Pregnancy: ಗರ್ಭಿಣಿಯರು ಕೂದಲಿಗೆ ಕಲರಿಂಗ್ ಮಾಡಿಸಿದರೆ ಏನಾಗುತ್ತದೆ?
ಮಹಿಳೆ ಗರ್ಭಿಣಿಯಾಗುತ್ತಿದ್ದಂತೆ ಆಕೆಯ ಮೇಲೆ ನಾನಾ ನಿರ್ಬಂಧಗಳನ್ನು ಹೇರಲಾಗುತ್ತದೆ. ಎಷ್ಟೋ ಮಹಿಳೆಯರಿಗೆ ಗರ್ಭಾವಸ್ಥೆಯೆಂಬುದು ಒಂದು ರೋಗವೆಂಬಂತೆ ಬಿಂಬಿಸಲಾಗುತ್ತದೆ. ಆದರೆ, ಗರ್ಭಿಣಿಯಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಗರ್ಭಾವಸ್ಥೆಯಲ್ಲಿ ಮಹಿಳೆಯರ ಕುರಿತು ಇರುವ ತಪ್ಪು ಕಲ್ಪನೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ಗರ್ಭಧಾರಣೆಯು (Pregnancy) ಹೆಣ್ಣಿನ ದೇಹದಲ್ಲಿ ದೈಹಿಕ ಮತ್ತು ಭಾವನಾತ್ಮಕ ಎರಡೂ ಬದಲಾವಣೆಗಳನ್ನು ತರುತ್ತದೆ. ಈ ಬದಲಾವಣೆಗಳ ನಡುವೆ, ತ್ವಚೆಯ ಕಾಳಜಿಯು (Skin Care) ಸಾಮಾನ್ಯವಾಗಿ ಹೊರಹೊಮ್ಮುತ್ತದೆ. ಏಕೆಂದರೆ ತಾಯಿಯಾಗಲಿರುವವರು ಹಾರ್ಮೋನುಗಳ ಏರಿಳಿತಗಳನ್ನು ಅನುಭವಿಸುತ್ತಾರೆ. ಈ ಗರ್ಭಿಣಿಯರ ಮೇಲೆ ಅನೇಕ ತಪ್ಪು ಕಲ್ಪನೆಗಳನ್ನು ಹೇರಲಾಗುತ್ತದೆ. ಕೂದಲು, ತ್ವಚೆಯ ಕಾಳಜಿಯ ವಿಚಾರದಲ್ಲಿನ ಅಂತಹ ಕೆಲವು ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ತಪ್ಪು ಕಲ್ಪನೆ 1: ಕೂದಲು ಕತ್ತರಿಸಬಾರದು:
ಸತ್ಯ ಸಂಗತಿ: ಗರ್ಭಿಣಿಯರು ತಮ್ಮ ದೇಹದ ಯಾವ ಭಾಗದಿಂದ ಬೇಕಾದರೂ ಕೂದಲನ್ನು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಬಹುದು. ತಲೆ ಕೂದಲನ್ನು ತಮಗೆ ಬೇಕಾದಂತೆ ಕತ್ತರಿಸಿಕೊಳ್ಳಬಹುದು. ಗರ್ಭಿಣಿಯರು ತಮ್ಮ ದೇಹ ಮತ್ತು ಮುಖದ ಕೂದಲನ್ನು ವ್ಯಾಕ್ಸ್ ಮಾಡಬಹುದು ಅಥವಾ ಥ್ರೆಡ್ ಮಾಡಬಹುದು.
ಇದನ್ನೂ ಓದಿ: ಸಿಕ್ಕುಗಟ್ಟಿದ ಕೂದಲಿಗೆ ಹೊಳಪು ತರಲು ಈ 7 ಮನೆಮದ್ದುಗಳನ್ನು ಬಳಸಿ ನೋಡಿ
ತಪ್ಪು ಕಲ್ಪನೆ 2: ಕೂದಲಿಗೆ ಬಣ್ಣ ಹಾಕಬಾರದು:
ಸತ್ಯಸಂಗತಿ: ಗರ್ಭಿಣಿಯರು ಕೂದಲಿನ ಬಣ್ಣವನ್ನು ಹಾಕಿಸಿಕೊಳ್ಳುವುದು ಅಥವಾ ಕಲರಿಂಗ್ ಮಾಡಿಸಿಕೊಳ್ಳುವುದು ಉತ್ತಮ. ವಿಶೇಷವಾಗಿ ಮೊದಲ ತ್ರೈಮಾಸಿಕದಲ್ಲಿ ಕಲರಿಂಗ್ ಮಾಡಿಸಿಕೊಳ್ಳುವುದರಿಂದ ಅವರು ಅದನ್ನು ಎಂಜಾಯ್ ಮಾಡುತ್ತಾರೆ, ಖುಷಿಯಿಂದ ಇರುತ್ತಾರೆ. ಆದರೆ, ಮೊದಲು 3 ತಿಂಗಳಲ್ಲಿ ಮಗುವಿನ ಅಂಗಗಳು ಅಭಿವೃದ್ಧಿ ಹೊಂದುತ್ತಿರುವಾಗ (ಆರ್ಗನೋಜೆನೆಸಿಸ್) ಕೆಲವು ಅತಿಯಾದ ರಾಸಾಯನಿಕವಿರುವ ಕೂದಲು ಬಣ್ಣದಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಕಲರಿಂಗ್ ಮಾಡುವುದಾದರೆ ನೆತ್ತಿಯ ಹತ್ತಿರದಲ್ಲಿ ಬಣ್ಣವನ್ನು ಹಚ್ಚಬಾರದು, ಕೇವಲ ಕೂದಲಿನ ತುದಿಗೆ ಮಾತ್ರ ಕಲರಿಂಗ್ ಮಾಡಿಸಬೇಕು. ಗರ್ಭಾವಸ್ಥೆಯಲ್ಲಿ ಕೆರಾಟಿನ್ ಮತ್ತು ರಿಬಾಂಡಿಂಗ್‌ನಂತಹ ಚಿಕಿತ್ಸೆಗಳನ್ನು ತಪ್ಪಿಸಬೇಕು. ಏಕೆಂದರೆ ಅವುಗಳು ಸಾಮಾನ್ಯವಾಗಿ ಫಾರ್ಮಾಲ್ಡಿಹೈಡ್ ಅನ್ನು ಹೊಂದಿರುತ್ತವೆ. ಇದು ಮಗುವಿನ ಬೆಳವಣಿಗೆಗೆ ಹಾನಿಕಾರಕವಾಗಿದೆ.
ತಪ್ಪು ಕಲ್ಪನೆ 3: ಹುಬ್ಬುಗಳನ್ನು ಥ್ರೆಡ್ ಮಾಡಬಾರದು.
ಸತ್ಯಸಂಗತಿ: ಶುದ್ಧ ಮತ್ತು ನೈರ್ಮಲ್ಯದ ರೀತಿಯಲ್ಲಿ ಐಬ್ರೋ ಮಾಡಿಸಿಕೊಳ್ಳುವುದರಿಂದ ತೊಂದರೆಯೇನಿಲ್ಲ. ಗರ್ಭಿಣಿಯರು ತಮ್ಮ ಹುಬ್ಬುಗಳನ್ನು ಥ್ರೆಡ್ ಮಾಡಬಹುದು.
ಇದನ್ನೂ ಓದಿ: Hair Care: ಸ್ಟ್ರೈಟನರ್ ಇಲ್ಲದೆ ಕೂದಲನ್ನು ಸ್ಟ್ರೈಟ್ ಮಾಡುವುದು ಹೇಗೆ?
ತಪ್ಪುಕಲ್ಪನೆ 4: ಸನ್‌ಸ್ಕ್ರೀನ್ ಬಳಸಬಾರದು.
ಸತ್ಯಸಂಗತಿ: ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಪಡೆಯಲು ಚರ್ಮಕ್ಕೆ ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಉತ್ತಮ. ಈ ಸನ್‌ಸ್ಕ್ರೀನ್‌ಗಳು ಸಾಮಾನ್ಯವಾಗಿ ಮೈಕ್ರೊನೈಸಿಂಗ್ ಆಕ್ಸೈಡ್ ಅಥವಾ ಐರನ್ ಆಕ್ಸೈಡ್ ಅನ್ನು ಹೊಂದಿರುತ್ತವೆ. ಗರ್ಭಿಣಿಯರು ರಾಸಾಯನಿಕ ಅಂಶ ಹೆಚ್ಚಿರುವ ಸನ್‌ಸ್ಕ್ರೀನ್‌ಗಳನ್ನು ಬಳಸದಿರುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ