AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dark Circles: ಡಾರ್ಕ್​ ಸರ್ಕಲ್​ ನಿವಾರಣೆಗೆ ಇಲ್ಲಿವೆ ಸರಳ ಪರಿಹಾರ

ಮಹಿಳೆಯರಲ್ಲೇ ಹೆಚ್ಚು ಡಾರ್ಕ್​ ಸರ್ಕಲ್​ಗಳು ಕಂಡು ಬರುತ್ತದೆ. ಕಣ್ಣಿನ ಕೆಲಗಿನ ಚರ್ಮ ಮೃದುವಾಗಿರುತ್ತದೆ. ಕಣ್ಣಿಗೆ ಒತ್ತಡ ಬಿದ್ದಾಗ ಅವು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

Dark Circles: ಡಾರ್ಕ್​ ಸರ್ಕಲ್​ ನಿವಾರಣೆಗೆ ಇಲ್ಲಿವೆ ಸರಳ ಪರಿಹಾರ
ಸಂಗ್ರಹ ಚಿತ್ರ
TV9 Web
| Edited By: |

Updated on: Feb 05, 2022 | 5:31 PM

Share

ಡಾರ್ಕ್ ಸರ್ಕಲ್ (Dark Circle) ಅಥವಾ ಕಣ್ಣಿನ ಕೆಳಗೆ ಕಪ್ಪಾಗುವುದು ಎಲ್ಲಾ ವಯಸ್ಸಿನ ಹೆಣ್ಣು ಮಕ್ಕಳ ಸಮಸ್ಯೆ. ವಯಸ್ಸಿನ ಅಂತರವಿಲ್ಲದೆ ಕಾಡುವ  ಡಾರ್ಕ್​ ಸರ್ಕಲ್​ಗಳು ಮುಖದ ಅಂದವನ್ನು ಕೆಡಸುತ್ತವೆ. ಮಹಿಳೆಯರಲ್ಲೇ ಹೆಚ್ಚು ಡಾರ್ಕ್​ ಸರ್ಕಲ್​ಗಳು ಕಂಡು ಬರುತ್ತದೆ. ಕಣ್ಣಿನ ಕೆಲಗಿನ ಚರ್ಮ ಮೃದುವಾಗಿರುತ್ತದೆ. ಕಣ್ಣಿಗೆ ಒತ್ತಡ ಬಿದ್ದಾಗ ಅವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಡಾರ್ಕ್ ಸರ್ಕಲ್​ಗಳಿಗೆ ಮುಖ್ಯ ಕಾರಣ ಹೈಪರ್​ಪಿಗ್ಮೆಂಟೇಶನ್ (Hyperpigmentation), ವಿಟಮಿನ್​ ಸಿ ಕೊರತೆ, ರಕ್ತ ಸಂಚಾರ ಸರಿಯಾಗಿ ಆಗದೇ ಇರುವುದು, ನಿದ್ದೆಯ ಕೊರತೆ, ಅತಿಯಾಗಿ ಮೊಬೈಲ್​, ಟ್ಯಾಬ್​ಗಳ ಬಳಕೆ ಹೀಗೆ ಹತ್ತು ಹಲವು ಕಾರಣಗಳಿಂದ ಡಾರ್ಕ್​ ಸರ್ಕಲ್​ ಉಂಟಾಗುತ್ತದೆ. ಇದಕ್ಕೆ ನೀವು ಪರಿಹಾರವನ್ನು ಕಂಡುಕೊಳ್ಳಬಹುದು. ಇಲ್ಲಿದೆ ನೋಡಿ ಟಿಪ್ಸ್​ಗಳು

ಸ್ಕಿನ್​ ಕ್ರೀಮ್​ಗಳ ಬಳಕೆ : ಕಣ್ಣುಗಳ ಕೆಳಗಿರುವ ಚರ್ಮವು ತೆಳ್ಳಗಿರುವುದರಿಂದ, ಇದಕ್ಕೆ ಕೋಮಲ ಚಿಕಿತ್ಸೆಯ ಅಗತ್ಯವಿರುತ್ತದೆ. ವಿಟಮಿನ್ ಸಿ, ರೆಟಿನಾಯ್ಡ್‌ಗಳು ಮತ್ತು ಹೈಲುರಾನಿಕ್ ಆಮ್ಲಗಳು ಸಮೃದ್ಧವಾಗಿರುವ ಕ್ರೀಮ್‌ಗಳು ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಹೀಗಾಗಿ ನೀವು ಕ್ರೀಮ್​ಗಳನ್ನು ಕೊಳ್ಳುವಾಗ  ಎಚ್ಚರಿಕೆಯಿಂದಿರಿ.

ಸೌತೆಕಾಯಿ: ಯಥೇಚ್ಛವಾದ ನೀರಿನ ಅಂಶವಿರುವ ಸೌತೆಕಾಯಿ ನಿಮ್ಮ ಡಾರ್ಕ್​ ಸರ್ಕಲ್​ಗಳನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಕಣ್ಣಿನ ಮೇಲೆ ಸೌತೆಕಾಯಿಯ ಸ್ಲೈಸ್ಗಳನ್ನು ಮಾಡಿ ಇಟ್ಟುಕೊಳ್ಳಿ. ವಾರದಲ್ಲಿ 3 ಬಾರಿಯಾದರೂ ಹೀಗೆ ಮಾಡಿ, ಕ್ರಮೇಣ ನಿಮ್ಮ ಡಾರ್ಕ್​ ಸರ್ಕಲ್ಸ್​ ಕಡಿಮೆಯಾಗುತ್ತದೆ.

ಟೀ ಬ್ಯಾಗ್​: ಟೀ ಬ್ಯಾಗ್​ಅನ್ನು ರಾತ್ರಿ ನೆನೆಹಾಕಿ ಬೆಳಗ್ಗೆ 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದು ನಿಮ್ಮ ಕಣ್ಣಿನ ಕೆಳಗೆ ಕಪ್ಪು ಕಲೆಯಾಗುವುದನ್ನು ತಡೆಯುತ್ತದೆ.

ಐಸ್​ ಕ್ಯೂಬ್​ ಬಳಸಿ: ಐಸ್​ ಕ್ಯೂಬ್​ ಅನ್ನು ಬಟ್ಟೆಯಲ್ಲಿ ಹಾಕಿಕೊಂಡು  ಕಣ್ಣಿನ ಮೇಲೆ ಇರಿಸಿಕೊಳ್ಳಿ. ಇದರಿಂದ ಒತ್ತಡದಿಂದ ಬಳಲಿದ ಕಣ್ಣಿಗೆ  ಹಿತವಾಗುತ್ತದೆ.  ಅಥವಾ ಒದ್ದೆ ಬಟ್ಟೆಯನ್ನು ಕೂಡ ಕಣ್ಣಿನ ಮೇಲೆ ಹಾಕಿಕೊಳ್ಳಿ. 20 ನಿಮಿಚಗಳ ಕಾಲ ಪ್ರತಿದಿನ ಹೀಗೆ ಮಾಡಿದರೆ ಡಾರ್ಕ್​ ಸರ್ಕಲ್​ಗಳು ಕಡಿಮೆಯಾಗುತ್ತವೆ.

ಆಹಾರ: ಕ್ಯಾರೆಟ್​, ಬಿಟ್ರೂಟ್​ಗಳಂತಹ ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಿ. ಇದರಿಂದ ನಿಮ್ಮ ಕಣ್ಣಿನ ಸುತ್ತ ಮೂಡಿದ ಕಪ್ಪು ವರ್ತುಲಗಳು ನಿವಾರಣೆಯಾಗುತ್ತದೆ. ವಿಟಮಿನ್​ ಮತ್ತು ಮಿನರಲ್ಸ್​​ಗಳಿಂದ ಕೂಡಿದ ತರಕಾರಿಗಳು ದೇಹವನ್ನೂ ಕೂಡ ಆರೋಗ್ಯಯುತವಾಗಿಡುತ್ತದೆ.

 ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿರುವ ಪೋಷಕಾಂಶಗಳು  ಕಣ್ಣಿನ ಕೆಳಗಿರುವ ಚರ್ಮವನ್ನು ಕಾಪಾಡುತ್ತದೆ. ಪ್ರತಿದಿನ ಮಲಗುವ ಮೊದಲು ಕೊಬ್ಬರಿ ಎಣ್ಣೆಯಿಂದ ಮಸಾಜ್​ ಮಾಡಿಕೊಳ್ಳಿ. ಇದರಿಂದ ಚರ್ಮ ಹೊಳಿಪಿನಿಂದ ಕೂಡಿಕೊಂಡು ಡಾರ್ಕ್​ ಸರ್ಕಲ್​ಗಳು ಕಡಿಮೆಯಾಗುತ್ತವೆ.

(ಇಲ್ಲಿರುವ ಮಾಹಿತಿಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ )

ಇದನ್ನೂ ಓದಿ:

ಇವೇ ನೋಡಿ ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ಸ್ಥಳಗಳು; ನಿಮ್ಮ ಟ್ರಿಪ್​ ಪ್ಲಾನ್​ಗೆ ಮರೆಯದೇ ಈ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು