Mahashivaratri Special Sweet : ಶಿವನಿಗೆ ಈ ಉಂಡೆ ಪಂಚಪ್ರಾಣ, ಹತ್ತೇ ನಿಮಿಷದಲ್ಲಿ ತಯಾರಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 05, 2024 | 2:16 PM

ಭಾರತದಲ್ಲಿ ಆಚರಿಸಲಾಗುವ ಹಬ್ಬಗಳಲ್ಲಿ ಶಿವರಾತ್ರಿ ಕೂಡ ಒಂದು. ರಾಜ್ಯದ ನಾನಾ ಕಡೆಗಳಲ್ಲಿ ಮಹಾ ಶಿವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ದಿನದಂದು ವ್ರತ ಹಾಗೂ ಆಚರಣೆಯ ಮೂಲಕ ಶಿವನಿಗೆ ಪ್ರಿಯವಾದ ತಿಂಡಿ ತಿನಿಸಗಳನ್ನು ಮಾಡಿ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಶಿವನಿಗೆ ಪ್ರಿಯವಾದ ಹುರಿಗಡಲೆ ತಂಬಿಟ್ಟು ಉಂಡೆಯನ್ನು ಮನೆಯಲ್ಲೇ ತಯಾರಿಸಿ ದೇವರಿಗೆ ಅರ್ಪಿಸಬಹುದಾಗಿದೆ. ಈ ಹುರಿಗಡಲೆ ತಂಬಿಟ್ಟು ಮಾಡಲು ಮನೆಯಲ್ಲಿ ಕೆಲವೇ ಕೆಲವು ಪದಾರ್ಥಗಳಿದ್ದರೆ ಸಾಕು, ಹತ್ತೇ ಹತ್ತು ನಿಮಿಷದಲ್ಲಿ ಈ ಸಿಹಿ ತಿಂಡಿಯೂ ರೆಡಿಯಾಗುತ್ತದೆ.

Mahashivaratri Special Sweet : ಶಿವನಿಗೆ ಈ ಉಂಡೆ ಪಂಚಪ್ರಾಣ, ಹತ್ತೇ ನಿಮಿಷದಲ್ಲಿ ತಯಾರಿಸಿ
ಸಾಂದರ್ಭಿಕ ಚಿತ್ರ
Follow us on

ಹಬ್ಬಗಳ ದಿನದಂದು ಎಲ್ಲರ ಮನೆಯಲ್ಲಿಯೂ ಸಂಭ್ರಮವು ಮನೆ ಮಾಡಿರುತ್ತವೆ. ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ಹಬ್ಬದಡುಗೆಯಲ್ಲಿ ಸವಿಯುತ್ತಾರೆ. ವೈರಂಟಿಯಾದ ಸಿಹಿ ತಿಂಡಿಗಳ ಮಾಡಿ ಸವಿದರೆ ಹಬ್ಬಕ್ಕೆ ನಿಜವಾದ ಕಳೆಯೂ ಬರುವುದು. ಮಹಾಶಿವರಾತ್ರಿಗೆ ಇನ್ನೇನು ಕೆಲವೇ ದಿನಗಳುಬಾಕಿಯಿವೆ. ಶಿವನಿಗೆ ಪ್ರಿಯವಾದ ಹುರಿಗಡಲೆ ತಂಬಿಟ್ಟು ಉಂಡೆಯನ್ನು ಮನೆಯಲ್ಲೇ ಇರುವ ಪದಾರ್ಥಗಳಿಂದ ಮಾಡಿ ಶಿವನಿಗೆ ಅರ್ಪಿಸಬಹುದು.

ಹುರಿಗಡಲೆ ತಂಬಿಟ್ಟು ಉಂಡೆ ಮಾಡಲು ಬೇಕಾಗುವ ಪದಾರ್ಥಗಳು

* 1 ಕಪ್ ಹುರಿಗಡಲೆ

* 1/2 ಕಪ್ ಒಣ ತೆಂಗಿನಕಾಯಿ ತುರಿ

* 3/4 ಕಪ್ ಬೆಲ್ಲ

* 1/4 ಕಪ್ ತುಪ್ಪ

* 1 ಚಮಚ ಗಸಗಸೆ ಬೀಜಗಳು

* ಘಮಕ್ಕೆ ಏಲಕ್ಕಿಪುಡಿ

ಇದನ್ನೂ ಓದಿ: ಸಂಧಿವಾತಕ್ಕೆ ದಿವ್ಯ ಔಷಧಿ ನಿಮ್ಮ ಅಡುಗೆ ಮನೆಯಲ್ಲಿದೆ, ಸಿಂಪಲ್ ಮನೆ ಮದ್ದು

ಹುರಿಗಡಲೆ ತಂಬಿಟ್ಟು ಉಂಡೆ ಮಾಡುವ ವಿಧಾನ

* ಮೊದಲಿಗೆ ಮಿಕ್ಸಿ ಜಾರಿನಲ್ಲಿ ಹುರಿಗಡಲೆ ಹಾಗೂ ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ಹುರಿಯಲು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಗಸಗಸೆ ಬೀಜಗಳನ್ನು ಹಾಕಿ ಸಣ್ಣಗೆ ಉರಿಯಲ್ಲಿ ಹುರಿದು ಪಕ್ಕಕ್ಕೆ ಇರಿಸಿ.

* ಆ ಬಳಿಕ ಅದೇ ಬಾಣಲೆಗೆ ಒಣ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಹುರಿದುಕೊಂಡು, ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ವರ್ಗಾಯಿಸಿ ಒರಟಾಗಿ ರುಬ್ಬಿಕೊಳ್ಳಿ.

* ನಂತರದಲ್ಲಿ ಬಾಣಲೆಯಲ್ಲಿ 1/4 ಕಪ್ ತುಪ್ಪವನ್ನು ತೆಗೆದುಕೊಂಡು, ಅದಕ್ಕೆ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ. ಬೆಲ್ಲವು ಕರಗುವಂತೆ ಚೆನ್ನಾಗಿ ಬೆರೆಸಿಕೊಳ್ಳಿ.

* ಈ ಬಾಣಲೆಗೆ ಈಗಾಗಲೇ ರುಬ್ಬಿದ ತೆಂಗಿನಕಾಯಿ ಸೇರಿಸಿಕೊಂಡು, ಗಸಗಸೆ ಹಾಗೂ ಹುರಿಗಡಲೆಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

* ತುಪ್ಪವು ಕಡಿಮೆಯೆಂದೆನಿಸಿದ್ದಲ್ಲಿ ಒಂದೆರಡು ಚಮಚ ತುಪ್ಪ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಬಿಸಿಯಿರುವಾಗಲೇ ಉಂಡೆಗಳನ್ನು ಕಟ್ಟಿಕೊಳ್ಳಿ. ಹೀಗೆ ಮಾಡಿದ್ದಲ್ಲಿ ಹತ್ತೇ ಹತ್ತು ನಿಮಿಷದಲ್ಲಿ ಹುರಿಗಡಲೆ ತಂಬಿಟ್ಟು ಉಂಡೆ ಸವಿಯಲು ಸಿದ್ಧವಾಗಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ