Banana Leaf: ಬಾಳೆ ಎಲೆಯ ಕಷಾಯದಿಂದ ಈ ರೋಗ ಮಾಯಾ

ಭಾರತದಲ್ಲಿ ಧಾರ್ಮಿಕವಾಗಿ ಬಾಳೆಎಲೆಗೆ ವಿಶೇಷವಾದ ಮಹತ್ವ ನೀಡಲಾಗಿದೆ. ಶುಭ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಬಾಳೆ ಎಲೆಯು ಅವಶ್ಯಕವಾಗಿರಲೇ ಬೇಕು. ಇಂದಿಗೂ ಹಲವೆಡೆಯಲ್ಲಿ ಪ್ರತಿದಿನ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿಯಿದೆ. ಕೆಲವೆಡೆಗಳಲ್ಲಿ ಈ ಪದ್ಧತಿಯನ್ನು ಹಬ್ಬ ಹರಿದಿನಗಳಲ್ಲಿ ಮಾತ್ರ ಕಾಣಬಹುದಾಗಿದೆ. ಆದರೆ ಈ ಎಲೆಗೆ ರೋಗಗಳನ್ನು ಗುಣಪಡಿಸುವ ಶಕ್ತಿಯಿದ್ದು, ಔಷಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಈ ಬಾಳೆಎಲೆಯು ತ್ವಚೆರಕ್ಷಣೆಯಲ್ಲಿ ಬಹುಮುಖ್ಯವಾಗಿದೆ.

Banana Leaf: ಬಾಳೆ ಎಲೆಯ ಕಷಾಯದಿಂದ ಈ ರೋಗ ಮಾಯಾ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 05, 2024 | 10:09 AM

ನಾವಿಂದು ಆಧುನಿಕ ಕಾಲಘಟ್ಟಕ್ಕೆ ತೆರೆದುಕೊಂಡಿದ್ದೇವೆ. ಹೀಗಾಗಿ ನಮ್ಮ ಹಿರಿಯರು ಮಾಡಿಕೊಂಡು ಬಂದಿರುವ ಆಚಾರ ವಿಚಾರಗಳನ್ನು ಪಾಲನೆ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದೇವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಆಚಾರ ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ನಮ್ಮ ಹಿರಿಯರು ದಿನನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು. ಆದರೆ ಪೂರ್ವಜರು ಜೀವನದಲ್ಲಿ ಅಳವಡಿಸಿಕೊಂಡ ಕೆಲವೊಂದು ಆಚರಣೆಗಳಿಂದ ಆರೋಗ್ಯಕ್ಕೆ ಪ್ರಯೋಜನಕಾರಿ ಅಂಶಗಳಿದ್ದವು ಎನ್ನುವುದನ್ನು ಮರೆಯುವಂತಿಲ್ಲ.

  • ಚಿಕ್ಕ ಗಾಯವಾಗಿದ್ದರೆ ಬಾಳೆ ಎಲೆಯ ರಸ ಹಚ್ಚುವುದರಿಂದ ಶೀಘ್ರವೇ ವಾಸಿಯಾಗುತ್ತದೆ.
  • ಒಂದು ಐಸ್ ತುಂಡನ್ನು ಬಾಳೆ ಎಲೆಯಲ್ಲಿ ಸುತ್ತಿ, ಮಸಾಜ್ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಆರಾಮದಾಯಕ ಅನುಭವವಾಗುತ್ತದೆ.
  • ಚರ್ಮದ ಅಲರ್ಜಿಯಿರುವವರು ಬಾಳೆ ಎಲೆ ರಸ ಹಾಕುವುದರಿಂದ ಗುಣ ಮುಖವಾಗುತ್ತದೆ.
  • ಬಾಳೆ ಎಲೆಯ ಕಷಾಯವನ್ನು ದಿನಕ್ಕೆ ಒಂದು ಬಾರಿ ಕುಡಿಯುವುದರಿಂದ ಜ್ವರವೂ ಕಡಿಮೆಯಾಗುತ್ತದೆ.
  • ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ.
  • ಒಣಗಿದ ಬಾಳೆ ಎಲೆಯ ಸೇವನೆಯಿಂದ ರಕ್ತಸ್ರಾವದಿಂದ ಕೂಡಿದ ಭೇದಿಯು ನಿವಾರಣೆಯಾಗುತ್ತದೆ
  • ಬಾಳೆ ಎಲೆಯ ರಸವನ್ನು ತೆಗೆದು ಕೂದಲ ಬುಡಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡುವುದರಿಂದ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.
  • ಸುಟ್ಟ ಗಾಯಗಳಿದ್ದರೆ ಬಾಳೆ ಎಲೆಯನ್ನು ಶುಂಠಿ ಎಣ್ಣೆಯಲ್ಲಿ ಅದ್ದಿಕೊಂಡು ಗಾಯದ ಮೇಲೆ ಕಟ್ಟಿಕೊಂಡರೆ ಗಾಯವು ಬೇಗನೇ ಗುಣಮುಖವಾಗುತ್ತದೆ.
  • ಗರ್ಭಿಣಿಯರು ಬಾಳೆ ಎಲೆಯಲ್ಲಿ ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡರೆ ಹುಟ್ಟುವ ಮಗುವಿನ ಆರೋಗ್ಯವು ಉತ್ತಮವಾಗಿರುತ್ತದೆ.
  • ಹಸಿ ಮೆಣಸಿನಕಾಯಿ ಗಿಡದ ಚಿಗುರಿನ ಎಲೆ, ದೊಡ್ಡ ಪತ್ರೆ ಎಲೆ ಮತ್ತು ಬಾಳೆ ಎಲೆಯ ರಸವನ್ನು ಮುಖದಲ್ಲಿರುವ ಕಲೆ, ತುರಿಕೆಯಂತಹ ಸಮಸ್ಯೆಗಳಿಗೆ ಹಚ್ಚುವುದರಿಂದ ಗುಣಮುಖವಾಗುತ್ತದೆ.
  • ಸೊಳ್ಳೆ ಕಚ್ಚಿ ಗುಳ್ಳೆಗಳಾಗಿದ್ದರೆ ಬಾಳೆ ಎಲೆಯ ರಸ, ಆಲೀವ್ ಎಣ್ಣೆ, ಮೇಣವನ್ನು ಸೇರಿಸಿ ಹಚ್ಚುವುದರಿಂದ ಗುಳ್ಳೆಗಳು ನಿವಾರಣೆಯಾಗುತ್ತದೆ.
  • ಬಾಳೆಎಲೆಯ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಯು ಹೆಚ್ಚಾಗುತ್ತದೆ.

ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ