AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಸುತ್ತಲಿನ ಜನರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ದೇಹ ಭಾಷಾ ತಜ್ಞರು ಹೇಳುವುದೇನು?

ಸಂವಹನ ನಡೆಸುವಾಗ ನಮ್ಮ ಮಾತು ಎಷ್ಟು ಮುಖ್ಯವೋ ಅದೇ ರೀತಿ ದೇಹ ಭಾಷೆಯು ಅಷ್ಟೇ ಮಹತ್ವದ್ದಾಗಿದೆ. ದೇಹದ ಭಂಗಿ, ಮುಖದಲ್ಲಿನ ಅಭಿವ್ಯಕ್ತಿ, ಸನ್ನೆಗಳು ಹಾಗೂ ಕಣ್ಣಿನ ಚಲನೆಗಳಿಂದ ವ್ಯಕ್ತಿಗಳ ನಡುವಿನ ಸಂವಹನವು ಪರಿಣಾಮಕಾರಿಯಾಗಲು ಸಾಧ್ಯ. ಹೀಗಾಗಿ ಸಂವಹನವು ಶೇಕಡಾ 70 ರಷ್ಟು ದೇಹ ಭಾಷೆ, ಹಾಗೂ ಶೇಕಡಾ 30 ರಷ್ಟು ಮಾತಿನ ಮೂಲಕ ನಡೆಸುತ್ತೇವೆ. ಹೀಗಾಗಿ ಒಬ್ಬ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ದೇಹ ಭಾಷೆಯು ಎಷ್ಟು ಮುಖ್ಯ ಹಾಗೂ ಜನರನ್ನು ಪುಸ್ತಕದಂತೆ ಓದುವುದು ಹೇಗೆ? ಈ ಬಗ್ಗೆ ದೇಹ ಭಾಷಾ ತಜ್ಞರು ಏನು ಹೇಳುತ್ತಾರೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ಸುತ್ತಲಿನ ಜನರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ದೇಹ ಭಾಷಾ ತಜ್ಞರು ಹೇಳುವುದೇನು?
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 16, 2024 | 12:07 PM

Share

ನೀವು ಎದುರಿಗಿರುವ ವ್ಯಕ್ತಿಯ ಜೊತೆಗೆ ಸಂವಹನ ನಡೆಸುವಾಗ ಆ ವ್ಯಕ್ತಿಯ ಆಲೋಚನೆಗಳು ಅಥವಾ ಉದ್ದೇಶಗಳೇನು ಎಂದು ತಿಳಿಯಲು ಒಮ್ಮೆಯಾದರೂ ಪ್ರಯತ್ನಿಸಿದ್ದೀರಾ. ಕೆಲವೊಮ್ಮೆ ನಿಮ್ಮ ಎದುರಿಗಿರುವ ವ್ಯಕ್ತಿಯು ನಿಮ್ಮ ಜೊತೆಗೆ ಸಂವಹನವನ್ನು ನಡೆಸುವಾಗ ದೇಹ ಭಾಷೆಯ ಮೂಲಕ ಮೋಡಿ ಮಾಡಬಹುದು. ಕೆಲವು ವ್ಯಕ್ತಿಗಳು ಏನು ಹೇಳಿದರೂ ಕೂಡ ಒಂದೇ ರೀತಿಯ ಮುಖಭಾವ ಹಾಗೂ ದೇಹಭಾಷೆಯೊಂದಿಗೆ ವ್ಯವಹರಿಸಬಹುದು. ಹೀಗಾಗಿ ಇತರರನ್ನು ಸಂಪೂರ್ಣವಾಗಿ ಓದಲು ಬಯಸಿದರೆ ಅವರ ದೇಹ ಭಾಷೆಯನ್ನು ಗಮನಿಸಬೇಕು. ದೇಹ ಭಾಷಾ ತಜ್ಞರು ಹೇಳುವಂತೆ ಜನರನ್ನು ಅರ್ಥ ಮಾಡಿಕೊಳ್ಳುವಾಗ ಈ ಕೆಲವು ವಿಷಯಗಳಿಗೆ ಹೆಚ್ಚು ಮಹತ್ವ ನೀಡಬೇಕು.

ಕ್ಯಾರೋಲ್ ರೈಲ್ಟನ್, ಎಫ್ ಆರ್ ಎಸ್ ಎ ಜಾಗತಿಕ ದೇಹ ಭಾಷಾ ತಜ್ಞರು ಹೇಳುವಂತೆ, ದೊಡ್ಡ ಪ್ರಕಾಶಿತ ಜಾಹೀರಾತುಗಳು, ತ್ವರಿತ ವೀಡಿಯೊ ಮತ್ತು ಕಾನ್ಫರೆನ್ಸ್ ಕರೆಗಳೊಂದಿಗೆ, ದೇಹ ಭಾಷೆ ಹೆಚ್ಚು ಮುಖ್ಯವಾಗಿದೆ. ಈ ಹೊಸ ತಂತ್ರಜ್ಞಾನವು ಇತರರ ಬಗ್ಗೆ ನಮ್ಮ ನಿರ್ಧಾರಗಳು ಹಾಗೂ ಆಲೋಚನೆಗಳನ್ನು ವೇಗಗೊಳಿಸುತ್ತದೆ. ಯಾರೊಬ್ಬರ ಬಗ್ಗೆ ನಮ್ಮ ಅಭಿಪ್ರಾಯವನ್ನು ಬದಲಾಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ.

ಅದಲ್ಲದೇ, ಜನರನ್ನು ಓದುವಾಗ, ನಾವು ಮೊದಲು ಮೂಲಭೂತ ಅಂಶಗಳಾದ ಮುಖದ ಅಭಿವ್ಯಕ್ತಿಗಳು, ದೈಹಿಕ ನಿಲುವು, ಚಲನೆಯನ್ನು ಹೆಚ್ಚು ಗಮನಿಸಬೇಕು. ಮುಖದ ಅಭಿವ್ಯಕ್ತಿಯು ಸಂತೋಷ, ದುಃಖ ಅಥವಾ ಉದ್ವಿಗ್ನತೆಯಿಂದ ಕೂಡಿರಬಹುದು. ವ್ಯಕ್ತಿಯ ದೈಹಿಕ ನಿಲುವು ಆತ್ಮವಿಶ್ವಾಸದಿಂದರಬಹುದು. ಚಲನೆಯು ಶಾಂತ, ಉದ್ದೇಶಪೂರ್ವಕ ಹಾಗೂ ಒತ್ತಡದಿಂದ ಕೂಡಿರಬಹುದು. ಈ ಮೂರರ ಸಂಯೋಜನೆಯು ವ್ಯಕ್ತಿಯ ಹೇಗೆ ಎನ್ನುವ ಆರಂಭಿಕ ಸುಳಿವುಗಳನ್ನು ನೀಡುತ್ತದೆ ಎಂದು ದೇಹ ಭಾಷಾ ತಜ್ಞ ಇನ್ಬಾಲ್ ಹೊನಿಗ್ಮನ್ ಹೇಳುತ್ತಾರೆ. ಅದಲ್ಲದೇ, ಮನಶ್ಶಾಸ್ತ್ರಜ್ಞ ಅಲೆಕ್ಸಾಂಡ್ರಾ ಸ್ಟ್ರಾಟೈನರ್ ಅವರು ಹೇಳುವಂತೆ “ದೇಹ ಭಾಷೆಯು ಒಬ್ಬ ವ್ಯಕ್ತಿಯ ನಡವಳಿಕೆ ಹೇಗೆ ಇರುತ್ತದೆ ಹಾಗೂ ಹೇಗೆ ಯೋಚಿಸುತ್ತಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಪದಗಳಿಗಿಂತ ಹೆಚ್ಚಿನದನ್ನು ದೇಹ ಭಾಷೆಯೇ ಬಹಿರಂಗಪಡಿಸುತ್ತದೆ ‘ ಎಂದು ವಿವರಿಸುತ್ತಾರೆ.

ಒಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

  • ಬೇಸ್ ಲೈನ್ ರಚಿಸಿಕೊಳ್ಳಿ : ನಮ್ಮ ಸುತ್ತಮುತ್ತಲಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗಳು ವಿಭಿನ್ನವಾಗಿರುತ್ತಾರೆ. ಒಬ್ಬರ ನಡವಳಿಕೆಗಳು ಮತ್ತೊಬ್ಬರಿಗಿಂತ ಭಿನ್ನವಾಗಿರುತ್ತದೆ ಎನ್ನುವುದು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಜನರ ಸಾಮಾನ್ಯ ನಡವಳಿಕೆಯ ಬೇಸ್‌ಲೈನ್ ಅನ್ನು ರಚಿಸಿ, ಎದುರಿಗಿರುವ ವ್ಯಕ್ತಿಯು ಆಗಾಗ್ಗೆ ತಮ್ಮ ತೋಳುಗಳನ್ನು ಮಡಚುತ್ತಿದ್ದರೆ, ನೆಲವನ್ನು ನೋಡುತ್ತಿದ್ದರೆ, ಮಾತಿನ ನಡುವೆಯು ತಲೆಯನ್ನು ಕೆರೆದುಕೊಳ್ಳುತ್ತಿದ್ದರೆ ಅವರಿಗೆ ಆತ್ಮವಿಶ್ವಾಸವು ಕಡಿಮೆ ಇದೆ ಎಂದು ಅರ್ಥ ಮಾಡಿಕೊಳ್ಳಿ.
  • ದೇಹ ಭಾಷೆಯ ಸ್ಥಿರವಾಗಿದೆಯೇ ಎಂದು ನೋಡಿ : ಸ್ಥಿರವಾದ ದೇಹ ಭಾಷೆಯು ಮುಖದ ಅಭಿವ್ಯಕ್ತಿ, ದೇಹದ ಭಂಗಿ ಮತ್ತು ಚಲನೆಗಳು ಒಂದೇ ರೀತಿಯಿರುತ್ತದೆ. ಉತ್ಸಾಹಭರಿತ ಮುಖ, ಭಂಗಿ ಹಾಗೂ ಚಲನೆಗಳನ್ನು ಒಟ್ಟಿಗೆ ಪ್ರದರ್ಶಿಸಿದಾಗ ವ್ಯಕ್ತಿಯು ಏನೆಂದು ಅರ್ಥ ಮಾಡಿಕೊಳ್ಳಲು ಸಾಧ್ಯ” ಎಂದು ಹಾನಿಗ್ಮನ್ ಹೇಳುತ್ತಾರೆ. ಅಸಮಂಜಸವಾದ ದೇಹ ಭಾಷೆಯಾದ ಮುಖವನ್ನು ಗಂಟಿಕ್ಕುವುದು, ಅಥವಾ ಕೈಗಳನ್ನು ಹಿಸುಕುವಂತಹ ನಡವಳಿಕೆಗಳು ಆ ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.
  • ವ್ಯಕ್ತಿಯ ದೇಹ ಭಂಗಿ ಗಮನಿಸಿ : ಸ್ಟ್ರಾಟೈನರ್ ಹೇಳುವಂತೆ ವ್ಯಕ್ತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಅವರ ದೇಹದ ಭಂಗಿಯನ್ನು ಗಮನಿಸುವುದು ಬಹಳ ಮುಖ್ಯ. ನೇರವಾಗಿ ನಿಂತಿರುವ ವ್ಯಕ್ತಿಗಳು ಆತ್ಮವಿಶ್ವಾಸ ಮತ್ತು ಆರಾಮದಾಯಕವಾಗಿದ್ದಾರೆ ಎಂದರ್ಥ. ಇದಕ್ಕೆ ವ್ಯತಿರಿಕ್ತವಾಗಿ, ಭುಜಗಳನ್ನು ಅಲುಗಾಡಿಸುವುದು, ಬಾಗಿದ ಭಂಗಿಯು ಅಭದ್ರತೆ, ರಕ್ಷಣಾತ್ಮಕತೆ ಹಾಗೂ ಬಳಲಿಕೆಯನ್ನು ಸೂಚಿಸುತ್ತದೆ ಎಂದು ವಿವರಿಸಿದ್ದಾರೆ.
  • ಪದಗಳ ಬಳಕೆಯತ್ತ ಕಿವಿಗೊಡಿ : ಒಬ್ಬ ವ್ಯಕ್ತಿಯು ಬಳಸುವ ನಿರ್ದಿಷ್ಟ ಪದಗಳು ಅವರು ಹೇಗೆ ಎಂಬುವುದನ್ನು ಪ್ರತಿನಿಧಿಸುತ್ತದೆ. ನಾನು ಎನ್ನುವ ಪದವು ಸ್ವಯಂ-ಕೇಂದ್ರಿತ ಎಂದು ತಿಳಿಸಿದರೆ, ‘ನಾವು’ ಎನ್ನುವ ಪದವು ಸಾಮೂಹಿಕ ಅಥವಾ ತಂಡ-ಆಧಾರಿತ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಅಲೆಕ್ಸಾಂಡ್ರಾ ಸ್ಟ್ರಾಟೈನರ್ ತಿಳಿಸಿದ್ದಾರೆ.
  •  ವ್ಯಕ್ತಿಯ ಉಸಿರಾಟದ ಕಡೆಗೆ ಗಮನವಿರಲಿ : ನಾವು ಉತ್ಸುಕರಾಗಿದ್ದಾಗ ಉಸಿರಾಟವು ವೇಗಗೊಳ್ಳುತ್ತದೆ. ನಾವು ವಿಶ್ರಾಂತಿ ಪಡೆದಾಗ ನಿಧಾನಗೊಳ್ಳುತ್ತದೆ. ಯಾವಾಗಲೂ ಉತ್ಸುಕರಾಗಿರುವ ಜನರು ಸಹ ಭುಜಗಳನ್ನು ಎತ್ತುವ ಮೂಲಕ ಸಂವಹನ ನಡೆಸುತ್ತಾರೆ. ಕೆಲವೊಮ್ಮೆ ಇದು ಒತ್ತಡದ ಸೂಚಕವಾಗಿರಬಹುದು. ಇಲ್ಲವಾದರೆ ಈ ರೀತಿಯ ವ್ಯಕ್ತಿಗಳು ವಿಪರೀತ ಬಹಿರ್ಮುಖಿಯಾಗಿರಬಹುದು ಎಂದು ರೈಲ್ಟನ್ ತಿಳಿಸಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ