
ಪತ್ನಿಯನ್ನು (Wife) ಅರ್ಧಾಗಿ ಎಂದು ಕರೆಯಲಾಗುತ್ತದೆ. ಅಂದರೆ ಪತ್ನಿಯನ್ನು ಪತಿಯ (Husband) ದೇಹದ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ. ಅಂತೆಯೇ ಪತ್ನಿಯಾದವಳು ತನ್ನ ಗಂಡನ ಸುಖ ದುಃಖಗಳಲ್ಲಿ ಜೊತೆಯಾಗಿ ನಿಲ್ಲುತ್ತಾಳೆ. ಇದೇ ಕಾರಣಕ್ಕೆ ಗಂಡನಾದವನು ಏನಾದರೂ ಕೆಲಸ ಮಾಡಬೇಕೆಂದರೆ ಮೊದಲು ಹೆಂಡತಿಯ ಒಪ್ಪಿಗೆ ಅಥವಾ ಆಕೆಯ ಅಭಿಪ್ರಾಯವನ್ನು ಕೇಳಬೇಕು ಎಂದು ಹೇಳ್ತಾರೆ. ಹೌದು ಕುಟುಂಬ (Family) ಸಂಸಾರ ಅನ್ನೋ ವಿಚಾರದಲ್ಲಿ ಹೆಂಡತಿಯಾದವಳು ತುಂಬಾನೇ ಪ್ರಬುದ್ಧತೆಯಿಂದ ವರ್ತಿಸುತ್ತಾಳೆ. ಇದೇ ಕಾರಣಕ್ಕೆ ಈ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು, ಈ ಕೆಲಸಗಳನ್ನು ಮಾಡುವ ಮೊದಲು ತಪ್ಪದೆ ಹೆಂಡತಿಯ ಮಾತನ್ನು ಹಾಗೂ ಆಕೆಯ ನಿರ್ಧಾರ ಏನೆಂಬುದನ್ನು ಕೇಳಬೇಕಂತೆ. ಅದು ಏನು ಎಂಬುದನ್ನು ನೋಡೋಣ ಬನ್ನಿ.
ಯಾರಾದರೂ ನಿಮ್ಮ ಬಳಿ ಸಾಲವನ್ನು ಕೇಳಿದರೆ ಅಥವಾ ಯಾರಿಗಾದರೂ ದೊಡ್ಡ ಮೊತ್ತದ ಸಾಲವನ್ನು ಕೊಡಬೇಕು ಎಂದಾದರೆ ಈ ಬಗ್ಗೆ ಮೊದಲು ನೀವು ನಿಮ್ಮ ಹೆಂಡತಿಯ ಬಳಿ ಚರ್ಚಿಸಿ. ಸರಿ ತಪ್ಪುಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಹೆಂಡತಿ ಈ ವಿಷಯದಲ್ಲಿ ನಿಮಗೆ ಸರಿಯಾದ ಸಲಹೆಯನ್ನೇ ನೀಡುತ್ತಾಳೆ. ಮತ್ತು ಆಕೆಯ ಅನುಮತಿಯಿದ್ದರೆ ಮಾತ್ರ ಇತರರಿಗೆ ಸಾಲವನ್ನು ಕೊಡಿ.
ಗಂಡನಾದವನು ಎಲ್ಲಾದರೂ ಹೂಡಿಕೆ ಮಾಡಲು ಬಯಸಿದರೆ ಅಥವಾ ಆಸ್ತಿ ಜಾಗ ಖರೀದಿಸಲು ಬಯಸಿದರೆ ಖಂಡಿತವಾಗಿ ಈ ಬಗ್ಗೆ ಹೆಂಡತಿಗೆ ತಿಳಿಸಲೇಬೇಕು. ಮತ್ತು ಇಲ್ಲಿ ಹೂಡಿಕೆ ಮಾಡುವುದು ಸರಿಯೇ, ನಾನು ಹೂಡಿಕೆ ಮಾಡಬಹುದೇ ಎಂದು ಹೆಂಡತಿಯ ಬಳಿ ಅಭಿಪ್ರಾಯಗಳನ್ನು ಕೇಳಿ. ಇಂತಹ ಸಣ್ಣಪುಟ್ಟ ವಿಷಯಗಳು ನಿಮ್ಮ ದಾಂಪತ್ಯ ಜೀವನವನ್ನು ಕೂಡಾ ಚೆನ್ನಾಗಿಡಲು ಸಹಕಾರಿಯಾಗಿದೆ.
ಕೆಲ ಗಂಡಸರು ಎಲ್ಲಾದ್ರೂ ಹೋದ್ರೆ ಅಥವಾ ಯಾವುದೇ ವಿಷಯಗಳನ್ನು ಮಾಡುವಾಗ ಕೂಡಾ ಈ ಬಗ್ಗೆ ಹೆಂಡತಿಗೆ ಹೇಳುವುದಿಲ್ಲ. ಯಾವತ್ತೂ ಹೀಗೆ ಮಾಡಲು ಹೋಗಬೇಡಿ. ನೀವು ಎಲ್ಲಾದ್ರೂ ಫ್ರೆಂಡ್ಸ್ ಜೊತೆ ಅಥವಾ ಕೊಲಿಗ್ಸ್ ಜೊತೆ ಪ್ರವಾಸ ಹೋಗ್ತಿರಿ ಎಂದಾದ್ರೆ ನಿಮ್ಮ ಹೆಂಡತಿಯ ಬಳಿ ನಾನು ಪ್ರವಾಸ ಹೋಗಬಹುದೇ ಎಂದು ಆಕೆಯ ಅನುಮತಿ ಕೇಳಿ. ಆಕೆಯ ಅಭಿಪ್ರಾಯಗಳಿಗೂ ಕೂಡಾ ಆದ್ಯತೆ ನೀಡಿ.
ಇದನ್ನೂ ಓದಿ: ಇಂತಹ ಸೊಸೆಯಿದ್ದರೆ ಮನೆಯ ನೆಮ್ಮದಿಯೇ ಹಾಳದಂತೆ
ನೀವು ಮನೆಗೆ ಏನಾದ್ರೂ ವಸ್ತುಗಳನ್ನು ಖರೀದಿ ಮಾಡುತ್ತೀರಿ ಎಂದಾದರೆ ಮೊದಲು ನಿಮ್ಮ ಹೆಂಡತಿಯ ಅಭಿಪ್ರಾಯವನ್ನು ಕೇಳಿ. ಆಕೆಗೆ ಯಾವ ವಸ್ತು ಸೂಕ್ತ, ಎಂತಹ ವಸ್ತುಗಳನ್ನು ಮನೆಗೆ ಖರೀದಿಸಬೇಕು, ಎಷ್ಟು ಬಜೆಟ್ ಒಳಗೆ ಖರೀದಿಸಬೇಕು ಇವೆಲ್ಲವೂ ಗೊತ್ತಿರುತ್ತದೆ. ಹಾಗಿರುವಾಗ ಮನೆಗೆ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಹೆಂಡತಿಯ ಅಭಿಪ್ರಾಯವನ್ನು ಕೇಳಿ.
ಮಕ್ಕಳ ಜವಾಬ್ದಾರಿ ಗಂಡ ಮತ್ತು ಹೆಂಡತಿ ಇಬ್ಬರದ್ದೂ ಆಗಿರುತ್ತದೆ. ಹೀರುವಾಗ ಮಕ್ಕಳ ಭವಿಷ್ಯಕ್ಕಾಗಿ ಗಂಡ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಅವನು ಹೆಂಡತಿಯ ಅಭಿಪ್ರಾಯವನ್ನು ಕೇಳಬೇಕು ಮತ್ತು ಅನುಮತಿಯನ್ನು ಪಡೆಯಬೇಕು. ಹೆಂಡತಿಯಾದವಳಿಗೆ ಸರಿ ತಪ್ಪುಗಳ ಬಗ್ಗೆ ಚೆನ್ನಾಗಿ ಅರಿವಿರುವ ಕಾರಣ ಈ ವಿಚಾರದಲ್ಲಿ ಆಕೆ ಸೂಕ್ತವಾದ ಸಲಹೆಗಳನ್ನೇ ನೀಡುತ್ತಾಳೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ