Summner Holidays : ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಚೆಲ್ಲಾಟ, ಹೆತ್ತವರಿಗೆ ಪ್ರಾಣ ಸಂಕಟ, ಯೋಚನೆ ಬೇಡ ಪೋಷಕರೇ ಹೀಗೆ ಮಾಡಿ
ಎಲ್ಲಾ ಮಕ್ಕಳು ಪರೀಕ್ಷೆ ಮುಗಿಯುತ್ತಿದ್ದಂತೆ ಯಾವಾಗ ಬೇಸಿಗೆಯ ರಜೆ ಶುರುವಾಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ ಹೆತ್ತ ತಂದೆ ತಾಯಿಯಾಗಿಗಂತೂ ಯಾಕಾದರೂ ಮಕ್ಕಳಿಗೆ ರಜೆ ಬರುತ್ತದೆ ಎಂದು ಗೊಣಗುತ್ತಿರುತ್ತಾರೆ. ಮಕ್ಕಳ ತರಲೆ ಹರಟೆಯನ್ನು ಸಹಿಸಿಕೊಳ್ಳಲು ಪೋಷಕರಿಗಂತೂ ಆಗುವುದೇ ಇಲ್ಲ. ಅದರಲ್ಲಿಯು ತಂದೆ ತಾಯಿರಿಬ್ಬರೂ ಕೆಲಸದಲ್ಲಿ ಬಿಟ್ಟರೆ ಕೇಳುವುದೇ ಬೇಡ. ರಜೆ ಶುರುವಾಗುತ್ತಿದ್ದಂತೆ ಮಕ್ಕಳಿಗೆ ಇಷ್ಟವಿಲ್ಲದೇ ಹೋದರೂ ಮಕ್ಕಳನ್ನು ಕ್ಯಾಂಪ್ ಗಳಿಗೆ ಸೇರಿಸಿ ತಮ್ಮ ತಲೆ ಬಿಸಿಯನ್ನು ದೂರ ಮಾಡಿಕೊಳ್ಳುತ್ತಾರೆ. ಆದರೆ ಅವರ ಬೇಸಿಗೆಯ ರಜೆಯನ್ನು ಅರ್ಥ ಪೂರ್ಣಗೊಳಿಸಲು ಕಳೆಯುವುದಕ್ಕೆ ಪೋಷಕರು ಪ್ಲಾನ್ ಮಾಡಿಕೊಳ್ಳುವುದು ಅಗತ್ಯ.
ಬೇಸಿಗೆಯ ರಜೆ ಶುರುವಾಯಿತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ವರ್ಷ ಪೂರ್ತಿ ಪುಸ್ತಕ, ಪೆನ್, ಪೆನ್ಸಿಲ್, ಓದು ಟ್ಯೂಷನ್ ಎಂದು ಬ್ಯುಸಿಯಾಗಿರುತ್ತಿದ್ದ ಮಕ್ಕಳು ಸ್ವಚಂದವಾಗಿ ಆಟ ಆಡಲು ಇರುವ ಸಮಯವಿದು. ಆದರೆ ಹೆಚ್ಚಿನ ತಂದೆ ತಾಯಿಯರು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳನ್ನು ಕೊಟ್ಟು ಓದು ಓದು ಹೇಳುವುದೇ ಹೆಚ್ಚು. ಅದಲ್ಲದೇ ಕೆಲವರಂತೂ ಅಕ್ಷರಗಳು ಹಾಗೂ ಹಿಂದಿನ ತರಗತಿಯ ಪಠ್ಯಗಳು ಮರೆತು ಹೋಗಬಾರದೆನ್ನುವ ಕಾರಣಕ್ಕೆ ಟ್ಯೂಷನ್ ಗೂ ಕಳುಹಿಸುತ್ತಾರೆ. ಪೋಷಕರು ಮಕ್ಕಳಿಗೆ ರಜಾ ಸಮಯವನ್ನು ಎಂಜಾಯ್ ಮಾಡಲು ಬಿಡುವುದು ಒಳ್ಳೆಯದು. ಈ ಸಮಯದಲ್ಲಿ ಮಕ್ಕಳ ಜೊತೆಗೆ ನೀವು ಮಗುವಾಗುವುದನ್ನು ಕಲಿತು ಅವರ ಇಷ್ಟದಂತೆ ಇದ್ದರೆ ನಿಮ್ಮ ಮಕ್ಕಳಿಗೆ ಖುಷಿಯಾಗುವುದರಲ್ಲಿ ಎರಡು ಮಾತಿಲ್ಲ.
- ಮಕ್ಕಳ ಜೊತೆಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ: ಬೇಸಿಗೆಯ ವಿರಾಮದ ಸಮಯದಲ್ಲಿ ನಿಮ್ಮ ಮಕ್ಕಳನ್ನು ಸೂರ್ಯಸ್ತ ವೀಕ್ಷಣೆಗೆ ಕರೆದುಕೊಂಡು ಹೋಗಿ ಇಲ್ಲವಾದರೆ ನಿಮ್ಮ ಸುತ್ತ ಮುತ್ತಲಿನಲ್ಲಿಯೇ ಇರುವ ಹೊಸ ಹೊಸ ಸ್ಥಳಗಳನ್ನು ತೋರಿಸಿ. ಪ್ರೇಕ್ಷಣೀಯ ಸ್ಥಳಗಳಾಗಿದ್ದರೆ, ಆ ಬಗ್ಗೆ ನಿಮ್ಮ ಮಕ್ಕಳಿಗೆ ಆ ಸ್ಥಳದ ಇತಿಹಾಸದ ಬಗ್ಗೆ ಹೇಳುವುದರಿಂದ ಮಕ್ಕಳ ಕುತೂಹಲವು ಹೆಚ್ಚುತ್ತದೆ.
- ಸಂಗೀತ ತರಗತಿಗೆ ಸೇರಿಸಿ : ಒಂದು ವೇಳೆ ನಿಮ್ಮ ಮಕ್ಕಳಿಗೆ ಸಂಗೀತದ ಬಗ್ಗೆ ಒಲವು ಹೊಂದಿದ್ದರೆ ಸಂಗೀತ ಕ್ಲಾಸ್ ಗೆ ಸೇರಿಸಿ ಅವರ ಪ್ರತಿಭೆಯನ್ನು ಹೊರ ತೆಗೆಯುವ ಪ್ರಯತ್ನವು ತಂದೆ ತಾಯಿಯರಾದ ನಿಮ್ಮದಾಗಲಿ. ಸಂಗೀತ ವಾದ್ಯಗಳನ್ನು ನುಡಿಯುವುದನ್ನು ಕಲಿಯುವ ಅಭ್ಯಾಸವು ಮಕ್ಕಳಲ್ಲಿ ಸ್ಮರಣಾ ಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ.
- ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಿ : ಮಕ್ಕಳಿಗೆ ಬೇಸಿಗೆಯ ರಜಾದಿನಗಳಲ್ಲಿ ಅವರ ಆಯ್ಕೆಯ ಕ್ರೀಡೆಯನ್ನು ಆಯ್ಕೆ ಮಾಡಲು ಪ್ರೇರೇಪಿಸುವುದು ಒಳ್ಳೆಯದು. ದೈಹಿಕವಾಗಿ ಆಡುವ ಆಟಗಳಾದ ಖೋಖೊ, ಕಬಡ್ಡಿ ಹೀಗೆ ನಾನಾ ರೀತಿಯ ಆಟಗಳನ್ನು ಆಡುವತ್ತ ಪ್ರೇರೆಪಿಸುವುದರಿಂದ ಮಕ್ಕಳು ಫಿಟ್ ಆಗಿರಲು ಸಹಾಯ ಮಾಡುತ್ತದೆ.
- ಮೋಜು ಮಸ್ತಿ ಮಾಡುವ ಸ್ಥಳಗಳಿಗೆ ಭೇಟಿ ನೀಡಿ : ಬೇಸಿಗೆ ರಜೆ ಎಂದರೆ ಪ್ರವಾಸ, ಮೋಜು, ಮಸ್ತಿಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಮಕ್ಕಳಲ್ಲಿ ಪರೀಕ್ಷಾ ಟೆನ್ಶನ್ ಕಳೆದು ಮೈಂಡ್ ಫ್ರೀ ಆಗಿರುತ್ತಾರೆ. ಹೀಗಾಗಿ ಪರ್ವತಗಳು ಅಥವಾ ಕಡಲತೀರಗಳಿಗೆ ಕರೆದುಕೊಂಡು ಹೋಗಿ ಟ್ರಕ್ಕಿಂಗ್ ಹಾಗೂ ಬೋಟಿಂಗ್ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಒಳ್ಳೆಯದು.
- ಅಡುಗೆ ಕಲಿಯುವ ಅಭ್ಯಾಸವನ್ನು ಕಲಿಸಿ: ಮಕ್ಕಳಿಗೆ ಅಡುಗೆಯ ಬಗ್ಗೆ ಆಸಕ್ತಿಯಿದ್ದರೆ ಮಕ್ಕಳ ಜೊತೆಗೆ ವೈರಂಟಿ ರೆಸಿಪಿಗಳನ್ನು ಟ್ರೈ ಮಾಡಿ ಸವಿಯಿರಿ. ಅದಲ್ಲದೇ ತಾಯಂದಿರು ತಮ್ಮ ಮಕ್ಕಳ ಹೆಲ್ಪ್ ತಗೆದುಕೊಳ್ಳುವ ಅಭ್ಯಾಸ ವನ್ನು ಇಟ್ಟುಕೊಳ್ಳಿ.
- ಓದುವ ಹವ್ಯಾಸವನ್ನು ಬೆಳೆಸಿ : ಮಕ್ಕಳಿಗೆ ವರ್ಷ ಪೂರ್ತಿ ಪಠ್ಯ ಪುಸ್ತಕಗಳನ್ನು ಓದಿ, ಸಾಕಾಗಿರುತ್ತದೆ. ರಜೆಯ ಸಮಯದಲ್ಲಿ ಕಥೆ ಪುಸ್ತಕಗಳನ್ನು ಓದಲು ಕೊಡುವುದು ಬೆಸ್ಟ್. ಇದು ಮಕ್ಕಳನ್ನು ರಿಲ್ಯಾಕ್ಸ್ ಆಗಿಸುತ್ತದೆ. ಮಕ್ಕಳು ನೀತಿ ಆಧಾರಿತ ಕಥೆಗಳನ್ನು ಓದುವುದರಿಂದ ನೀತಿ ಪಾಠವನ್ನು ಕಲಿತುಕೊಳ್ಳುತ್ತಾರೆ. ಹಾಗೂ ಓದುವ ಹವ್ಯಾಸವು ಹೆಚ್ಚಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ