ಮಳೆಗಾಲದಲ್ಲಿ ಕೂದಲಿನ ಆರೈಕೆ ಮಾಡುವುದು ಸವಾಲಿನ ಕೆಲಸ. ಈ ಮಳೆಗೆ ಕೂದಲು ಒದ್ದೆಯಾಗಿಯೋ, ತಲೆ ಸ್ನಾನ ಮಾಡಿದ ನಂತರ ತಲೆ ಕೂದಲು ಒಣಗದೇ ಇದ್ದರೆಯೂ ಕೂದಲಿನ ಆರೋಗ್ಯವು ಹಾಳಾಗುತ್ತದೆ. ಈ ಸಮಯದಲ್ಲಿ ತಲೆ ಕೂದಲುದುರುವಿಕೆ, ತಲೆ ಹೊಟ್ಟಿನ ಸಮಸ್ಯೆ ಹೀಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮಳೆಗಾಲದಲ್ಲಿ ಕೂದಲಿನ ಆರೈಕೆಯತ್ತ ಹೆಚ್ಚು ಗಮನ ನೀಡಬೇಕು. ಹೆಚ್ಚು ಕಾಲ ಕೂದಲು ಒದ್ದೆಯಾಗಿರಲು ಬಿಡಬಾರದು.
ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಸರಳ ಸಲಹೆಗಳಿವು
- ಆಂಟಿ ಡ್ಯಾಂಡ್ರಫ್ ಶಾಂಪೂ ಬಳಸಿ ವಾರಕ್ಕೆ ಕನಿಷ್ಠ 3 ಬಾರಿ ತಲೆ ಕೂದಲನ್ನು ಸ್ವಚ್ಛಗೊಳಿಸಿ. ಅದಲ್ಲದೇ, ಮೈಲ್ಡ್ ಶಾಂಪೂ ಜೊತೆಗೆ ಆ್ಯಂಟಿ ಡ್ಯಾಂಡ್ರಫ್ ಶಾಂಪೂ ಬಳಸಿ ಸ್ನಾನ ಮಾಡುವುದು ಒಳ್ಳೆಯದು.
- ಮಳೆಗಾಲದಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚು. ಹೀಗಾಗಿ ಶಾಂಪೂ ಬಳಸಿದ ನಂತರ ಕಂಡೀಷನರ್ ಬಳಸಲು ಮರೆಯದಿರಿ. ಕಂಡೀಷನ್ ಬಳಸುವುದಿಲ್ಲ ಎಂದಾದರೆ ಕೂದಲಿನ ತೇವಾಂಶವನ್ನು ಉಳಿಸಿಕೊಳ್ಳಲು ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು.
- ಮಳೆಗಾಲದಲ್ಲಿ ಸ್ನಾನದ ಬಳಿಕ ಕೂದಲನ್ನು ಚೆನ್ನಾಗಿ ಒಣಗಿಸಿ. ಫ್ಯಾನ್‌ನಿಂದ ಕೂದಲನ್ನು ಒಣಗಿಸುವುದರಿಂದ ಒದ್ದೆ ಕೂದಲು ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಬಹುದು.
- ಈ ಋತುವಿನಲ್ಲಿ ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಬೇಕು. ಈ ಅಭ್ಯಾಸವು ತಲೆಬುರುಡೆಯಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲಿನ ಸಮಸ್ಯೆ ಕಡಿಮೆ ಮಾಡುತ್ತದೆ.
- ಕೂದಲು ಆರೋಗ್ಯಕರವಾಗಿರಲು, ದೈನಂದಿನ ಆಹಾರದ ಕಡೆಗೂ ಗಮನ ಕೊಡಿ. ಕೆಲವೊಮ್ಮೆ ದೇಹದಲ್ಲಿ ಪೋಷಕಾಂಶಗಳು ಇಲ್ಲದಿದ್ದರೂ ಕೂದಲಿನ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿ ಸಾಕಷ್ಟು ನೀರು, ತರಕಾರಿಗಳು, ಹಣ್ಣುಗಳನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: