪಿ ಶೈಲಿಯ ಅನಾನಸ್ ಮೆಣಸ್ಕಾಯಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 18, 2024 | 11:52 AM

ಬಹುತೇಕರಿಗೆ ಈ ಅನಾಸಿನ ಹಣ್ಣಿನ ಮಾಡುವ ಆಹಾರವು ಬಲು ಇಷ್ಟ. ಮದುವೆ ಅಥವಾ ಇನ್ನಿತ್ತರ ಶುಭ ಸಮಾರಂಭಗಳಲ್ಲಿ ಅನಾನಸ್ ಮೆಣಸ್ಕಾಯಿ ಇದ್ದೆ ಇರುತ್ತದೆ. ಇದು ರುಚಿಯಲ್ಲಿ ಸಿಹಿ ಸಿಹಿಯಾಗಿದ್ದು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುವ ಈ ರೆಸಿಪಿಯನ್ನು ಮನೆಯಲ್ಲಿರುವ ಈ ಕೆಲವೇ ಕೆಲವು ಪದಾರ್ಥಗಳಿಂದ ತಯಾರಿಸಬಹುದು. ಹಾಗಾದ್ರೆ ಈ ರೆಸಿಪಿಯ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

Ananas Menaskai Recipe : ಇದು ನೋಡಿ ಅನ್ನಕ್ಕೆ ಸೂಪರ್​ ಕಾಂಬಿನೇಶನ್, ಉಡುಪಿ ಶೈಲಿಯ ಅನಾನಸ್ ಮೆಣಸ್ಕಾಯಿ
ಸಾಂದರ್ಭಿಕ ಚಿತ್ರ
Follow us on

ಅನಾಸನ್ ನೋಡಲು ಮುಳ್ಳು ಮುಳ್ಳಾಗಿದ್ದರೂ, ಹುಳಿ-ಸಿಹಿಯನ್ನು ಹೊಂದಿರುವ ಈ ಹಣ್ಣು ಎಲ್ಲರಿಗೂ ಇಷ್ಟ. ಈ ಹಣ್ಣನ್ನು ಸಿಹಿತಿಂಡಿಗಳ ತಯಾರಿಕೆ ಹಾಗೂ ವಿವಿಧ ರೆಸಿಪಿಗಳನ್ನು ಮಾಡಿ ಸವಿಯುತ್ತಾರೆ. ಮದುವೆ ಶುಭಸಮಾರಂಭಗಳಿಗೆ ಹೋಗಿದ್ದರೆ ಈ ಹಣ್ಣಿನಿಂದ ತಯಾರಿಸಿದ ಗೊಜ್ಜನ್ನು ಸವಿದಿರಬಹುದು. ಅನ್ನದ ಜೊತೆಗೆ ಅನಾನಸ್ ಗೊಜ್ಜು ಅಥವಾ ಅನಾನಸ್ ಮೆಣಸ್ಕಾಯಿ ಒಂದೊಳ್ಳೆ ಕಾಂಬಿನೇಶನ್ ಎಂದರೆ ತಪ್ಪಾಗಲ್ಲ. ಅದಲ್ಲದೇ, ಈ ದೋಸೆ ಮತ್ತು ಇಡ್ಲಿಯ ಜೊತೆಗೂ ಇದನ್ನು ಸವಿಯಬಹುದಾಗಿದೆ. ಹೀಗಾಗಿ ಮನೆಯಲ್ಲೇ ಉಡುಪಿ ಶೈಲಿಯ ಅನಾನಸ್ ಮೆಣಸ್ಕಾಯಿ ರೆಸಿಪಿ ಮಾಡಿ ಸವಿಯಿರಿ.

ಅನಾನಸ್ ಮೆಣಸ್ಕಾಯಿ ಮಾಡಲು ಬೇಕಾಗುವ ಸಾಮಗ್ರಿ

* ಒಂದು ಕಪ್ ಹೆಚ್ಚಿದ ಅನಾನಸ್

* ಒಂದೂವರೆ ಕಪ್ ನೀರು

* ಕಾಲು ಕಪ್ ಹುಣಿಸೆ ಹಣ್ಣಿನ ರಸ

* ಚಮಚ ಬೆಲ್ಲ

* ಅರ್ಧ ಚಮಚ ಅರಿಶಿನ ಪುಡಿ

*ರುಚಿಗೆ ತಕ್ಕಷ್ಟು ಉಪ್ಪು

ಮಸಾಲಾ ತಯಾರಿಸಲು ಬೇಕಾಗುವ ಸಾಮಗ್ರಿಗಳು

* ಅರ್ಧ ಚಮಚ ಸಾಸಿವೆ

* 3 ಚಮಚ ಎಣ್ಣೆ

* 2 ಚಮಚ ಉದ್ದಿನ ಬೇಳೆ

* ಅರ್ಧ ಚಮಚ ಮೆಂತ್ಯ

* ಐದರಿಂದ ಆರು ಕೆಂಪು ಮೆಣಸಿನ ಕಾಯಿ

* ಕರಿಬೇವಿನ ಎಲೆ

* ಮುಕ್ಕಾಲು ಕಪ್ ನಷ್ಟು ತೆಂಗಿನ ತುರಿ,

* ಅರ್ಧ ಕಪ್ ನೀರು

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು

* 2 ಚಮಚ ತೆಂಗಿನ ಎಣ್ಣೆ

* 1 ಚಮಚ ಸಾಸಿವೆ

* ಒಂದೆರಡು ಕೆಂಪು ಮೆಣಸಿನಕಾಯಿ

* ಕರಿಬೇವಿನ ಎಲೆ

ಇದನ್ನೂ ಓದಿ: ಆರೋಗ್ಯಕರ ಬಾಳೆಹೂವಿನ ಪಕೋಡ, ಮಾಡೋದು ಸುಲಭ

ಅನಾನಸ್ ಮೆಣಸ್ಕಾಯಿ ಮಾಡುವ ವಿಧಾನ

* ಮೊದಲಿಗೆ ಕತ್ತರಿಸಿಟ್ಟ ಹೆಚ್ಚಿದ ಅನಾನಸ್ ಗೆ ನೀರು ಹಾಕಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

* ಆ ಬಳಿಕ ಮಸಾಲೆಯನ್ನು ತಯಾರಿಸಲು ಎಣ್ಣೆ ಉದ್ದಿನ ಬೇಳೆ, ಮೆಂತ್ಯ, ಕೆಂಪು ಮೆಣಸಿನ ಕಾಯಿ, ಕರಿಬೇವಿನ ಎಲೆ ಈ ಎಲ್ಲವನ್ನು ಹುರಿದುಕೊಳ್ಳಿ. ಇದಕ್ಕೆ ಅದಕ್ಕೆ ತೆಂಗಿನ ತುರಿ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಪಕ್ಕಕ್ಕೆ ಇಡಿ.

* ಈಗಾಗಲೇ ಬೇಯಿಸಿಕೊಂಡ ಅನಾನಸ್ ಗೆ ಅರಿಶಿನ, ಉಪ್ಪು, ಬೆಲ್ಲ ಬೆರೆಸಿ ಎಲ್ಲವನ್ನೂ ಮಿಶ್ರಣ ಮಾಡಿ ಸ್ಟವ್ ಮೇಲಿಟ್ಟು ಚೆನ್ನಾಗಿ ಕುದಿಸಿಕೊಳ್ಳಿ.

* ಕುದಿಯುತ್ತಿದ್ದಂತೆ ಈಗಾಗಲೇ ರುಬ್ಬಿದ ಮಿಶ್ರಣವನ್ನು ಸೇರಿಸಿಕೊಂಡು ಬೇಕಿದ್ದರೆ ನೀರು ಬೆರೆಸಿಕೊಳ್ಳಿ.

* ನೀರು ಬೆರೆಸಿದ ಬಳಿಕ ಹತ್ತು ನಿಮಿಷಗಳ ಕುದಿಯಲು ಬಿಡಿ, ಆಗಾಗ ಕೈಯಾಡಿಸುತ್ತ ಇರಿ.

* ಕೊನೆಗೆ ಇದಕ್ಕೆ ಒಗ್ಗರಣೆ ಹಾಕಿದರೆ ರುಚಿಕರವಾದ ಅನಾನಸ್ ಮೆಣಸ್ಕಾಯಿ ಸವಿಯಲು ಸಿದ್ದ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ