Guru Purnima Wishes 2024: ಗುರು ಪೂರ್ಣಿಮಾದಂದು ನಿಮ್ಮ ಪ್ರೀತಿಯ ಗುರುಗಳಿಗೆ ಈ ರೀತಿ ಶುಭಾಶಯ ಕೋರಿ

ಬದುಕಲ್ಲಿ ಏನಾದರೂ ಸಾಧಿಸಬೇಕೆಂದರೆ ಗುರುವಿನ ಮಾರ್ಗದರ್ಶನವೀರಲೇ ಬೇಕು. ಸರಿ ದಾರಿ ತೋರಿ ಮುನ್ನಡೆಸಿದ ಗುರುವಿಗೆ ನಮನ ಸಲ್ಲಿಸುವ ದಿನವೇ ಈ ಗುರುಪೂರ್ಣಿಮ. ಈ ಬಾರಿ ಗುರು ಪೂರ್ಣಿಮಾವನ್ನು ಜುಲೈ 21ರಂದು ಆಚರಣೆ ಮಾಡಲಾಗುತ್ತಿದೆ. ಈ ದಿನದಂದು ನಿಮ್ಮ ನೆಚ್ಚಿನ ಗುರುವಿಗೆ ಈ ಸಂದೇಶಗಳನ್ನು ಕಳುಹಿಸುವ ಮೂಲಕ ಶುಭಾಶಯಗಳನ್ನು ಕೋರಬಹುದು.

Guru Purnima Wishes 2024: ಗುರು ಪೂರ್ಣಿಮಾದಂದು ನಿಮ್ಮ ಪ್ರೀತಿಯ ಗುರುಗಳಿಗೆ ಈ ರೀತಿ ಶುಭಾಶಯ ಕೋರಿ
ಗುರು ಪೂರ್ಣಿಮಾ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 18, 2024 | 9:36 AM

ಒಬ್ಬ ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಯನ್ನು ಹೊರತು ಪಡಿಸಿ ಗುರುವಿನ ಪಾತ್ರವು ಬಹುದೊಡ್ಡದು. ಗುರುವಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಗುರು ಪೂರ್ಣಿಮಾವನ್ನು ಆಚರಿಸಲಾಗುತ್ತದೆ. ಅದಲ್ಲದೇ, ವೇದವ್ಯಾಸರು ಈ ದಿನದಂದೇ ಜನಿಸಿದ್ದು, ಈ ದಿನದಂದು ವೇದವ್ಯಾಸರ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ದಿನವನ್ನು ಬದುಕಿಗೆ ಸರಿ ದಾರಿ ತೋರಿದ ಶಿಕ್ಷಕರು ಮತ್ತು ಮಾರ್ಗದರ್ಶಕರಿಗೆ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸುವ ದಿನವಾಗಿದೆ. ಹೀಗಾಗಿ ವಿಶೇಷ ದಿನದಂದು ಗುರುಗಳಿಗೆ ಈ ರೀತಿಯಾಗಿ ಸಂದೇಶ ಕಳುಹಿಸಿ, ಅವರಿಗೆ ಗೌರವವನ್ನು ಸಲ್ಲಿಸಬಹುದಾಗಿದೆ.

  • ಗುರುಬ್ರಹ್ಮ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಸರ್ವರಿಗೂ ಗುರುಪೂರ್ಣಿಮ ದಿನದ ಶುಭಾಶಯಗಳು.
  • ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅನೇಕ ಮಂದಿಯ ಬಾಳಿಗೆ ಭವ್ಯ ಬೆಳಕು ಚೆಲ್ಲುವ ಗುರುಗಳಿಗೆ ಗುರು ಪೂರ್ಣಿಮಾದ ಶುಭಾಶಯಗಳು.
  • ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದ್ದಕ್ಕಾಗಿ ಎಲ್ಲಾ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು. ಗುರು ಪೂರ್ಣಿಮೆಯ ಶುಭಾಶಯಗಳು.
  • ನನ್ನ ಬದುಕಿನ ಪುಸ್ತಕಕ್ಕೆ ರೂಪಕೊಟ್ಟು, ಗುರಿಯೆಡೆಗೆ ನಕ್ಷೆ ಹಾಕಿ ಕೊಟ್ಟು ನನ್ನ ಯಶಸ್ಸಿನಲ್ಲಿ ಖುಷಿಕಂಡ ಗುರುವಿಗೆ ಗುರುಪೂರ್ಣಿಮದ ಶುಭಾಶಯಗಳು.
  • ನನ್ನ ಜೀವನದ ದಾರಿ ತೋರಿ ಮುನ್ನಡೆಸಿದ ಗುರುವಿಗೆ ಗುರುಪೂರ್ಣಿಮದ ಶುಭಾಶಯಗಳು.
  • ತಪ್ಪಿದ್ದಲ್ಲಿ ತಿದ್ದಿ, ಬುದ್ದಿ ಹೇಳಿ ಮಾರ್ಗದರ್ಶನವಿತ್ತ ಗುರುವೃಂದಕ್ಕೆ ಗುರುಪೂರ್ಣಿಮದ ಶುಭಾಶಯಗಳು.
  • ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ, ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ, ಇಂತಹ ಎಲ್ಲಾ ಗುರುವೃಂದಕ್ಕೂ ಗುರುಪೂರ್ಣಿಮದ ಶುಭಾಶಯಗಳು.
  • ಅಜ್ಞಾನವೆಂಬ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಹಾನ್ ಬೆಳಕು ಈ ಗುರು. ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.
  • ನೀವು ನನಗೆ ಹೇಳಿಕೊಟ್ಟ ಪ್ರತಿಯೊಂದು ಪಾಠಕ್ಕೂ ನಾನು ಆಭಾರಿಯಾಗಿದ್ದೇನೆ. ನಿಮಗೆ ಗುರು ಪೂರ್ಣಿಮಾ ಶುಭಾಶಯಗಳು
  • ನನ್ನ ಜೀವನದ ಪ್ರತಿಯೊಂದು ಹಂತದಲ್ಲಿ, ನನ್ನನ್ನು ತಿದ್ದಿ ತೀಡಿದ ಪ್ರೀತಿಯ ಗುರುವಿಗೆ ಗುರುಪೂರ್ಣಿಮ ದಿನದ ಶುಭಾಶಯಗಳು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ