
ಸಾಮಾನ್ಯವಾಗಿ ಮೊಸರನ್ನು ಎಲ್ಲರೂ ಇಷ್ಟಪಟ್ಟೆ ಸೇವಿಸುತ್ತಾರೆ. ಅನ್ನ, ಮೊಸರು ಹಾಗೂ ಉಪ್ಪಿನಕಾಯಿ ಇದ್ದು ಬಿಟ್ಟರೆ, ಯಾವ ಊಟಕ್ಕೂ ಇದು ಕಡಿಮೆಯಿಲ್ಲ. ಈ ಮೊಸರಿನಲ್ಲಿ ವಿಟಮಿನ್ ಬಿ 2, ವಿಟಮಿನ್ ಬಿ 12, ಪೊಟ್ಯಾಸಿಯಮ್ ಮತ್ತು ಮೆಗ್ನೀಷಿಯಂ ಪೋಷಕಾಂಶಗಳನ್ನು ಹೊಂದಿರುವ ಹೇರಳವಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಆರೋಗ್ಯಕ್ಕೆ ಮಾತ್ರವಲ್ಲದೇ ಮುಖದ ಅಂದವನ್ನು ಹೆಚ್ಚಿಸಲು ಈ ಮೊಸರನ್ನು ಬಳಸಬಹುದು.
* ಎರಡು ಚಮಚ ಮೊಸರಿಗೆ ಒಂದು ಚಿಟಿಕೆಯಷ್ಟು ಸಕ್ಕರೆ ಹಾಕಿ ಸೇರಿಸಿ ಇದನ್ನು ಮುಖಕ್ಕೆ ಹಚ್ಚಿ, ಸುಮಾರು 15 ನಿಮಿಷ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ಇದು ಮುಖದಲ್ಲಿನ ಕೊಳೆಯೂ ನಿವಾರಣೆ ಮಾಡಿ ಮುಖದ ಕಾಂತಿ ಹೆಚ್ಚಿಸುತ್ತದೆ.
* ಒಂದು ಚಮಚ ಮೊಸರನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಅರ್ಧ ಗಂಟೆ ನಂತರ ಮುಖವನ್ನು ತೊಳೆದರೆ ಕಪ್ಪುಕಲೆ ಮಾಯವಾಗುತ್ತದೆ.
* ಅರ್ಧ ಕಪ್ ಮೊಸರಿಗೆ ಮೂರು ಚಮಚ ತುರಿದ ಸೌತೆಕಾಯಿಯನ್ನು ಬೆರೆಸಿ, ಈ ಮಿಶ್ರಣವನ್ನು ಡಾರ್ಕ್ ಸರ್ಕಲ್ ಹಾಗೂ ಟ್ಯಾನ್ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಹದಿನೈದು ನಿಮಿಷಗಳ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆದರೆ ಮುಖದ ಕಾಂತಿಯು ಹೆಚ್ಚಾಗುತ್ತದೆ.
ಇದನ್ನೂ ಓದಿ: ಬೆಳಗ್ಗೆ 8 ಗಂಟೆಯಾದ್ರೂ ಹಾಸಿಗೆಯಲ್ಲೇ ಇರ್ತೀರಾ? ಬೇಗ ಏಳಲು ಇಲ್ಲಿದೆ ಟಿಪ್ಸ್
* ಒಂದು ಚಮಚ ಕಡಲೆ ಹಿಟ್ಟಿಗೆ 2 ಚಮಚ ಮೊಸರನ್ನು ಸೇರಿಸಿ, ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖ ತೊಳೆದರೆ ಮುಖದ ಮೇಲಿನ ಜಿಡ್ಡಿನ ಅಂಶವು ಕಡಿಮೆಯಾಗುತ್ತದೆ.
* ಎರಡು ಚಮಚ ಮೊಸರಿಗೆ ಒಂದು ಚಮಚ ಅರಶಿಣವನ್ನು ಸೇರಿಸಿ ಮಿಶ್ರಣ ಮಾಡಿ, ಇದನ್ನು ಮುಖಕ್ಕೆ ಲೇಪಿಸಿದರೆ ಮುಖದ ಕಾಂತಿಯು ಹೆಚ್ಚಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: