ಚಳಿಗಾಲ ಆರಂಭವಾಗಿದೆ. ಅದರ ಜೊತೆಗೆ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿಯೂ ನಿಮ್ಮ ಹೇಗಲೇರಿದೆ. ಹಾಗಾಗಿ ವಿಂಡ್ ಬರ್ನ್ ಅಥವಾ ಶೀತಾಘಾತ ಬಗ್ಗೆ ತಿಳಿದುಕೊಳ್ಳುವುದರ ಜೊತೆ ಜೊತೆಗೆ ಅದು ಬೀರುವ ಪರಿಣಾಮ? ಮತ್ತು ಅದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ವಿಂಡ್ ಬರ್ನ್ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮಗಳಾಗಿವೆ. ಇದೊಂದು ಸಾಮಾನ್ಯ ಚರ್ಮದ ಸ್ಥಿತಿಯಾಗಿದ್ದು ಶೀತ ಗಾಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ. ಗಾಳಿಯು ಚರ್ಮದಿಂದ ತೇವಾಂಶ ಆವಿಯಾಗುವುದನ್ನು ವೇಗಗೊಳಿಸುತ್ತದೆ, ಬಳಿಕ ಇದು ನಿರ್ಜಲೀಕರಣ ಮತ್ತು ಕಿರಿಕಿರಿಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಚರ್ಮಕ್ಕೆ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದನ್ನು ತಡೆಯಬಹುದು.
ಸೂರ್ಯನ ನೇರಳಾತೀತ (ಯುವಿ) ಕಿರಣಗಳಿಂದ ಉಂಟಾಗುವುದು ಸನ್ ಬರ್ನ್. ಇನ್ನು ಸೂರ್ಯನ ಬಿಸಿಲಿಗಿಂತ ಭಿನ್ನವಾಗಿ, ಚರ್ಮವು ಬಲವಾದ ಮತ್ತು ತಂಪಾದ ಗಾಳಿಗೆ ಒಡ್ಡಿಕೊಂಡಾಗ ವಿಂಡ್ ಬರ್ನ್ ಸಂಭವಿಸುತ್ತದೆ, ಇದು ಚರ್ಮದ ನೈಸರ್ಗಿಕ ತೈಲ ಮತ್ತು ತೇವಾಂಶವನ್ನು ಹೀರಿಕೊಳ್ಳುತ್ತದೆ ಎಂದು ಚರ್ಮರೋಗ ತಜ್ಞ ಡಾ. ಸೋನಾಲಿ ಕೊಹ್ಲಿ ವಿವರಿಸುತ್ತಾರೆ. ಆದರೆ ಈ ಎರಡೂ ಪರಿಸ್ಥಿತಿಗಳಲ್ಲಿಯೂ ಶುಷ್ಕತೆ ಮತ್ತು ಬಿಗಿತದ ಭಾವನೆಯಂತಹ ರೋಗಲಕ್ಷಣಗಳು ಕಂಡು ಬರುತ್ತದೆ.
ಪ್ರಾಥಮಿಕ ಕಾರಣವೆಂದರೆ ಶೀತ ಮತ್ತು ಗಾಳಿಗೆ ಒಡ್ಡಿಕೊಳ್ಳುವುದು, ಇನ್ನು ಅತಿಯಾಗಿ ಹೊರಗಡೆ ಓಡಾಡುವುದು, ಅಥವಾ ಪ್ರವಾಸ ಹೋದಾಗ ಹೆಚ್ಚು ನಡೆಯುವುದು, ಪಾದಯಾತ್ರೆಯಂತಹ ಹೊರಾಂಗಣ ಚಟುವಟಿಕೆಗಳಲ್ಲಿ ಚರ್ಮವನ್ನು ದೀರ್ಘಕಾಲದ ವರೆಗೆ ಗಾಳಿಗೆ ಒಡ್ಡಿಕೊಳ್ಳುವುದರಿಂದ ಈ ಸಮಸ್ಯೆ ಎದುರಾಗುತ್ತದೆ.
ಇದನ್ನೂ ಓದಿ: ಶೀತಾಘಾತದಿಂದ ಎಚ್ಚರ! ಚಳಿಗಾಲದಲ್ಲಿ ಚರ್ಮದ ಮೇಲಿರಲಿ ಅಧಿಕ ಕಾಳಜಿ
• ಚರ್ಮದ ತೇವಾಂಶವನ್ನು ಮರುಪೂರಣ ಮಾಡಲು ಸೌಮ್ಯ ಮತ್ತು ಸುಗಂಧ ಮುಕ್ತ ಮಾಯಿಶ್ಚರೈಸರ್ ನಿಂದ ನಿಮ್ಮ ಚರ್ಮವನ್ನು ರೀ ಹೈಡ್ರೇಟ್ ಮಾಡಿಕೊಳ್ಳಿ.
• ಚರ್ಮ ಕೆಂಪಾಗುವಿಕೆಯನ್ನು ನಿವಾರಿಸಲು ಮತ್ತು ಪೀಡಿತ ಪ್ರದೇಶಗಳನ್ನು ಶಮನಗೊಳಿಸಲು ತಂಪಾದ ಕಂಪ್ರೆಸ್ ಅನ್ನು ಅನ್ವಯಿಸಿಕೊಳ್ಳಿ.
• ಅಲೋವೆರಾ ಜೆಲ್ ಹಿತವಾದ ಗುಣಗಳನ್ನು ಹೊಂದಿದೆ, ಇದು ಗಾಳಿಯಿಂದ ಬರ್ನ್ ಆದ ಪ್ರದೇಶಕ್ಕೆ ಪರಿಹಾರ ನೀಡುತ್ತದೆ.
• ಚರ್ಮದ ಆರೈಕೆ ಮಾಡುವ ಬೇರೆ ಬೇರೆ ಉತ್ಪನ್ನಗಳಿಂದ ದೂರವಿರಿ ಮತ್ತು ಈ ಕಿರಿಕಿರಿಯನ್ನು ತಡೆಗಟ್ಟಲು ಸೌಮ್ಯ ಕ್ಲೆನ್ಸರ್ ಗಳನ್ನು ಆರಿಸಿಕೊಳ್ಳಿ.
• ಉರಿಯೂತ ಮತ್ತು ತುರಿಕೆಯನ್ನು ಕಡಿಮೆ ಮಾಡಲು ಓಟ್ ಮೀಲ್ ಬಳಸಿ ಸ್ನಾನ ಮಾಡಿ ಉರಿಯನ್ನು ಶಮನಗೊಳಿಸಿ.
• ಚರ್ಮವನ್ನು ಮಾಯಿಶ್ಚರೈಸ್ ಮಾಡಲು ಮತ್ತು ಬೇಗ ಗುಣಪಡಿಸುವಿಕೆಯನ್ನು ಉತ್ತೇಜಿಸಲು ಜೇನುತುಪ್ಪದ ಮಾಸ್ಕ್ ಅನ್ನು ಅನ್ವಯಿಸಿಕೊಳ್ಳಿ.
• ಚರ್ಮದ ಆರೋಗ್ಯಕ್ಕಾಗಿ ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿರುವ ಆಹಾರವನ್ನು ಸೇವಿಸಿ.
ಚಳಿಗಾಲದ ಋತುವಿಗೆ ನಿಮ್ಮ ವಾರ್ಡ್ರೋಬ್ ಸಿದ್ಧವಾಗುತ್ತಿದ್ದಂತೆ, ಕೆಲವು ಗಾಳಿ ಒಳಗೆ ಹೋಗದಿರುವಂತಹ ಬಟ್ಟೆಗಳನ್ನು ಸೇರಿಸಿಕೊಳ್ಳುವುದನ್ನು ಮರೆಯಬೇಡಿ. ಈ ಬಟ್ಟೆಗಳು ನಿಮ್ಮ ಚರ್ಮವನ್ನು ಕಠಿಣ ಗಾಳಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಒರಟು ಬಟ್ಟೆಗಳನ್ನು ಧರಿಸಬೇಡಿ, ಏಕೆಂದರೆ ಇದು ಚರ್ಮಕ್ಕೆ ಕಿರಿಕಿರಿ ನೀಡುತ್ತವೆ, ಬಳಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ.
ಯುವಿ ಕಿರಣಗಳು ಮತ್ತು ಗಾಳಿಯಿಂದ ರಕ್ಷಿಸಲು ಸನ್ ಸ್ಕ್ರೀನ್ ಅನ್ನು ವಿಶೇಷವಾಗಿ ಬಳಸಿ. ಅದರಲ್ಲಿಯೂ ತೆರೆದ ಪ್ರದೇಶಗಳಲ್ಲಿ ಅನ್ವಯಿಸಿ ಎಂದು ಡಾ. ಸೋನಾಲಿ ಕೊಹ್ಲಿ ಹೇಳುತ್ತಾರೆ. ಹಾಗಾಗಿ ನಿಮ್ಮ ಸನ್ ಸ್ಕ್ರೀನ್ ಅನ್ನು ಆರಿಸುವಾಗ ಎಚ್ಚರವಿರಲಿ. ಇದರಿಂದ ಇದು ಸನ್ಬರ್ನ್ ಮತ್ತು ವಿಂಡ್ ಬರ್ನ್ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ತುಟಿ ಒಡೆಯದಿರಲು ರಕ್ಷಣಾತ್ಮಕ ಲಿಪ್ ಬಾಮ್ ನಿಂದ ತೇವಾಂಶ ಕಾಪಾಡಿಕೊಳ್ಳಿ. ಆದರೆ ಲಿಪ್ ಬಾಮ್ ಹಚ್ಚುವ ಮೊದಲು ನಿಮ್ಮ ತುಟಿಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ನೀವು ಮನೆಮದ್ದುಗಳನ್ನು ಬಳಸುವುದಾದರೆ ತುಟಿಗಳಿಗೆ ಹಚ್ಚಲು ತುಪ್ಪವನ್ನು ಸಹ ಬಳಸಬಹುದು.
ನಿಯಮಿತವಾಗಿ ನೀರು ಕುಡಿಯುವುದು ಸದೃಢವಾಗಿರಲು ನೀವು ಅಳವಡಿಸಿಕೊಳ್ಳಬೇಕಾದ ಆರೋಗ್ಯಕರ ಅಭ್ಯಾಸಗಳಲ್ಲಿ ಒಂದಾಗಿದೆ. ವಿವಿಧ ವಿಷಯಗಳ ನಡುವೆ, ಗಾಳಿಯ ಸುಡುವಿಕೆಯನ್ನು ತಡೆಗಟ್ಟಲು ಅಗತ್ಯವಿರುವ ಚರ್ಮದ ಆರ್ದ್ರತೆಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಶೀತ ಮತ್ತು ಗಾಳಿ ಇರುವಾಗ ಹೊರಾಂಗಣದಲ್ಲಿ ದೀರ್ಘಕಾಲ ಕಳೆಯುವುದರಿಂದ ವಿಂಡ್ ಬರ್ನ್ ಪರಿಣಾಮ ಹೆಚ್ಚಿಸುತ್ತದೆ. ಹೆಚ್ಚು ಕಾಲ ಒಡ್ಡಿಕೊಳ್ಳುವುದರಿಂದ, ತೇವಾಂಶ ನಷ್ಟ ಮತ್ತು ಚರ್ಮದ ಕಿರಿಕಿರಿಯ ಸಾಧ್ಯತೆ ಹೆಚ್ಚು. ಆದ್ದರಿಂದ, ಹೊರಗೆ ಹೋಗಲು ವಿರಾಮ ತೆಗೆದುಕೊಳ್ಳುವ ಮೂಲಕ ಮತ್ತು ಆದಷ್ಟು ಮನೆಯೊಳಗೆ ಉಳಿಯುವ ಮೂಲಕ ಶೀತ ಮತ್ತು ಗಾಳಿಯ ಪರಿಸ್ಥಿತಿಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ.
ವಿಂಡ್ ಬರ್ನ್ ಬಗ್ಗೆ ಜಾಗರೂಕರಾಗಿರಿ ಮತ್ತು ಚರ್ಮದ ಈ ಸ್ಥಿತಿಯನ್ನು ತಡೆಗಟ್ಟಲು ಹಾಗೂ ಚಿಕಿತ್ಸೆ ನೀಡಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಿ. ಈ ಸಮಸ್ಯೆಗೆ ಕಾರಣಗಳನ್ನು ಅರ್ಥಮಾಡಿಕೊಂಡು, ತಡೆಗಟ್ಟುವ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಪರಿಣಾಮಕಾರಿ ಚಿಕಿತ್ಸೆಗಳನ್ನು ಬಳಸುವ ಮೂಲಕ, ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: