ಆನ್‌ಲೈನ್‌ನಲ್ಲಿ ನೀವು ಆರ್ಡರ್‌ ಮಾಡಿದ ಫುಡ್‌ ಬದಲಿಗೆ ಬೇರೆ ಐಟಂ ಬಂದ್ರೆ ಏನ್‌ ಮಾಡ್ಬೇಕು ಗೊತ್ತಾ?

ಇಂದಿನ ಈ ಡಿಜಿಟಲ್‌ ಜಮಾನದಲ್ಲಿ ಜನ ಮನೆಯಲ್ಲಿ ಅಡುಗೆ ಮಾಡೋದಕ್ಕಿಂತ ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡೋದೇ ಹೆಚ್ಚು. ಕೆಲವೊಮ್ಮೆ ಹೀಗೆ ಫುಡ್‌ ಆರ್ಡರ್‌ ಮಾಡಿದಾಗ ನಾವು ಆಯ್ಕೆ ಮಾಡಿದ ಆಹಾರದ ಬದಲಿಗೆ ಬೇರೊಂದು ಖಾದ್ಯ ಡೆಲಿವರಿ ಆಗುವ ಸಾಧ್ಯತೆ ಇರುತ್ತದೆ. ಈ ರೀತಿ ತಪ್ಪುಗಳು ನಡೆದಾಗ ನೀವು ಮೊದಲು ಏನು ಮಾಡಬೇಕು, ಆನ್‌ಲೈನ್‌ ಫುಡ್ ಅಪ್ಲಿಕೇಶನ್‌ ಅಥವಾ ರೆಸ್ಟೋರೆಂಟ್‌ ಕಡೆಯಿಂದ ಸರಿಯಾದ ಸ್ಪಂದನೆ ಸಿಗದಿದ್ದಾಗ ಕಾನೂನು ರೀತಿಯಲ್ಲಿ ನೀವು ಹೇಗೆ ಕ್ರಮ ಕೈಗೊಳ್ಳಬಹುದು ಎಂಬುದನ್ನು ತಿಳಿಯಿರಿ.

ಆನ್‌ಲೈನ್‌ನಲ್ಲಿ ನೀವು ಆರ್ಡರ್‌ ಮಾಡಿದ ಫುಡ್‌ ಬದಲಿಗೆ ಬೇರೆ ಐಟಂ ಬಂದ್ರೆ ಏನ್‌ ಮಾಡ್ಬೇಕು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Freepik

Updated on: Oct 23, 2025 | 4:36 PM

ಇಂದಿನ ಈ ಡಿಜಿಟಲ್‌ ಯುಗದಲ್ಲಿ ಜನ ಬಟ್ಟೆ ಬರೆ ಮಾತ್ರವಲ್ಲ ಊಟವನ್ನು ಸಹ ಆನ್‌ಲೈನ್‌ನಲ್ಲಿಯೇ (online) ಆರ್ಡರ್‌ ಮಾಡುತ್ತಾರೆ. ಹೀಗೆ ಫುಡ್‌ ಆರ್ಡರ್‌ ಮಾಡಿದ ಸಂದರ್ಭದಲ್ಲಿ ತಪ್ಪಾದ ಪಾರ್ಸೆಲ್‌ ಬರುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ವೆಜ್‌ ಬಿರಿಯಾನಿ ಆರ್ಡರ್‌ ಮಾಡಿದ್ರೆ ಚಿಕನ್‌ ಬಿರಿಯಾನಿ ಬರುವಂತಹ ಸಾಧ್ಯತೆ ಇರುತ್ತದೆ. ಇಂತಹ ಒಂದಷ್ಟು ಎಡವಟ್ಟುಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಹೀಗಾದಾಗ ಹೆಚ್ಚಿನವರು ಆಯಾ ಫುಡ್‌ ಆಪ್ಲಿಕೇಷನ್‌ನ ಕಸ್ಟಮರ್‌ ಕೇರ್‌ಗೆ ದೂರು ನೀಡುತ್ತಾರೆ. ಈ ರೀತಿ ದೂರು ನೀಡಿದಾಗ ಸರಿಯಾದ ಸ್ಪಂದನೆ ಸಿಗದಿದ್ದರೆ, ನೀವು ಮಾಡಬೇಕಾದದ್ದು ಏನು,  ಕಾನೂನಿನ ರೀತಿಯಲ್ಲಿ ನೀವು ಹೇಗೆ ಕ್ರಮ ಕೈಗೊಳ್ಳಬಹುದು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ತಪ್ಪಾದ ಪಾರ್ಸೆಲ್‌ ಬಂದ್ರೆ ಏನು ಮಾಡಬೇಕು?

ಮೊದಲು, ವಿತರಣಾ ಅಪ್ಲಿಕೇಶನ್‌ಗೆ ದೂರು ನೀಡಿ: ನೀವು ಝೊಮ್ಯಾಟೊ, ಸ್ವಿಗ್ಗಿ ಅಥವಾ ಇತರೆ ಯಾವುದೇ  ಫುಡ್‌ ಅಪ್ಲಿಕೇಶನ್ ಮೂಲಕ ಆಹಾರವನ್ನು ಆರ್ಡರ್ ಮಾಡಿದಾಗ, ನೀವು ಆಯ್ಕೆ ಮಾಡಿದ ಆಹಾರದ ಬದಲಿಗೆ ಬೇರೊಂದು ಫುಡ್‌ ಡೆಲಿವರಿಯಾದ್ರೆ ಅಂದರೆ ತಪ್ಪಾದ ಪಾರ್ಸೆಲ್‌ ಬಂದರೆ ತಕ್ಷಣವೇ ನೀವು ಆಯಾ ಅಪ್ಲಿಕೇಶನ್‌ ಸಹಾಯ ವಾಣಿ, ಕಸ್ಟಮರ್‌ ಕೇರ್‌ ವಿಭಾಗಕ್ಕೆ ದೂರ ಸಲ್ಲಿಸಬಹುದು. ಹೆಚ್ಚಿನ ಸಂದರ್ಭದಲ್ಲಿ ದೂರು ನೀಡಿದಾಗ ತಕ್ಷಣವೇ ಫುಡ್‌ ಆಪ್ಲಿಕೇಶನ್‌ಗಳು ಮರು ಪಾವತಿ ಮಾಡುತ್ತವೆ. ಆದರೆ ಇಲ್ಲಿ ಸರಿಯಾಗಿ ಸ್ಪಂದನೆ ಸಿಗದಿದ್ದರೆ ನೇರವಾಗಿ ರೆಸ್ಟೋರೆಂಟನ್ನು ಸಂಪರ್ಕಿಸಬಹುದು.

ನೇರವಾಗಿ ರೆಸ್ಟೋರೆಂಟ್‌ಗೆ ಕರೆ ಮಾಡಿ: ಫುಡ್‌ ಡೆಲಿವರಿ ಅಪ್ಲಿಕೇಶನ್ ಸಹಾಯ ಮಾಡದಿದ್ದರೆ, ನಿಮಗೆ ಯಾವ ರೆಸ್ಟೋರೆಂಟ್‌ನಿಂದ ಆಹಾರ ಬಂದಿದೆಯೋ, ಆ ರೆಸ್ಟೋರೆಂಟ್‌ಗೆ ಕರೆ ಮಾಡಿ. ಹೆಚ್ಚಿನ ಸಂದರ್ಭದಲ್ಲಿ ಕ್ಷಮೆ ಕೇಳಿ ಸರಿಯಾದ ಆರ್ಡರ್‌ ಡೆಲಿವರಿ ಮಾಡುವ ಪ್ರಯತ್ನ ಮಾಡುತ್ತವೆ, ಇಲ್ಲವೇ ನೀವು ಪಾವತಿಸಿದ ಹಣವನ್ನು ಮರು ಪಾವತಿ ಮಾಡುತ್ತವೆ.

ಇದನ್ನೂ ಓದಿ
ನೆರೆಹೊರೆಯವರು ನಿಮ್ಮ ಜಾಗದಲ್ಲಿ ಕಸ ಎಸೆದರೆ ಹೇಗೆ ಕ್ರಮ ಕೈಗೊಳ್ಳಬಹುದು?
ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವೇ?
ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವೇ?
ಬಾವಿಗಳನ್ನು ದುಂಡಗಿನ ಆಕಾರದಲ್ಲಿಯೇ ನಿರ್ಮಿಸೋದೇಕೆ ಗೊತ್ತಾ?

ಸಾಕ್ಷಿ ಇಟ್ಟುಕೊಳ್ಳಿ: ನೀವು ಆರ್ಡರ್‌ ಮಾಡಿದ ಫುಡ್‌ ಬದಲಿಗೆ ತಪ್ಪಾಗಿ ಬೇರೊಂದು ಆಹಾರ ಡೆಲಿವರಿಯಾದ್ರೆ, ತಕ್ಷಣ ಅದರ ಫೋಟೋವನ್ನು ಸಾಕ್ಷಿ ರೂಪದಲ್ಲಿ ತೆಗೆದಿಟ್ಟುಕೊಳ್ಳಿ. ಇದಲ್ಲದೆ ಆರ್ಡರ್‌ಗಾಗಿ ಮಾಡಿದ ಪಾವತಿಯ ಸ್ಕ್ರೀನ್‌ಶಾಟ್ ಅಥವಾ ವಹಿವಾಟು ಐಡಿಯನ್ನುಇಟ್ಟುಕೊಳ್ಳಿ. ಏಕೆಂದರೆ ಅದನ್ನು ಮರುಪಾವತಿಗೆ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ.

ಗ್ರಾಹಕ ವೇದಿಕೆಯಲ್ಲಿ ದೂರು: ನಿಮಗಾದ ನಷ್ಟ ದೊಡ್ಡದಾಗಿದ್ದರೆ ಮತ್ತು ಅಪ್ಲಿಕೇಶನ್ ಅಥವಾ ರೆಸ್ಟೋರೆಂಟ್ ನೀವು ನೀಡಿದ ದೂರಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದರೆ, ನೀವು ಗ್ರಾಹಕ ಸಹಾಯವಾಣಿ (1915) ಗೆ ಕರೆ ಮಾಡಬಹುದು ಅಥವಾ consumerhelpline.gov.in ನಲ್ಲಿ ಆನ್‌ಲೈನ್‌ ದೂರು ಸಲ್ಲಿಸಬಹುದು. ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಅಡಿಯಲ್ಲಿ ನೀವು ನಿಮಗಾದ ನಷ್ಟಕ್ಕೆ ಮರುಪಾವತಿ, ಪರಿಹಾರವನ್ನು ಪಡೆಯಬಹುದು.

ಇದನ್ನೂ ಓದಿ: ನೆರೆಹೊರೆಯವರು ನಿಮ್ಮ ಜಾಗದಲ್ಲಿ ಕಸ ಎಸೆದರೆ ಕಾನೂನು ರೀತಿಯಲ್ಲಿ ಹೇಗೆ ಕ್ರಮ ಕೈಗೊಳ್ಳಬಹುದು?

ಹಾಳಾದ ಆಹಾರ ಬಂದರೆ ಪರಿಹಾರಕ್ಕೆ ಏನು ಮಾಡಬೇಕು:

ಅಲ್ಲದೆ ನೀವು ಆರ್ಡರ್‌ ಮಾಡಿದ ಫುಡ್‌ ತಿಂದು ಆರೋಗ್ಯದಲ್ಲಿ ಏರುಪೇರಾದರೆ ಅಥವಾ ಆಹಾರವು ಕಳಪೆ ಗುಣಮಟ್ಟದ್ದಾಗಿದ್ದರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ ಅಡಿಯಲ್ಲಿಯೂ ಕ್ರಮ ಕೈಗೊಳ್ಳಬಹುದು. ಒಬ್ಬ ಗ್ರಾಹಕರಾಗಿ, ನಿಮ್ಮ ಈ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ  ಬಹಳ ಮುಖ್ಯ. ಸರಿಯಾಗಿ ದೂರು ನೀಡುವುದರಿಂದ ನಿಮಗೆ ಪರಿಹಾರ ಸಿಗುತ್ತದೆ ಮತ್ತು ಇದು ಇತರ ಗ್ರಾಹಕರಿಗೂ ಸಹಾಯವಾಗುತ್ತದೆ.

ಇದು ಮಾತ್ರವಲ್ಲದೆ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ನೀಡುವ ಮೂಲಕ ಇತರ ಗ್ರಾಹಕರಿಗೆ ಎಚ್ಚರಿಕೆ ನೀಡಬಹುದು. ನೀವು ನೀಡುವ ರೇಟಿಂಗ್ಸ್‌ ಫುಡ್‌ ಡೆಲಿವರಿ ಆಪ್ಲಿಕೇಶನ್‌ ಮತ್ತು ರೆಸ್ಟೋರೆಂಟ್‌ ವ್ಯವಹಾರದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ